Home Blog Page 80

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

0

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

ಕಾರ್ಕಳ:ಬೈಲೂರು ಸರಕಾ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ, ನೀರೆ ಬೈಲೂರು ನಿವಾಸಿ ಶಾಂತಿನಾಥ ಜೋಗಿ (63 ) ಅವರು ನ. 23 ರಂದು
ನಿಧನ ಹೊಂದಿದರು.

ಮೃತರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಅವರು 35 ವರ್ಷದ ಶಿಕ್ಷಕ ವೃತ್ತಿಯಲ್ಲಿ ಸುಧೀರ್ಘ ಸೇವೆಯನ್ನು ಬೈಲೂರಿನ ಸರಕಾರಿ ಅಡವಿ ಪೂರ್ವ ಕಾಲೇಜಿನಲ್ಲಿ ಸಲ್ಲಿಸಿದ್ದರು.

ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರಪಾಂಡಿ ಸಂಸ್ಮರಣಾ ಪ್ರಶಸ್ತಿ

0

ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರಪಾಂಡಿ ಸಂಸ್ಮರಣಾ ಪ್ರಶಸ್ತಿ

ಕಾರ್ಕಳ: ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷದಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರಾದ ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ “ಸಾವಿರದ ನೆನಪು” ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ ವಿದ್ವಾಂಸ ರಾಘವ ನಂಬಿಯಾರ್ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಕೆ.ಗುಣಪಾಲ ಕಡಂಬ, ಇರ್ವತ್ತೂರು ಉದಯ ಕುಮಾರ್ ಜೈನ್, ಹಾಗೂ ಮದ್ರಬೆಟ್ಟು ವಸಂತ ಅಧಿಕಾರಿ, ಜಗದೀಶ ಅಧಿಕಾರಿ,ಪತ್ನಿ ಶ್ರೀಮತಿ ವಿಜಯ ಶ್ರೀಧರ ಪಾಂಡಿ, ಪುತ್ರಿ ಶ್ರೀಮತಿ ಶ್ರೀಶಾ, ಪುತ್ರ ಶ್ರೀಕಾಂತ್ ಕುಮಾರ್ ಉಪಸ್ಥಿತರಿದ್ದರು.

ನಿ. ಅಧ್ಯಾಪಕ ವಾಗ್ಮಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು ಮೂಡಬಿದಿರೆಯ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ವಂದಿಸಿದರು.ನಂತರ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಬೀಷ್ಮ ವಿಜಯ ತಾಳಮದ್ದಳೆ ಜರಗಿತು.

 

ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖರಾಗಿ ಅಜೆಕಾರು ವ್ಯವಸಾಯ ಸಂಘದ ನಿದೇ೯ಶಕರಾದ ವಿಜೇತಾ ಪೈ ಆಯ್ಕೆ.

0

ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖರಾಗಿ ಅಜೆಕಾರು ವ್ಯವಸಾಯ ಸಂಘದ ನಿದೇ೯ಶಕರಾದ ವಿಜೇತಾ ಪೈ ಆಯ್ಕೆ.

ದಾವಣಗೆರೆಯ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನವೆಂಬರ್ 22 ಶುಕ್ರವಾರದಂದು ಜರುಗಿದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ವಿಜೇತಾ ಪೈಯವರನ್ನು ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಮಹಿಳಾ ಪ್ರಮುಖರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕರಾದ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹರಾದ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯರಾದ ಅರವಿಂದ ದೇಶಪಾಂಡೆ, ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷರಾದ ಬಾಗಲಕೋಟೆಯ  ರಾಜಶೇಖರ ಶೀಲವಂತ,ನೂತನ ಅಧ್ಯಕ್ಷರಾದ ದಾವಣಗೆರೆಯ ಪ್ರಭುದೇವ ಆರ್ ಎಂ, ರಾಯಚೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.

 

ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

0

ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಮೂರೂ ಕ್ಷೇತ್ರದ ವಿಜಯದಿಂದಾಗಿ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿರುವುದು ಸ್ಪಷ್ಟ ಆಗಿದೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವ ಕುಮಾರ್ ರವರ ಕಾರ್ಯ ವೈಖರಿಯನ್ನು ಜನತೆ ಒಪ್ಪಿ ಕೊಂಡಿದ್ದಾರೆ.ಜನರ ಮನೆಗೆ ತಲುಪುವ ವಿವಿಧ ಭಾಗ್ಯಗಳ ಸೇವೆಯನ್ನು ಜನ ಒಪ್ಪಿ ಕೊಂಡಿರುವುದು ಈ ಚುನಾವಣೆಯಲ್ಲಿ ಸ್ಪಷ್ಟ ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಮೂರೂ ವಿಧಾನಸಭಾ ಕ್ಷೇತ್ರಗಳ ಗೆಲುವು ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ. ಕ್ಲೀನ್ ಇಮೇಜನ್ನು ಹೊಂದಿರುವ ಸಿದ್ದರಾಮಯ್ಯನವರು ಕಳಂಕರಹಿತ ಮುಖ್ಯಮಂತ್ರಿ ಹಾಗೂ ಡಿ ಕೆ ಶಿವ ಕುಮಾರ್ ರವರು ಉತ್ತಮ ಆಡಳಿತಗಾರ ಎಂಬುದನ್ನು ಮತದಾರ ಪ್ರಭುಗಳು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಕಾಂಗ್ರೆಸ್ ಆಡಳಿತವು ರಾಜ್ಯದ ಜನತೆಯ ಮನಸ್ಸು ಗೆದ್ದಿದೆ ಎನ್ನುವುದಕ್ಕೆ ಇಂದಿನ ತೀರ್ಪು ಸಾಕ್ಷಿಯಾಗಿದೆ. ಕಾಂಗ್ರೆಸ್ ಆಡಳಿತವನ್ನು ಪೂರ್ಣ ಮನಸ್ಸಿನಿಂದ ಬೆಂಬಲಿಸಿದ ಮತದಾರ ಪ್ರಭುವಿಗೆ ಧನ್ಯವಾದಗಳು ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಉಡುಪಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ಮೈಸೂರು ವಿಭಾಗೀಯ ಮಟ್ಟಕ್ಕೆ

0

ಉಡುಪಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ಮೈಸೂರು ವಿಭಾಗೀಯ ಮಟ್ಟಕ್ಕೆ

ಉಡುಪಿ : ರಾಜ್ಯ ಕ್ಷೇಮಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನ.21ರಂದು ನಡೆದ 2024-25ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಇಂಗ್ಲಿಷ್ ಪ್ರಬಂಧದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮಯೂರ್.ಎಂ.ಗೌಡ ಪ್ರಥಮ ಸ್ಥಾನವನ್ನು ಹಾಗೂ ಪ್ರಥಮ ವಿಜ್ಞಾನ ವಿಭಾಗದ ಜಾಹ್ನವಿ ಜೆ. ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದು ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಈ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ.

ನಿಟ್ಟೆಯಲ್ಲಿ ಡೆವ್ ರೆವ್ ಕಂಪೆನಿ ಸಹಯೋಗದೊಂದಿಗೆ ನಡೆದ ಮಹಿಳಾ ಎಐ ಹ್ಯಾಕಥಾನ್ ಓರಿಯಂಟೇಶನ್

0

ನಿಟ್ಟೆಯಲ್ಲಿ ಡೆವ್ ರೆವ್ ಕಂಪೆನಿ ಸಹಯೋಗದೊಂದಿಗೆ ನಡೆದ ಮಹಿಳಾ ಎಐ ಹ್ಯಾಕಥಾನ್ ಓರಿಯಂಟೇಶನ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ.೧೮ ರಿಂದ ವಿದ್ಯಾರ್ಥಿನಿಯರಿಗಾಗಿ ಡೆವ್ ರೆವ್ ಹಾಗೂ ಜಿಆರ್-ಎಐ-ಸಿಇ ಕಂಪೆನಿ ಆಯೋಜಿಸಿದ 2 ವಾರಗಳ ಮಹಿಳಾ ಎಐ ಹ್ಯಾಕಥಾನ್ ಈವೆಂಟ್ ನ ಓರಿಯಂಟೇಶನ್ ಮತ್ತು ಇಂಡಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಂಜಿನಿಯರಿಂಗ್ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡೆವ್ ರೆವ್ ನ 12 ಮಂದಿ ನುರಿತ ತರಬೇತುದಾರರ ತಂಡವು ನಿಟ್ಟೆ ಕ್ಯಾಂಪಸ್ ಗೆ ಬಂದು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಓರಿಯಂಟ್ ಮಾಡುವ ಮೂಲಕ ಮತ್ತು ಭಾಗವಹಿಸುವವರಿಗೆ ಪ್ರಾಬ್ಲೆಮ್ ಸ್ಟೇಟ್ಮೆಂಟ್ ನೀಡುವ ಮೂಲಕ ಹ್ಯಾಕಥಾನ್ ಗೆ ಚಾಲನೆ ನೀಡಿದರು. ಹ್ಯಾಕಥಾನ್ ನ ವಿಜೇತರನ್ನು ಡಿಸೆಂಬರ್ ನಲ್ಲಿ ಘೋಷಿಸಲಾಗುವುದು ಮತ್ತು ವಿಜೇತರು ಆಕರ್ಷಕ ನಗದು ಬಹುಮಾನಗಳನ್ನು ಮತ್ತು ಡೆವ್ ರೆವ್ ಅವರೊಂದಿಗೆ ಇಂಟರ್ನ್ ಶಿಪ್ ಗೆ ಅವಕಾಶವನ್ನು ಪಡೆಯುತ್ತಾರೆ.

ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಅವರು ಡೆವ್ ರೆವ್ ತಂಡವನ್ನು ಸ್ಪರ್ಧಿಗಳಿಗೆ ಪರಿಚಯಿಸಿದರು ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹ್ಯಾಕರ್ ಅರ್ತ್ ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

0

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

ದಕ್ಷಿಣ ಕನ್ನಡ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (ರಿ.) ಇದರ ವತಿಯಿಂದ ನಡೆದ ರಾಜ್ಯ ಮಠದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕೆರ್ವಾಶೆಯ ಆಯುಷ್ ಪಿ. ಅಂಚನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಆಯುಷ್ ಪಿ. ಅಂಚನ್ ಸೆಕ್ರೆಡ್ ಹಾರ್ಟ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು,ಇವರು ಕೆರ್ವಾಶೆಯ ಪಾಲ್ದಕ್ಯಾರ್ ಪ್ರಕಾಶ್ ಪೂಜಾರಿ ಮತ್ತು ಸುನೀತಾ ದಂಪತಿಯ ಪುತ್ರ.

ನೇಜಾರು ಕೊಲೆ ಪ್ರಕರಣ- ಆರೋಪಿ ಪರ ವಾದ ಮಂಡನೆ ಹಿಂಪಡೆದ ವಕೀಲರು

0

ಉಡುಪಿ ಸಮೀಪದ ನೇಜಾರಿನಲ್ಲಿ ವರ್ಷದ ಹಿಂದೆ ನಡೆದಿದ್ದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ವಾದ ಮಂಡಿಸುತ್ತಿದ್ದ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವುದರಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನವೆಂಬರ್ 20ರಂದು ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಲಾಗಿದೆ.

ನ್ಯಾಯಾಲಯವು ಅಕ್ಟೋಬರ್ 24 ರಂದು 1 ಮತ್ತು 2 ಸಾಕ್ಷಿಗಳಿಗೆ ನವೆಂಬರ್ 20 ರಂದು ವಿಚಾರಣೆಗೆ ಮತ್ತು 3 ಮತ್ತು 4 ಸಾಕ್ಷಿಗಳಿಗೆ ನವೆಂಬರ್ 21 ರಂದು ಹಾಜರಾಗಲು ದಿನಾಂಕ ನಿಗದಿಪಡಿಸಿತ್ತು. ಅದರಂತೆ ಆರೋಪಿ ಪ್ರವೀಣ್ ಚೌಗುಲೆಯನ್ನು ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಕರೆತರಲಾಯಿತು.

ಆರೋಪಿಯನ್ನು ಮಲ್ಪೆ ಠಾಣೆಯ ಸಿಪಿಐ ಮಂಜುನಾಥಗೌಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಚೌಗುಲೆ ಪರ ವಕೀಲರು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಚೌಗುಲೆ ಅವರ ಪತ್ನಿ ಹೊಸ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕೂಡಲೇ ವಕೀಲರನ್ನು ನೇಮಿಸುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗಳಿಗೆ ಸೂಚಿಸಿದರು. ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವ ಅವರು ಕೊನೆ ಕ್ಷಣದಲ್ಲಿ ವಕೀಲರನ್ನು ಹಿಂಪಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ಇದೀಗ ಗುರುವಾರಕ್ಕೆ ಮುಂದೂಡಲಾಗಿದೆ. ಚೌಗುಲೆ ಅವರನ್ನು ಹೆಚ್ಚಿನ ಭದ್ರತೆಯಲ್ಲಿ ಮತ್ತೆ ಹಿರಿಯಡ್ಕ ಜೈಲಿಗೆ ಕರೆದೊಯ್ಯಲಾಯಿತು. ಇದೇ ವೇಳೆ ಚೌಗುಲೆ ಅವರು ಪ್ರಸ್ತುತ ಇರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಧೀಶ ಸಮೀವುಲ್ಲಾ ಅವರಿಗೆ ಮನವಿ ಮಾಡಿದರು.

ಕಾರ್ಕಳ:ಡಿ. ಆ‌ರ್. ರಾಜು ನಿಧನ

0

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹಾಗೂ ಉದ್ಯಮಿ ಡಿ. ಆ‌ರ್. ರಾಜು ಪೂಜಾರಿ (64) ಹೃದಯಾಘಾತಕ್ಕೆ ಒಳಗಾಗಿ ನಿನ್ನೆ (ನ.18) ರಾತ್ರಿ ನಿಧನರಾಗಿದ್ದಾರೆ.

ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರೆನ್ನಲಾಗಿದೆ.

ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ನಿನ್ನೆ ಬೆಳಿಗ್ಗೆಯಿಂದಲೇ ಅವರು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರ ನಿಧನಕ್ಕೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ,ಮಾಜಿ ಸಚಿವ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್,ಮುನಿಯಾಲು ಉದಯ್ ಕುಮಾರ್ ಶೆಟ್ಟಿ ರಾಜ್ಯ ಕ್ರಷರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಸೇರಿದಂತೆ ಹಲವು ಗಣ್ಯರು ಸಂತಾಪ ಸಲ್ಲಿಸಿದ್ದಾರೆ.

ಡಿ.ಆರ್ ರಾಜು ಅವರ ಅಂತಿಮ ಕ್ರಿಯೆಯು ಇಂದು ಬೆಳಿಗ್ಗೆ 11.30 ಗಂಟೆಗೆ ಅವರ ಸ್ವಗೃಹದಲ್ಲಿ ನಡೆಯಲಿದೆ.

ಸಿಡಿಲು ಬಡಿದು ಬಾಲಕ ಸಾವು

0

ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್(14) ಎಂದು ಗುರುತಿಸಲಾಗಿದೆ.

ಇಂದು ಸಂಜೆ 5.30ರ ಸುಮಾರಿಗೆ ಮನೆಯ ಸಿಟೌಟ್ ನಲ್ಲಿ ಕುಳಿತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣ ಮನೆಮಂದಿ ಮಾಣಿಯ ಕ್ಲಿನಿಕ್ ವೊಂದಕ್ಕೆ ಕರೆತಂದಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೆ ಬಾಲಕ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮಾಡಲು ಕಳುಹಿಸಲಾಗಿದೆ. ಶುಭೋದ್ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 8 ತರಗತಿ ವಿದ್ಯಾರ್ಥಿಯಾಗಿದ್ದ. ಮುಂದಿನ ಪರಿಹಾರ ಕ್ರಮಕ್ಕೆ ತಹಶೀಲ್ದಾರ್ ಅರ್ಚನಾ ಭಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.