Saturday, July 27, 2024

2024 ರ ಲೋಕಸಭಾ ಚುನಾವಣೆ : ಕಾರ್ಕಳದ ಶಾಸಕರಿಗೆ ಇರಿಸು-ಮುರಿಸು ಪರಿಸ್ಥಿತಿ ತಂದಿರಿಸಿದ ಬೈಲೂರಿನ ಭಗ್ನ ಪರಶುರಾಮ

Homeಕಾರ್ಕಳ2024 ರ ಲೋಕಸಭಾ ಚುನಾವಣೆ : ಕಾರ್ಕಳದ ಶಾಸಕರಿಗೆ ಇರಿಸು-ಮುರಿಸು ಪರಿಸ್ಥಿತಿ ತಂದಿರಿಸಿದ ಬೈಲೂರಿನ ಭಗ್ನ...

ಈ ಬಾರಿಯ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣಾ ಕಣದಲ್ಲಿ ಒಂದು ಕಡೆ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿದ ಪ್ರಭಾವ ಹಾಗೂ ಇನ್ನೊಂದು ಕಡೆ ಕಾರ್ಕಳದ ಬೈಲೂರಿನ ಹೈವೇ ಬದಿಯಲ್ಲಿ ದಿನಂಪ್ರತಿ ಹಾದು ಹೋಗುವ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಇರುವ ಭಗ್ನಗೊಂಡ ಪರಶುರಾಮ ಮೂರ್ತಿಯ ಕಾರಣದಿಂದ ಪ್ರಖರ ಹಿಂದುತ್ವವಾದಿಗಳೆಂದು ಬಿಂಬುಸಿಕೊಳ್ಳುವ ಹಾಗೂ ರಾಜ್ಯ& ರಾಷ್ಟ್ರ ಮಟ್ಟದ ನಾಯಕರುಗಳು , ಸ್ಟಾರ್ ಪ್ರಚಾರಕರುಗಳು ಕಾರ್ಕಳದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ನೆಡೆಸಲು ಬರದಿರುವ ಕಾರಣ ಕಾರ್ಕಳದ ಬಿಜೆಪಿ ನಾಯಕರು ಹತಾಶೆಗೊಂಡಿದ್ದು ಅದರ ನೇರ ಪರಿಣಾಮ ಬಿಜೆಪಿ ಕಾರ್ಯಕರ್ತರ ಮೇಲೆ ಬಿದ್ದಿದೆ ಹಾಗೂ ಬಿಜೆಪಿಗರ ಆತ್ಮಸ್ಥೈರ್ಯ ಕುಸಿದಿರುವಂತೆ ಭಾಸವಾಗುತ್ತಿದೆ.

ಇದಕ್ಕೆ ಉದಾಹರಣೆ ಎಂಬಂತೆ ಕಂಚಿನಿಂದ ಮಾಡಿದ್ದೇವೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ, ಇದು ಕಂಚು ಅಲ್ಲ ಪೈಬರ್, ನಿಂದ ನಿರ್ಮಿಸಲಾಗಿದೆಯೆಂದು ಆರೋಪಿಸಿ ಪರಶುರಾಮ ಪ್ರತಿಮೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆಯೇ ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನಿಲ್ ಹೆಗ್ಡೆಯವರು ಧಾರ್ಮಿಕ ಭಾವನೆಗೆ ದಕ್ಕೆ ಎಂದು ಕಾರ್ಕಳ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದ್ದರು. ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದ ಮೋಸವು ಸಾರ್ವಜನಿಕರಿಗೆ ತಿಳಿಯಬಾರದು ಎನ್ನುವ ದುರುದ್ದೇಶದಿಂದ ಅದರ ಅಸಲಿಯತ್ತಿನ ಬಗ್ಗೆ ಪ್ರಶ್ನೆ ಎತ್ತಿದವರ ವಿರುದ್ದವೇ ಸುಳ್ಳು ಕೇಸನ್ನು ನೀಡಿದ್ದು ತದನಂತರ ಮುಂದಿನ ದಿನಗಳಲ್ಲಿ ಪರಶುರಾಮ ಮೂರ್ತಿಯ ಸೊಂಟದ ಮೇಲಿನ ಭಾಗವು ಪೈಬರ್,ನಿಂದ ಮಾಡಲಾಗಿದೆಯೆನ್ನುವ ಸತ್ಯವು ಬಟಾಬಯಲಾದಾಗ ಬಾಯಿಗೆ ಕೈ ಹಿಡಿದು ಮೌನವಾಗಿದ್ದರು. ಅಂದು ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮ ಪ್ರತಿಮೆಯ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸಿ ಎಂದು ಹೋರಾಟ ಮಾಡಿದಾಗ ಹಿಂದು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೇಸು ಕೊಟ್ಟ ಸುನೀಲ್ ಹೆಗ್ಡೆಯವರಿಗೆ ಇಂದು ರುಂಡ ಬೇರೆ ಮುಂಡ ಬೇರೆಯಾಗಿ ತನ್ನದೇ ಗ್ರಾಮದಲ್ಲಿ ಅನಾಥವಾಗಿ ಅಪಮಾನಕರ ರೀತಿಯಲ್ಲಿ ‌ನಿಂತಿರುವ ಪರಶುರಾಮ ಪ್ರತಿಮೆಯಿಂದಾಗಿ ಭಾವನೆಗಳಿಗೆ ಧಕ್ಕೆಯಾಗದೇ ಇರುವುದು ಆಶ್ಚರ್ಯಕರ. ಒಂದೋ ಸುನೀಲ್ ಹೆಗ್ಡೆಯವರು ಮೂರ್ತಿ ಭಂಜನೆಯಿಂದ ಸಂತೃಪ್ತಿಯನ್ನು ಹೊಂದಿದ ಮನಸ್ಥಿತಿಯವರು ಆಗಿರಬೇಕು, ಇಲ್ಲವೇ ಕಂಚು ಎಂದು ಪೈಬರ್ ಪ್ರತಿಮೆ ನಿರ್ಮಿಸಿ ಸರ್ಕಾರದ ಹಣವನ್ನು ದೋಚಿರುವುದರಲ್ಲಿ ಸುನೀಲ್ ಹೆಗ್ಡೆಯವರಿಗೂ ಪಾಲು ಇರಬೇಕು, ಅಥವಾ ಇವರು ಮಾನಸಿಕ ‌ಸ್ಥಿಮಿತ ಕಳೆದುಕೊಂಡಿರಬೇಕು ಎಂದು ಸಂಶಯ ಪಡಬೇಕಾಗುತ್ತದೆ.

ಮುಂದಿನ ಭಾಗವಾಗಿ ಪರಶುರಾಮ ಥೀಮ್ ಪಾರ್ಕ್ ನ ಪ್ರಸ್ತಾವನೆ ಕಡತದ ದಾಖಲೆಗಳು ಹಾಗೂ ನಿರ್ಣಯಗಳ ಪ್ರತಿಯನ್ನು ಎರ್ಲಪಾಡಿ ಗ್ರಾಮಪಂಚಾತ್,ನಲ್ಲಿ ಕೇಳಿದಾಗ ನಮ್ಮ ಪಂಚಾಯತ್ ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹಿಂಬರಹ ನೀಡಿದ ಕಾರಣ ಎರ್ಲಪಾಡಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಸುನೀಲ್ ಹೆಗ್ಡೆ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ವಿರುದ್ದ ಮಾನ್ಯ ಕಾರ್ಕಳ ತಾಲೂಕು ನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರನ್ನು ಸಲ್ಲಿಸಿರುವ ಮಹತ್ವದ ಬೆಳವಣಿಗೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಕಾರ್ಕಳದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add