ಕಾರ್ಕಳ:ಎಂ.ಪಿ.ಎಂ. ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ
ಕಾರ್ಕಳ:ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿನ 2024 25 ನೇ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾಲೇಜಿನ
ಆವರಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ಸರಕಾರದ ಮಾಜಿ ಸಚಿವ, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಎಂಪಿಎಂ ಕಾಲೇಜಿನಲ್ಲಿಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಅತ್ಯಂತ ಯಶಸ್ಸು ಸಿಕ್ಕಿದ್ದು, ಆ ಪರಂಪರೆಯನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗುವ ಜೊತೆಗೆ ಸಂಸ್ಥೆಯಲ್ಲಿ ಒಬ್ಬರನ್ನೊಬ್ಬರು ಅರಿತು ಬಾಳುವಂತಾಗಲಿ.ಯುವಶಕ್ತಿ ಒಗ್ಗಟ್ಟಿನಿಂದ ಜಗತ್ತಿನ ಸವಾಲು ಎದುರಿಸುವಲ್ಲಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ
ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಒಂದು ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪಾತ್ರವಹಿಸಲು, ಈ ಕಾಲೇಜಿನ ಜೀವನ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರವಿರಾಜ್ ಶೆಟ್ಟಿ, ಕನ್ನಡ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಮಾತನಾಡಿ ಕಾಲೇಜಿನ ಯಶಸ್ಸಿಗೆ ಅದರ ಆಕಾರ ಮತ್ತು ವಿಸ್ತಾರಗಳಿಗಿಂತ ಅಲ್ಲಿನ ಐದು ಸಂಪತ್ತುಗಳು ಅಗತ್ಯವಿದ್ದು ಅವುಗಳೆಂದರೆ ಕರ್ತವ್ಯ ನಿರತ ಸಿಬ್ಬಂದಿ, ದೂರದರ್ಶಿತ್ವದ ಪ್ರಾಂಶುಪಾಲರು, ಶಿಸ್ತಿನ ವಿದ್ಯಾರ್ಥಿಗಳು, ಕಾಳಜಿ ಉಳ್ಳ ಪಾಲಕರು, ಕಾಲೇಜಿನ ಸಾಂಸ್ಕೃತಿಕ ರೂವಾರಿಗಳಾದ ಹಳೆವಿದ್ಯಾರ್ಥಿಗಳು ಇರಬೇಕು, ಈ ಎಲ್ಲಾ ಅಂಶಗಳು ಈ ಕಾಲೇಜಿನಲ್ಲಿ ಮೇಳೈಸಿ ಯಶಸ್ವಿಗೆ ಕಾರಣವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಕ್ಷೇತ್ರದ ಶಾಸಕರ ಮಾರ್ಗದರ್ಶನ ಹಾಗು ಎಲ್ಲರ ಸಹಕಾರದೊಂದಿಗೆ ಕಾಲೇಜು ಇನ್ನಷ್ಟು ಹೊಸತನ ಕಂಡುಕೊಂಡುಸಾಧನೆಯತ್ತ ಸಾಗಲಿದೆ ಎಂಬ ಮಾತುಗಳನ್ನಾಡಿ, ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 2024ರಲ್ಲಿ ಕಾಲೇಜಿನಿಂದ ಬೇರೆಡೆಗೆ ವರ್ಗಾವಣೆಗೊಂಡ ಕಾಲೇಜಿನ ಅಧ್ಯಾಪಕರುಗಳಾದ ಡಾ.ವಿದ್ಯಾಧರ ಹೆಗ್ಡೆ, ಡಾ. ಗಣೇಶ್, ಶ್ರೀ ವೆಂಕಟೇಶ್, ಹಾಗೂ ಕಾಲೇಜಿನ ಯಕ್ಷಗಾನ ಶಿಕ್ಷಕರಾದ ಶ್ರೀ ಮಹಾವೀರ ಪಾಂಡಿಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಪೋಷಕರು, ಪೂರ್ವ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಮೈತ್ರಿ ಬಿ. ವಂದನಾರ್ಪಣೆ ನಿರ್ವಹಿಸಿದರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ
ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ದಿಲೀಪ್ ವರ್ಗಾವಣೆಗೊಂಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಸನ್ನ ಎಂ ಎಸ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದರು.ಇಂದು ಕಾರ್ಕಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಅವರಿಗೆ ಈ ಬಾರಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿತ್ತು.
2025 ರ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಸಾಂತೂರ್ ನಿವಾಸಿ ಶ್ರೀಮತಿ ರೋಸ್ಲಿನ್ ಜೇಸಿಂತ ಡಿಸೋಜಾ ಹಾಗೂ ಅವರ ಪುತ್ರ ಜೇಷ್ಠನ್ ಡಿಸೋಜಾ ಇವರು ಜೊತೆಯಾಗಿ ಪರೀಕ್ಷೆ ಬರೆದು ವಿಶಿಷ್ಟವಾಗಿ ಪಾಸಾಗಿರುತ್ತಾರೆ.
ಶ್ರೀಮತಿ ರೋಸ್ಲಿನ್ ಜೇಸಿಂತ ಇವರು ಕಾಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿ ಯಾಗಿ ನೋಂದಾವಣೆಗೊಂಡು ಮೈ – ಟೆಕ್ ಟ್ಯೂಟೋ ರಿಯಲ್ ಕಾಲೇಜು ಶಿರ್ವ ಇಲ್ಲಿ ಟ್ಯೂಷನ್ ಪಡೆದು 600 ಅಂಕಗಳಲ್ಲಿ 517 ಅಂಕ ಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.ಇವರ ಪುತ್ರ ಜೇಷ್ಠನ್ ಡಿಸೋಜಾ ಇವರು ನಿಟ್ಟೆ ಕಾಲೇಜು ನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿ ತಾಯಿ ಮಗ ವಿಶಿಷ್ಟ ಸಾಧನೆ ಮಾಡಿರುತ್ತಾರೆ.
ಶ್ರೀಮತಿ ಜೇಸಿಂತ ಡಿಸೋಜಾ ಇವರು ಎಸ್. ಎಸ್. ಎಲ್. ಸಿ ಪರೀಕ್ಷೆ ಬರೆದು ಬರೋಬ್ಬರಿ 25 ವರ್ಷಗಳ ನಂತರ ಪಿ ಯು ಸಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ 100 ಅಂಕ ಗಳಲ್ಲಿ 99 ಅಂಕಗಳನ್ನು ಪಡೆದು ವಿಶಿಷ್ಟ ದಾಖಲಯೊಂದಿಗೆ ಪಾಸಾಗಿರುತ್ತಾರೆ.
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜೇಸಿಂತ ಡಿಸೋಜಾ ಇವರು ಪದೋನ್ನತಿ ಗಾಗಿ ಪರೀಕ್ಷೆ ಬರೆಯಬೇಕಾದ ಸಂದರ್ಭ ಒದಗಿ ಬಂದಿದ್ದು ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಾದಿಸುವ ಛಲವೊಂದಿದ್ದರೆ ಯಶಸ್ಸನ್ನು ಪಡೆಯಬಹುದು ಮೈಟೆಕ್ ಸಂಸ್ಥೆಯ ಉದಯ ಆಚಾರ್ಯ ಮೆಚ್ಚುಗೆ ಸೂಚಿಸಿದ್ದಾರೆ.ಇವರ ಈ ಅಮೋಘ ಸಾಧನೆ ತುಂಬಾ ಸಂತೋಷ ತಂದಿದೆ ಎಂದು ಕನ್ನಡ ವಿಭಾಗದ ಶಿಕ್ಷಕಿ ರೇಷ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಯನ್ಸ್ ಜಿಲ್ಲೆ 317c ಯ ಪ್ರಾಂತ್ಯ 3ರ ಪ್ರಾಂತಿಯ ಅಧ್ಯಕ್ಷರಾಗಿ ಗಿರೀಶ್ ರಾವ್ ಆಯ್ಕೆ
2025-26 ನೇ ಸಾಲಿನ ಲಯನ್ಸ್ ಜಿಲ್ಲೆ, 317 ಸಿ ಯ ಪ್ರಾಂತ್ಯ 3 ರ ಅಧ್ಯಕ್ಷರಾಗಿ ಲಯನ್ಸ್ ಗಿರೀಶ್ ರಾವ್ ರವರನ್ನು ನಿಯೋಜಿತ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ರವರು ಆಯ್ಕೆ ಮಾಡಿ ಘೋಷಿಸಿದ್ದಾರೆ.
ಲಯನ್ ಗಿರೀಶ್ ರಾವ್ ಇವರು ಮೆಸ್ಕಾಂ ಕಾರ್ಕಳ ವಿಭಾಗದ ಲೆಕ್ಕಾಧಿಕಾರಿಯಾಗಿ. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ, ಛತ್ರಪತಿ ಫೌಂಡೇಶನ್ ಇದರ ಅಧ್ಯಕ್ಷರಾಗಿ, ಕ್ಷತ್ರಿಯ ಮರಾಠ ಸಮಾಜ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಭಾರತೀಯ ಜೆಸಿಸ್ ನಲ್ಲಿ ಸುಮಾರು 32 ವರ್ಷಗಳ ಕಾಲ ಸುದೀರ್ಘ ಅನುಭವ ಹೊಂದಿರುವ ಇವರು,ಅಧ್ಯಕ್ಷರಾಗಿ,ವಲಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.ಮೂರು ರಾಷ್ಟ್ರೀಯ ವೈಯಕ್ತಿಕ ಪ್ರಶಸ್ತಿಯನ್ನು ಪಡೆದ ಹಿರಿಮೆ ಇವರದು.ಲಯನ್ಸ್ ಸಂಸ್ಥೆಯಲ್ಲಿ ಕ್ಲಬ್ ನ ಅಧ್ಯಕ್ಷರಾಗಿ ವಲಯಧ್ಯಕ್ಷನಾಗಿ ಜಿಲ್ಲೆಯ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಕ್ರೈಸ್ಟ್ ಕಿಂಗ್:ದ್ವಿತೀಯ ಪಿಯುಸಿಯಲ್ಲಿ ಅಭೂತಪೂರ್ವ ಸಾಧನೆ
ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ ೫೯೫ ಅಂಕಗಳೊAದಿಗೆ ಜಿಲ್ಲೆಗೆ ಪ್ರಥಮ ರ‍್ಯಾಂಕ್ 177 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ಎರಡೂ ವಿಭಾಗಗಳಲ್ಲಿ ರಾಜ್ಯಮಟ್ಟದಲ್ಲಿ ಒಟ್ಟು ನಾಲ್ಕು ರ‍್ಯಾಂಕ್ ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್ ಕೆ ಏಳನೇ ರ‍್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ ಐದನೇ ರ‍್ಯಾಂಕ್, ಚರಣ್‌ರಾಜ್ ಎಂಟನೇ ರ‍್ಯಾಂಕ್, ನಾರಾಯಣಿ ಕಿಣಿ ಹತ್ತನೇ ರ‍್ಯಾಂಕ್, ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತ ಮೇಲೆಯೇ ಉತ್ತೀರ್ಣಗೊಳ್ಳುವುದರ ಮೂಲಕ ವಿಶಿಷ್ಟ ಸಾಧನೆ
ಕಾರ್ಕಳ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಉತ್ತಮ ಫಲಿತಾಂಶದೊAದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ 17ನೇ ಬಾರಿಗೆ 100ಶೇಕಡಾ ಫಲಿತಾಂಶ ಪಡೆದುಕೊಂಡಿದೆ.
ದಾಖಲಾತಿಗೆ ಅಂಕಗಳ ಮಿತಿ ನಿಗದಿಪಡಿಸಿಕೊಳ್ಳದೆ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿಯೂ ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 179 ವಿದ್ಯಾಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 178 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜೊತೆಗೆ ಚರಣ್ ರಾಜ್ 592 ಅಂಕ ಪಡೆದುಕೊಂಡು ಎಂಟನೇ ರ‍್ಯಾಂಕ್, ನಾರಾಯಣಿ ಕಿಣಿ 590 ಅಂಕಗಳನ್ನು ಪಡೆದುಕೊಂಡು ಹತ್ತನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್.ಕೆ 593 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಜೊತೆಗೆ ಸಂಹಿತ್ ಎಸ್ ಆಚಾರ್ಯ, ಶ್ರೀಯಾ ಹಾಗೂ ರಶ್ಮೀ ೫೮೯ ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಎಂಟನೇ ರ‍್ಯಾಂಕ್ ಹಾಗೂ ಸಂಸ್ಥೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 73 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 25 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 28 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 104 ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 74ವಿದ್ಯಾಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 17ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 50 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ.
ಯಾವುದೇ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿಲ್ಲ. ವಾಣಿಜ್ಯ ವಿಭಾಗದಲ್ಲಿ ರಾನಿಯಾ ರೋಷನ್ (586), ತನುಶ್ರೀ ಎಲ್ ಪಿ (586), ಡೇರಿಲ್ ವಿನೋಲ್ ಮೋರಸ್(585), ಪವನ್ ಎಸ್ ಪೂಜಾರಿ(585), ಶ್ರೇಯಸ್ ಬಿ ಆಚಾರ್ಯ(584), ಮೊಹಮ್ಮದ್ ಬಶೀರ್ (583), ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್ (582), ಶದಾ ಇರ್ಷಾದ್ (582), ಅನ್ಸಿಫಾ ಬಾನು(580), ಶ್ರಾವ್ಯ(579), ಪ್ರೀತಿ ಶೆಟ್ಟಿ (577), ಎರ್ವಿನ್ ಡಿ’ಮೆಲ್ಲೊ(577), ಜೆಸ್ಸಿಕಾ ಲಿಯೋರಾ ಮಿನೇಜಸ್ (576), ಫಾತಿಮಾ ಝುಹಾ (575), ಸುವಿಧಾ (575), ಮನಿಟಾ ಮೈಕಲ್ (574), ಹನಿ ವೆನ್ಯಾ(573), ನತಾಶ ಪಿಂಟೊ(573), ಶ್ರವಣ್ (573), ವೆನ್ಸನ್ ಜಾಯ್ವಿನ್ ಮೆನೆಜಸ್ (573), ಫೈಝಾ ಆಯಿಷಾ (572), ಅನ್ಶ್ ಕುಮಾರ್ (571) ಶೇಕಡಾ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಲ್ವೀನಿಯಾ ಡೆಸ (582), ಅಮೂಲ್ಯ (581), ಲಿಯಾನಾ ನೇತಲ್(580), ಹನ್ಸಿಯಾ ಅಲ್ಮೇಡ (579), ಅನಘ ವಿ (578), ನವೀದ್ ಝಾಹಿದ್ ಹುಸೇನ್ (578), ಸ್ನೇಹಲ್ ಪಿಂಟೊ (577), ಸಂಜನಾ ಎಸ್ ಪಾಟ್ಕರ್ (574), ಶಾನ್ವಿ ಬಲ್ಲಾಳ್ (573), ಸೃಜನ್ ಶೆಟ್ಟಿ(573), ದಿವ್ಯಾ ಡಿಸೋಜ (571), ವಿಲ್ಶಾ ಡಿಸೋಜ (570), ನಿಹಾಲ್ ವೈ ಆಚಾರ್ಯ(570) ಶೇಕಡಾ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.
ಮುಡಾರು:ಭಾರೀ ಮಳೆಯ ಕಾರಣ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಾಳೆಗೆ (ಏ.13) ಮುಂದೂಡಿಕೆ
ಮುಡಾರು:ಹಳೆ ವಿದ್ಯಾರ್ಥಿ ಸಂಘ (ರಿ.) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇದರ ಸುವರ್ಣ ಮಹೋತ್ಸವ ಸಮಾರಂಭದ ಇಂದಿನ ಕಾರ್ಯಕ್ರಮವನ್ನು ನಾಳೆಗೆ (ಏಪ್ರಿಲ್ 13ಭಾನುವಾರ) ಮುಂದೂಡಲಾಗಿದೆ.
13.04.2025 ಭಾನುವಾರ ರಾತ್ರಿ 7.30 ರಿಂದ ಸಭಾ ಕಾರ್ಯಕಮ,ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಭಾರೀ ಮಳೆಯ ಕಾರಣದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು,ನಾಳೆ ಚಪ್ಪರ ವ್ಯವಸ್ಥೆಯೊಂದಿಗೆ ಯಥಾವತ್ತಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ಎಸ್.ಆರ್. ಹೆಬ್ರಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಚಿರಂತನ್ ಯು.ಎಸ್. 588 (98%)ಅಂಕ ಪಡೆದು ಪ್ರಥಮ ಸ್ಥಾನ, ಅಭಿಜ್ಞಾ ಎನ್. 587 (97.83%)ಅಂಕ ಪಡೆದು ದ್ವಿತೀಯ ಸ್ಥಾನ, ಚಿರಂತ್ ಎಂ.ಎ 580 (96.66%) ಅಂಕ ಪಡೆದು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 169 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 88 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ದ್ದಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅನನ್ಯ 585 (97.5%)ಅಂಕ ಪಡೆದು ಪ್ರಥಮ ಸ್ಥಾನ, ಶೇಖರ್ ಹಾಗು ಶ್ರೀ ರಕ್ಷಾ 583 (97.17%)ಅಂಕ ಪಡೆದು ದ್ವಿತೀಯ ಸ್ಥಾನ, ಶ್ರಾವ್ಯ 578 (96.33%)ಅಂಕ ಪಡೆದು ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳನ್ನು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ , ಕಾರ್ಯದರ್ಶಿ ಸಪ್ನಾ .ಎನ್ .ಶೆಟ್ಟಿ ಇವರು ಅಭಿನಂದಿಸಿದ್ದಾರೆ.
ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ಯೋಜನೆಗೆ ಅರ್ಜಿ ಆಹ್ವಾನ
ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.
ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ. ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ.
ಟಾಪ್ 10 ಜ್ಞಾನಸುಧಾದ 29 ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ : ಆಸ್ತಿ ಎಸ್ ಶೆಟ್ಟಿ ರಾಜ್ಯಕ್ಕೆ 4ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ
ವಾಣಿಜ್ಯ ವಿಭಾಗ : ಸಹನಾ ಮತ್ತು ತನ್ವಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ 2ನೇ ಸ್ಥಾನ
ಜ್ಞಾನಸುಧಾದ 724 ವಿಶಿಷ್ಟ ಶ್ರೇಣಿ
ಗಣಿತನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ‍್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್ ಶೆಟ್ಟಿ 596 ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಬಿ ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ 595 ಅಂಕಗಳೊAದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ.
ಕಾರ್ಕಳ ಜ್ಞಾನಸುಧಾದ ಮಯೂರ್ ಗೌಡ, ಭಾರ್ಗವ್ ಎಚ್ ನಾಯಕ್, ವಿಷ್ಣು ಜಿ ನಾಯಕ್ ಹಾಗೂ ಶ್ರಾವ್ಯ ವಾಗ್ಲೆ 594 ಅಂಕಗಳನ್ನು, ಹರ್ಷಿತ್ ಆರ್ ಎಚ್, ಅನ್ವಿತಾ ನಾಯಕ್, ವಿಶ್ವ ವಿನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹ ಎ ಕಾಮತ್ 593 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಉತ್ಸವ್ ಸಿ ಪಾಟೀಲ್, ಸಂಜನಾ ಶೆಣೈ ಮತ್ತು ಉಡುಪಿ ಜ್ಞಾನಸುಧಾದ ರಚಿತ್ ಜೆ.ಬಿ ಹಾಗೂ ಸೃಷ್ಟಿ 592 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಸರ್ವಜಿತ್ ಕೆ.ಆರ್, ಧನ್ಯಶ್ರೀ ಆರ್ 591 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಅನುಷ್ಕಾ ಜಿ, ಪ್ರಣವ್ ಎನ್.ಎಂ, ಶ್ರೇಯಸ್ ಕೆ, ಅನ್ವಿತಾ ಆರ್ ಕಾಮತ್, ಸುಕೃತಿ ಜಿ. ಝೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ 590 ಅಂಕವನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಹನಾ ನಾಯಕ್ ಹಾಗೂ ತನ್ವಿ ರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5ನೇ ಸ್ಥಾನಿಯಾಗಿ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ್ (591 ಅಂಕ), ಸಚಿನ್ ಸುರೇಶ್ ಶೆಣೈ (589 ಅಂಕ) ಹಾಗೂ ಖತಿಜಾತುಲ್ ರಫಿಯಾ (588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಆಧಿಕ ಪರ್ಸಂಟೇಜ್ ಗಳಿಸಿದ್ದಾರೆ.
ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 521 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 488 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗÀದಲ್ಲಿ ಪರೀಕ್ಷೆಗೆ ಹಾಜರಾದ 49ರಲ್ಲಿ 45 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 213 ವಿದ್ಯಾರ್ಥಿಗಳಲ್ಲಿ 191 ವಿಶಿಷ್ಟ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಷಯವಾರು ಪೂರ್ಣಾಂಕದಲ್ಲಿ ಗಣಿತಶಾಸ್ತ್ರದಲ್ಲಿ-144, ಜೀವಶಾಸ್ತ್ರದಲ್ಲಿ 113, ರಸಾಯನಶಾಸ್ತ್ರದಲ್ಲಿ-48, ಭೌತಶಾಸ್ತ್ರದಲ್ಲಿ-27, ಸಂಖ್ಯಾಶಾಸ್ತ್ರ-20, ಗಣಕ ಶಾಸ್ತ್ರ-37, ಮೂಲಗಣಿತ-2,
ಲೆಕ್ಕ ಶಾಸ್ತ್ರ-7, ವ್ಯವಹಾರ ಅಧ್ಯಯನದಲ್ಲಿ 21, ಸಂಸ್ಕೃತ-113 ಮತ್ತು ಕನ್ನಡ-4 ಸೇರಿದಂತೆ 536 ವಿಷಯವಾರು ಪೂರ್ಣಾಂಕ ಬಂದಿರುತ್ತದೆ.
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.
1. ASTHI S SHETTY 5962. SHREERAKSHA B N 5953. VISHWAS R ATHREYAS 5954. APOORV V KUMAR 5955. BHARGAV H N 5944.MAYUR M GOWDA 5946. SHRAVYA 5949. HARSHITHA R H 5937. VISHNU G NAYAK 59410. ANVITHA NAYAK 59311.VISHWA VINAYAK 59312. SNEHA A KAMATH 59313. UTSAV C PATEL 59214. SANJANA SHENOY 59215. RACHIT J BOLYA 59216. SRUSHTI 59217.SARVAJITH K R 59118. DHANYASHREE R 59119. ANUSHKA R GAJAKOSH 59020. PRANAV N M 59021. SHREYAS K 59023. SUKRUTI G JOSHI 59022. ANVITHA R KAMATH 59024. TANISHA SHETTY 59025. SRIHARI S G 590Co1 SAHANA NAYAK 594Co3 NAIK RAKSHA RAMACHANDRA 592Co2 TANVI RAO 594Co4 YASHASVI NAYAK 591Co5 SACHIN SURESH SHENOY 589Co6. KHATIJATUL RAAFIYA 588
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ-ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ
ಉಡುಪಿ ಜಿಲ್ಲಾ ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ
ಉಡುಪಿ:2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಶೇ.93.60ರ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ಸಾಧನೆಗೆ ಜಿಲ್ಲಾಡಳಿತದ ಮಾರ್ಗದರ್ಶನ, ಉಪನಿರ್ದೇಶಕರ ನಿರ್ದೇಶನ, ಕಾಲೇಜು ಆಡಳಿತ ಮಂಡಳಿಗಳ ಹಾಗೂ ಪೋಷಕರ ಸಹಕಾರ ಮತ್ತು ಪ್ರಾಂಶುಪಾಲರ ಸಂಘದ ಕಾರ್ಯವೈಖರಿಯು ಕಾರಣೀಭೂತವಾಗಿದೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ (596), ವಾಣಿಜ್ಯ ವಿಭಾಗದಲ್ಲಿ ಕ್ರೈಸ್ಟ್ ಕಿಂಗ್ ಕಾಲೇಜಿನ ಸುಧೀಕ್ಷಾ ಶೆಟ್ಟಿ ಮತ್ತು ವಿದ್ಯೋದಯ ಕಾಲೇಜಿನ ಪ್ರಣವಿ ಎಚ್ ಸುವರ್ಣ(595) ಹಾಗೂ ಕಲಾ ವಿಭಾಗದಲ್ಲಿ ಎಂ.ಜಿ.ಎಂ ಕಾಲೇಜಿನ ದಿವ್ಯ (586) ಅಂಕ ಪಡೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 596 ಅಂಕಗಳೊಂದಿಗೆ ಎಂ.ಜಿ.ಎಂ ಕಾಲೇಜಿನ ಭೂಮಿಕಾ ಆರ್ ಹೆಗ್ಡೆ, ಕಾರ್ಕಳ ಜ್ಞಾನಸುಧಾದ ಶ್ರೀರಕ್ಷಾ ಬಿ. ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಮತ್ತು ಉಡುಪಿ ಜ್ಞಾನಸುಧಾದ ಅಪೂರ್ವ್ ವಿ ಕುಮಾರ್ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ, ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ಕಾರ್ಕಳ ಜ್ಞಾನಸುಧಾ ಕಾಲೇಜಿನ ಸಹನಾ ನಾಯಕ್ ಹಾಗೂ ತನ್ವಿರಾವ್ ಮತ್ತು ತ್ರಿಷಾ ಕಾಲೇಜು ಕಟಪಾಡಿಯ ಪ್ರಣವಿ ಎಚ್ ಸುವರ್ಣ ದ್ವಿತೀಯ ಸ್ಥಾನಿಯಾಗಿ ಹಾಗೂ ಕಲಾ ವಿಭಾಗದಲ್ಲಿ 574 ಅಂಕದೊAದಿಗೆ ವಂಡ್ಸೆ ಸ.ಪ.ಪೂ.ಕಾಲೇಜಿನ ನವ್ಯ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಸದಸ್ಯರ ಹಾಗೂ ಪದಾಧಿಕಾರಿಗಳ ಪರವಾಗಿ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್ ಇವರು ಅಭಿನಂದಿಸಿ, ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಸಾಧಕ ವಿದ್ಯಾರ್ಥಿಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಂದು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿರುತ್ತಾರೆ.
ಸಂಘವು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಘಟಿತವಾಗಿ, ಉಪನ್ಯಾಸಕರುಗಳಿಗೆ ವಿಷಯವಾರು ಶೈಕ್ಷಣಿಕ ಕಾರ್ಯಗಾರ, ಜಿಲ್ಲಾ ವಾರ್ಷಿಕ ಕ್ರೀಡಾಕೂಟ ಆಯೋಜನೆ, ವಿವಿಧ ಪ್ರಶ್ನಾಪತ್ರಿಕೆ ತಯಾರಿ ಮತ್ತು ಹಂಚಿಕೆಯ ಜವಾಬ್ದಾರಿ, ಜಿಲ್ಲೆಯ ಪ್ರಾಂಶುಪಾಲರುಗಳಿಗೆ ‘ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಕುರಿತಂತೆ ತಜ್ಞರಿಂದ ಮಾಹಿತಿ ಕಾರ್ಯಗಾರ, ಜಿಲ್ಲೆಯ ಬೋಧಕೇತರ ಕಛೇರಿ ಸಿಬ್ಬಂದಿ ವರ್ಗಕ್ಕೆ ವ್ಯಕ್ತಿತ್ವ-ವಿಕಸನ ಶಿಬಿರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಾಂತ್ರಿಕ ಮಾಹಿತಿ ಕಾರ್ಯಗಾರ, ಅಶಕ್ತರಿಗೆ ಆರ್ಥಿಕ ಸಹಾಯ, ವಿಕಲ ಚೇತನ ಮಕ್ಕಳಿಗೆ ಧನ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಮೂಲಕ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟ ಕಾಯ್ದು, ಉಡುಪಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮುವಲ್ಲಿ ಮಹತ್ತರವಾದ ಕೊಡುಗೆ ನೀಡಿರುತ್ತದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘವು ಯೋಜನೆಗಳನ್ನು ರೂಪಿಸಿಕೊಂಡು ಒಗ್ಗಟ್ಟಾಗಿ ಕಾರ್ಯಪ್ರವೃತ್ತವಾಗಲಿದೆ ಎಂದು ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ. ಕೊಡವೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.