Wednesday, February 21, 2024

ಕಾರ್ಕಳ:ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ:ಮಹಿಳೆ ಸಾವು

Homeಕಾರ್ಕಳಕಾರ್ಕಳ:ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ:ಮಹಿಳೆ ಸಾವು

ಕಾರ್ಕಳದ ಅತ್ತೂರು ಸಾಂತ್‌ಮಾರಿಗೆಂದು ತೆರಳುತ್ತಿದ್ದ ವೇಳೆ ಕಾರುಗಳೆರಡರ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಿಟ್ಟೆ ಸಮೀಪದ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಸಂಭವಿಸಿದೆ.

ಮರಿಯಾ ಫೆರ್ನಾಡಿಸ್ (53ವ) ಎಂಬವರು ಮೃತಪಟ್ಟ ಮಹಿಳೆ.

ಮಂಗಳೂರು ಕಡೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಬಾಡಿಗೆ ಕಾರು ಹಾಗೂ ನಿಟ್ಟೆ ಕಡೆಯಿಂದ ಪಡುಬಿದ್ರೆ ಕಡೆಯತ್ತ ಬರುತ್ತಿದ್ದ ಕಾರುಗಳ ನಡುವೆ ಕಾರ್ಕಳ ಪಡುಬಿದ್ರೆ ಹೆದ್ದಾರಿಯ ಮಾವಿನಕಟ್ಟೆ ತಿರುವು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಮರಿಯಾ ಫರ್ನಾಡಿಸ್ ಎಂಬವರು ಗಂಭೀರ ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ.

ಮೃತ ಮರಿಯಾ ಫೆರ್ನಾಂಡೀಸ್ ಕಾರ್ಕಳದ ಅತ್ತೂರಿನ ಸಾಂತ್‌ಮಾರಿಗೆಂದು ಮುಂಬಯಿಂದ ಹೊರಟು ಮಂಗಳೂರಿಗೆ ಬಂದು ತಲುಪಿ ಅಲ್ಲಿಂದ ಬಾಡಿಗೆ ಕಾರಿನಲ್ಲಿ ನಿಟ್ಟೆಯ ಹೊಟೇಲಿನ ರೂಮಿಗೆ ಕಾರಿನಲ್ಲಿ ತೆರಳುತ್ತಿದ್ದ ರೂಮಿನಿಂದ ಕೇವಲ 3.ಕಿ.ಮೀ ಅಂತರದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ಜಖಂಗೊಂಡಿದೆ.

ಈ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular