ನಿರೀಕ್ಷಿತಂ ಸಂದಾನಂ ಎಂಬ ನಾಮಾಂಕಿತದ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಗೊಳ್ಳಲಿದ್ದು, ಇದೀಗ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಬಿ. ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದಾರೆ.
ಪ್ರವೀಣ್ ಜೆ.ಕೆ. ಅವರ ಕಥೆ ಹಾಗೂ ನಿರ್ದೇಶನದಲ್ಲಿ ಹಾಗೂ ರಾಜೇಶ್ ಬೊಂಬೆ, ಪ್ರಯಾಣ್ ಕ್ರಿಯೇಷನ್ಸ್ ರವರ ನಿರ್ಮಾಪಕತ್ವದಲ್ಲಿ ಮೂಡಿಬರಲಿರುವ ಕಿರುಚಿತ್ರದಲ್ಲಿ ಚಿತ್ರಗ್ರಹಣ ನಿರ್ದೇಶಕರಾಗಿ ಸಾಗರ್, ನಿರ್ದೇಶಕರಾಗಿ ಸಾತ್ವಿಕ್ ಶಂಕರ್ ಶೆಟ್ಟಿ ಮತ್ತು ನವೀಶ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ.
ಅ. ೧೫ ರಂದು ಕ್ರಿಯೇಟಿವ್ ಮೀಡಿಯಾ ವತಿಯಿಂದ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಪ್ರಮುಖ ನಟರಾಗಿ ಶಶಿ ಶಿರ್ಲಾಲ್, ರೂಪ ಶೆಟ್ಟಿ, ವಿನಾಯಕ್ ಕುಲಾಲ್ , ಹರಿ ನಿಟ್ಟೆ ರವರು ಬಣ್ಣ ಹಚ್ಚಲಿದ್ದಾರೆ.
ಚಿತ್ರೀಕರಣ ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರವೀಣ್ ಜೆ.ಕೆ., ಸಹ ನಿರ್ದೇಶಕರಾದ ಸಾತ್ವಿಕ್ ಶಂಕರ್ ಶೆಟ್ಟಿ ಮತ್ತು ನವೀಶ್ ಶೆಟ್ಟಿ, ಸುನಿಲ್ ಕಡ್ತಲ, ಚಿತ್ರಗ್ರಹಣ ನಿರ್ದೇಶಕ ಸಾಗರ್ ಮೊದಲಾದವು ಉಪಸ್ಥಿತರಿದ್ದರು.
ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ ಬೈಪಾಸ್ ನ ಕಾರ್ಕಳ ಇನ್ ಸಭಾಂಗಣದಲ್ಲಿ ನಡೆಯಿತು.
ಶ್ರೀರಾಮ ಮಂದಿರಕ್ಕಾಗಿ ಹುತಾತ್ಮರಾದ ಧರ್ಮ ಯೋಧರಿಗೆ ರಕ್ತದಾನದ ಮೂಲಕ ಬಜರಂಗದಳದ ಕಾರ್ಯಕರ್ತರು ಗೌರವ ಸಮರ್ಪಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಗಿರೀಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬಜರಂಗದಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಹಾಗೂ ಅಶೋಕ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋ ರಕ್ಷಾ ಪ್ರಮುಖ್ ಸುನಿಲ್ ಕೆ ಆರ್ ಮಾತನಾಡಿ “ಅಯೋಧ್ಯೆ ಶ್ರೀರಾಮ ಮಂದಿರ ಇವತ್ತು ಅತ್ಯಂತ ಭವ್ಯವಾಗಿ ನಿರ್ಮಾಣಗೊಂಡಿರುವ ಕಾರಣ ಅವತ್ತು ನಮ್ಮ ಹಿಂದೂ ಸಮಾಜದ ತ್ಯಾಗ ಮತ್ತು ಬಲಿದಾನ. ರಾಮಜನ್ಮಭೂಮಿಗಾಗಿ ಅದೆಷ್ಟೋ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅಂತಹ ವೀರರನ್ನು ಹಿಂದೂ ಸಮಾಜ ಎಂದಿಗೂ ಮರೆಯಬಾರದು. ನವೆಂಬರ್ 2 ದೇಶಾದ್ಯಂತ ಬಜರಂಗದಳದ ಕಾರ್ಯಕರ್ತರು ಈ ಸಲುವಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಏಳಿಗೆಗೆ ಸದಾ ದುಡಿಯುತ್ತಿದ್ದಾರೆ” ಎಂದರು.
ಉಡುಪಿ ಜಿಲ್ಲಾ ಬಜರಂಗದಳ ಸಂಯೋಜಕ ಚೇತನ್ ಪೇರಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜರಕಾಡು ರಕ್ತನಿಧಿ ವಿಭಾಗದ ಡಾ. ವಿಸ್ಮಿತಾ ಉಪಸ್ಥಿತಿ ಇದ್ದರು. ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ವಂದಿಸಿ, ವಿಶ್ವ ಹಿಂದೂ ಪರಿಷದ್ ಸಹ ಕಾರ್ಯದರ್ಶಿ ಯಶೋಧರ ಪೇರಲ್ಕೆ ಕಾರ್ಯಕ್ರಮ ನಿರೂಪಿಸಿದರು.
ಸಮುದಾಯದ ಅನುಭವ ಶಿಕ್ಷಣ ಜೀವನಕ್ಕೆ ದಾರಿ ದೀಪ : ನರಸಿಂಗ ಶೆಟ್ಟಿ
ಸಮುದಾಯದ ಜೀವನದಲ್ಲಿ ಪಡೆಯುವ ಅನುಭವ ಶಿಕ್ಷಣ ನಿಜ ಜೀವನಕ್ಕೆ ದಾರಿ ದೀಪ. ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಭೌತಿಕ, ನೈತಿಕ, ನೈತಿಕ, ಸಾಮಾಜಿಕ ಆಧ್ಯಾತ್ಮಿಕ ಶಿಕ್ಷಣಗಳನ್ನು ಜೊತೆ ಜೊತೆಗೆ ಪಡೆಯುವಂತಾಗಬೇಕು. ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಂಡು ದೇಶದ ಏಳಿಗೆಗೆ ಸಹಕರಿಸುವ ಜವಾಬ್ದಾರಿಯುತ ಪ್ರಜೆಗಳಾಗುವತ್ತ ಸಾಗಬೇಕು ಎಂದು ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನರಸಿಂಗ ಶೆಟ್ಟಿ ನುಡಿದರು. ಅವರು ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಹಳ್ಳಿಯಲ್ಲಿ ನಡೆದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಕಿರಣ್ ಕುಮಾರ್ ಹೆಗ್ಡೆ ಮಾತನಾಡಿ ನಮ್ಮ ಗ್ರಾಮದಲ್ಲಿ ಕಳೆದ ನೆನಪುಗಳನ್ನು ಇಲ್ಲಿ ಕಲಿತ ಜೀವನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪೆರ್ಡೂರು ಗುಡಿ ಕೈಗಾರಿಕೆಗಳ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಿ, ಆ ಮೂಲಕ ಪರೋಪಕಾರ ನಿಮ್ಮ ಜೀವನದ ಭಾಗವಾಗಲಿ ಎಂದರು.
ಪಿ.ಎ.ಶ್ರೀ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಹೆಗ್ಡೆ ಅವರು ಮಾತನಾಡಿ ಶಿಬಿರ ಸಂಪನ್ನವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು.
ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜು, ವಿದ್ಯಾನಗರದ ಪ್ರಾಂಶುಪಾಲ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾನ್ಯ ಹಳ್ಳಿಗಿಂತ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕುಕ್ಕೆಹಳ್ಳಿಯ ಜನತೆ ಶಿಬಿರದ ವಿದ್ಯಾರ್ಥಿಗಳಿಗೆ ತೋರಿಸಿದ ಕಾಳಜಿಗೆ ವಂದಿಸಿದರು.
ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜು, ನಾಗಬನ ಕ್ಯಾಂಪಸ್ ನ ಪ್ರಾಂಶುಪಾಲ ಸಂತೋಷ್, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಉದ್ಯಮಿಗಳಾದ ಸುನಿಲ್ ಶೆಟ್ಟಿ, ಪಿ. ಎಮ್. ಶ್ರೀ. ಸ. ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸರಸ್ವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರವೀಂದ್ರ ಕುಮಾರ್, ಎಸ್.ಡಿ.ಎಂ.ಸಿ. ಸದಸ್ಯರಾದ ಅಶ್ವಿನಿ ವಾದಿರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಸಮೀಕ್ಷಾ ಪೂಜಾರಿ, ರಕ್ಷಿತ್ ಶೆಟ್ಟಿ, ತನ್ವಿ ಎಸ್ ಆಚಾರ್ಯ, ರಂಜನ್ ಶೆಟ್ಟಿ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದರು. ಅಜೆಕಾರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ನ ವತಿಯಿಂದ ಹೊತ್ತು ಸಾವಿರ ಹಾಗು ಜ್ಞಾನಸುಧಾ ಉಪನ್ಯಾಸಕ ಬಳಗದಿಂದ ಹತ್ತು ಸಾವಿರ ಆತಿಥೇಯ ಶಾಲೆಗೆ ಒಟ್ಟು ಇಪ್ಪತ್ತು ಸಾವಿರ ರೂಪಾಯಿಗಳ ದತ್ತಿ ನಿಧಿ ವಿತರಿಸಲಾಯಿತು. ಆಂಗ್ಲ ಭಾಷಾ ಉಪನ್ಯಾಸಕರಾದ ಶಮಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಉಪ ಪ್ರಾಂಶುಪಾಲರಾದ ರವಿ ಜಿ ಶಿಬಿರದ ವರದಿ ವಾಚಿಸಿ ವಂದಿಸಿದರು.
ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ನ. 1ರ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ಕಲಾಪೋಷಕ ಸರಳ ಸಜ್ಜನ ಸಹೃದಯವಂತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ನವೀನ್ ಪಡುಇನ್ನರವರ ಪರಿಚಯ ಬದುಕು ಒಂದು ರೀತಿಯಲ್ಲಿ ಅಪರಿಚಿತವಾದುದು, ಎಷ್ಟೇ ತಿಳಿದಿದ್ದರೂ ನಾಳೆಗೆ ಎಲ್ಲವೂ ಅದಲು ಬದಲು. ಬದುಕಿನ ಕನಸಿನ ಮೂಟೆ ಕಟ್ಟುವುದು ಬಹಳ ಸುಲಭ, ಆದರೆ ಅದನ್ನು ಹೊರುವುದು ಕಷ್ಟ ಎಂಬ ವಾಕ್ಯವನ್ನು ಸವಾಲುಗಳಾಗಿ ತೆಗೆದುಕೊಂಡು, ಬದುಕಿನ ಮಜಲುಗಳನ್ನು ದಾಟುವಾಗ ಅದರ ನಡುವೆ ಸಿಗುವ ಸವಾಲುಗಳಿಗೆ ಎದೆಯೊಡ್ಡಿ ನಿಂತು ಕಷ್ಟಗಳನ್ನು ಸ್ವೀಕರಿಸಿ ಅದಕ್ಕೆ ಸಾಧನೆಯ ಉತ್ತರವನ್ನು ನೀಡುವವನೇ ನಿಜವಾದ ಸಾಧಕ. ಅಂತಹ ಸಾಧಕರ ಸಾಲಿನಲ್ಲಿ ಮೊದಲಲ್ಲಿ ಮಿಂಚುತ್ತಿರುವವರು ನಮ್ಮ ಯುವ ಸಂಘಟಕ ನವೀನ್ ಪಡುಇನ್ನ.
ಸಾಧನೆ ಎನ್ನುವ ಸರಳವಾದ ಪದದಲ್ಲಿ ಸಾವಿರ ಕಷ್ಟಗಳಿರುತ್ತದೆ. ಕಷ್ಟದಲ್ಲಿ ನಿಷ್ಠೆ ಇದ್ದರೆ, ಮಾತಿನಲ್ಲಿ ಪ್ರತಿಷ್ಠೆ ಇದ್ದರೆ ಸೃಷ್ಟಿ ಕೂಡ ಸುಮ್ಮನಿರುವುದು. ನಿಮ್ಮ ಸಾಧನೆ ನೋಡುತ ಎನ್ನುವ ಮಾತಿನಂತೆ ಅವಮಾನದ ಮಾತುಗಳಿಗೆ ಕಿವಿಕೊಡದೆ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಇವರು. ದೈವ ದೇವರುಗಳಿಗೆ ಹೆಸರುವಾಸಿಯಾದ, ಸರ್ವಧರ್ಮವನ್ನು ಗೌರವಿಸುವ ಬೆರ್ಮೆರೆ ಸೃಷ್ಟಿಯ ತುಳುನಾಡಿನ ಪಡು ಇನ್ನ ಗ್ರಾಮದಲ್ಲಿ ಮೋಹನದಾಸ್ ಮತ್ತು ಸುಜಾತ ದಂಪತಿಯ ಸುಪುತ್ರರಾಗಿ ದಿನಾಂಕ 11.08.1989 ರಲ್ಲಿ ನವೀನ್ ಪಡು ಇನ್ನಾರವರು ಜನಿಸಿದರು. ಇವರು ಹೃದಯಮಾತೆ ಕಮಲಜ್ಜಿಯ ಮಮತೆಯಲ್ಲಿ ಬಾಲ್ಯವನ್ನು ಕಳೆದರು. ಅಣ್ಣನಾದ ಕಿರಣ್ ಕುಮಾರ್, ತಂಗಿ ಪೂರ್ಣಿಮಾಳ ಸದಾ ಬೆಂಬಲದೊಂದಿಗೆ ಬೆಳೆದವರು. ಅತ್ತೆಯರಾದ ರೂಪಾ ಮತ್ತು ದಿವ್ಯಾರವರ ಪ್ರೀತಿಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಇನ್ನಾ, ಪ್ರೌಢಶಿಕ್ಷಣವನ್ನು ಯಂ.ವಿ. ಶಾಸ್ತ್ರೀ ಹೈಸ್ಕೂಲ್ ಇನ್ನಾದಲ್ಲಿ ಪಡೆದು ಮುಂದೆ 10ನೇ ತರಗತಿಯನ್ನು ಮುಗಿಸಿ ಜೀವನದ ಬಂಡಿಯನ್ನು ಸಾಗಿಸಲು ಮುಂಬಯಿಯತ್ತ ಪಯಣ ಬೆಳೆಸಿದರು. ಮುಂಬಯಿಯಲ್ಲಿ ದಿನದ ಹೊತ್ತು ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ ರಾತ್ರಿ ಕನ್ನಡ ಭವನ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನವೀನ್ ಇನ್ನಾರವರು ಮುಂದುವರಿಸಿದರು.
ಸಾಧನೆ ಸಾಧಕನ ಸೊತ್ತೆ ಹೊರತು ಸೋಮರಿಯದಲ್ಲ ಎಂಬ ಮಾತಿಗೆ ಸ್ಪೂರ್ತಿಯಾದ ಇವರು, ಹಗಲಲ್ಲಿ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಕನ್ನಡ ಭವನ ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತ ಹೊಸತನದ ಬದುಕಿಗೆ ಮುನ್ನುಡಿಯಾಗಿರುವರು. ಇವರು ಮಾಡುವ ಕೆಲಸದಲ್ಲಿ ದೇವರನ್ನು ಕಾಣುತ್ತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತ ಅನ್ನಪೂರ್ಣ ಕ್ಯಾಟರರ್ಸ್ ಇದರ ಮಾಲಕರಾದ ಆನಂದ್ ಶ್ರೀಯಾನ್, ಸುರೇಶ್ ಶ್ರೀಯಾನ್ ಇವರ ಪ್ರೀತಿ ವಿಶ್ವಾಸ ಗಳಿಸುತ್ತ ಮುಂದೆ ಸಾಗಿದರು. ಮಾವಂದಿರಾದ ರಮೇಶ್ ಕೋಟ್ಯಾನ್, ಸುಧಾಕರ ಪೂಜಾರಿ ಮತ್ತು ಹರೀಶ್ ಕೋಟ್ಯಾನ್, ಚಿಕ್ಕಮ್ಮ ಸುನೀತಾ ಪೂಜಾರಿ ಇವರ ಸೂಕ್ತ ಸಲಹೆಗಳನ್ನು ತೆಗೆದುಕೊಂಡು ಮಾಯಾನಗರಿ ಮುಂಬೈನಲ್ಲಿ ಅದ್ವಿಕ್ ಪುಡ್ ಎಂಡ್ ಹಾಸ್ಪಿಟಲಿಟಿ ಸರ್ವಿಸ್, ಅದ್ವಿಕ್ ಫ್ರುಟ್ಸ್ & ವೆಜಿಟೇಬಲ್ ಉದ್ಯಮ ಸಂಸ್ಥೆಯನ್ನು ಆರಂಭಿಸಿ ಯಶಸ್ವಿ ಯುವ ಉದ್ಯಮಿ ಎಂದೆನಿಸಿಕೊಂಡರು.
ಇವರು ನಡೆದ ದಾರಿಯನ್ನು ಗಮನಿಸುವಾಗ ಅದೃಷ್ಟ ಎಂದರೆ ಅವಕಾಶ ಪಡೆಯುವವನು ಬುದ್ದಿವಂತ ಎಂದರೆ ಅವಕಾಶ ಸೃಷ್ಟಿಸುವವನು ಎಂಬ ವಿವೇಕಾನಂದರ ನುಡಿಯೊಂದು ನೆನಪಾಗುತ್ತದೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣ ಮತ್ತು ಸಂಘಟನ ಚತುರತೆಯನ್ನು ಮೈಗೂಡಿಸಿಕೊಂಡ ಇವರು ಕ್ರೀಡಾ, ಸಾಮಾಜಿಕ ಹಾಗೂ ಕಲಾ ಕ್ಷೇತ್ರಗಳಲ್ಲಿನ ಸಾಧಕರನ್ನು ಒಗ್ಗೂಡಿಸಿಕೊಂಡು ಸಮರ್ಥ ಸಂಘಟಕರಾಗಿ ಬೆಳೆದವರು ಎನ್ನಲು ಖುಷಿಯಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಉದಯೊನ್ಮುಖ ಪ್ರತಿಭೆಗಳಿಗೆ ವೇದಿಕೆಯನ್ನು ನಿರ್ಮಿಸಿಕೊಡುವ ಜೊತೆಗೆ ಸಮಾಜದ ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರ ಸಾಧನೆಯ ಗೌರವವನ್ನು ಹೆಚ್ಚಿಸಿದವರು ನವೀನ್ ಪಡು ಇನ್ನಾರವರು.
ಒಬ್ಬ ನಾಯಕ ಸಮರ್ಥನಾಗಿ ಬೆಳೆಯಬೇಕಾದರೆ, ಸಮಾಜದ ಉತ್ತಮ ಕಾರ್ಯಗಳು ನಡೆಯಬೇಕಾದರೆ ಒಂದು ಸಂಸ್ಥೆಯ ಅಗತ್ಯತೆ ಇದೆ ಎಂಬುದನ್ನು ಮನಗೊಂಡ ಇವರು ಅವರ ಪ್ರೀತಿಯ ಅಜ್ಜಿ ಕಮಲ ಪೂಜಾರ್ತಿಯವರ ಸ್ಮರಣೀಯವಾಗಿ ಕಮಲ ಕಲಾ ವೇದಿಕೆ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ರೂವಾರಿಯಾಗಿ ಆ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಮುಂಬೈ ನಗರದಲ್ಲಿ ಸೈ ಎನಿಸಿಕೊಂಡಿರುವರು. ಅದರ ಮೂಲಕ ಸಮಾಜಪರ ಕಾರ್ಯಗಳನ್ನು ನೆರವೇರಿಸುತ್ತಾ ಸುಮಾರು ನೂರಕ್ಕೂ ಹೆಚ್ಚು ಕಲಾವಿದರನ್ನು ಸತ್ಕರಿಸಿ ಗೌರವಿಸಿದ ಕೀರ್ತಿ ಇವರಿಗಿದೆ. ಕೊರೋನ ಸಮಯದಲ್ಲಿ ಅಂತಾರಾಷ್ಟ್ರೀಯ ವಾಸ್ತು ತಜ್ಞರಾದ ಅಶೋಕ್ ಪೊರೋಹಿತ್ ರವರ ಆಶೀರ್ವಾದ, ಸಹಕಾರದ ಜೊತೆಗೆ ಇವರ ಗೆಳೆಯರ ಸಹಕಾರದಿಂದ ಕಮಲಾ ಕಲಾ ವೇದಿಕೆ ಸಂಸ್ಥೆಯ ಮೂಲಕ 400 ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಬಡವರ ಕಣ್ಣೀರು ಒರೆಸಿದವರು ನವೀನ್ ಪಡು ಇನ್ನಾ. ಸುಮಾರು ಮುನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿರುವರು.
ಆರೋಗ್ಯ ಶಿಕ್ಷಣ ಮತ್ತು ಕಲಾ ಸೇವೆಗೆ ತನ್ನ ಕೈಯಿಂದ ಆಗುವಷ್ಟು ಮತ್ತು ಇತರರ ಜೊತೆಗೂಡಿ ಮಾಡುವ ಸಹಾಯ ಅನನ್ಯ. ಶಿವಾಯ ಫೌಂಡೇಶನ್ ಇದರ ಗೌರವ ಸಲಹೆಗಾರರಾಗಿ, ಶ್ರೀ ಕೃಷ್ಣವಿಠ್ಠಲ ಪ್ರತಿಷ್ಠಾನ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ, ರಂಗ ಮಿಲನ ಮುಂಬಯಿ ಇದರ ಉಪಾಧ್ಯಕ್ಷರಾಗಿ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಮುಂಬಯಿ ವ್ಯವಸ್ಥಾಪಕರಾಗಿ, ನಮ್ಮ ಕಲಾವಿದರು ಬೆದ್ರ ತಂಡ ಮುಂಬಯಿ ಇದರ ಸಂಚಾಲಕರಾಗಿ, ಶ್ರೀ ನಾರಾಯಣ ಗುರು ಭಕ್ತ ವೃಂದ ಇನ್ನ ಇದರ ಮುಂಬಯಿ ಸಮಿತಿಯ ಕಾರ್ಯದರ್ಶಿಯಾಗಿ, ಇನ್ನ ಹಿತವರ್ಧಕ ಸಂಘ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೆ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಮಿತಿಯ ಚುನಾವಣೆಯಲ್ಲಿ ಭರ್ಜರಿ ವಿಜಯ ಪಡೆದು ಸಮಿತಿ ಸದಸ್ಯರಾಗಿ ಪುನರಾಯ್ಕೆಗೊಂಡು ಅದರ ಸಾಂಸ್ಕೃತಿಕ ಉಪಸಮಿತಿ ಕಾರ್ಯದರ್ಶಿಯಿಂದ ಕಾರ್ಯಾಧ್ಯಕ್ಷರಾಗಿ ಭಡ್ತಿ ಪಡೆದದ್ದು ಇವರದು ದೊಡ್ಡ ಸಾಧನೆ.
ಕಲಾ ಸೇವೆ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಇವರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದ ಹಿರಿಯರನ್ನು ಕಿರಿಯರನ್ನು ಗುರುತಿಸಿ ಮತ್ತು ಯಕ್ಷಗಾನ ನಾಟಕದ ಕಲಾವಿದರನ್ನು ಸರಿಸುಮಾರು 250 ಕ್ಕೂ ಹೆಚ್ಚು ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿದವರು ನವೀನ್ ಪಡು ಇನ್ನಾರವರು.
ಇವರು ಹೆಸರಿಗಾಗಿ ಕೆಲಸ ಮಾಡಿದವರು ಅಲ್ಲ ಆದರೆ ಇವರ ಕೆಲಸವನ್ನು ಕಂಡ ಸಮಾಜವೇ ಇವರನ್ನು ಗುರುತಿಸಿದೆ. ಕಾರಣ ಇವರ ಸಾಧನೆ ಅಂತದ್ದು. ಇವರ ಈ ಸಾಧನೆಗೆ 2018-19ನೇ ಸಾಲಿನ “ಆರ್ಯ ಭಟ” ಪ್ರಶಸ್ತಿ, ಇವರು ಕಲಿತ ಯಂ. ವಿ. ಶಾಸ್ತ್ರಿ ಶಾಲೆಯಲ್ಲಿ “ಯುವರತ್ನ ಪ್ರಶಸ್ತಿ”, ಮಾತ್ರವಲ್ಲದೆ ಚತುರ ಸಂಘಟಕ, ನಿಸ್ವಾರ್ಥ ಸಮಾಜ ಸೇವಕ, ಹಲವಾರು ಬಿರುದುಗಳ ಜೊತೆ ಸರಿಸುಮಾರು 30 ಕ್ಕಿಂತಲೂ ಹೆಚ್ಚು ಸನ್ಮಾನ ಪುರಸ್ಕಾರವನ್ನು ಇವರು ಪಡೆದು ಸಮಾಜದಲ್ಲಿ ಗುರುತಿಸಿಕೊಂಡು ಕಲಾ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಇವರು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ದೊಡ್ಡ ಗುಣವನ್ನು ಹೊಂದಿದವರು ಅದಕ್ಕಾಗಿ ಯೆ ಯಂಗ್ ಫ್ರೆಂಡ್ಸ್ ಮತ್ತು ಕಮಲಾ ಕಲಾ ವೇದಿಕೆಯ ಮೂಲಕ ಮುಂಬೈಯಲ್ಲಿ ಹಲವಾರು ಕಲಾವಿದರಿಗೆ ಸಮಾಜ ಸೇವಾಕರಿಗೆ ಕಲಾ ಪೋಷಕರಿಗೆ ಸರಿಸುಮಾರು 400 ಕ್ಕೂ ಹೆಚ್ಚು ಜನರಿಗೆ ಸನ್ಮಾನ ಮಾಡಿದ ಕೀರ್ತಿ ಇವರದು.
ಅದರಲ್ಲಿ ಮುಖ್ಯವಾಗಿ ಕಣ್ಣು ಕಿವಿ ಬಾಯಿ ಬಾರದ ವಿನೋದ ಪೂಜಾರಿ, ದಿಟ್ಟ ಮಹಿಳೆ ವಾರಿಜಕ್ಕ, ವಿಶೇಷ ಚೇತನರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿ ಪ್ರಶಸ್ತಿ ಪಡೆದ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಅವರನ್ನು ಮುಂಬೈಗೆ ಕರೆದು ಸನ್ಮಾನಿಸಿ ಅವರ ಸಾಧನೆಗೆ ಮುನ್ನುಡಿ ಬರೆದವರು ನವೀನ್ ಪಡು ಇನ್ನಾರವರು.
ಬಿಲ್ಲವರ ಎಸೋಸಿಯೇಶನ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ಉಪಸಮಿತಿಯ ಕಾರ್ಯದರ್ಶಿ ಮತ್ತು ಕಾರ್ಯಾಧ್ಯಕ್ಷ ಆದ ನಂತರ ಯಶಸ್ವಿ ಯಕ್ಷಗಾನ ಪ್ರಯೋಗ, ಶನಿಪೂಜೆ, ತಾಳಮದ್ದಳೆ, ನಾಟಕ ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡಿರುವರು. ಇವರ ಕಾರ್ಯಾವಧಿಯಲ್ಲಿ ಯಕ್ಷಗಾನ ಸಂಭ್ರಮ, ಯಕ್ಷಗಾನ ಅಷ್ಟಕ, ಯಕ್ಷಗಾನ ನವಮಿ, ಯಕ್ಷದಶಮಿ ಕಾರ್ಯಕ್ರಮ ಮಾಡಿರುವರು. ಇವರು ತನ್ನ ಉದ್ಯಮದ ಒಟ್ಟಿಗೆ ಎಷ್ಟೋ ಸಂಘಟನೆ ಮಾಡಲು ಎಷ್ಟೋ ಕಷ್ಟ ಆದರೂ ಇವರು ಛಲವನ್ನು ಬಿಡಲಿಲ್ಲ. ಇವರ ಸಮಾಜ ಸೇವೆಗೆ ಸದಾ ಬೆನ್ನೆಲುಬಾಗಿ ಕೈ ಜೋಡಿಸಿ ಸಹಕರಿಸುವ ಇವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಮತ್ತು ಪುತ್ರರಾದ ಅದ್ವಿಕ್ ಮತ್ತು ಆದ್ಯಾಂತ್ ರೊಂದಿಗೆ ಸುಖ ಸಂಸಾರ ಇವರದು. ಸಮಾಜದಲ್ಲಿ ಇನ್ನೂ ಹೆಚ್ಚು-ಹೆಚ್ಚು ಹೆಸರು ಬಿರುದು, ಪ್ರಶಸ್ತಿಗಳು ಇವರಿಗೆ ಒಲಿಯಲಿ.
ವೇದಿಕೆಯಲ್ಲಿ ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕೆ. ಎಮ್.ಇ.ಎಸ್ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕಾರ್ಕಳದ ಕೆ.ಎಮ್.ಇ.ಎಸ್.ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ದ ಆಚರಣೆಯನ್ನು ಕನ್ನಡಾಂಬೆಯ ಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸುವುದರ ಮೂಲಕ ಮಾಡಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್ ರವರು ಈ ಸಂದರ್ಭದಲ್ಲಿ ಮಾತನಾಡಿ ‘ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನಮ್ಮ ಮಾತೃ ಭಾಷೆಯಾದ ಕನ್ನಡವನ್ನೇ ಮರೆತು ಬಿಟ್ಟಿದ್ದೇವೆ. ನಮ್ಮ ಭಾವನಾತ್ಮಕ ಬೆಳವಣಿಗೆಗೆ ಕನ್ನಡ ಅತೀ ಅಗತ್ಯ. ಇಂದಿನ ನಮ್ಮ ಬದುಕು ಯಾಂತ್ರಿಕವಾಗಿ ಮಾರ್ಪಾಟಾಗಿದ್ದು ಭಾವನೆಗಳಿಗೆ ಬೆಲೆಯಿಲ್ಲದಿವುದರಿಂದ ಸಮಾಜದಲ್ಲಿ ಕ್ರೌರ್ಯ ತಾಂಡವಾಡುತ್ತಿದೆ. ಕನ್ನಡ ಮನಸ್ಸಿನ ಭಾಷೆ.1956 ರಿಂದ ನಮ್ಮ ರಾಜ್ಯ ಮೈಸೂರು ರಾಜ್ಯವಾಗಿದ್ದು, 1973 ನವೆಂಬರ್ ಒಂದರಂದು ಕರ್ನಾಟಕ ರಾಜ್ಯವಾಗಿ ಮರು ನಾಮಕರಣಗೊಂಡಿತು.
ಕರ್ನಾಟಕವು ಸಾಹಿತ್ಯ, ಸಂಸ್ಕೃತಿ, ಸಂಗೀತಗಳ ತವರೂರು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ನೆಲೆಬೀಡು. ಶಿಲ್ಪಕಲೆಗಳ ಸುಂದರ ನಾಡು. ಇಂದು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಸಂಕಲ್ಪವನ್ನು ನಾವೇಲ್ಲರೂ ಮಾಡಬೇಕಾಗಿದೆ.” ಎಂದರು.
ಪ್ರೌಢ ಶಾಲಾ ಮುಖ್ಯಸ್ಥೆ ಶ್ರಿಮತಿಯವರು ಮತ್ತು ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕಿಯವರು. ಕನ್ನಡಾಂಬೆಗೆ ಪುಷ್ಪಾಂಜಲಿಯನ್ನು ಸಮರ್ಪಿಸಿ ಗೌರವಾರರ್ಪಣೆಗೈದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಶಾಸಕರುಗಳು ಚುನಾಯಿತರಾಗಿದ್ದು, ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪದವಿ ಅಲಂಕರಿಸಿದವರಿದ್ದಾಗ್ಯೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಕಂಡದ್ದು 2004 ರಲ್ಲಿ ವಿ ಸುನೀಲ್ ಕುಮಾರ್ ರವರು ಶಾಸಕರಾಗಿ ಆಯ್ಕೆಯಾದ ತರುವಾಯ ಎನ್ನುವುದು ನಿರ್ವಿವಾದ. ಕಾರ್ಕಳ ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವ್ರದ್ದಿಯತ್ತ ಕೊಂಡಯ್ಯಬೇಕೆಂಬ ನಿಟ್ಟಿನಲ್ಲಿ ಹಾಗೂ ಕಾರ್ಕಾಳದಲ್ಲಿ ಹತ್ತು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಶಿಕ್ಷಣ ನೀಡುತ್ತಿದ್ದರೂ ಆರ್ಥಿಕವಾಗಿ, ಜನಸಾಮಾನ್ಯರಿಗಾಗಿ ಅದರಲ್ಲಿಯು ಮುಖ್ಯವಾಗಿ ಮಹಿಳೆಯರನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಬೇಕೆನ್ನುವ ಉದ್ದೇಶದಿಂದ, ಕಾರ್ಕಳವನ್ನು ಶೈಕ್ಷಣಿಕ ಹಬ್ ಆಗಿ ಮಾಡಬೇಕೆನ್ನುವ ಮಹದಾಸೆಯಿಂದ ಈ ಹಿಂದಿನ ಬಿಜೆಪಿ ನೇತ್ರತ್ವದ ಸರಕಾರ ಇದ್ದಾಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 40 ಸೀಟುಗಳ ಬಿ.ಎಸ್ಸಿ ನರ್ಸಿಂಗ್ ಕಾಲೇಜನ್ನು ಆ ನೂತನವಾಗಿ ಪ್ರಾರಂಭಿಸಲಾಗಿರುತ್ತದೆ. ಸದರಿ ಕಾಲೇಜು ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸರಕಾರಿ ನರ್ಸಿಂಗ್ ಕಾಲೇಜು ಆಗಿರುತ್ತದೆ. ಆ ನಂತರ ಸರಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೂಲಭೂತ ಸೌಕರ್ಯಗಳಿಗೆ ಅನುದಾನ ಬರಿಸುವಂತೆ ಆದೇಶ ಹೊರಡಿಸಿರುತ್ತಾರೆ, ಆದರೆ ಕಾಂಗ್ರೆಸ್ ನೇತ್ರತ್ವದ ಸರಕಾರ ಅಧಿಕಾರಕ್ಕೆ ತಂದ ತರುವಾಯಿ ಈ ಎಲ್ಲ ಅಭಿವೃಧಿ ಯೋಜನೆಗಳು ಕುಂಠಿತವಾಗಿದ್ದು ಅದರಲ್ಲಿಯು ಶೈಕ್ಷಣಿಕ ಕ್ಷೇತ್ರಕ್ಕೂ ಅನುದಾನ ಸ್ಥಗಿತಗೊಳಿಸಿರುವುದು ವಿಪರ್ಯಾಸಕರ. ಈಗಿನ ಸರಕಾರವು ಈ ಹಿಂದಿನ ಸರಕಾರದ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನಗಳನ್ನು ತಡೆ ಹಿಡಿದಿದುದರ ಪರಿಣಾಮ ವಿಧ್ಯಾರ್ಥಿಗಳು ಅನುಭವಿಸುವಂತಾಗಿದೆ.
ಪ್ರಸ್ತುತ ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಮೂರು ಬ್ಯಾಚಿನಲ್ಲಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈಗಾಗಲೇ ನರ್ಸಿಂಗ್ ಕಾಲೇಜು ನಿರ್ಮಾಣದ ಉದ್ದೇಶಕ್ಕೆ ಕಾರ್ಕಾಳ ಕಸಬಾ ಗ್ರಾಮದ 2 ಎಕ್ರೆ ಜಮೀನನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಕಾಂಗ್ರೆಸ್ ನೇತ್ರತ್ವದ ಸರಕಾರ ರಾಜ್ಯದಲ್ಲಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿಧ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಾರ್ಕಳದ ಶಾಸಕರು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರಕಾರದ ಮಾನ್ಯ ವೈದ್ಯಕೀಯ ಸಚಿವರಾದ ಡಾ. ಶರಣ ಪ್ರಕಾಶ್ ಪಾಟಿಲ್, ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಸೌಧ ಬೆಂಗಳುರು ಇವರಿಗೆ ಹಲವಾರು ಬಾರಿ ಲಿಖಿತ ಪತ್ರ ಮುಖೇನ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿಕೊಂಡು ಬರುತ್ತಿದ್ದಾಗಿಯೂ ಸರಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದಾಗಿಯೂ ಮಾನ್ಯ ಶಾಸಕರ ಸತತ ಪ್ರಯತ್ನದಿಂದಾಗಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಿಂದ ಟಿಪ್ಪಣಿ ಪತ್ರ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ರವಾನೆಯಾಗಿರುತ್ತದೆ. ಕಾರ್ಕಾಳ ನರ್ಸಿಂಗ್ ಕಾಲೇಜಿಗೆ ಅಗತ್ಯವಿರುವ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆಯು ಕೂಡ ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಖೆಗೆ ಹಲವಾರು ಬಾರಿ ಪತ್ರ ಬರೆದು ಕೇಳಿಕೊಂಡಗಿಯು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಭೋದನೆ ಮಾದಲು ಸುಮಾರು ಎಂಟು ಜನ ಶಿಕ್ಷಕರು ತಯಾರಿದ್ಯಾಗಿಯೂ ಅವರ ಹೆಸರನ್ನು ಸಂಬಧಪಟ್ಟವರಿಗೆ ನೀಡಿದ್ದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಈಗಾಗಲೇ ಶಾಸಕರ ಮುತುವರ್ಜಿಯಿಂದ ಕೆಲವು ಖಾಸಗಿ ಕಂಪೆನಿಗಳು ತಮ್ಮ ಸಿಎಸ್‌ಆರ್ ಫಂಡಿನ ಮೂಲಕ ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಿ ಸಹಕರಿಸಿರುತ್ತಾರೆ. ಮುಖ್ಯವಾಗಿ ಬೋಳಾಸ್ ಕಂಪೆನಿ ಸುಮಾರು 25೦೦೦೦/-, ಎಮ್ ಆರ್ ಪಿ ಎಲ್ ಸಂಸ್ಥೆ 8.13 ಲಕ್ಷ, ರೋಟರಿ ಸಂಸ್ಥೆ ಕಾರ್ಕಳ 62000 ಮತ್ತು ಆರೋಗ್ಯ ಇಲಾಖೆ 300000 ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲಾಗಿದೆ. ಸರಕಾರವು ಭೋದಕ ಮತ್ತು ಭೋದಕೇತರ ಸಿಬ್ಬಂದಿಯನ್ನು ನೇಮಕ ಮಾಡಿದರೆ ಹಾಗೂ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಖಾಸಗಿ ಸಹಯೋಗದೊಂದಿಗೆ ಕಾಲೇಜಿನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆಯು ಕೂಡ ಶಾಸಕರು ಮುಂದಾಗಿದ್ದಾಗಿದ್ದರೂ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷರು ಮಾಹಿತಿ ಕೊರತೆಯಿಂದಾಗಿಯೋ ಅಥವಾ ಪ್ರಚಾರದ ತೆವಳಿನಿಂದಾಗಿಯೋ ಕಾರ್ಕಳದ ಶಾಸಕರನ್ನು ದೋಷಿಸುವ ಪ್ರೌವೃತ್ತಿಯಿಂದ ಪ್ರತ್ರಿಕ ಹೇಳಿಕೆ ನೀಡಿರುವುದು ಸಮಂಜಸವಲ್ಲ.
ಇನ್ನಾದರೂ ಕಾರ್ಕಳ ಕಾಂಗ್ರೆಸ್ ನಾಯಕರುಗಳು ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕದೇ ಅದರಲ್ಲಿಯು ಮುಖ್ಯವಾಗಿ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಕಾರ್ಕಳದ ನರ್ಸಿಂಗ್ ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ತಮ್ಮ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕಾರ್ಕಳದ ಅಭಿವೃದ್ಧಿಗೆ ಸಹಕಾರ ನೀಡಬೇಕ್ಕೆ ವಿನಹ ಬಾಯಿಚಪಲಕ್ಕಾಗಿ ಪತ್ರಿಕ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ ಎಂದು ರವೀಂದ್ರ ಮೊಯ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದಿರೆಯ ಶ್ರೀ ಧವಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಪುಂಡಿಕೈ ಗಣಪಯ್ಯ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಕನ್ನಡ ನಾಡು ನುಡಿಯ ಚಿಂತನೆಯೇ ಕನ್ನಡ ರಾಜ್ಯೋತ್ಸವ, ಕರ್ನಾಟಕದಲ್ಲಿ ಇಂಗ್ಲೀಷ್ ಮಾತನಾಡುವ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತಿಕ ಅರಿವಿಗೆ ಇಂಗ್ಲೀಷ್ ಬೇಕಿದ್ದರೂ ನಮ್ಮೊಳಗೆ ನಾವು ಕನ್ನಡ ಬಳಸಿ ಉಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು ಆಂಗ್ಲಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಒಳ್ಳೆಯ ಸೌಲಭ್ಯ, ವ್ಯವಸ್ಥೆಗಳು ಇದ್ದರೆ ಪೋಷಕರು ಕನ್ನಡ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್ ಅವರು ಮಾತನಾಡಿ “ನಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆಡು ಭಾಷೆಯೇ ಅತ್ಯುತ್ತಮ ಸಾಧನ. ಕನ್ನಡ ಇತರ ಎಲ್ಲಾ ಭಾಷೆಗಳಿಗಿಂತ ವಿಭಿನ್ನ, ವಿಶಿಷ್ಟ ಶೈಲಿಯದ್ದಾಗಿದೆ. ನೂರಾರು ಭಾಷೆಗಳನ್ನು ಕಲಿತರೂ ಅನಿವಾರ್ಯ ಸಂದರ್ಭ ಹೊರತುಪಡಿಸಿ ಉಳಿದೆಲ್ಲಾ ಸಂದರ್ಭಗಳಲ್ಲಿ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು” ಎಂದು ಹೇಳಿದರು.
ಸಂಸ್ಥೆಯ ಪದವಿಪೂರ್ವ ವಿಭಾಗದ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡಾಭಿಮಾನ ಮೂಡಿಸುವ ಸಮೂಹ ಗಾಯನ ಕಾರ್ಯಕ್ರಮಗಳು ಜರುಗಿದವು. ಪ್ರಾಥಮಿಕ ಶಾಲಾ ಸಹಶಿಕ್ಷಕಿಯರಾದ ಶಕೀಲಾ ಸ್ವಾಗತಿಸಿ ಪ್ರಣೀತಾ ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮವನ್ನು ನಿಂಜೂರು ಶ್ರೀ ಗುರು ನಿತ್ಯಾನಂದ ಸಭಾಭವನದಲ್ಲಿ ನಡೆಸಲಾಯಿತು.
ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಕೆಲಸ, ಸಾಧನೆ ಹಾಗೂ ಸಮರ್ಪಣೆ ಮತ್ತು ಸೇವಾ ಮನೋಭಾವವನ್ನು ಸ್ಮರಿಸುತ್ತಾ ಗೌರವ ಸಮರ್ಪಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಎಂ ಶೆಟ್ಟಿ ಪಳ್ಳಿ ಅವರು ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಅವರ ಸಾದನೆಯ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ, ಮಾಜಿ ಮಂಡಲ ಪ್ರಧಾನರಾದ ಚಂದ್ರಶೇಖರ ಶೆಟ್ಟಿ ಪಳ್ಳಿ, ಕಾರ್ಕಳ ತಾಲೂಕು ಗ್ಯಾರಂಟೀ ಸಮಿತಿ ಸದಸ್ಯ ಸಂತೋಷ ಶೆಟ್ಟಿ ಮಾಜಿ ಪ್ರಧಾನಿ ಅವರ ಸಾಧನೆ ಮತ್ತು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ನಿಂಜೂರು ಬೂತ್ ಅಧ್ಯಕ್ಷ ನೆಲ್ಸನ್ ಡಿಸೋಜ ಸ್ವಾಗತಿಸಿದರು, ನಿಂಜೂರು ಮಹಿಳಾ ಕಾಂಗ್ರೆಸ್ ಸಮಿತಿ ಬೂತ್ ಅಧ್ಯಕ್ಷ ಫ್ಲೋರಿನ್ ಧನ್ಯವಾದವಿತ್ತರು. ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಲ್ಸನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಕಾರ್ಕಳ ಹಿರಿಯಂಗಡಿ ನಿವಾಸಿ, ಹಿರಿಯ ಕಾಂಗ್ರೆಸಿಗ ಶಂಕರ ದೇವಾಡಿಗ ಅವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಸಿದ್ದ ವಕೀಲರು ಹಿರಿಯ ಕಾಂಗ್ರೆಸಿಗರಾದ ಶೇಖರ ಮಡಿವಾಳ ಅವರು ಮಾತನಾಡಿ ಶತ್ರುರಾಷ್ಟ್ರ ಪಾಕಿಸ್ತಾನದ 90 ಸಾವಿರ ಸೈನಿಕರ ಶರಣಾಗತಿ ಮಾಡಿಸಿದ ಧೀರ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟತನವನ್ನು ಸ್ಮರಿಸುತ್ತಾ ಇಂದಿನ ದಿನಗಳಲ್ಲಿ ಆಡಳಿತಗಾರರು ಯಾವುದೋ ದೇಶದ ಅಧ್ಯಕ್ಷನ ಸೂಚನೆಗೆ ಯುದ್ದ ನಿಲ್ಲಿಸುವುದು ದೇಶದ ದುರಂತ ಎಂದರು. ತುರ್ತು ಪರಿಸ್ಥಿತಿಯನ್ನು ವಿರೋದಿಸುವವರು ಬಡವರ ವಿರೋದಿಗಳು, ತುರ್ತುಪರಿಸ್ಥಿತಿಯ ಬಗ್ಗೆ ದೇಶದ ಜನರಿಗೆ ನಿಜವಾಗಿಯೂ ಆಕ್ರೋಶವಿದ್ದರೆ ತುರ್ತುಪರಿಸ್ಥಿತಿ 18 ತಿಂಗಳ ನಂತರ ಮತ್ತೆ ಇಂದಿರಾ ಗಾಂಧಿಯವರನ್ನು ಈ ದೇಶದ ಜನ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆ ಅವರು ಮಾತನಾಡಿ ದೇಶದ ಭೂ ಸಂಪತ್ತಿನ ಬಹುಪಾಲು ಭಾಗ ದೇಶದ 2 ಶೇಕಡಾ ಜನರಲ್ಲಿದ್ದು ಉಳಿದ 98 ಶೇಕಡಾ ಜನರು ಭೂರಹಿತರಾಗಿದ್ದರು, ಭೂ ಸಂಪತ್ತಿನ ಸಮಾನ ಹಂಚಿಕೆಗಾಗಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ ಜನ ಸಾಮಾನ್ಯರು ಸ್ವಾಭಿಮಾನದ ಜೀವನ ಸಾಗಿಸುವಂತೆ ಮಾಡಿದರು ಎಂದರು. ಇಂದಿರಾಗಾಂಧಿ ಅವರು ತನ್ನ 66 ವರ್ಷದಲ್ಲಿ ವಿರೋದಿಗಳ ಗುಂಡಿಗೆ ಬಲಿಯಾಗಿದ್ದು, ದೇಶದ ದುರ್ದೈವ, ಅವರು ಇನ್ನೂ ಸ್ವಲ್ಪ ವರ್ಷಗಳ ಕಾಲ ಬದುಕಿದ್ದರೆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತಿತ್ತು ಎಂದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದ ರಾವ್ ಮಾತನಾಡಿ ಇಂದಿರಾ ಗಾಂಧಿಯವರು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ದಿಸಿ ನಮ್ಮ ಸಂಸದರಾಗಿದ್ದರು ಎನ್ನುವುದೇ ಕಾಂಗ್ರೆಸಿಗರಾದ ನಮಗೆ ಹೆಮ್ಮೆಯ ವಿಚಾರ, ಅವರ ಸ್ಮರಣೆಯಲ್ಲಿ ಕಾರ್ಕಳದಲ್ಲಿ ಭವ್ಯವಾದ ಕಾಂಗ್ರೆಸ್ ಕಚೇರಿ ಇಂಧಿರಾ ಭವನ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಯಕರು ಹಾಗೂ ಕಾರ್ಯಕರ್ತರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಗೌರವನಮನ ಸಲ್ಲಿಸಿದರು.
ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ರೀನಾ ಡಿಸೋಜ ಅವರು ಇಂದಿರಾ ಗಾಂಧಿಯವರ ಆಡಳಿತ ಶ್ರೇಷ್ಟತೆ, ಜೀವನ ಮೌಲ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ವಾಚಿಸಿ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಜಿಲ್ಲಾ ಕಾಂಗ್ರೆಸಿನ ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಮಹಿಳಾ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ಯಶೋದಾ ಶೆಟ್ಟಿ, ಸೇವಾದಳದ ಅಬ್ದುಲ್ ಸಾಣೂರು, ಭೂನ್ಯಾಯ ಮಂಡಳಿಯ ಸುನೀಲ್ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರಾದ ಪ್ರತಿಮಾ ರಾಣೆ, ರೆಹಮತ್, ಸದಸ್ಯರಾದ ಪ್ರಭಾ, ವಿನ್ನಿ ಬೋಲ್ಡ್, ಶೋಭಾ ಪ್ರಸಾದ್, ಯುವ ಕಾಂಗ್ರೆಸಿನ ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಯೋಗೀಶ್ ಇನ್ನಾ ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರು, ಚುನಾಯಿತ ಜನಪ್ರತಿನಿದಿಗಳು, ನಾಮನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಅದ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಕಾಂಗ್ರೆಸಿಗ ಪ್ರಭಾಕರ ಬಂಗೇರ ಧನ್ಯವಾದ ಸಮರ್ಪಣೆಗೈದರು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸುದೀಶ್ ಎಸ್. ಶೆಟ್ಟಿ ಬೆಳ್ಳಿ ಪದಕ ಪಡೆದುಕೊಂಡು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.