WhatsApp Video 2026-04-08 at 12.15.50 PMಭಕ್ತರನ್ನು ಸಲಹುವ ಮಹಾತಾಯಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರ, ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಧರ್ಮದೈವಗಳ ಸನ್ನಿಧಿಯಲ್ಲಿ ಆದಿಮುದ್ರೋತ್ಸವ ವರ್ಧಂತಿ ಉತ್ಸವ ಹಾಗೂ 53ನೇ ವರ್ಷದ ನೇಮೋತ್ಸವ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಶ್ರೀ ಸುಕುಮಾರ್ ಮೋಹನ್ ನೇತ್ರತ್ವದಲ್ಲಿ ನಡೆಯುತ್ತಿದ್ದು ಮಂಗಳವಾರ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.
ಕಾರ್ಯಸಿದ್ಧಿ ಅಥರ್ವ ಶೀರ್ಷ ಗಣಪತಿ ಯಾಗ ನಡೆಯಿತು. ಸಂಜೆ ತರ್ಸಲೆ ಹೊರಟು ಬ್ರಹ್ಮಬೈದರ್ಕಳ ನೇಮೋತ್ಸವ, ದೀಪೋತ್ಸವ, ಮಾಯಂದಲಮ್ಮ ನೇಮ, ಕೋಟಿ ಚೆನ್ನಯ್ಯ ಮತ್ತು ಶ್ರೀದೇವಿ ದರ್ಶನ ಮುಖಾವಲಿ ಸುತ್ತುಬಲಿ ಬಳಿಕ ಜೋಗಿಪುರುಷ ನೇಮ ನಡೆಯಿತು.
ಬುಧವಾರ ಭಕ್ತರ ಧನಕನಕ ಅಭಿವೃದ್ಧಿಗಾಗಿ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಿತು. ಸಂಜೆ ಮೂಲಮೈಸಂದಾಯ ರಕ್ತೇಶ್ವರಿ, ಜಾಲಬೈಕಡ್ತಿ, ಪಟ್ಟದಪಂಜುರ್ಲಿ, ಜುಮಾದಿ ಬಂಟ, ಕಲ್ಕುಡ ಕಲ್ಲುರ್ಟಿ ಕೋಲ ಮತ್ತು ದೇವಿ ದೈವಗಳ ಮುಖಾವಲಿ ನಡೆಯಿತು. ಗುರುವಾರ ಗುಳಿಗ ಚಾಮುಂಡಿ, ಸಂಜೆ 7 ರಿಂದ ಬೊಬ್ಬರ್ಯ, ಮಲೆಸಾವಿರ ಮತ್ತು ಕೊರಗಜ್ಜ ಕೋಲ ನಡೆಯಲಿದೆ. ರಾಜ್ಯದ ವಿವಿದೆಡೆಯ ಭಕ್ತ ಸಮೂಹ ಭಾಗವಹಿದ್ದರು.
” ಅಭಯಗಂಟೆ ವಿಶೇಷ – ಹೆಜ್ಜೆ ನಮಸ್ಕಾರ ” ಸೇವೆ ಸಲ್ಲಿಸಿದ ಭಕ್ತರು !
ಮುದ್ರಾಡಿ ನಾಟ್ಕದೂರು ಶ್ರೀ ಕ್ಷೇತ್ರದಲ್ಲಿ ಭಕ್ತರು “ಹೆಜ್ಜೆ ನಮಸ್ಕಾರ” ಮತ್ತು ತುಪ್ಪದ ದೀಪ ಹಚ್ಚಿ “ಅಭಯಘಂಟೆ” ಬಾರಿಸಿ ಸೇವೆಯನ್ನು ಸಲ್ಲಿಸಿದರು.
ಕ್ಷೇತ್ರದ ನಂದಿಕೇಶ್ವರನಿಗೆ ಭಕ್ತಿಯಿಂದ “ಹೆಜ್ಜೆ ನಮಸ್ಕಾರ” ಹಾಕಿದರೆ ಮತ್ತು ಮಹಾತಾಯಿ ಶ್ರೀ ಆದಿಶಕ್ತಿಯನ್ನು ವಿಶೇಷ ನಂಬಿಕೆ ಭಕ್ತಿಯಿಂದ ಪ್ರಾರ್ಥಿಸಿ ಕ್ಷೇತ್ರದಲ್ಲಿ ತುಪ್ಪದ ದೀಪ ಹಚ್ಚಿ “ಅಭಯಘಂಟೆ” ಭಾರಿಸಿದರೆ ಸಕಲ ಇಷ್ಟಾರ್ಥಗಳು ೪೮ ದಿನಗಳಲ್ಲಿ ಈಡೇರುತ್ತದೆ. ಪರಿಹಾರವಾಗದ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು, ಮದುವೆ ವಿಳಂಬ, ದೋಷಗಳು, ಕಷ್ಟ ನೋವು, ಉದ್ಯೋಗ ಸಮಸ್ಯೆಗಳು ಸೇರಿ ಯಾವೂದೇ ಸಮಸ್ಯೆಗಳಿದ್ದರೂ ನಿವಾರಣೆ ಮಾಡಿ ತಾಯಿ ಹರಸುತ್ತಾಳೆ ಧರ್ಮಯೋಗಿ ಶ್ರೀ ಸುಕುಮಾರ್ ಮೋಹನ್ ತಿಳಿಸಿದರು.























