ಹಲವು ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ಗಣೇಶ್ ಪೂಜಾರಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ವರದಿಯ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗೂಂಡಾ ಗಣೇಶ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ 4 ಕೊಲೆಯತ್ನ, ಒಂದು ದರೋಡೆ, ಒಂದು ಅಕ್ರಮ ಕೂಟ, 3 ಹಲ್ಲೆ, ಒಂದು ಜೂಜಾಟ, ಒಂದು ಇತರ ಪ್ರಕರಣ ಸೇರಿ ಒಟ್ಟು ಹನ್ನೊಂದು ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆ, 7 ಪ್ರಕರಣಗಳು ಖುಲಾಸೆ, ಒಂದು ಪ್ರಕರಣ ನ್ಯಾಯಾಂಗ ವಿಚಾರಣೆ, ಉಳಿದೆರಡು ಪ್ರಕರಣಗಳು ತನಿಖೆಯಲ್ಲಿವೆ.
ಆರೋಪಿಯು ದರೋಡೆ ಪ್ರಕರಣದಲ್ಲಿ ಬಂಧನವಾಗಿರುವುದರಿಂದ ಒಂದು ವರ್ಷಗಳ ಕಾಲ ಜಾಮೀನಿಗೆ ಅವಕಾಶಗಳು ಇಲ್ಲದಿರುವುದರಿಂದ, ಇದೀಗ ಕಲಬುರ್ಗಿ ಕೇಂದ್ರ ಕಾರಾಗ್ರಹದಲ್ಲಿರಿಸುವಂತೆ ಆದೇಶಿಸಲಾಗಿದೆ.

















