Saturday, July 27, 2024

ಕಾರ್ಕಳ:‘ರಾಷ್ಟ್ರೀಯ ಚಿಂತನೆ- ಕನಕ ವೈಚಾರಿಕತೆಯ ಸೊಬಗು’-ವಿಚಾರ ಸಂಕಿರಣ ಉದ್ಘಾಟನೆ

Homeಕಾರ್ಕಳಕಾರ್ಕಳ:‘ರಾಷ್ಟ್ರೀಯ ಚಿಂತನೆ- ಕನಕ ವೈಚಾರಿಕತೆಯ ಸೊಬಗು’-ವಿಚಾರ ಸಂಕಿರಣ ಉದ್ಘಾಟನೆ

ಕಾರ್ಕಳ: ಭಾರತದಲ್ಲಿ ದಾಸಪರಂಪರೆ, ವಿದ್ವತ್ ಪರಂಪರೆ, ಪ್ರಾಜ್ಞರ ಪರಂಪರೆ ಹೀಗೆ ಹಲವಾರು ವಿಶೇಷ ಪರಂಪರೆಗಳಿವೆ. ಅವುಗಳಲ್ಲಿ ಯಾವುದೂ ಶ್ರೇಷ್ಠ ಮತ್ತು ಕನಿಷ್ಠವೆಂಬುದಿಲ್ಲ. ದಾಸಪರಂಪರೆಯಲ್ಲಿ ಕನಕದಾಸರು ಮುಖ್ಯರಾಗುತ್ತಾರೆ. ಕ್ರಾಂತದರ್ಶಿತ್ವ ಇರುವ ವ್ಯಕ್ತಿತ್ವ ಅವರದು. ಅವರು ಕವಿಗಳೂ ಹೌದು,ಪಂಡಿತರೂ ಹೌದು.ಪುರಾಣದ ಸಂಪೂರ್ಣ ನೆಲೆಗಟ್ಟು ಅವರಲ್ಲಿ ಇದ್ದುದರಿಂದ ಕಾವ್ಯಗಳನ್ನು ಕಟ್ಟುವಲ್ಲಿ ಅವರು ಯಶಸ್ವಿಯಾದರು. ದೋಷಜ್ಞರಾದುದರಿಂದ ಆತ್ಮವಿಮರ್ಶೆಯ ಜೊತೆಗೆ ಸಮಾಜದ ಎಲ್ಲಾ ಆಗುಹೋಗುಗಳನ್ನು ಪರಿಶೀಲಿಸಿ ಸರಿತಪ್ಪುಗಳನ್ನು ಜನರಿಗೆ ಮನನ ಮಾಡಿಸುವ ಕಾಯಕವನ್ನು ಅವರೆಲ್ಲಾ ಸಾಹಿತ್ಯದ ಮೂಲಕ ಮಾಡಿದರು. ದೇಸೀ ಮತ್ತು ಮಾರ್ಗವೆಂಬುದು ಎರಡುದಾರಿಗಳಷ್ಟೇ. ತಲುಪುವ ಗುರಿಯೊಂದೇ ಎಂಬುದನ್ನು ಕನಕರ ದರ್ಶನದಿಂದ ಗಮನಿಸಬಹುದು. ಆ ವ್ಯಕ್ತಿತ್ವವೇ ನಮ್ಮ ನೆಲದ ಗುಣವಾಗಿ ಮೂಡಿಬರುವಂತಾದದ್ದು ಎಂಬುದಾಗಿ ನಾಡಿನ ಹಿರಿಯ ವಿದ್ವಾಂಸರೂ, ವಿಶ್ರಾಂತ ಪ್ರಾಚಾರ್ಯರೂ ಆದ ಡಾ.ಪಾದೇಕಲ್ಲು ವಿಷ್ಣು ಭಟ್ ಅವರು ಹೇಳಿದರು.

ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣ ಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಶ್ರೀ ಭುವನೇಂದ್ರ ಕಾಲೇಜು ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ- ಕನಕ ವೈಚಾರಿಕತೆಯ ಸೊಬಗು’ ಎಂಬ ವಿಚಾರದ ಮೇಲೆ ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ದಿಕ್ಸೂಚಿ ಮಾತುಗಳನ್ನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈಯವರು ಮಾತನಾಡಿ ಕನಕದಾಸರು ಇಹಪರದ ಸಮನ್ವಯಕ್ಕೆ ಒತ್ತುಕೊಟ್ಟರು. ಕನಕದಾಸರ ಅಧ್ಯಯನ ಅಂದಿನ ಸಮಾಜದ ಅಧ್ಯಯನ ಮಾತ್ರವಲ್ಲ, ಕನಕದಾಸರು ಇಡೀ ವಿಶ್ವಕ್ಕೆ ಸೇರಿದ ಉದಾತ್ತ ದಾಸವರೇಣ್ಯರು. ಅವರ ಚಿಂತನೆ ಇಂದಿಗೂ ಪ್ರಸ್ತುತವೆಂದರು.

ಉಡುಪಿಯ ರಾಷ್ಟçಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ.ಬಿ.ಜಗದೀಶ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ.ಕೋಟ್ಯಾನ್ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ, ಕಾರ್ಯಕ್ರಮ ಸಂಯೋಜಕರೂ ಅದ ಡಾ. ಅರುಣಕುಮಾರ್ ಎಸ್. ಆರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ವನಿತಾ ವಂದಿಸಿ, ಉಪನ್ಯಾಸಕಿ ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add