Home Blog Page 61

ಕಾರ್ಕಳ : ಜೆ.ಇ.ಇ ಅಡ್ವಾನ್ಸ್ಡ್‌ನಲ್ಲಿ ಕ್ರಿಯೇಟಿವ್‌ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

0

ಕಾರ್ಕಳ : ಜೆ.ಇ.ಇ ಅಡ್ವಾನ್ಸ್ಡ್‌ನಲ್ಲಿ ಕ್ರಿಯೇಟಿವ್‌ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಚೇತನ್ ಗೌಡ ಎನ್. ಎಸ್. ಸಾಮಾನ್ಯ ವಿಭಾಗದಲ್ಲಿ 3420 (OBC ವರ್ಗದಲ್ಲಿ 639)ನೇ ರ‍್ಯಾಂಕ್‌, ತೇಜಸ್ ವಿ. ನಾಯಕ್ ಸಾಮಾನ್ಯ ವಿಭಾಗದಲ್ಲಿ 7773(OBC ವರ್ಗದಲ್ಲಿ 1661)ನೇ ರ‍್ಯಾಂಕ್‌, ಸಾನಿಕ ಕೆ. ಎನ್. ಸಾಮಾನ್ಯ ವಿಭಾಗದಲ್ಲಿ 9701, ಮೋಹಿತ್ ಎಂ. ಸಾಮಾನ್ಯ ವಿಭಾಗದಲ್ಲಿ 17504 (ST ವರ್ಗದಲ್ಲಿ 143)ನೇ ರ‍್ಯಾಂಕ್‌, ಎಂ. ಮಂಜುನಾಥ್ ಸಾಮಾನ್ಯ ವಿಭಾಗದಲ್ಲಿ ೨೦೭೪೩ ನೇ ರ‍್ಯಾಂಕ್‌, ಸಾಚಿ ಶಿವಕುಮಾರ್ ಕಡಿ ೨೪೭೨೮ ನೇ ರ‍್ಯಾಂಕ್‌, ಶ್ರೀರಕ್ಷಾ ೨೮೧೬೩ ನೇ ರ‍್ಯಾಂಕ್‌, ಯೋಗೇಶ್ ದೀಪಕ್ ನಾಯಕ್ ಸಾಮಾನ್ಯ ವಿಭಾಗದಲ್ಲಿ 31133 (OBC ವರ್ಗದಲ್ಲಿ 8989)ನೇ ರ‍್ಯಾಂಕ್‌, ಹರ್ಷಿತ್ ರಾಜು ಹೆಚ್. ಎಂ. ಸಾಮಾನ್ಯ ವಿಭಾಗದಲ್ಲಿ 31140ನೇ ರ‍್ಯಾಂಕ್‌, ಪ್ರೀತಿ ಸಿ. ಎಲ್. ಸಾಮಾನ್ಯ ವಿಭಾಗದಲ್ಲಿ 31939ನೇ ರ‍್ಯಾಂಕ್‌ (OBC ವರ್ಗದಲ್ಲಿ 9271)ನೇ ರ‍್ಯಾಂಕ್‌, ಟಿ ಪ್ರದೀಪ್ ST ವರ್ಗದಲ್ಲಿ 409ನೇ ರ‍್ಯಾಂಕ್‌, ಮೋನಿಕಾ ಕೆ. ಪಿ. ST ವರ್ಗದಲ್ಲಿ 411ನೇ ರ‍್ಯಾಂಕ್‌ ಮತ್ತು ಪ್ರಜ್ವಲ್ ಡಿ. ಎಂ. SC ವರ್ಗದಲ್ಲಿ 5429ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆಗೈವ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.

ಕಾಲೇಜಿನ ಆರಂಭದಿಂದಲೂ ದೇಶದ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾನಿಲಯಗಳಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳು ದಾಖಲೆಯನ್ನು ಪಡೆಯುತ್ತಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಸಂಸ್ಥೆಯು ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

M. MANJUNATH

HARSHITH RAJU H M

YOGESH DEEPAK NAIK

TEJAS V NAYAK

T PRADEEP

CHETHAN GOWDA N S

PRAJWAL D M

SACHI SHIVAKUMAR KADI

SAANIKA K N

PREETHI C L

SHREERAKSHA

MOHITH M

MONIKA K P

ಕಾರ್ಕಳ : ಜೆ.ಇ.ಇ ಅಡ್ವಾನ್ಸ್ಡ್2025 ಫಲಿತಾಂಶ ಪ್ರಕಟ; ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳಿಗೆ ಹತ್ತು ಸಾವಿರದ ಒಳಗಿನ ರ್ಯಾಂಕ್

0

ಜೆ.ಇ.ಇ ಅಡ್ವಾನ್ಸ್ಡ್2025 ಫಲಿತಾಂಶ ಪ್ರಕಟ

ಕೆ.ಸಿ.ಇ.ಟಿ. ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ತರುಣ್ ಸುರಾನಾನಿಗೆ ರಾಷ್ಟ್ರ ಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ 2403 ನೇ ರ್ಯಾಂಕ್

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ. ಅಡ್ವನ್ಸ್ಡ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗಿನ ರ್ಯಾಂಕ್ ಗಳಿಸಿದ್ದಾರೆ.

ಜನರಲ್ ಮೆರಿಟ್ ನಲ್ಲಿ ತರುಣ್ ಎ. ಸುವರ್ಣ (2403) (ಕೆಟಗರಿಯಲ್ಲಿ429 ರ್ಯಾಂಕ್), ಮನೋಜ್ ಕಾಮತ್ (3911) (ಜನರಲ್ ಇ.ಡಬ್ಲು.ಎಸ್ 394ರ್ಯಾಂಕ್). ಆಕಾಶ್ ಪ್ರಭು (5105 ), ಚಿಂತನ್ ಮೇಗಾವತ್ (6375 ) (ಕೆಟಗರಿಯಲ್ಲಿ 142 ರ್ಯಾಂಕ್),ವಿಷ್ಣು ಧರ್ಮಪ್ರಕಾಶ್ (8565) ರ್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಎ.ಪಿ.ಜಿ.ಇ.ಟಿ ಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ತರುಣ್ ಎ ಸುವರ್ಣ

ಚಿಂತನ್ J M

ಕೆ. ಮನೋಜ್ ಕಾಮತ್

ವಿಷ್ಣು ಡಿ.

ಆಕಾಶ್ ಎಚ್. ಪ್ರಭು

ಕ್ರೈಸ್ಟ್ ಕಿಂಗ್ : ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಶಿಸ್ತು ಮತ್ತು ಜೀವನ” ಮಾಹಿತಿ ಕಾರ್ಯಕ್ರಮ

0

ಕ್ರೈಸ್ಟ್ ಕಿಂಗ್ : ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ “ಶಿಸ್ತು ಮತ್ತು ಜೀವನ” ಮಾಹಿತಿ ಕಾರ್ಯಕ್ರಮ

ಮನುಷ್ಯ ತನ್ನನ್ನು ದೈಹಿಕವಾಗಿ ಮಾನಸಿಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ಶಿಸ್ತು: ಏರ್ ವೈಸ್ ಮಾ಼ರ್ಷಲ್ ರಮೇಶ್ ಕಾರ್ಣಿಕ್

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ‘ಶಿಸ್ತು ಮತ್ತು ಜೀವನ’ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರ್ಕಳದ ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ “ಮನುಷ್ಯ ತನ್ನನ್ನು ದೈಹಿಕವಾಗಿ ಮಾನಸಿಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ಶಿಸ್ತು. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡಾಗ ಮಾತ್ರ ಶಿಸ್ತು ಮೂಡಲು ಸಾಧ್ಯ. ಜೀವನದಲ್ಲಿ ಶಿಸ್ತು ಇದ್ದರೆ ಮಾತ್ರ ನಮ್ಮ ಬದುಕಿಗೆ ಸೌಂದರ್ಯ ಮತ್ತು ಅರ್ಥ ಬರುತ್ತದೆ. ನಯ ವಿನಯತೆ ವಿಧೇಯತೆಯು ಉತ್ತಮ ವ್ಯಕ್ತಿತ್ವದ ಲಕ್ಷಣ. ಮಕ್ಕಳು ಸೈನ್ಯ ಸೇರಿ ದೇಶ ಸೇವೆ ಮಾಡುವ ಮನೋಧರ್ಮ ರೂಢಿಸಿಕೊಳ್ಳಬೇಕು. ಏನೇ ಸಮಸ್ಯೆಗಳು ಬಂದರೂ ಜೀವನವನ್ನು ದುರಂತದ ಕಡೆಗೆ ತೆಗೆದುಕೊಂಡು ಹೋಗಬಾರದು” ಎಂದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪಪ್ರಾಚಾರ್ಯರಾದ ಪ್ರಕಾಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಚೋದನಕಾರಿ ಪೋಸ್ಟ್ ಹಂಚಿದ ಹಿನ್ನಲೆ:ರತ್ನಾಕರ್ ಅಮೀನ್ ಬಂಧನ ಪ್ರತೀ ಠಾಣೆಯಲ್ಲಿ ಇಬ್ಬರು ಪೊಲೀಸರಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ…

0

ಪ್ರಚೋದನಕಾರಿ ಪೋಸ್ಟ್ ಹಂಚಿದ ಹಿನ್ನಲೆ:ರತ್ನಾಕರ್ ಅಮೀನ್ ಬಂಧನ

ಪ್ರತೀ ಠಾಣೆಯಲ್ಲಿ ಇಬ್ಬರು ಪೊಲೀಸರಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ…

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿದ ಹಿನ್ನಲೆ, ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ್ ಅಮೀನ್ ವಿರುದ್ಧ ಅಜೆಕಾರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ.

ಕರಾವಳಿಯಲ್ಲಿ ಸಾಲು ಸಾಲು ಕೊಲೆಗಳಾಗುತ್ತಿದ್ದು, ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪ್ರಚೋದನಕಾರಿ ಭಾಷಣ ಮಾಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚುತ್ತಿರುವ ಹಲವರ ವಿರುದ್ಧ ಬಲೆ ಬೀಸಿದ್ದಾರೆ.

ಪ್ರತಿ ಠಾಣೆಗಳಲ್ಲೂ ಇಬ್ಬರು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಿದ್ದಾರೆ – ಪೊಲೀಸ್ ವರಿಷ್ಠಾಧಿಕಾರಿ

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಇಬ್ಬರು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಿದ್ದಾರೆ. ಆಕ್ಷೇಪಕಾರಿ ಪೋಸ್ಟ್ ಗಳನ್ನು ವಿನಿಮಯ ಮಾಡುವುದು, ಇತರರೊಂದಿಗೆ ಹಂಚಿಕೊಳ್ಳುವುದು ಮಾಡಬಾರದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೂ ಇವುಗಳ ನಿಯಂತ್ರಣಕ್ಕೆ ಸಿಬ್ಬಂದಿ ಇದ್ದು, ಸಮಸ್ಯೆ ಎದುರಾದರೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾದ ಹರಿರಾಮ್ ಶಂಕರ್ ಅವರು ಮಾಧ್ಯಮದೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಬೈಯ್ಯುವುದು ಆತ್ಮಹತ್ಯೆಗೆ ಪ್ರಚೋದನೆಯಾಗಲ್ಲ ಸುಪ್ರೀಂ ಕೋರ್ಟ್

0

ಬೈಯ್ಯುವುದು ಆತ್ಮಹತ್ಯೆಗೆ ಪ್ರಚೋದನೆಯಾಗಲ್ಲ ಸುಪ್ರೀಂ ಕೋರ್ಟ್

ಬೈಗುಳ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದ ಸುಪ್ರೀಂಕೋರ್ಟ್, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ಆರೋಪದಿಂದ ಶಿಕ್ಷಕರೊಬ್ಬರನ್ನು ಖುಲಾಸೆಗೊಳಿಸಿ ಈ ತೀರ್ಪು ನೀಡಿದೆ.

ತಮಿಳುನಾಡಿನಲ್ಲಿ ವಿದ್ಯಾರ್ಥಿಯೊಬ್ಬನ ದೂರಿನ ಮೇರೆಗೆ ಹಾಸ್ಟೆಲ್ ಉಸ್ತುವಾರಿ ಶಿಕ್ಷಕರೊಬ್ಬರು ಮತ್ತೊಬ್ಬ ವಿದ್ಯಾರ್ಥಿಯನ್ನು ನಿಂದಿಸಿದ್ದು, ಆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಹಾಸ್ಟೆಲ್ ಉಸ್ತುವಾರಿ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್ ಆರೋಪವನ್ನು ಎತ್ತಿ ಹಿಡಿದಿತ್ತು. ಅದನ್ನು ಶಿಕ್ಷಕ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಪೀಠ, ‘ಯಾರಾದರೂ ಬೈದಾಗ ಇಂತಹ ದುರಂತಕ್ಕೆ ಕಾರಣವಾಗುತ್ತದೆ ಎಂದು ಸಾಮಾನ್ಯ ಜನರೂ ಊಹಿಸಲು ಸಾಧ್ಯವಿಲ್ಲ ಎಂದಿದೆ.

ಕಾರ್ಕಳ : ವಿದ್ಯಾರ್ಥಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ

0

ಕಾರ್ಕಳ : ವಿದ್ಯಾರ್ಥಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಮೆಟ್ರಿಕ್ ಪೂರ್ವ ಹಾಗೂ 8 ಮೆಟ್ರಿಕ್ ಆನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. https://swdhmis.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕುಂದಾಪುರ ದೂ: 08254-230609, ಮೊ: 9480843208 ಹಾಗೂ ಕಾರ್ಕಳ ದೂ: 08258-298134, ಮೊ: 9480843207 ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್. ಎಸ್. ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್ ದಾಖಲು

0

ಆರ್. ಎಸ್. ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್ ದಾಖಲು

ಬಜ್ಜೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿ ಆ‌ರ್.ಎಸ್.ಎಸ್. ಮುಖಂಡ ಡಾ. ಪ್ರಭಾಕರ ಭಟ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿ ಆ‌ರ್.ಎಸ್.ಎಸ್. ಮುಖಂಡ ಡಾ.ಪ್ರಭಾಕರ ಭಟ್ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್ ನಲ್ಲಿ ಮೇ 12 ರಂದು ನಡೆದ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡುವ ಸಂಧರ್ಭ, ಕೋಮು ದ್ವೇಷ ಪ್ರಚೋದನಾತ್ಮಕವಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಅಡಿ Cr . ಸಂ. 60/2025, ಸೆಕ್ಷನ್ 353(2)ರಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಕಳ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ; ಅರ್ಜಿ ಆಹ್ವಾನ

0

ಕಾರ್ಕಳ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ; ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಯುಪಿಎಸ್‌ಸಿ ಮತ್ತು ಬ್ಯಾಂಕಿಂಗ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆಯಲು ಇಚ್ಛಿಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ) ಹಾಗೂ 3(ಬಿ)ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in, ಸಂಪರ್ಕಿಸಬಹುದು.

ಶಾಕ್ ಪ್ರಶ್ನೆಯೇ ಇಲ್ಲ-ಗಿರೀಶ್ ರಾವ್ ಸ್ಪಷ್ಟನೆ ದಾಳಿ ಅಲ್ಲವೇ ಅಲ್ಲ;ಪರಿಶೀಲನೆ ಅಷ್ಟೇ…

0

ಕಾರ್ಕಳದ ಮೆಸ್ಕಾಮ್ ಏ.ಓ. ಗಿರೀಶ್ ರಾವ್ ರವರ ಮೇಲೆ ಲೋಕಾಯುಕ್ತ ವಿಚಾರಣೆ ನಡೆಸಿದ ಬಗ್ಗೆ ಹಲವಾರು ಊಹಾಪೋಹ ಅಂತೆಕಂತೆಗಳು ಹಬ್ಬಿದ್ದು ಈ ಕುರಿತು ನೇರವಾಗಿ ಮಾಧ್ಯಮಗಳು ಗಿರೀಶ್ ರಾವ್ ರವರನ್ನು ಪ್ರಶ್ನಿಸಿದ್ದಾಗ ಸಾರ್ವಜನಿಕ ತಿಳಿವಿಗೆ ಅವರು ಪ್ರಕಟಪಡಿಸಿದ ಮಾಹಿತಿ.

*ನಾನು ಕಾರ್ಕಳ ಮೆಸ್ಕಾಂ ವಿಭಾಗದಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯನಿಷ್ಠೆಯಿಂದ,ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಗ್ರಾಹಕರಿಗೆ ನನ್ನ ಸೇವೆಯನ್ನು ನೀಡುತ್ತಾ ಬಂದಿದ್ದು,ನನ್ನ ವಿರುದ್ದ ಇಲಾಖೆಯಲ್ಲಿ ಯಾವುದೇ ದೂರುಗಳಾಗಲೀ ಆಪಾದನೆಗಳಾಗಲೀ ಇಲ್ಲ.ಅಕ್ರಮವಾಗಿ ಕಾನೂನು ಬಾಹಿರ ವಾಗಿ ನಾನು ಯಾವುದೇ ಆಸ್ತಿ ಸಂಪತ್ತು ಹಣ ಒಡವೆ ಹೊಂದಿರುವುದಿಲ್ಲ.ಹಾಗಾಗಿ ಲೋಕಾಯುಕ್ತ ದಾಳಿಯಿಂದ ನನಗೆ ಶಾಕ್ ಆಗಿದೆ ಎನ್ನುವ ವರದಿ ತೀರಾ ಹಾಸ್ಯಾಸ್ಪದ.ನಾನು ನ್ಯಾಯಪರತೆ ಹೊಂದಿರುವುದರಿಂದಲೇ‌ ಯಾವುದೇ ಶಾಕ್ ಗೆ ಒಳಗಾಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.

*2.98 ಕೋಟಿ ಅಕ್ರಮ ಸಂಪತ್ತು ಹೊಂದಿದ್ದೇನೆ ಎಂಬ ವರದಿಯು ಸತ್ಯಕ್ಕೆ ತೀರಾ ದೂರವಾದುದಾಗಿದೆ.ನನ್ನ ಹೆಂಡತಿಯ ಹೆಸರಿನಲ್ಲಿರುವ ಹೊಟೇಲ್ ಗೆ ಸಂಬಂದ ಪಟ್ಟ ಆಸ್ತಿಗೆ 2.25 ಕೋಟಿ ಬ್ಯಾಂಕ್ ಆಫ್ ಬರೋಡಾ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿ ಸಾಲ ಇರುತ್ತದೆ.

*ತಪ್ಪು ತಿಳುವಳಿಕೆಯಿಂದಾಗಿ ಹಲವರು ಸಾರ್ವಜನಿಕವಾಗಿ ಪ್ರಚುರಪಡಿಸಿದಂತೆ ನನ್ನ ಒಡೆತನದಲ್ಲಿ ಯಾವುದೇ ಹೊಟೇಲ್,ವಾಣಿಜ್ಯ ಸಂಕೀರ್ಣ ಇರುವುದಿಲ್ಲ.

*ಮನೆಯಲ್ಲಿ ಇದ್ದದ್ದು ಕೇವಲ ನಾಲ್ಕು ಸಾವಿರ ರೂಪಾಯಿ ಹಾಗೂ 189 ಗ್ರಾಂ ಚಿನ್ನ ಮಾತ್ರ.ಮನೆಯಲ್ಲಿ ಇರುವ ಹಳೆಯ ಹಾಗೂ ಹೊಸ ಸಾಮಾಗ್ರಿಗಳ ಮೌಲ್ಯಗಳನ್ನು ಆದರಿಸಿ ಲೋಕಾಯುಕ್ತದವರು ವರದಿ ನೀಡಿದ್ದಾರೆ.

*ನನ್ನ ಎಲ್ಲಾ ಆಸ್ತಿ ನ್ಯಾಯಬದ್ದವಾಗಿದ್ದು, ಯಾವುದೇ ಅಕ್ರಮ ದಾರಿಯಲ್ಲಿ ಸಂಪಾದನೆ ಮಾಡಿರುವುದಿಲ್ಲ.

*ನನ್ನ ವರಮಾನ ಗಳಿಕೆ ಕಾನೂನು ಪ್ರಕಾರ ತೆರಿಗೆ ಪಾವತಿಸಿ ಸಂಪಾದಿಸಿದ್ದಾಗಿದ್ದು ಎಲ್ಲವೂ ಪಾರದರ್ಶಕವಾಗಿದೆ.ಈ ಹಿನ್ನಲೆಯಲ್ಲಿ ಯಾವುದೇ ಅಳುಕಿಲ್ಲದೇ ಲೋಕಾಯುಕ್ತ ತನಿಖೆಗೆ ಮುಕ್ತ ಸಹಕಾರ ನೀಡಿದ್ದೇನೆ.

ಸಾರ್ವಜನಿಕ ಸೇವೆಯಲ್ಲಿ ಇರುವ ಓರ್ವ ಸರಕಾರಿ ಅಧಿಕಾರಿಯಾಗಿ ಜನರಲ್ಲಿ ಮೂಡಿದ ತಪ್ಪು‌‌ ತಿಳುವಳಿಕೆಯನ್ನು ನಿವಾರಿಸುವ ಸದುದ್ದೇಶದಿಂದ ಈ ಸ್ಪಷ್ಟನೆಯನ್ನು ಮಾಧ್ಯಮದ ಮುಂದಿರಿಸಿದ್ದೇನೆ.

ಎರಡು ದಿನಗಳ ಹಿಂದೆ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

0

ಎರಡು ದಿನಗಳ ಹಿಂದೆ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟುವಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆ ನಿವಾಸಿ ಗುರುಪ್ರಸಾದ್ ಅವರ ಮೃತದೇಹವನ್ನು ಈಜು ತಜ್ಞ ಈಶ್ವರ್ ಮಲ್ಪೆ ಅವರು ಯಶಸ್ವಿಯಾಗಿ ಮೇಲಕ್ಕೆತ್ತಿದ್ದಾರೆ.

ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿದ್ದನ್ನು ಗಮನಿಸಿ, ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದಭ೯ದಲ್ಲಿ ಕಾಲು ಜಾರಿ ನೀರು ಪಾಲಾಗಿದ್ದರು.

ಇಂದು (ಭಾನುವಾರ) ಈಶ್ವರ್ ಮಲ್ಪೆ ಅವರ ತಂಡ ನೀರಿಗೆ ಇಳಿದು ಹುಡುಕಾಟ ನಡೆಸಿ ಶಿತಾ೯ಡಿಯ ಕಜೆ ಬಳಿ ಮೃತ ದೇಹವನ್ನು ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.