Monday, March 30, 2026
Google search engine
Homeಕಾರ್ಕಳಕಾರ್ಕಳ: ಸಾಣೂರು ರಾಮಮಂದಿರದ ಬಳಿ ರಸ್ತೆ ಅಪಘಾತ - ಸ್ಕೂಟರ್‌ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: ಸಾಣೂರು ರಾಮಮಂದಿರದ ಬಳಿ ರಸ್ತೆ ಅಪಘಾತ – ಸ್ಕೂಟರ್‌ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: ನಿನ್ನೆ ರಾ. ಹೆದ್ದಾರಿ 169ರ ಸಾಣೂರು ರಾಮಮಂದಿರದ ಬಳಿ ರವಿವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಸ್ಕೂಟರ್‌ಸವಾರ ಉದ್ಯಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾಣೂರಿನ ಶಾಂಭವಿ ಸ್ಟೋರ್ಸ್ ಮಾಲಕ ಕೆರ್ವಾಶೆ ಜಯಾನಂದ ಶೆಟ್ಟಿ (56) ಅವರು ಬೆಳಗ್ಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಗೂಡ್ಸ್ ಟೆಂಪೋ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್18ರಂದು ಹರೀಶ್ ಸುವರ್ಣ ಇದೇ ಈಗ ಅದೇ ಪರಿಸರದಲ್ಲಿ ಜಯಾನಂದ ಶೆಟ್ಟಿ ಅವರ ಜಾಗದಲ್ಲಿ ಬೈಕ್ ಢಿಕ್ಕಿಯಾಗಿ ಮೃತಪಟ್ಟಿದ್ದರು. ಸಾವು ಸಂಭವಿಸಿದೆ. ಜನರು ಹೆದ್ದಾರಿ ಇಲಾಖೆಯವರ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments