ಮಣಿಪುರದ ಬಿಷ್ಣುಪುರಜಿಲ್ಲೆಯಲ್ಲಿ ನಾಗರಿಕ ನಿವಾಸವನ್ನು ಗುರಿಯಾಗಿಸಿಕೊಂಡು ಬಂಡುಕೋರ ರು ನಡೆಸಿದ ದಾಳಿಯಲ್ಲಿ 5 ವರ್ಷದ ಗಂಡು ಮಗು ಹಾಗೂ 6 ತಿಂಗಳ ಹಸುಗೂಸು ಸಾವನ್ನಪ್ಪಿದ್ದು, ಅವರ . ತಾಯಿ ಗಾಯಗೊಂಡಿದ್ದಾರೆ. ಮೊಯಿ ರಾಂಗ್ ಟ್ರೋಂಗ್ಲಾಬಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಸಿಆರ್‌ಪಿಎಫ್ ಫೈರಿಂಗ್‌ನಲ್ಲಿ ಇಬ್ಬರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ.
ಇದರಿಂದ ಭುಗಿಲೆದ್ದ ಸ್ಥಳೀಯರು ಬೆಳಿಗ್ಗೆ ಪ್ರತಿಭಟನೆ ನಡೆಸಿ, ಆ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಎರಡು ತೈಲ ಟ್ಯಾಂಕರ್‌ಗಳು ಮತ್ತು ಒಂದು ಟ್ರಕ್‌ಗೆ ಬೆಂಕಿ ಹಚ್ಚಿದರು. ಮೊಯಿರಾಂಗ್ ಇಲೀಸ್ ಠಾಣೆ ಮುಂದೆ ಟೈರ್ಸುಟ್ಟು ಆಕ್ರೋಶ ಹೊರ ಹಾಕಿದರು.
ತಾತ್ಕಾಲಿಕವಾಗಿ ನಿರ್ಮಿಸಿದ್ದ ಪೊಲೀಸ್ ಠಾಣೆಯನ್ನು ಧ್ವಂಸಗೊಳಿ ಸಿದರು. 5 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿ ಖಾರ್ಫ್ಯೂ ಜಾರಿ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಭದ್ರತ ಪಡೆಗಳನ್ನು ನಿಯೋಜಿಸಲಾಗಿದೆ. ಈ ಘಟನೆ ಸಂಬಂಧ ಎನ್ಐಎ ತನಿಖೆಯನ್ನು ಸಹ ಆರಂಭಿಸಿದೆ.



















