ಹೆಬ್ರಿ : ರಸ್ತೆ ದಾಟುವಾಗ ವಿದ್ಯಾರ್ಥಿಗಳಿಗೆ ಮಿನಿ ಗೂಡ್ಸ್ ಡಿಕ್ಕಿ : ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವು.
ಘಟನಾ ಸ್ಥಳದಲ್ಲಿ ಸ್ಥಳೀಯರ ಪ್ರತಿಭಟನೆ : ಘಟನೆಗೆ ಗುತ್ತಿಗೆದಾರರ ನಿರ್ಲಕ್ಷವೇ ಕಾರಣ ಆರೋಪ.
ಹೆಬ್ರಿ : ಉಡುಪಿ ತಾಲ್ಲೂಕಿನ ಪೆರ್ಡೂರು ಕಡೆಯಿಂದ ಬಸ್ಸಿನಲ್ಲಿ ಬಂದು ಹೆಬ್ರಿ ಕಡೆಗೆ ಹೋಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದಕ್ಕಾಗಿ ಇಳಿದು ರಸ್ತೆ ಕ್ರಾಸ್ ಮಾಡುವುದಕ್ಕಾಗಿ ಶಾಲಾ ವಿಧ್ಯಾರ್ಥಿ ಅರ್ಪಣಾ ಹಾಗೂ ಆಕೆಯ ಸಂಬಂಧಿ ಪ್ರೀತಿ ರವರು ರಸ್ತೆಗೆ ಇಳಿಯುತ್ತಿದ್ದಂತೆ ಉಡುಪಿ ಕಡೆಯಿಂದ ರಾಂಗ್ ಸೈಡ್ ನಿಂದ ಬಂದ ಮಿನಿ ಗೂಡ್ಸ್ ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ರಸ್ತೆ ಬಿದ್ದು ಗಂಭೀರವಾಗಿ ತಲೆ ಹಾಗೂ ಕಾಲಿಗೆ ಗಾಯಗೊಂಡ ಘಟನೆ ಶುಕ್ರವಾರ ಹೆಬ್ರಿಯಲ್ಲಿ ಸಂಭವಿಸಿದೆ. ತಲೆಗೆ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೀತಿ ಶನಿವಾರ ಮೃತಪಟ್ಟಿದ್ದಾರೆ. ವಾಹನವನ್ನು ಅದರ ಚಾಲಕ ನಾರಾಯಣಪ್ಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದಿರುವುದೇ ಘಟನೆ ಕಾರಣವಾಗಿದೆ.
ಕನ್ಯಾನದ ತಿಮ್ಮಪ್ಪ ನಾಯಕ್ ಶಾಲೆ ಗೇಟ್ ಬಳಿ ನಿಂತುಕೊಂಡಿರುವಾಗ ಘಟನೆ ಸಂಭವಿಸಿದ್ದು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ. ಪ್ರತಿದಿನವೂ ಶಾಲಾ ವಾಹನದಲ್ಲೇ ಬರುತ್ತಿದ್ದು ಶನಿವಾರ ಖಾಸಗಿ ಬಸ್ ನಲ್ಲಿ ಬಂದು ಬಸ್ ಇಳಿದು ರಸ್ತೆ ದಾಟುವಾಗ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಪ್ರೀತಿ ಅವರು ತನ್ನ ಚಿಕ್ಕಪ್ಪನ ಮಗಳಾದ ತಂಗಿ ಅಪರ್ಣಾ ಅವರ ರಿಸಲ್ಟ್ ನೋಡಲು ಶಾಲೆಗೆ ಪ್ರೀತಿ ಬಂದಿದ್ದರು. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿ ಅಪರ್ಣಾ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨೧ ರ ಹರೆಯದ ಮೃತ ಪ್ರೀತಿ ಪೆರ್ಡೂರು ಪೇಟೆಯ ನಿವಾಸಿ ಶ್ರೀಧರ ಆಚಾರ್ಯ ಅವರ ಏಕೈಕ ಪುತ್ರಿ. ಪ್ರತಿಭಾವಂತರಾಗಿದ್ದ ಪ್ರೀತಿ ಸಮಾಜದಲ್ಲಿ ಸಕ್ರೀಯರಾಗಿದ್ದರು. ಪದವಿ ಶಿಕ್ಷಣ ಮುಗಿಸಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದರು.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಕಾಮಗಾರಿ : ಗುತ್ತಿಗೆದಾರ ನಿರ್ಲಕ್ಷವೇ ಕಾರಣ : ಹೆಬ್ರಿ ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕನ್ಯಾನದ ಬಳಿ ಹೆದ್ದಾರಿ ಕಾರ್ಯ ನಡೆಯುತ್ತಿದ್ದ ಗುತ್ತಿಗೆ ಕಾರ್ಯ ನಡೆಸುವ ಕಂಪೆನೆಯವರು ಶನಿವಾರ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಯಾವೂದೇ ಮುನ್ಸೂಚನೆಯ ಫಲಕ ಇಲ್ಲದೆ ಅವಕಾಶ ನೀಡಿದ್ದೆ ಘಟನೆಗೆ ಪ್ರಮುಖ ಕಾರಣವಾಗಿದೆ. ಪರವೂರಿನ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆ ಮಾಡಿರುವ ಮಾಹಿತಿ ತಿಳಿಯದೆ ಘಟನೆ ನಡೆಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ ಮತ್ತು ಲೋಪಗಳಿಂದಲೇ ಜೀವಗಳು ಬಲಿಯಾಗುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಹೋರಾಟಗಾರರಾದ ಕುಚ್ಚೂರು ಶ್ರೀಕಾಂತ್ ಪೂಜಾರಿ, ಸೀತಾನದಿ ವಿಜೇಂದ್ರ ಶೆಟ್ಟಿ, ನಾಯರಕೋಡು ಶಿವಪ್ರಸಾದ್ ಶೆಟ್ಟಿ ಸಹಿತ ಹಲವರು ಘಟನಾ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಕಿನ್ನಿ ಗುಡ್ಡೆಯಲ್ಲಿ ನಡೆದ ಅಪಘಾತದಲ್ಲಿ ಓರ್ವ ಯುವತಿ ಮೃತಪಟ್ಟಿದ್ದು
ಇದಕ್ಕೆಲ್ಲ ನೇರ ಹೊಣೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು. ಯಾವುದೇ ಸರಿಯಾದ ಸೂಚನ ಫಲಕವಿಲ್ಲದೆ. ಅಸಮರ್ಪಕವಾಗಿ ಕಾಮಗಾರಿ ನಡೆಯುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಈ ಅಪಘಾತ ಸೇರಿ ಇದು 5ನೇ ಪ್ರಕರಣ ಇದಾಗಿದ್ದು ಕೆಲವು ಅಮಾಯಕರು ಪ್ರಾಣವನ್ನು ಹೋಗುತ್ತಿದೆ ಎಂದು ಶನಿವಾರ ಬೆಳಿಗ್ಗೆ ಹೆಬ್ರಿಯ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿದರು.
ಹೆಬ್ರಿ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಿ ಗುತ್ತಿಗೆದಾರರ ವಿರುದ್ಧ ಪ್ರಕರಣವನ್ನು ದಾಖಲಿಸಿ. ಕಡು ಬಡತನದಲ್ಲಿರುವ ಮತಪಟ್ಟ ಯುವತಿಯ ಹಾಗೂ ಗಾಯಾಳು ವಿದ್ಯಾರ್ಥಿನಿ ಮನೆಯವರಿಗೆ ₹ 50 ಲಕ್ಷಕ್ಕೂ ಹೆಚ್ಚು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು. ಶಿವಪ್ರಸಾದ್ ಶೆಟ್ಟಿ, ಕೃಷ್ಣಮೂರ್ತಿ ಭಂಡಾರಿ, ಸೀತಾನದಿ ವಿಜೇಂದ್ರ ಶೆಟ್ಟಿ, ಈಶ್ವರ ಬೇಳಂಜೆ, ರಿಕ್ಷಾ ಚಾಲಕ ಮಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
















