Home Blog Page 69

86 ಸಿಮ್‌ ಕಾರ್ಡ್‌‌ ಹೊಂದಿದ್ದ ಇಬ್ಬರ ಬಂಧನ

0

ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಏರ್ಟೆಲ್ ಕಂಪೆನಿಯ 86 ಸಿಮ್‌ ಕಾರ್ಡ್‌‌ಗಳು, 2 ಮೊಬೈಲ್‌ ಫೊನ್‌ಗಳು,ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ (26) ಮತ್ತು ಮಹಮ್ಮದ್ ಅಜೀಂ (19) ಬಂಧಿತ ಆರೋಪಿಗಳು. ಶಮದ್ ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದರು. ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್ನ ಸಾಜೀದ್ನ ಸೂಚನೆಯಂತೆ ತಮ್ಮ ಗೆಳೆಯರು,
ಪರಿಚಿತರಿಗೆ ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು.

ಆರೋಪಿಗಳು ಕಳೆದ ಜನವರಿ ಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400ರಿಂದ 500 ಸಿಮ್‌ ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನ್ನ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಮುಸ್ತಾಫ ಮತ್ತು ಸಾಜೀದ್ಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

A1 ಸೂಪರ್ ಮಾರ್ಟ್ ಜೋಡುರಸ್ತೆಯಲ್ಲಿ “ಬಿಗ್ ವಿನ್“ಆಫರ್

0

ಗ್ರಾಹಕರು 1000 ರೂ. ಮೇಲ್ಪಟ್ಟು ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿದರೆ ವಾಷಿಂಗ್ ಮೆಷಿನ್ ಸೇರಿದಂತೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.

A1 ಸೂಪರ್ ಮಾರ್ಟ್ ಜೋಡುರಸ್ತೆಯಲ್ಲಿ “ಬಿಗ್ ವಿನ್“ಆಫರ್

ಕಾರ್ಕಳ ಜೋಡುರಸ್ತೆಯಲ್ಲಿರುವ A1 ಸೂಪರ್ ಮಾರ್ಟ್ ನಲ್ಲಿ ಬಿಗ್ ವಿನ್ ಆಫರ್ ಪ್ರಾರಂಭಗೊಂಡಿದೆ.ಮನೆಗೆ ಬೇಕಾಗಿರುವ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಬಂಪರ್ ಆಫರ್ ಲಭ್ಯವಿದೆ.

ಒಂದು ಸಾವಿರ ರೂಪಾಯಿ ಮೇಲ್ಪಟ್ಟು ಖರೀದಿ ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಕೊಂಡರೆ ಲಕ್ಕಿ ಕೂಪನ್ ಸಿಗಲಿದೆ.ಲಕ್ಕಿ ಕೂಪನ್ ವಿಜೇತರಿಗೆ ವಾಷಿಂಗ್ ಮೆಷೀನ್,ಮಿಕ್ಷರ್ ಗ್ರೈ೦ಡರ್ ಹಾಗು ಸ್ಪಿನ್ ಮಾಪ್ ಬಹುಮಾನವಾಗಿ ಸಿಗಲಿದೆ.

ಮುಂದಿನ ಮೂರು ತಿಂಗಳವರೆಗೆ ಈ ಆಫರ್ ನಡೆಯಲ್ಲಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-6360078834.

ಅಯಪ್ಪನಗರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0

ಅಯಪ್ಪನಗರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ನಿವೃತ್ತ ಪೋಲೀಸ್ ಅಧಿಕಾರಿ ಪಡುಬಿದ್ರಿ  ಬಾಲಕೃಷ್ಣ ರಾವ್ ಮತ್ತು ಅವರ ಮಿತ್ರರ ದಿನೇಶ್ ರಾವ್ ಕಾಮಾಕ್ಷಿಪಾಳ್ಯ ಬೆಂಗಳೂರು ಇವರ ಸಹಕಾರದಲ್ಲಿ ಕಾರ್ಕಳ ಕುಕ್ಕುಂದೂರು ಅಯಪ್ಪನಗರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸುಮಾರು 100 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಈ ಸಂದರ್ಬದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕಾರ್ಕಳ ಪುರಸಭಾ ಸದಸ್ಯ, ಕಾಂಗ್ರೇಸ್ ಮುಖಂಡರಾದ ಶುಭದರಾವ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಅಡಗಿದೆ ಶಿಕ್ಷಕರು ಆ ಪ್ರತಿಭೆಯನ್ನು ಗುರುತಿಸುವಲ್ಲಿ ಆಸಕ್ತಿವಹಿಸಿದರೆ ನಮ್ಮ ಪ್ರತಿಭೆಗಳು ದೇಶದ ಸಂಪತ್ತಾಗಿ ಬೆಳೆಯುತ್ತವೆ, ವಿದ್ಯಾರ್ಥಿಗಳಿಗೆ ಸರಕಾರದಿಂದ ಅನೇಕ ಸವಲತ್ತುಗಳು ಘೋಷಣೆಯಾದರೂ ಕೆಲವರಿಗೆ ಅದು ಸರಿಯಾಗಿ ತಲುಪುತ್ತಿಲ್ಲ, ಸವಲತ್ತು ವಂಚಿತ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಅಗತ್ಯವಿದೆ ಇಂತಹ ದಾನಿಗಳಿಂದ ಇದು ಸಾದ್ಯ ಅವರ ಸಹಕಾರವನ್ನು ಸದಾ ಸ್ಮರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹೇಮಂತ್ ಆಚಾರ್ಯ, ಕುಮಾರಿ ಮಿಷಾ ರಾವ್, ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಹೆಬ್ರಿ:ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ಪಮ್ಮಿ ಸೇರಿಗಾರ್‌ ನಿಧನ

0

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ತಾಯಿ
ಪಮ್ಮಿ ಸೇರಿಗಾರ್‌ ವಿಧಿವಶ.

ಹೆಬ್ರಿ:ಹೆಬ್ರಿ ಪೇಟೆಯ ನಿವಾಸಿ ಪಮ್ಮಿ ಸೇರಿಗಾರ್‌ (69) ಎಂಬವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ನಿಧನರಾದರು. ಅಂದಿನ ಕಾಲದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರೀಯರಾಗಿದ್ದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿಯವರಿಗೆ ನಿಕಟವರ್ತಿಯಾಗಿದ್ದರು.

ಹೆಬ್ರಿಗೆ ಬಂದಾಗ ವೀರಪ್ಪ ಮೊಯಿಲಿ ಅವರು ಪಮ್ಮಿ ಸೇರಿಗಾರ್‌ ಅವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಮೃತರಿಗೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಚೈತನ್ಯ ಯುವ ವೃಂದದ ಗೌರವಾಧ್ಯಕ್ಷ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ 49ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಏಕೈಕ ಪುತ್ರ ಎಚ್.ಜನಾರ್ಧನ್‌ ಹಾಗೂ ಕವಿಯಾಗಿರುವ ಅರುಣಾ ಹೆಬ್ರಿ ಸೇರಿದಂತೆ ಮೂವರು ಪುತ್ರಿಯರು ಇದ್ದಾರೆ. ಹೆಬ್ರಿಯ ಪರಿಸರದಲ್ಲಿ ಪಮ್ಮಿ ಸೇರಿಗಾರ್‌ ಜನಾನುರಾಗಿಯಾಗಿದ್ದರು.

ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ನಡೆಯಬಾರದು ಮುನಿಯಾಲು ಉದಯ್ ಶೆಟ್ಟಿಯವರ ಸಮಾಜ ಸೇವೆ ಕೇವಲ ತಾಲೂಕು ಮಾತ್ರವಲ್ಲ ಇಡೀ ಜಿಲ್ಲೆಯ ಜನರಿಗೆ ಗೊತ್ತಿದೆ.-ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ

0

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ರಾಜಕೀಯ ನಡೆಯಬೇಕು ವಿನಹ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ನಡೆಯಕೂಡದು. ನಾವೆಲ್ಲರು ಭಾರತೀಯರು, ನಾವೆಲ್ಲರು ಒಂದು. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ರಾಜಕೀಯ ವೈರತ್ವ ಇರಬಾರದು. ನಮ್ಮೆಲ್ಲರ ಜವಾಬ್ದಾರಿ, ನಮ್ಮ ಕ್ಷೇತ್ರ, ನಮ್ಮ ಜಿಲ್ಲೆ ಮತ್ತು ನಮ್ಮ ರಾಜ್ಯ ಹಾಗು ನಮ್ಮ ದೇಶದ ಅಭಿವೃದ್ಧಿಯಾಗಬೇಕು. ಅದಕ್ಕೆ ನಾವೆಲ್ಲರು ಒಟ್ಟಾಗಿ ಕೈ ಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ದಿನಕರ್ ಶೆಟ್ಟಿ ನಿಟ್ಟೆ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶ ಇದೆ.ಆದರೆ ಪ್ರತಿಭಟನೆ ಮಾಡುವ ಭರದಲ್ಲಿ ನಮ್ಮ ಮಾತಿನ ಮೇಲೆ ನಿಗಾ ಇರಬೇಕು. ಮಾತು ಆಡಿದರೆ ಹೋಯಿತು ಹಾಗು ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯಂತೆ, ಒಂದು ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ತಮ್ಮ ಪಕ್ಷ ಹಾಗು ಪಕ್ಷದ ನಾಯಕನನ್ನು ಸಮರ್ಥನೆ ಮಾಡುವುದು ಆವರ ಆದ್ಯ ಕರ್ತವ್ಯ. ತಮ್ಮ ಪಕ್ಷ ಹಾಗು ಪಕ್ಷದ ನಾಯಕರನ್ನು ಸಂತೋಷ ಪಡಿಸುದೋಸ್ಕರ ಪ್ರತಿ ಪಕ್ಷದ ನಾಯಕರನ್ನು ಹಗುರವಾಗಿ ಮಾತನಾಡುವುದು ಸಮಂಜಸವಲ್ಲ.

ಅವರ ಉಡುಗೆ ತೊಡುಗೆಯ ಬಗ್ಗೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಅವರ ಇಷ್ಟವಾದ ಉಡುಗೆ ತೊಡುಗೆ ಹಾಕಿಕೊಳ್ಳಲಿಕ್ಕೆ ಅವರಿಗೆ ಸ್ವಾತಂತ್ರ್ಯ ಇದೆ. ಆಯಾಯ ಪ್ರದೇಶಕ್ಕೆ, ಆಯಾಯ ಸಭೆ ಹಾಗು ಸಮಾರಂಭಗೋಸ್ಕರ ಅವರಿಗೆ ಇಷ್ಟವಾದ ಉಡುಗೆಯನ್ನು ಧರಿಸುತ್ತಾರೆ.ಮಾನ್ಯ ಉದಯ ಕುಮಾರ್ ಶೆಟ್ಟಿ ಮುನಿಯಾಲುರವರು ಯಾರು, ಏನು ಎಂದು ಕಾರ್ಕಳ ಹಾಗು ಆಸುಪಾಸಿನ ತಾಲೂಕು ಮತ್ತು ಜಿಲ್ಲೆಯ ಜನತೆಗೆ ಗೊತ್ತಿದೆ. ಅವರ ವ್ಯಕ್ತಿತ್ವ ಮತ್ತು ಸಮಾಜ ಸೇವೆ. ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ, ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗು ಸಾಮಾಜಿಕ ಸೇವೆಯನ್ನು ಮಾಡುತ್ತ ಬಂದಿದ್ದಾರೆ, ಈಗಲೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಯಾರೇ ಆಗಲಿ ರಾಜಕೀಯ ದ್ವೇಷ ಮಾಡಬಾರದು. ನಾವೆಲ್ಲರು ಭಾರತೀಯರು ಸೇರಿ, ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಕ್ಷೇತ್ರದ ಅಭಿವೃದ್ದಿ ದೃಷ್ಟಿ ಯಿಂದ ಒಟ್ಟುಗೂಡಿ ಕೆಲಸ ಮಾಡಬೇಕು ಹಾಗು ಜಿಲ್ಲೆಯಲ್ಲಿ ಜಾತಿ ಹಾಗು ಧರ್ಮ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರೋಣ ಎಂದು ಅವರು ತಿಳಿಸಿದ್ದಾರೆ.

ಸಹ್ಯಾದ್ರಿಯಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ

0

ಸಹ್ಯಾದ್ರಿಯಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ 13 ಆಗಸ್ಟ್ 2024 ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಹ್ಯಾದ್ರಿ ಗ್ರಂಥಪಾಲಕರ ತಂಡವು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್. ರಂಗನಾಥನ್ ರವರ132ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು. ಎನ್ಐಟಿಕೆ ಸುರತ್ಕಲ್ನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.

ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಮಾರಂಭವು ಪ್ರಾಚಾರ್ಯರಾದ ಡಾ. ಎಸ್ ಎಸ್ ಇಂಜಗನೇರಿ, ಟ್ರಸ್ಟಿಗಳುಜಗನ್ನಾಥ ಚೌಟ, ಮತ್ತುದೇವದಾಸ್ ಹೆಗ್ಡೆ, ಗ್ರಂಥಪಾಲಕಿ ಡಾ. ಭಾರತಿ ಕೆ, ಮತ್ತು ಮುಖ್ಯ ಅತಿಥಿಗಳಾದ ಡಾ. ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಗಣ್ಯ ಅತಿಥಿಗಳಿಂದ ದೀಪ ಬೆಳಗಿಸುವ ಆಚರಣೆಯೊಂದಿಗೆ ಪ್ರಾರಂಭವಾಯಿತು ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ರಚಿಸಿದ ಅಧ್ಯಾಪಕರನ್ನು ಸನ್ಮಾನಿಸಲಾಯಿತು ಮತ್ತು ಡಿಜಿಟಲ್ ಲೈಬ್ರರಿಯನ್ನು ಸಕ್ರಿಯವಾಗಿ ಬಳಸಿಕೊಂಡ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ವಿಶೇಷ ಮನ್ನಣೆ ನೀಡಲಾಯಿತು.

ಈ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಮಾರಂಭವು ಡಾ.ರಂಗನಾಥನ್ ಅವರ ಪರಂಪರೆಯನ್ನು ಸ್ಮರಿಸುವುದಲ್ಲದೆ, ಸಹ್ಯಾದ್ರಿ ಕಾಲೇಜಿನ ಕಲಿಕೆ ಮತ್ತು ಸಾಹಿತ್ಯದ ಅನ್ವೇಷಣೆಯಲ್ಲಿ ಶ್ರೇಷ್ಠತೆಗೆ ಸಂಸ್ಥೆಯ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ ಎಂದು ಶೈಕ್ಷಣಿಕ ಸಮುದಾಯವನ್ನು ಒತ್ತಿಹೇಳಿತು.

ಡಾ. ಮಲ್ಲಿಕಾರ್ಜುನ್ ಅವರು ತಮ್ಮ ಭಾಷಣದಲ್ಲಿ ಎನ್‌ಐಟಿಕೆ ಸುರತ್ಕಲ್‌ನ ಕೇಂದ್ರ ಗ್ರಂಥಾಲಯದ ಸೌಲಭ್ಯಗಳ ಕುರಿತು ಮಾತನಾಡಿದರು ಮತ್ತು ಹೆಚ್ಚುವರಿ ಸಂಪನ್ಮೂಲಗಳ ಕುರಿತು ಯಾವುದೇ ಸಹಾಯಕ್ಕಾಗಿ ಭೇಟಿ ನೀಡಲು ಮತ್ತು ತಲುಪಲು ಸಹ್ಯಾದ್ರಿಯರನ್ನು ಸ್ವಾಗತಿಸಿದರು. ಡಾ. ಎಸ್. ಆರ್. ರಂಗನಾಥನ್ ಪ್ರಸ್ತಾಪಿಸಿದ ಗ್ರಂಥಾಲಯ ವಿಜ್ಞಾನದ 5 ನಿಯಮಗಳ ಕುರಿತು ಮಾತನಾಡಿದ ಅವರು, ಪುಸ್ತಕಗಳು ಬಳಕೆಗಾಗಿವೆ. ಯಾವುದೂ ಸ್ಥಿರವಾಗಿಲ್ಲ ಆದ್ದರಿಂದ ಗ್ರಂಥಾಲಯಗಳು ಪ್ರವೃತ್ತಿಯಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ವಿಷಯ ಅಭಿವೃದ್ಧಿಯತ್ತ ಗಮನಹರಿಸುವಂತೆ ಅವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು, ಮುಂದೆ ಅವರು “ಸಹಕಾರಿಯಾಗಿ ಮತ್ತು ನೆಟ್‌ವರ್ಕ್ ಮಾಡಿ, ಸರಿಯಾದ ಚಟುವಟಿಕೆಗಳೊಂದಿಗೆ ವಾತಾವರಣವನ್ನು ಸೃಷ್ಟಿಸಿ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಝೇಂಕರಿಸುತ್ತಾರೆ” ಎಂದು ಹೇಳಿದರು.

ಸಹ್ಯಾದ್ರಿ ಕಾಲೇಜಿನ ಟ್ರಸ್ಟಿ ಶ್ರೀ ಜಗನ್ನಾಥ ಚೌಟ ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ಗ್ರಂಥಾಲಯ ತಂಡವು ವಿಶೇಷವಾಗಿ ಸಹ್ಯಾದ್ರಿಯ ಭಾಗವಾಗಿರುವ ಡಾ. ಭಾರತಿ ಅವರ ಪ್ರಾರಂಭದಿಂದಲೂ ಪ್ರಯತ್ನಗಳನ್ನು ಶ್ಲಾಘಿಸಿದರು. ಡಿಜಿಟಲೀಕರಣದ ಇಂದಿನ ದಿನಗಳಲ್ಲಿ, ಯಾವುದೇ ರೂಪದಲ್ಲಿ ಲಭ್ಯವಿರುವ ಮಾಹಿತಿಯು ಮಾಹಿತಿಯ ಸಾರವನ್ನು ಅರ್ಥಮಾಡಿಕೊಳ್ಳದೆ ಕೇವಲ ಹಾದುಹೋಗುತ್ತದೆ ಎಂದು ಅವರು ಎತ್ತಿ ತೋರಿಸಿದರು. ಅದನ್ನು ಓದಿ ಮರೆತು ಹೋಗಿದೆ. ಚೌಟ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರ ಬೋಧನೆಗಳು ಇಡೀ ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.

ಸಹ್ಯಾದ್ರಿ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇದೇ ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ಬದ್ಧತೆ ತೋರಿದ ಗ್ರಂಥಪಾಲಕರನ್ನು ಮತ್ತು ತಂಡವನ್ನು ಅಭಿನಂದಿಸಿದರು. ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವ ಮೊದಲು, ಉದ್ದೇಶವನ್ನು ಆಲೋಚಿಸಬೇಕೆಂದು ಅವರು ಪುನರುಚ್ಚರಿಸಿದರು ಮತ್ತು ಈ ಕಾರ್ಯಕ್ರಮವು ವಿಶೇಷವಾಗಿ ಓದುವ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಮತ್ತು ಇತರ ಕಾಲೇಜುಗಳು ಮತ್ತು ಪ್ರದೇಶಗಳ ಗ್ರಂಥಪಾಲಕರೊಂದಿಗೆ ನೆಟ್‌ವರ್ಕಿಂಗ್ ಅನ್ನು ಸುಧಾರಿಸಲು ಗ್ರಂಥಾಲಯ ಸೌಲಭ್ಯ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ವ್ಯಾಪಕವಾದ ಉದ್ದೇಶಗಳನ್ನು ಹೊಂದಿದೆ. ಸಮಾರೋಪ ಭಾಷಣದಲ್ಲಿ ಗ್ರಂಥಾಲಯದ ವಿಕಾಸದ ಕುರಿತು ಮಾತನಾಡಿದ ಅವರು, ಓದುವ ವಿದ್ಯಾರ್ಥಿಗಳಿಗೆ ಪುಸ್ತಕಗಳು ಕೈಗೆಟುಕುವಂತೆ ನೋಡಿಕೊಳ್ಳಲು ಗ್ರಂಥಾಲಯ ತಂಡವನ್ನು ಒತ್ತಾಯಿಸಿದರು.

 

ಕುಸ್ತಿ:ಎಸ್ ‌ವಿ ಟಿ ಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

0

ಕುಸ್ತಿ : ಎಸ್ ‌ವಿ ಟಿ ಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಶಿಕ್ಷಣ ಇಲಾಖೆಯ ವತಿಯಿಂದ ಎಸ್. ವಿ ಟಿ ವನಿತಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್ ‌ವಿ ಟಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಶೃತಿ, ಅನ್ವಿತಾ, ಪ್ರೇಕ್ಷಾ, ಭಾರತಿ, ಪ್ರಣೀತ್, ರಿತಿಕ್, ಸಿದ್ಧಲಿಂಗ, ಮುತ್ತುರಾಜ್, ಪೂಜಾ ಕೆ, ವಾಣಿ ಸಂಗಪ್ಪ, ವಿಘ್ನೇಶ್, ದಿವ್ಯಶ್ರೀ ಮತ್ತು ಸಾನ್ವಿ ಸೇರಿದಂತೆ ಒಟ್ಟು 13 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ನೇಮಿರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಿಯಾ ಪ್ರಭು , ಪ್ರಭಾವತಿ ಹಾಗೂ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

 

ಮುಡಾರು ಗ್ರಾಮ ಪಂಚಾಯತ್‌:2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ

0

ಮುಡಾರು ಗ್ರಾಮ ಪಂಚಾಯತ್‌:2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ

ಮುಡಾರು ಗ್ರಾಮ ಪಂಚಾಯತ್‌ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ವಿ ಎಸ್‌ ಆಚಾರ್ಯ ಸಭಾಭವನದಲ್ಲಿ ನಡೆಯಿತು.

2023-24 ನೇ ಸಾಲಿನ ಮುಡಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ದಿ ಕಾರ್ಯಕ್ರಮಗಳ ವರದಿ ಮಂಡನೆ ಮಾಡಲಾಯಿತು. ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿ ನೀಡಲಾಯಿತು. ಸಾರ್ವಜನಿಕರಿಂದ ಹಲವಾರು ಅರ್ಜಿ ಅಹವಾಲುಗಳನ್ನು ಸ್ವೀಕರಿಸಲಾಯಿತು. ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.

ಮುಖ್ಯವಾಗಿ ಸಾರ್ವಜನಿಕರಿಂದ ಅಪಾಯಕಾರಿ ಮರ ತೆರವಿನ ಬಗ್ಗೆ ರುದ್ರಭೂಮಿಯ ಬಗ್ಗೆ ಪಿ ಡಬ್ಲ್ಯೂಡಿ ಇಲಾಖೆಗಳ ಸಮರ್ಪಕ ಚರಂಡಿ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟರು. ವಾರಾಹಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪೈಪ್ ಲೈನ್ ಮಾರ್ಗ ರಚನೆಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶೃತಿ ಡಿ ಅತಿಕಾರಿಯವರು ಮಾತನಾಡಿ ಅತ್ಯಂತ ಪಾರದರ್ಶಕವಾಗಿ ಜನಪರ ಕಾರ್ಯಗಳನ್ನು ಗ್ರಾಮ ಪಂಚಾಯತ್‌ ಮಾಡುತ್ತ ಇದ್ದು ಗ್ರಾಮದ ಸಮಗ್ರ ಅಭಿವೃದ್ದಿಗೆ ಗ್ರಾಮಸ್ಥರ ಸಹಕಾರಯಾಚಿಸಿದರು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶೃತಿ ಡಿ ಅತಿಕಾರಿ ವಹಿಸಿದರು. ನೋಡೆಲ್‌ ಅಧಿಕಾರಿ ಸಿದ್ದಪ್ಪ ತುಡುಬಿನ್‌, ಪಂಚಾಯತ್‌ ಅಭಿವೃದ್ದಿ ಅಧಿಕಾರಿ ರಮೇಶ್‌ ಎಸ್, ಕಾರ್ಯದರ್ಶಿ ಜಯಕರ್‌, ಗ್ರಾಮ ಆಡಳಿತಾಧಿಕಾರಿಯಾದ ಭಾಲಕೃಷ್ಣ ತಲ್ಲೂರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಸದಸ್ಯರಾದ ಮಾಲತಿ ನಾಯ್ಕ್‌, ರೇಖಾ ಎಸ್‌ ಭಂಡಾರಿ, ವಿನಯ ಡಿ ಬಂಗೇರ, ಜಾಯ್ಸ್‌ ಪ್ರೆಸಿಲ್ಲಾ, ಸಂತೋಷ್‌ ಪೂಜಾರಿ, ಸುರೇಶ್‌ ಶೆಟ್ಟಿ, ಹರೀಶ್‌ ಪೂಜಾರಿ, ಶಿವ ಪ್ರಸಾದ್‌, ಪ್ರಶಾಂತ್‌ ಕುಮಾರ್‌, ರಜತ್‌ ರಾಮ್‌ ಮೋಹನ್‌ ಉಪಸ್ಥಿತರಿದ್ದರು.

ಕಾರ್ಕಳ:ಕ್ರೈಸ್ಟ್ ಕಿಂಗ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಚೆಸ್‌ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಕಾರ್ಕಳ:ಕ್ರೈಸ್ಟ್ ಕಿಂಗ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಚೆಸ್‌ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ರೆಂಜಾಳ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ಏಳನೇ ತರಗತಿಯ ಮೌಲ್ಯ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಎಂಟನೇ ತರಗತಿಯ ವರುಣ್ ಕಾಮತ್ ಪ್ರಥಮ ಸ್ಥಾನ, ಒಂಬತ್ತನೇ ತರಗತಿಯ ಸೋಹನ್ ತೃತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ತಂಡದ ನೇತೃತ್ವ ವಹಿಸಿದ್ದರು.

ಹೆಬ್ರಿ:ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಹಾಗೂ ಉಚಿತ ನೇತ್ರತಪಾಸಣೆ ಶಸ್ತ್ರ ಚಿಕಿತ್ಸಾಶಿಬಿರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹೆಬ್ರಿ ತಾಲ್ಲೂಕು, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ, ಅಧ್ಯಕ್ಷರು/ಸದಸ್ಯರು ಗ್ರಾಮ ಪಂಚಾಯತ್ ವರಂಗ, ಲಯನ್ಸ್ ಕ್ಲಬ್ ಮುನಿಯಾಲು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘ ಪಡುಕುಡೂರು, ಹಾಲು ಉತ್ಪಾದಕರ ಸಹಕಾರಿ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡು ಕುಡೂರು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಹಾಗೂ ಉಚಿತ ನೇತ್ರತಪಾಸಣೆ ಶಸ್ತ್ರ ಚಿಕಿತ್ಸಾಶಿಬಿರ ವನ್ನು ಪಡುಕುಡೂರು ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುನಿಯಲು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಭುಜಂಗ ಶೆಟ್ಟಿ ಅವರು ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚಿದ ವ್ಯಕ್ತಪಡಿಸಿದರು. ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ಶ್ರೀ ಶಂಕರ ಶೆಟ್ಟಿಯವರು ಟ್ರಸ್ಟ್ ನ ಪರಿಚಯ ಹಾಗೂ ಅಲ್ಲಿಯ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು ಹೆಬ್ರಿ ತಾಲೂಕು ಯೋಜನಾಧಿಕಾರಿಯಾಗಿರುವ ಶ್ರೀಮತಿ ಲೀಲಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ತಾರಾವತಿ, ಮುದ್ರಾಡಿ ವಲಯದ ಜನಜಾಗೃತಿ ಸದಸ್ಯರಾದ ಶ್ರೀ ಗೋಪಿನಾಥ್ ಭಟ್, ಪಡುಕುಡೂರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹರೀಶ್ ಎಸ್ ಪೂಜಾರಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಆಚಾರ್ಯ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಸನ್ನ ಶೆಟ್ಟಿ. ಪಡುಕುಡೂರು ಉದ್ಯಮಿ ಶ್ರೀ ಹರೀಶ್ ಶೆಟ್ಟಿ ಶೆಟ್ಟಿ, ಲಯನ್ಸ್ ಸದಸ್ಯರಾದ ಶ್ರೀ ಅಶೋಕ್ ಶೆಟ್ಟಿ,ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಹೆಗ್ಡೆ, ಮುದ್ರಾಡಿ ವಲಯದ ಅಧ್ಯಕ್ಷರಾದ ಶ್ರೀ ಯೋಗೀಶ್, ಒಕ್ಕೂಟದ ಅಧ್ಯಕ್ಷರಾದ ಶ್ರೀ ಹೃದಯ ಶೆಟ್ಟಿ, ಶೌರ್ಯ ವಿಪತ್ತು ಘಟಕದ ಅಧ್ಯಕ್ಷರಾದ ಶ್ರೀ ಶಂಕರ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜ್ಞಾನವಿಕಾಸ ಕೇಂದ್ರದ ದಾಖಲಾತಿಯನ್ನು ಯೋಜನಾಧಿಕಾರಿ ಶ್ರೀಮತಿ ಲೀಲಾವತಿಯವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 170 ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡರು.