ಕ್ರೈಸ್ಟ್ ಕಿಂಗ್ : ವಿಶ್ವಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಭಾರತ ರಾಷ್ಟ್ರೀಯ ತಂಡದ ನಾಯಕಿಯಾಗಿ ಒಂಬತ್ತನೇ ತರಗತಿಯ ಶಗುನ್ ಎಸ್ ವರ್ಮ ಹೆಗ್ಡೆ ಆಯ್ಕೆ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಭಾರತ ರಾಷ್ಟ್ರೀಯ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಇವಳು 15ರ ವಯೋಮಿತಿಯ ಭಾರತೀಯ ವಾಲಿವಾಲ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಆಟಗಾರ್ತಿ. ಅಂತರಾಷ್ಟ್ರೀಯ ಪಂದ್ಯವು ಇಂದಿನಿಂದ
(ಡಿ. 3) ರಿಂದ 13 ನೇ ತಾರೀಖಿನವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದ್ದು, ಶಗುನ್ ಎಸ್ ವರ್ಮ ಹೆಗ್ಡೆ ಭಾರತ ತಂಡವನ್ನು ಪ್ರತಿನಿಧಿಸುವ ಕಾರ್ಕಳದ ಹೆಮ್ಮೆಯ ಕ್ರೀಡಾಪಟುವಾಗಿದ್ದಾಳೆ. ಈಕೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರೀಮತಿ ಶ್ರುತಿರಾಜ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.

 

 

LEAVE A REPLY

Please enter your comment!
Please enter your name here