Home Blog Page 20

ಈಜುಸ್ಪರ್ಧೆ : ಕಾರ್ಕಳ ಜ್ಞಾನಸುಧಾದ 6 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತೋಷಿತ್ ಎಸ್ ಬಾಬು 50ಮೀ ಮತ್ತು 100ಮೀ ಫ್ರೀಸ್ಟೈಲ್‍ನಲ್ಲಿ ಪ್ರಥಮ ಹಾಗೂ 50ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ದ್ವಿತೀಯ, ಸುಯಾಶ್ ಎನ್ ಹೆಗ್ಡೆ 100ಮೀ ಬಟರ್‍ಫ್ಲೈಲ್ಲಿನಲ್ಲಿ ಪ್ರಥಮ ಹಾಗೂ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು, ಶಶಾಂಕ್ ವಿ 50ಮೀ ಬಟರ್‍ಫ್ಲೈನಲ್ಲಿ ಪ್ರಥಮ ಮತ್ತು 400ಮೀ ಫ್ರೀಸ್ತೈಲ್‍ನಲ್ಲಿ ತೃತೀಯ ಸ್ಥಾನವನ್ನು, ಯು.ಭಕ್ತಿ 50ಮೀ. ಮತ್ತು 100ಮೀ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನವನ್ನು, ಶ್ರೇಯಾ ಎಸ್.ಆರ್.ಯು 50ಮೀ. ಮತ್ತು 100ಮೀ ಫ್ರೀಸ್ಟೈಲ್‍ನಲ್ಲಿ ಪ್ರಥಮ ಸ್ಥಾನವನ್ನು ಹಾಗೂ 4×100ಮೀ ರಿಲೆಯಲ್ಲಿ ಕಾರ್ಕಳ ಜ್ಞಾನಸುಧಾ ತಂಡವು ಪ್ರಥಮ ಸ್ಥಾನವನ್ನು ಪಡೆದು ಈ ಮೂಲಕ ದಿಗಂತ್ ಎಚ್ ಸೇರಿದಂತೆ ಒಟ್ಟು 6 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಯುತ್ ರೆಡ್‍ಕ್ರಾಸ್‍ನ ಉದ್ಘಾಟನಾ ಕಾರ್ಯಕ್ರಮ

0

 

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಯುತ್ ರೆಡ್‍ಕ್ರಾಸ್‍ನ ಉದ್ಘಾಟನಾ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್‍ಕ್ರಾಸ್‍ನ ಉಡುಪಿ ಜಿಲ್ಲೆ ಕಾರ್ಯದರ್ಶಿ ಡಾ| ಗಣನಾಥ ಶೆಟ್ಟಿ ಎಕ್ಕಾರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ರೆಡ್‍ಕ್ರಾಸ್ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ಗುರಿ, ಮಹತ್ವದ ಬಗ್ಗೆ ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ. ಜಿ. ವಹಿಸಿದ್ದರು. ರೆಡ್‍ಕ್ರಾಸ್ ಯೋಜನಾಧಿಕಾರಿ ಕು.ಸೋನಾ ಇವರು ಸ್ವಾಗತಿಸಿದರು. ವೇದಿಕೆಯಲ್ಲಿ ರೆಡ್‍ಕ್ರಾಸ್ ನಾಯಕಿಯರಾದ ಅನನ್ಯ, ಲಾವಣ್ಯ ಉಪಸ್ಥಿತರಿದ್ದರು. ಲಾವಣ್ಯ, ತೃತೀಯ ಬಿ.ಎ ವಂದಿಸಿದರು. ಸ್ವಾತಿ, ದ್ವಿತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.

ಕ್ರೈಸ್ಟ್ ಕಿಂಗ್: ಈಜು ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಕೋಟ್ಯಾನ್ ರಾಜ್ಯಮಟ್ಟಕ್ಕೆ ಆಯ್ಕೆ

0

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸರಕಾರಿ ಪ.ಪೂ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಈಜು ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಆರ್ ಕೋಟ್ಯಾನ್ 1500 ಮೀ ಫ್ರೀ ಸ್ಟೈಲ್ ಮತ್ತು 400 ಮೀ ಫ್ರೀ ಸ್ಟೈಲ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಳಿದಂತೆ ಪ್ರಥಮ ವಿಜ್ಞಾನ ವಿಭಾಗದ ಸ್ಟೆಲಿಯೊಸ್ ಡಾರ್ವಿನ್ ತಾವ್ರೋ 1500 ಮೀ ಮತ್ತು 400 ಮೀ ಫ್ರೀ ಸ್ಟೈಲ್‍ನಲ್ಲಿ ತೃತೀಯ ಸ್ಥಾನ, ಪ್ರಥಮ ವಿಜ್ಞಾನ ವಿಭಾಗದ ಗಗನ್ ಭಟ್ 200 ಮೀ ಫ್ರೀ ಸ್ಟೈಲ್‍ನಲ್ಲಿ ದ್ವಿತೀಯ ಸ್ಥಾನ. 400*100ಮೀ ರಿಲೇಯಲ್ಲಿ ಆರ್ಯನ್, ಗಗನ್ ಭಟ್, ಸಾರ್ಥಕ್, ಸ್ಟೆಲಿಯೊಸ್ ಡಾರ್ವಿನ್ ತಾವ್ರೋ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಾರ್ಕಳ :ಅಂತಾರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಗೆದ್ದ ವಿದ್ಯಾರ್ಥಿ ಕೆ.ಸಿ. ಸಾಯಿ ನಿಹಾರ್

0

 

ಕಾರ್ಕಳದ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ, ಕಾರ್ಕಳ ಶಾಲೆಯ ವಿದ್ಯಾರ್ಥಿ ಕೆ.ಸಿ. ಸಾಯಿ ನಿಹಾರ್ ಅವರು ಅಂತರಾಷ್ಟ್ರೀಯ ಮಟ್ಟದ ಟೆಕ್ವ್ಯಾಂಡೋ ಸ್ಪರ್ಧೆಗಳಲ್ಲಿ ಶ್ರೇಷ್ಠತೆ ಸಾಧಿಸಿದ್ದಾರೆ.

ಇತ್ತೀಚೆಗೆ ನಡೆದ “ಪ್ರಥಮ ಏಷಿಯನ್ ಓಪನ್ ಅಂತಾರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್‌ಶಿಪ್” ನಲ್ಲಿ ಸ್ಪರ್ಧೆಯಲ್ಲಿ ಅಡಿಕಟ್ಟೆ 60 ಕೆ.ಜಿ ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಸಾಯಿ ನಿಹಾರ್ ಅವರು ಶ್ರೇಷ್ಠ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಇದರೊಂದಿಗೆ, ಇವರು ಇದಕ್ಕೂ ಮುನ್ನ, 2022ರ ಡಿಸೆಂಬರ್ 28 ರಿಂದ 30ರ ವರೆಗೆ, ಬೆಂಗಳೂರು ಯಲಹಂಕದಲ್ಲಿ ನಡೆದ “ಮೂರನೇ ಅಂತಾರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್‌ಶಿಪ್” ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಸಹ ಗೆದ್ದ ಇತಿಹಾಸವಿದೆ. ಈ ಸಾಧನೆಗಳು ಈತನ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಉತ್ತಮ ತರಬೇತಿಯ ಸ್ಪಷ್ಟ ಸಂಕೇತವಾಗಿದೆ ಎಂದು ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಮತ್ತು ಸಹಪಾಠಿಗಳು ಸಾಯಿ ನಿಹಾರ್ ಅವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕಾರ್ಕಳ ಬೈಪಾಸ್ ರಸ್ತೆಯ, ಅವಿನಾಶ್ ಕಾಂಪೌಂಡ್ ನಿವಾಸಿ ಕೆ.ಸಿ. ಪಾಂಡು ಎನ್. ಮತ್ತು ದೀಪ ಅವರ ಮಗನಾಗಿರುವ ಸಾಯಿ ನಿಹಾರ್ ಟೆಕ್ವ್ಯಾಂಡೋ ಕೌಶಲ್ಯದಲ್ಲಿ ಈತನು ತರಬೇತುದಾರರಾದ ಸುರೇಶ್ ನಿಟ್ಟೆ ಅವರಿಂದ ಮಾರ್ಗದರ್ಶನ ಪಡೆದಿದ್ದಾನೆ.

 

0

ಬಿಪಿಎಲ್ ಪಡಿತರ ಚೀಟಿ ರದ್ದಿಗೆ ಕೇಂದ್ರ ಸರಕಾರದ ಸೂಚನೆ

ಶಾಸಕರಿಗೆ ಬಡ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟಿಸಲಿ

ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಅವರಿಗೆ ತಿರುಗು ಬಾಣವಾಗಿದೆ

ಶುಭದರಾವ್

 

ಕೇಂದ್ರದ ಬಿಜೆಪಿ‌ ಸರಕಾರ ರಾಜ್ಯದಲ್ಲಿ‌ 7.76ಲಕ್ಷ ಶಂಕಾಸ್ಪದ ಪಡಿತರ ಚೀಟಿ ಇದೆ ಎಂದು ಗುರತಿಸಿ ಅದರಲ್ಲಿ 5.80 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಕಾರ್ಡ್ ರದ್ದುಗೊಳಿಸುವಂತೆ ಸೂಚನೆ ನೀಡಿದ್ದು, ಇದು ಬಿಜೆಪಿ ಸರಕಾರದ ಬಡವರ ವಿರೋದಿ ಧೋರಣೆಯಾಗಿದ್ದು ಶಾಕರಿಗೆ ಬಡ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರ ವಿರುದ್ದ ಪ್ರತಿಭಟನೆ ನಡೆಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರದ ಸರಕಾರದ ತೆರಿಗೆ ಮಂಡಲಿಯ ವರದಿ ಪ್ರಕಾರ ಕರ್ನಾಟಕದಲ್ಲಿ 5.80 ಲಕ್ಷ ಜನರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಅಂತವರ ಕಾರ್ಡ್ ಈ ತಿಂಗಳ 30 ರ ಒಳಗಾಗಿ ರದ್ದುಗೊಳಿಸುವಂತೆ ಸೂಚನೆ ನೀಡಿದ್ದು ಸರಿಯಲ್ಲ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕಾರ್ಕಳ ಕಾಂಗ್ರೆಸ್ ಮನವಿ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಕಾರ್ಕಳದಲ್ಲಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುತಿದೆ ಎಂದು ಸುಳ್ಳು ಹೇಳಿ ಜನರಲ್ಲಿ ಭಯವನ್ನು ಹುಟ್ಟಿಸುವ ಕೆಲಸ ಮಾಡಿದ್ದರು. ಆದರೆ ಕೇಂದ್ರ ಸರಕಾರದ ಸೂಚನೆ ಅವರಿಗೆ ತಿರುಗು ಬಾಣವಾಗಿದೆ. ಸುಳ್ಳನ್ನೇ ಪ್ರತಿಪಾದಿಸುವ ಶಾಸಕರ ಮತ್ತೊಂದು ಸುಳ್ಳು ಕೇಂದ್ರ ಸರಕಾರದ ನೀಡಿದ ಸೂಚನೆಯಿಂದ ಬಹಿರಂಗಗೊಂಡಿದೆ. ಶಾಸಕರಿಗೆ ನಿಜವಾಗಿಯೂ ಬಡ ಜನರ ಕಾಳಜಿ ಇದ್ದರೆ ಈಗ ಮೌನ ಮುರಿದು ಪ್ರತಿಭಟಿಸಲಿ ಎಂದು ಸವಾಲು ಹಾಕಿದ್ದಾರೆ.

ಕೇಂದ್ರ ಬಿಜೆಪಿ ಸರಕಾರದ ಈ ನಿರ್ಧಾರದಿಂದ ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ. ಈ ಜನ ವಿರೋದಿ ನಿರ್ಧಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಬಡ ಜನರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧಕ್ಷರಾದ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜ್ಞಾನಸುಧಾ : ಸ್ವಿಮ್ಮಿಂಗ್‍ನಲ್ಲಿ ರಾಜ್ಯಮಟ್ಟಕ್ಕೆ

0

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಅಭಿಮಾನ್ ಶೆಟ್ಟಿ 50ಮೀ ಬ್ಯಾಕ್‍ಸ್ಟ್ರೋಕ್ ಮತ್ತು 50ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ಪ್ರಥಮ, 100ಮೀ ಬಟರ್ ಫ್ಲೈಲ್ಲಿ ದ್ವೀತೀಯ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸೆಡ್ರಿಕ್ ಸೋನಿ 100ಮೀ ಬ್ಯಾಕ್‍ಸ್ಟ್ರೋಕ್‍ಲ್ಲಿ ದ್ವೀತೀಯ ಮತ್ತು 200ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ತೃತೀಯ, ರೌನಕ್ ಮೋಹನ್ ಅಂಬೆರ್ಕರ್ 50ಮೀ ಫ್ರೀ ಸ್ಟೈಲ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 4×100ಮೀ ರಿಲೇಯಲ್ಲಿ ಅಭಿಮಾನ್ ಶೆಟ್ಟಿ, ಸೆಡ್ರಿಕ್ ಸೋನಿ, ರೌನಕ್ ಮೋಹನ್ ಅಂಬೆರ್ಕರ್, ಸುಘೋಶ್ ಭಾರಧ್ವಾಜ್ ಇವರು ತೃತೀಯ ಸ್ಥಾನಿಗಳಾಗಿದ್ದಾರೆ. ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಹೆಲಿಕ್ಯಾಪ್ಟರ್ ಖರೀದಿಸಿದ ಸಚಿವ ಸತೀಶ್ ಜಾರಕಿಹೊಳಿ

0

 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿರುವ ಸಚಿವ ಸತೀಶ್ ಜಾರಕಿಹೊಳಿ ಹೊಸ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಬೆಂಗಳೂರು ಸಮೀಪದ ಏರೋಡ್ರೋಮ್ ನಲ್ಲಿ ಶುಕ್ರವಾರ ನೂತನ ಹೆಲಿಕಾಪ್ಟರನ್ನು ಪರಿಶೀಲಿಸಿದ ಸಚಿವರು, ಶೀಘ್ರವೇ ಇದು ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂಬ ವಿಷಯವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದಲ್ಲಿ ಹೆಲಿಕ್ಯಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.

ಬೆಳ್ಮಣ್ಣು: ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿ ಅಂದರ್

0

 

ಬೆಳ್ಮಣ್ಣು ಚರ್ಚ್ ಬಳಿ ಅನುಮಾನಾಸ್ಪದವಾಗಿ ಸಿಕ್ಕ ವ್ಯಕ್ತಿಯನ್ನು ಪೊಲೀಸರು ವಿಚಾಸಿರಿಸಿದಾಗ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಬೆಟ್ಟಿಂಗ್ ಆಪಾದಿತ ವ್ಯಕ್ತಿಯನ್ನು ನಜೀರ್ ಎಂದು ಗುರ್ತಿಸಲಾಗಿದ್ದು, ಈತನು M.yolo247.site/login ಎಂಬ ಸೈಟ್‌ನಲ್ಲಿ ಬೆಟ್ಟಿಂಗ್ ಆಪ್‌ ಮೂಲಕ ಆನ್‌ಲೈನ್ ಬೆಟ್ಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.

ಆರೋಪಿಯ ಬಳಿ ಇದ್ದ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ 5 ಡೆಬಿಟ್ ಕಾರ್ಡ್ ಗಳು ಮತ್ತು ಕೆನರಾ ಬ್ಯಾಂಕಿನ 1 ಡೆಬಿಟ್ ಕಾರ್ಡ್ , ಸ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು 30,000 ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನು ಇತರರೊಂದಿಗೆ ಸಂಘಟಿತರಾಗಿ ಆನ್‌ಲೈನ್ ಮೂಲಕ ಬೆಟ್ಟಿಂಗ್ ವ್ಯವಹಾರ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೆ: ತಾಂತ್ರಿಕ ಕಾಲೇಜಿನಲ್ಲಿ ನಡೆದ “ರಾಣಿ ಅಬ್ಬಕ್ಕ @500” ಉಪನ್ಯಾಸ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ರಿ.) ಮಂಗಳೂರು ವಿಭಾಗ ಮತ್ತು ರೋಟರಿ ಕ್ಲಬ್, ನಿಟ್ಟೆ ಸಂಯುಕ್ತ ಆಶ್ರಯದಲ್ಲಿ ಸೆ.18 ರಂದು ವೀರ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ದಿನಾಚರಣೆಯ ಅಂಗವಾಗಿ “ರಾಣಿ ಅಬ್ಬಕ್ಕ @500” (100 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ – 77) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿಲಾಯಿತು.

ಈ ಕಾರ್ಯಕ್ರಮವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಯೋಗೀಶ್ ಹೆಗ್ಡೆ ಅವರು ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ರಾಣಿ ಅಬ್ಬಕ್ಕನವರ ಶೌರ್ಯ, ನಾಯಕತ್ವ ಮತ್ತು ದೇಶಭಕ್ತಿಯನ್ನು ವಿವರಿಸಿ, ಅವರನ್ನು ಇಂದಿನ ಯುವಕರಿಗೆ ಸ್ಫೂರ್ತಿದಾಯಕ ಐಕಾನ್ ಎಂದು ತಿಳಿಸಿದರು.

ದಿಕ್ಸೂಚಿ ಭಾಷಣಕಾರರಾಗಿ ಉಪನ್ಯಾಸ ನೀಡಲು ಆಗಮಿಸಿದ್ದ ಕಾರ್ಕಳದ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅವರು ವಸಾಹತುಶಾಹಿ ಶಕ್ತಿಗಳನ್ನು ಪ್ರತಿರೋಧಿಸುವಲ್ಲಿ ರಾಣಿ ಅಬ್ಬಕ್ಕ ಅವರ ಗಾಥೆಯ ಬಗೆಗೆ ಮಾತನಾಡಿದರು ಮತ್ತು ಇತಿಹಾಸದಿಂದ ಧೈರ್ಯ ಮತ್ತು ಏಕತೆಯ ಪಾಠಗಳನ್ನು ಕಲಿಯುವ ಅಗತ್ಯವನ್ನು ತಿಳಿಹೇಳಿದರು. ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಮೌಲ್ಯವನ್ನು ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರರ ಮೊದಲ ಗುಂಪಿನಲ್ಲಿ ರಾಣಿ ಅಬ್ಬಕ್ಕ ಅವರನ್ನು ಅವರು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ನಿರಂಜನ್ ಎನ್ ಚಿಪ್ಲುಂಕರ್ ಅವರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಗಳ ಮೂಲಕ ಐತಿಹಾಸಿಕ ಮಹಿಳಾ ನಾಯಕರನ್ನು ಸ್ಮರಿಸುವ ಉಪಕ್ರಮವನ್ನು ಶ್ಲಾಘಿಸಿದರು.

ಎನ್ಎಸ್ಎಸ್ ಘಟಕದ ವಿದ್ಯಾರ್ಥಿನಿ ಶರಣ್ಯ ಸ್ವಾಗತಿಸಿದರು. ಉಡುಪಿಯ ಕೆ.ಆರ್.ಎಂ.ಎಸ್.ಎಸ್. ಅಧ್ಯಕ್ಷ ಡಾ.ಸುರೇಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಮಹತ್ವದ ಬಗ್ಗೆ ವಿವರಿಸಿದರು. ರೋಟರಿ ಕ್ಲಬ್ ನಿಟ್ಟೆ ಅಧ್ಯಕ್ಷ ಡಾ.ರಘುನಂದನ್ ರಾವ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ಕಾರ್ಕಳ : ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಉದ್ಘಾಟನಾ ಸಮಾರಂಭ

0

 

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಉದ್ಘಾಟನಾ ಸಮಾರಂಭವು ಸೆ. 17 ರಂದು ನಡೆಯಿತು.

ಕಾರ್ಯಕ್ರಮವನ್ನು ಡಾ| ಕಾರ್ತಿಕ್ ರಾವ್ ಎನ್. ವೈದ್ಯರು ಕಾರ್ಕಳ ಉದ್ಘಾಟಿಸಿ, ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು. ಧರ್ಮ, ಸಂಸ್ಕೃತಿ, ಅನುಸರಿಸಿ ಭಾರತ ವಿಶ್ವಗುರುವಾಗಿ ಇರಲು ಸಹಕರಿಸಬೇಕು ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ. ಜಿ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ವೇತಾ ಇವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿಯರಾದ ಪೂಜಾ, ಅನನ್ಯ , ಪ್ರತಿಜ್ಞಾ , ಅಂಕಿತ ಉಪಸ್ಥಿತರಿದ್ದರು. ಅನನ್ಯ ಅಂತಿಮ ಬಿ.ಕಾಂ ವಂದಿಸಿದರು. ಅಂತಿಮ ಬಿ.ಎ ಯ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.