Home Blog Page 71

ಕಾರ್ಕಳ:ಇಂದು ಸಂಜೆ ಗಾಂಧಿ ಮೈದಾನದಲ್ಲಿ ಛತ್ರಪತಿ ಶಿವಾಜಿ ನಾಟಕ ಉಚಿತ ಪ್ರದರ್ಶನ

0

ಇಂದು ಸಂಜೆ ಗಾಂಧಿ ಮೈದಾನದಲ್ಲಿ ಛತ್ರಪತಿ ಶಿವಾಜಿ ನಾಟಕ ಉಚಿತ ಪ್ರದರ್ಶನ

ತುಳು ನಾಟಕ ರಂಗಭೂಮಿಯಲ್ಲಿ ದಾಖಲೆಯ 750 ಪ್ರದರ್ಶನದೊಂದಿಗೆ ಪ್ರದರ್ಶನಗೊಳ್ಳುತ್ತಿರುವ ಶಿವದೂತೆ ಗುಳಿಗೆ ಎನ್ನುವ ಅದ್ದೂರಿ ನಾಟಕವನ್ನು ರಚಿಸಿದ ಅಕ್ಷರ ಬ್ರಹ್ಮ ಬಿರುದಾಂಕಿತ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದ ಛತ್ರಪತಿ ಶಿವಾಜಿ ತುಳು ನಾಟಕವು ಇಂದು ಸಂಜೆ 7 ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ,

ಕ್ಷತ್ರೀಯ ಮರಾಠ ಸಮಾಜ ರಿ. ಕಾರ್ಕಳ ಇವರ ಆಶ್ರಯದಲ್ಲಿ ನಾಟಕವು ನಡೆಯಲಿದ್ದು, ಕಲಾಸಂಗಮ ಕಲಾವಿದರ ಅದ್ಭುತ ನಟನೆ, ಮನಸೂರೆಗೊಳ್ಳುವ ರಂಗ ವಿನ್ಯಾಸ, ಮತ್ತು ಖ್ಯಾತ ಗಾಯಕರ ದ್ವನಿಯಲ್ಲಿ ಹಿನ್ನಲೆ ಗಾಯನದೊಂದಿಗೆ ಈ ನಾಟಕವು ಮೂಡಿ ಬಂದಿದೆ ಒಂದು ಉತ್ತಮ ನಾಟಕವನ್ನು ಊರಿನ ಕಲಾಬಿಮಾನಿಗಳಿಗೆ ತೋರಿಸುವ ನಿಟ್ಟಿನಲ್ಲಿ ನಾಟಕವನ್ನು ಆಯೋಜ‌ನೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶುಭದರಾವ್ ತಿಳಿಸಿದ್ದಾರೆ.

 

ನಿಟ್ಟೆ:ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತೀರ್ಣ

0

ನಿಟ್ಟೆ:ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತೀರ್ಣ

ನಿಟ್ಟೆ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಜನವರಿ 2025 ರಲ್ಲಿ ನಡೆಸಿದ ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 2021-24 ನೇ ಸಾಲಿನ ಬಿಕಾಂ ವಿದ್ಯಾರ್ಥಿ ಅದಿತ್ ತೇರ್ಗಡೆಯಾಗಿರುತ್ತಾರೆ. ಇವರು ಹಾಳೆಕಟ್ಟೆಯ ಅಕ್ಷತಾ ಸಾಲಿಯಾನ್ ಮತ್ತು ಪ್ರದೀಪ್ ಸಾಲಿಯಾನ್ ಅವರ ಸುಪುತ್ರ.

ಕಾಲೇಜು ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ, ಕಾಲೇಜಿನ ಅಧ್ಯಾಪಕ, ಅಧ್ಯಾಪಕೆತರ ಬಳಗ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿರುವರು.

ಕಾರ್ಕಳ:ಇಂದು ಸಂಜೆ 6 ಗಂಟೆಗೆ ಬಂಡಿಮಠದಲ್ಲಿ ಕಾರ್ಕಳ ಟೈಗರ್ಸ್ ವತಿಯಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ

0

ಕಾರ್ಕಳ:ಇಂದು ಸಂಜೆ 6 ಗಂಟೆಗೆ ಬಂಡಿಮಠದಲ್ಲಿ ಕಾರ್ಕಳ ಟೈಗರ್ಸ್ ವತಿಯಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ

ಕಾರ್ಕಳ:ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಇದರ ವತಿಯಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಛತ್ರಪತಿ ಶಿವಾಜಿ ನಾಟಕ ಇಂದು ಸಂಜೆ 6 ಗಂಟೆಗೆ ಬಂಡೀಮಠ ಬಸ್ ನಿಲ್ದಾಣದಲ್ಲಿ ಪ್ರದರ್ಶನಗೊಳ್ಳಲಿದೆ.

ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ ಭಾಗ-2 ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ

0

ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಗಗ್ಗರ ಭಾಗ-2 ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ

ಕಾರ್ಕಳ: ವಿಲಾಸ್ ಕುಮಾರ್ ನಿಟ್ಟೆ ಅವರು ಪ್ರಸಕ್ತ ವರ್ಷದಲ್ಲಿ ರಚಿಸಿರುವ ದೈವ ಪ್ರಧಾನ ತುಳು ಸಾಮಾಜಿಕ ನಾಟಕ “ಗಗ್ಗರ (ಭಾಗ-2)” ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾಗಿದೆ.

ತುಳು ಕೂಟ ಕುಡ್ಲ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಅವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಿದ್ದು, ವಿಜೇತರಿಗೆ ಪ್ರಶಸ್ತಿಯನ್ನು ಏ.14ರಂದು ಬಿಸು ಪರ್ಬ ಆಚರಣೆಯ ಸಂದರ್ಭ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ವಿಜಯ ಕರ್ನಾಟಕ ದಿನಪತ್ರಿಕೆಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವಿಲಾಸ್ ಕುಮಾರ್ ಅವರ ಗಗ್ಗರ (ಭಾಗ-೧) ಮತ್ತು ಕಂಬಳದ ನಡುಟೊಂಜಿ ಕಥೆ ನಾಟಕಕ್ಕೆ ಈ ಹಿಂದೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿತ್ತು.

ಗುತ್ತುದ ಗುರ್ಕಾರೆ, ಮುತ್ತೈಸಿ ಮದಿಮಾಲ್, ತೆಲಿಕೆದ ನಲಿಕೆ, ಅಲೆಗೇಪ ಮದಿಮೆ?,ಮಾತರ‍್ಲ ಬರೋಡು, ಪನರೆ ಧೈರ್ಯಜ್ಜಿ, ಬದಿ ಬಂಗಾರ್, ಆಪುಂಡ ಅಲೆನೆ, ಕಥೆ ಕಟ್ಟುವೆರ್, ಬರೆಪುನಾಯೆ ಬರೆತ್ತುಜೆ, ಅಂದಾಜಿ ಆಪುಜಿ, ಪನಂದೆ ಪೋಯೆರ್ ಮುಂತಾದ ತುಳು ನಾಟಕಗಳನ್ನು ರಚಿಸಿರುವ ಅವರು ಮಾತೃಮಾಯ ಯಕ್ಷಗಾನ ಪ್ರಸಂಗ ಕೂಡಾ ರಚಿಸಿದ್ದರು.

ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ರವರಿಗೆ ಮಿಯ್ಯಾರು ಕಂಬಳದಲ್ಲಿ ಸನ್ಮಾನ

0

ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ರವರಿಗೆ ಮಿಯ್ಯಾರು ಕಂಬಳದಲ್ಲಿ ಸನ್ಮಾನ

ಈದು:17 ವರ್ಷಗಳ ಕಾಲ ಈದು ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾರ್ಕಳ APMC ಉಪಾಧ್ಯಕ್ಷರಾಗಿ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ, ಹೊಸ್ಮಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾಗಿ, ಈದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ನಾರಾವಿ ಜೈನ್ ಮಿಲನ್ ಅಧ್ಯಕ್ಷರಾಗಿ, ಈದು ಮುಜಿಲ್ನಾಯ ದೈವಸ್ಥಾನದ ಆಡಳಿತ ಮೊಕ್ತೆಸರರಾಗಿ, ಹತ್ತಾರು ಸಂಘ – ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಕೃಷಿ, ಕ್ರೀಡಾ ಕ್ಷೇತ್ರಗಳಲ್ಲಿ ಹಲವಾರು ಸಾಧನೆ ಮಾಡಿರುವ ಹಾಗೂ ಜನರ ನಡುವೆ ಬೆರೆತು ಜನಸ್ನೇಹಿಯಾಗಿ ಅಶೋಕ ಅಣ್ಣ ಎಂದೆ ಖ್ಯಾತರಾದ ಕಂಬಳ ಕ್ರೀಡೆಯಲ್ಲಿ ಸತತ 24 ವರ್ಷಗಳ ಕಾಲ ಭಾಗವಹಿಸಿ, ಈದು ಜಯ – ವಿಜಯ ಜೋಡುಕರೆ ಕಂಬಳದ ಸ್ಥಾಪಕರಾದ ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ಇವರು ಮಾರ್ಚ್ 15ರಂದು ನಡೆಯಲಿರುವ ಮಿಯ್ಯಾರು ಲವ – ಕುಶ ಜೋಡುಕರೆ ಕಂಬಳದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಮೂದಲಿಸುತ್ತಿದ್ದ ಶಾಸಕ ಸುನೀಲ್ ಕುಮಾರ್,ಗೆ ಗ್ಯಾರಂಟಿ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ ಬೇಕಂತೆ ನಮ್ಮ ಶಾಸಕರಿಗೆ ಇಂತಹ ದುರ್ಗತಿ ಬರಬಾರದಿತ್ತು ಶುಭದರಾವ್.

0

ಪಂಚ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಮೂದಲಿಸುತ್ತಿದ್ದ ಶಾಸಕ ಸುನೀಲ್ ಕುಮಾರ್ ಗೆ ಗ್ಯಾರಂಟಿ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ ಬೇಕಂತೆ

ನಮ್ಮ ಶಾಸಕರಿಗೆ ಇಂತಹ ದುರ್ಗತಿ ಬರಬಾರದಿತ್ತು-ಶುಭದರಾವ್.

ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಸುನೀಲ್ ಕುಮಾರ್‌ ಶಾಸಕರನ್ನೇ ಗ್ಯಾರಂಟಿ ಯೋಜನಾ ಸಮಿತಿಯ ಅದ್ಯಕ್ಷರನ್ನಾಗಿ ಮಾಡಬೇಕು ಎಂದು ಅಂಗಲಾಚುವುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ, ಮತ್ತು ರಾಜ್ಯದಲ್ಲಿ ಗ್ಯಾರಂಟಿ ಯೋಜ‌ನೆ ಎಷ್ಟು ಪ್ರಭಾವ ಬೀರುತಿದೆ‌ ಎಂದು ಸ್ಪಷ್ಟವಾಗುತ್ತದೆ. ಮೊದಲಿನಿಂದಲೂ ಅಪಹಾಸ್ಯ ಮಾಡುತ್ತಿದ್ದ ಶಾಸಕರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತದೆ. ನಮ್ಮ ಶಾಸಕರಿಗೆ ಇಂತಹ ದುರ್ಗತಿ ಬರಬಾರದಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಮೊದಲು ಕಾಂಗ್ರೆಸ್ ನೀಡಿದ ಪಂಚ ಗ್ಯಾರಂಟಿ ಭರವಸೆ ಯನ್ನು ಜನರಿಗೆ ತಲುಪಿಸಲು ಸಾಧ್ಯವೇ ಇಲ್ಲ ಎಂದು ಗೇಲಿ ಮಾಡಿದರು,ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗಳ ನ್ನು ಅನುಷ್ಠಾನಗೊಳಿಸಿದಾಗ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಅಪಹಾಸ್ಯ ಮಾಡಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯವ್ಯಾಪಿ ಯಶಸ್ವಿಯಾಗಿ ಪ್ರಚಾರ ಪಡೆದಾಗ ಅದೇ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬಿಜೆಪಿ ನಕಲು ಮಾಡಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಚಣೆ ಮಾಡಿದರು,ಇಷ್ಟೆಲ್ಲಾ ಆದ ಬಳಿಕ ಈಗ ಅಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳು ಎಂದು ಬಡವರನ್ನು ಗೇಲಿ ಮಾಡಿದ ಸುನೀಲ್ ಕುಮಾರ್ ಸಹಿತ ಬಿಜೆಪಿ ನಾಯಕರುಗಳು ಇಂದು ಅದೇ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗೆ ನಮನ್ನು ಅಧ್ಯಕ್ಷರನ್ನಾಗಿ ಸೇರಿಸಿಕೊಳ್ಳಿ ಎಂದು ಅಂಗಾಲಾಚುತ್ತಿದ್ದಾರೆ, ಇವರಿಗೆ ಇಂತಹ ದುರ್ಗತಿ ಬೇಕಿತ್ತಾ, ಇನ್ನಾದರೂ ಮೊದಲು ಆಡಿದ ಮಾತಿಗೆ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮಾರ್ಚ್‌ 15 ರಂದು 21 ನೇ ವರ್ಷದ ಮಿಯ್ಯಾರು ಲವ ಕುಶ ಕಂಬಳ

0

ಮಾರ್ಚ್‌ 15 ರಂದು 21 ನೇ ವರ್ಷದ ಮಿಯ್ಯಾರು ಲವ ಕುಶ ಕಂಬಳ

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು ಲವಕುಶ ಜೋಡು ಕರೆ ಕಂಬಳ ಕೂಟವು ದಿನಾಂಕ 15-3-2025 ಶನಿವಾರ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾಡಿಕೆಯಂತೆ ಪ್ರತಿವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿದ್ದ ಈ ಕಂಬಳ ಕ್ರೀಡೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು.

ಮಾರ್ಚ್ 15ನೇ ತಾರೀಕು ಜಿಲ್ಲೆಯಲ್ಲಿ ಇತರ ಯಾವುದೇ ಕಂಬಳ ಕೂಟ ನಡೆಯದೆ ಇರುವುದರಿಂದ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಸಮಿತಿಯ ನಿರ್ಣಯದಂತೆ ಆ ದಿನದಂದೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಂಬಳ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್‌ ಅಡ್ಯಂತಾಯ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ವರ್ಷ ಕೂಡ ಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24 ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿಯಿಂದ ನಡೆಯುತ್ತಿದೆ.

ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ ವೀರಪ್ಪ ಮೊಯ್ಲಿ, ಡಾ. ಎಂ ಎನ್ ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಜೊತೆಗೆ ಆನೇಕ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ಕಾರ್ಯಕ್ರಮ

0

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ಕಾರ್ಯಕ್ರಮ

ಕಾರ್ಕಳ:ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಗೋವ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಕಾಲೇಜಿನ ಪೂರ್ವ ವಿದ್ಯಾರ್ಥಿಯೂ ಆದ ಪ್ರೊ.ಕೃಷ್ಣಾನಂದ ಪೈ ಅವರು ಭೂಮಂಡಲದ ಧ್ರುವ ಪ್ರದೇಶಗಳ ವಿಶೇಷತೆಗಳು ಹಾಗೂ ಭೂಮಿಯ ಸಮತೋಲನವನ್ನು ಕಾಪಾಡುವಲ್ಲಿ ಧ್ರುವ ಪ್ರದೇಶಗಳ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಕುಮಾರಿ ಸ್ವಾಗತಿಸಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಈಶ್ವರ ಭಟ್ ವಂದಿಸಿದರು.ವಿದ್ಯಾರ್ಥಿನಿ ಕು.ನೇಹಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ:ಎಂ.ಪಿ.ಎಂ ಸರಕಾರಿ ಕಾಲೇಜು- ಪೋಷಕರ ವೇದಿಕೆ ಸಭೆ

0
ಕಾರ್ಕಳ:ಎಂ.ಪಿ.ಎಂ ಸರಕಾರಿ  ಕಾಲೇಜು- ಪೋಷಕರ ವೇದಿಕೆ ಸಭೆ
ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ವೇದಿಕೆ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ ರವರ ಅಧ್ಯಕ್ಷತೆಯಲ್ಲಿ, ಕಾಲೇಜಿನ ಎಲ್ಲಾ ಉಪನ್ಯಾಸಕರ ಉಪಸ್ಥಿತಿಯಲ್ಲಿ ಜರಗಿತು.
ಪೋಷಕರ ವೇದಿಕೆಯ ಪ್ರಾಮುಖ್ಯತೆ ಹಾಗೂ ಹೊಣೆಗಾರಿಕೆಗಳ ಜೊತೆಗೆ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಆಗು ಹೋಗುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 323 ಮಂದಿ ಪ್ರಥಮ ಪದವಿ ವಿದ್ಯಾರ್ಥಿಗಳ ಪೋಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ರವರು ಸಂಸ್ಥೆಯು ಸಾಗುತ್ತಿರುವ ದಾರಿ, ಮಾಡಿರುವ ಸಾಧನೆಗಳು, ಪ್ರಸಕ್ತ ವಿದ್ಯಾಮಾನಗಳು,  ವಿದ್ಯಾರ್ಥಿಗಳ ಶಿಸ್ತು, ವ್ಯಕ್ತಿತ್ವ ನಿರ್ಮಾಣ, ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗಳ ನೆಲೆಯಲ್ಲಿ ಕಾಲೇಜು ಕೈಗೊಂಡ ಕ್ರಮಗಳು, ಭವಿಷ್ಯದ ಯೋಜನೆ, ಯೋಚನೆ ಹಾಗೂ ಆಶೋತ್ತರಗಳ ಬಗ್ಗೆ ಸಮಗ್ರವಾದ ವಿವರಣೆ ನೀಡಿ ಪೋಷಕರು ಈವರೆಗೆ ನೀಡಿರುವ ಬೆಂಬಲವನ್ನು ಪ್ರಶಂಶಿಸಿ ಮುಂದೆಯೂ ಇನ್ನು ಹೆಚ್ಚಿನ ಸಹಕಾರ ನೀಡಿ ಸಂಸ್ಥೆಯ ಪ್ರಗತಿಯಲ್ಲಿ ಕೈಜೋಡಿಸಿ ನೆರವಾಗುವಂತೆ ವಿನಂತಿಸಿದರು.
ಜೊತೆಗೆ ಈ ವರ್ಷ ನಡೆಯಲಿರುವ ಕಾಲೇಜಿನ ನಾಲ್ಕನೇ ಹಂತದ ನ್ಯಾಕ್ ಮೌಲ್ಯಾಂಕಣ ಪ್ರಕ್ರಿಯೆಯಲ್ಲಿ ಪೋಷಕರ ವೇದಿಕೆಯ ಪಾತ್ರ ಹಾಗೂ ಹೊಣೆಗಾರಿಕೆಗಳ ಮನವರಿಕೆ ಮಾಡಿ ಕೊಟ್ಟರು.
ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ.ದಿವ್ಯಪ್ರಭು, ನಿರ್ವಹಣಾ ಶಾಸ್ತç ಸಹಾಯಕ ಪ್ರಾಧ್ಯಾಪಕರು ನಡೆಸಿಕೊಟ್ಟರು. 2025-26 ನೇ ಸಾಲಿಗೆ ವೇದಿಕೆ ಅಧ್ಯಕ್ಷರಾಗಿ ರಾಜರಾಮ್ ನಾಯಕ್, ಉಪಾಧ್ಯಕ್ಷರಾಗಿ ಸ್ನೇಹ ಬಳ್ಳಾಳ್, ಕಾರ್ಯದರ್ಶಿಯಾಗಿ ರೂಪ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೋಸೆಫ್ ಡಿ ಡಿಸೋಜ, ಕೋಶಾಧಿಕಾರಿಯಾಗಿ ಸುಚಿತ್ರ.ಜಿ.ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋದ ಎಸ್ ಎ, ಪಿ ಶೀನ ಮಿಯ್ಯಾರ್, ಸುಧಾಕರ್, ದಿಶಾ ಹಾಗೂ  ವಿನೋದ ಸರ್ವಾನುಮತದಿಂದ ಆಯ್ಕೆಯಾದರು.
ಕಾಲೇಜಿನ ಪರವಾಗಿ ಶ್ರೀಮತಿ ಸೌಮ್ಯ, ಅರ್ಥಶಾಸ್ತç ಸಹ ಪ್ರಾಧ್ಯಾಪಕರು, ಶ್ರೀ ವಿನಯ್, ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಶ್ರೀಮತಿ ಸಂದ್ಯಾ ಭಂಡಾರಿ, ನಿರ್ವಹಣಾ ಶಾಸ್ತç ಸಹಾಯಕ ಪ್ರಾಧ್ಯಾಪಕರು, ಪೋಷಕರ ಕರ್ತವ್ಯ ಹಾಗೂ ಜವಬ್ದಾರಿಗಳ ಬಗ್ಗೆ ವಹಿಸಬೇಕಾದ ಪಾತ್ರದ ಬಗ್ಗೆ, ವಿದ್ಯಾರ್ಥಿಗಳ ಶಿಸ್ತು ನಡವಳಿಕೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಡಾ.ಚಂದ್ರಾವತಿ ಸಭೆಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಶ್ರೀಮತಿ ಮೈತ್ರಿ ಬಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಡಾ. ಸುಬ್ರಹ್ಮಣ್ಯ ಕೆ.ಸಿ ಸ್ವಾಗತಿಸಿದರು ಹಾಗೂ ಐಕ್ಯೂಎಸಿ ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್ ವಂದಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ‌ ನನ್ನ ನೆಚ್ಚಿನ ನಟ ಎಂದ ರಾಜಸ್ಥಾನ ಮುಖ್ಯಮಂತ್ರಿ

0

ಪ್ರಧಾನಿ ನರೇಂದ್ರ ಮೋದಿ‌ ನನ್ನ ನೆಚ್ಚಿನ ನಟ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೀಡಿದ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳು ಪ್ರಧಾನಿ ಮತ್ತು ಬಿಜೆಪಿಯನ್ನು ಅಪಹಾಸ್ಯ ಮಾಡಲು ಮುಂದಾಗಿದ್ದಾರೆ.

ಜೈಪುರದಲ್ಲಿ ನಡೆದ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.

ಶರ್ಮಾ ಅವರನ್ನು ಸಂವಾದದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಲಾಯಿತು. ನಗುತ್ತಾ ಅವರು ‘ನರೇಂದ್ರ ಮೋದಿ ಜಿ’ ಎಂದು ಉತ್ತರಿಸಿದ್ದಾರೆ. ಈ ಪ್ರತಿಕ್ರಿಯೆಯು ವಿರೋಧ ಪಕ್ಷದ ನಾಯಕರಿಗೆ ಆಹಾರವಾಗಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ, ಮೋದಿ ಜಿ ನಾಯಕನಲ್ಲ. ಆದರೆ ನಟ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ಈಗ, ಬಿಜೆಪಿ ಮುಖ್ಯಮಂತ್ರಿಗಳು ಸಹ ತಡವಾಗಿಯಾದರೂ, ಮೋದಿ ಸಾರ್ವಜನಿಕ ನಾಯಕರಲ್ಲ ಎಂದು ಹೇಳಿದ್ದಾರೆ. ಕ್ಯಾಮೆರಾ ಕೌಶಲ್ಯ, ಟೆಲಿಪ್ರೊಂಪ್ಟರ್‌ಗಳು, ವೇಷಭೂಷಣಗಳು ಮತ್ತು ಭವ್ಯ ಭಾಷಣಗಳಲ್ಲಿ ಮೋದಿ ನಿಪುಣರು ಎಂಬುದನ್ನು ಒಪ್ಪಿಕೊಂಡಿದ್ದಾರೆಂದು ಟಾಂಗ್‌ ಕೊಟ್ಟಿದ್ದಾರೆ.

ಭಜನ್ ಲಾಲ್ ಜಿ, ನೀವು ಸರಿಯಾಗಿಯೇ ಹೇಳಿದ್ದೀರಿ. ಪ್ರಧಾನಿ ಮೋದಿ ಒಳ್ಳೆಯ ನಟ. ಆದರೆ, ಇತ್ತೀಚೆಗೆ ಅವರ ಅತಿ ನಟನೆ ಸ್ವಲ್ಪ ಹೆಚ್ಚುತ್ತಿದೆ ಎಂದು ನೀವು ಭಾವಿಸುವುದಿಲ್ಲವೇ? ಎಂದು ಶರ್ಮಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪೋಸ್ಟ್‌ ಹಾಕಿದ್ದಾರೆ.

 

ಎಎಪಿ ತನ್ನ ಎಕ್ಸ್‌ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಶ್ರೇಷ್ಠ ನಟ. ಭೂತ, ವರ್ತಮಾನ ಅಥವಾ ಭವಿಷ್ಯದಲ್ಲಿ ಅವರನ್ನು ಮೀರಿಸಬಲ್ಲವರು ಯಾರೂ ಇಲ್ಲ ಎಂದು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಾಯಕರು ಸ್ವತಃ ನಂಬುತ್ತಾರೆ ಎಂದು ಕಾಲೆಳೆದಿದೆ.