Home Blog Page 68

ಕಾರ್ಕಳ:ದ್ವಿತೀಯ ಪಿಯುಸಿ ಫಲಿತಾಂಶ-ಕ್ರೈಸ್ಟ್ ಕಿಂಗ್ ನ ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಐದನೇ ರ‍್ಯಾಂಕ್

0

ಕಾರ್ಕಳ:ದ್ವಿತೀಯ ಪಿಯುಸಿ ಫಲಿತಾಂಶ-ಕ್ರೈಸ್ಟ್ ಕಿಂಗ್ ನ ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಐದನೇ ರ‍್ಯಾಂಕ್

ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ಫಲಿತಾಂಶ – 595 ಅಂಕಗಳನ್ನು ಪಡೆದ ವಾಣಿಜ್ಯ ವಿಭಾಗದ ಸುಧೀಕ್ಷಾ ಶೆಟ್ಟಿ ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್
ರಾಜ್ಯಕ್ಕೆ ಐದನೇ ರ‍್ಯಾಂಕ್

ಕಾರ್ಕಳ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಂಡು ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಅಲ್ಲದೆ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.

ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಹೀಗೆ ನಾಲ್ಕೂ ವಿಷಯಗಳಲ್ಲಿ 100ಕ್ಕೆ 100ಅಂಕಗಳನ್ನು ಪಡೆದುಕೊಂಡಿದ್ದಾಳೆ. ಕಾರ್ಕಳದ ಜೋಡುರಸ್ತೆ ನಿವಾಸಿಗಳಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಶ್ರೀಮತಿ ಸುದರ್ಶಿನಿ ಶೆಟ್ಟಿ ದಂಪತಿಗಳ ಪುತ್ರಿಯಾದ ಸುಧೀಕ್ಷಾ ಶೆಟ್ಟಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟುವೂ ಆಗಿದ್ದಾಳೆ.

ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಬೋಧಕ ವೃಂದದವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

ಕಾರ್ಕಳ-ಹೆಬ್ರಿ:ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಮಂಜುನಾಥ್ ಜೋಗಿ ನೇಮಕ

0

ಕಾರ್ಕಳ-ಹೆಬ್ರಿ:ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಮಂಜುನಾಥ್ ಜೋಗಿ ನೇಮಕ

ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ ಕಾರ್ಕಳ ಇವರನ್ನು ನೇಮಿಸಲಾಗಿದೆ .

ಕಾಪು ಉಸ್ತುವಾರಿಯಾಗಿ ಮಮತ ನಾಯ್ಕ್, ಹಿರಿಯಡ್ಕ ಉಸ್ತುವಾರಿಯಾಗಿ ಲತಿಫ್, ಬೈಂದೂರು ಉಸ್ತುವಾರಿಯಾಗಿ ಪ್ರಮೋದ್ ಪೂಜಾರಿ, ವಂಡ್ಸೆ ಉಸ್ತುವಾರಿಯಾಗಿ ಸಂಜಯ್ ಆಚಾರ್ಯ, ಉಡುಪಿ ಉಸ್ತುವಾರಿಯಾಗಿ ಪ್ರವೀಣ್ ಬಾರ್ಕುರು, ಬ್ರಹ್ಮವರ ಉಸ್ತುವಾರಿಯಾಗಿ ಸ್ಟೀಫನ್ ಪ್ರಖ್ಯಾತ್, ಕುಂದಾಪುರ ಉಸ್ತುವಾರಿಯಾಗಿ ರಕ್ಷಿತ್ ಶೆಟ್ಟಿ ಹಾಗೂ ಕೋಟ ಉಸ್ತುವಾರಿಯಾಗಿ ಮೊಹಮ್ಮದ್ ಆಫ್ರಿದ್ ಇವರು ನೇಮಕಗೊಂಡಿರುತ್ತಾರೆ.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳ ಆದೇಶದಂತೆ ಪಕ್ಷದ ಬಲವರ್ದನೆಗಾಗಿ ಜಿಲ್ಲೆಯ 5 ವಿಧಾನಸಭೆ ಹಾಗೂ 10 ಬ್ಲಾಕ್ ಹಾಗೂ ಬೂತ್ ಮಟ್ಟದ ಯುವ ಕಾಂಗ್ರೆಸ್ ಕಮಿಟಿಗಳಲ್ಲಿ ಅರ್ಹ ಮತ್ತು ಪಕ್ಷ ಸಿದ್ಧಾಂತಗಳಿಗೆ ಬದ್ಧರಾಗಿರುವ ಈ ಮೇಲ್ಕಂಡ ನೂತನ ಪದಾಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.

ಪಳ್ಳಿ:ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

0

ಪಳ್ಳಿ:ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಬಂಟರ ಸಂಘ ಪಳ್ಳಿ ನಿಂಜೂರು ಹಾಗೂ ಮಹಿಳಾ ಘಟಕ ಪಳ್ಳಿ ನಿಂಜೂರು ಇದರ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರಾಮಕೃಷ್ಣ ಸಭಾಭವನ ಪಳ್ಳಿ ಇಲ್ಲಿ ನಡೆಯಿತು.ಪಳ್ಳಿ – ನಿಂಜೂರು ಬಂಟರ ಸಂಘ 10 ವರ್ಷ ಪೂರ್ಣಗೊಳಿಸಿತು. ಈ ವರ್ಷದಿಂದ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು.

ವಿಷು ಶೆಟ್ಟಿ ಅಂಬಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ,ಫೆಡರೇಷನ್ ಆಫ್ ಕ್ವಾರಿ ಅಸೋಸಿಯೇಷನ್ ನ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ,ಸಹನಾ ಗ್ರೂಪ್ ಮಾಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಂದ್ರ ಶೆಟ್ಟಿ ಕಾರ್ಕಳ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ನಿಕಟ ಪೂರ್ವಕ ಅಧ್ಯಕ್ಷರಾದ ವಿಜಯ ಎಮ್ ಶೆಟ್ಟಿ ಪಳ್ಳಿ ವಹಿಸಿದ್ದರು.ಬಂಟರ ಯಾನೆ ನಾಡವರ ಸಂಘ ಕಾರ್ಕಳ ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ,ಉಡುಪಿ ಗ್ರಾಮೀಣ ಬಂಟರ ಸಂಘ, ಕುಂತಲ ನಗರ ಕಾರ್ಯಧ್ಯಕ್ಷ ಪದ್ಮನಾಭ ಹೆಗ್ದೆ ಮರ್ಣೆ,  ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಪೂರ್ಣಿಮ ಏನ್ ಹೆಗ್ಡೆ ಕುಂಟಾಡಿ, ಪಳ್ಳಿ – ನಿಂಜೂರು ಬಂಟರ ಸಂಘದ ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ಹಾಗು ಮಹಿಳಾ ಘಟಕದ ಅಧ್ಯಕ್ಷರಾದ ಕಾಂತಿ ದಿನೇಶ ಶೆಟ್ಟಿ ಪಳ್ಳಿ, ಜಗದೀಶ್ ಹೆಗ್ಡೆ, ಕುಂಟಾಡಿ ಕೃಷ್ಣರಾಜ ರೈ, ಕಾರ್ಕಳ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ, ಪಳ್ಳಿ ನಿಂಜೂರು ಬಂಟರ ಸಂಘ ಹಾಗು ಪಳ್ಳಿ – ನಿಂಜೂರು ಮಹಿಳಾ ಘಟಕ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಮತ್ತು ಇನ್ನಿತರ ಊರ ಹಾಗು ಪರವೂರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಪಳ್ಳಿ – ನಿಂಜೂರು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮನೋಹರ ಶೆಟ್ಟಿ ಪಳ್ಳಿ ಸ್ವಾಗತಿಸಿದರು.ಸುಜಾತ ಮೋಹನ್ ಶೆಟ್ಟಿ ನಿಂಜೂರು ವಂದಿಸಿದರು.ಚಿತ್ರ ವಿನಯ ಶೆಟ್ಟಿ ನಿಂಜೂರು ಕಾರ್ಯಕ್ರಮ ನಿರೂಪಿಸಿದರು.ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ನಿಂಜೂರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.ಪಳ್ಳಿ – ನಿಂಜೂರು ಗ್ರಾಮದ ಬಂಟ ಸಮಾಜದವರೆಲ್ಲರೂ ಬಾಗವಹಿಸಿದ್ದರು

ಮತ್ತಾವು ಸೇತುವೆಗೆ ಅನುದಾನ ಮಂಜೂರು,ನಿರಂತರ ಹೋರಾಟಕ್ಕೆ ಸಂದ ಜಯ-ಶ್ರೀಧರ ಗೌಡ ಈದು

0

ಮತ್ತಾವು ಸೇತುವೆಗೆ ಅನುದಾನ ಮಂಜೂರು. ನಿರಂತರ ಹೋರಾಟಕ್ಕೆ ಸಂದ ಜಯ-ಶ್ರೀಧರ ಗೌಡ ಈದು

ಕಳೆದ ಎರಡು ದಶಕಗಳಿಂದ ಅರಣ್ಯ ಮೂಲ ಬುಡಕಟ್ಟು ಮಲೆಕುಡಿಯ ಸಮುದಾಯದ ಹಾಡಿಗೆ ಸಂಪರ್ಕ ಕಲ್ಪಿಸಲು ಸೇತುವೆಯ ನಿರ್ಮಾಣಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಅರಣ್ಯ ಇಲಾಖೆಯ ಕಾನೂನು ತೊಡಕುಗಳಿದ್ದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣದ ಕನಸು ನನಸಾಗಲೆ ಇಲ್ಲ.

ಕೆಲವು ವರ್ಷದ ಹಿಂದೆ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಇದೀಗ ಅನುಮತಿ ದೊರೆತ ಕಾರಣದಿಂದ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿರುವುದು ಸಂತಸ ತಂದಿದೆ. ಸಹಕರಿಸಿದ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಅವರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಧನ್ಯವಾದ ತಿಳಿಸಿದ್ದಾರೆ.

ಕಾರ್ಕಳ:ಮಹಿಳೆಯ ಕರಿಮಣಿ ಸರಕ್ಕೆ ಕನ್ನ-ಆರೋಪಿ ಬಂಧನ

0

ಕಾರ್ಕಳ:ಮಹಿಳೆಯ ಕರಿಮಣಿ ಸರಕ್ಕೆ ಕನ್ನ-ಆರೋಪಿ ಬಂಧನ

ಕಾರ್ಕಳ:ಬೆಳುವಾಯಿ ಕರಿಯನಂಗಡಿ ನಡೆದುಕೊಂಡು ಹೋಗುತಿದ್ದ ಮಹಿಳೆಯೋರ್ವರಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ‘ಬೆಳುವಾಯಿಗೆ ದಾರಿ ಯಾವುದು’ ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.

ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.ಕರಿಮಣಿ ಸರಕ್ಕೆ ಕೈ ಹಾಕುವಾಗ ಪ್ರತಿಭಟಿಸಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ.ದೂಡಿದ ರಭಸಕ್ಕೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.

ಸದ್ಯದಲ್ಲೇ ವಿಸ್ತೃತ ಮಾಹಿತಿ…

ಹೊಸ್ಮಾರು:ಟಯರ್ ಪಂಚರ್-ಬರೆಗೆ ಗುದ್ದಿದ ಬಸ್

0

ಹೊಸ್ಮಾರು:ಟಯರ್ ಪಂಚರ್-ಬರೆಗೆ ಗುದ್ದಿದ ಬಸ್

ಕಾರ್ಕಳ, ಮಂಗಳವಾರ ಸಂಜೆ ಧರ್ಮಸ್ಥಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾಸಗಿ ಬಸ್ ಪೆರ್ನೋಡಿಯಲ್ಲಿ ತಯಾರ್ ಪಂಚರ್ ಆಗಿ ನಿಯಂತ್ರಣ ತಪ್ಪಿ ಪಕ್ಕದ ಬರೆಗೆ ಗುದ್ದಿದೆ.

ಟಯರ್ ಪಂಚರ್ ಆದ ಅನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬಿಟ್ಟು ಹೋಗಿ ಬರೆಗೆ ಗುದ್ದಿದೆ.ಬಸ್ಸಿನಲ್ಲಿ 15 ಮಂದಿ ಪ್ರಯಾಣಿಕರಿದ್ದು,ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಅಜೆಕಾರು:ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ-ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು

0

ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ:ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು

ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ(44) ಕೊಲೆ ಪ್ರಕಣದ ಆರೋಪಿ ದಿಲೀಪ್ ಹೆಗ್ಡೆ(28)ಗೆ ರಾಜ್ಯ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರ ಪೀಠ ಕಾರ್ಕಳ ಮಾ.4ರಂದು ತಿರಸ್ಕರಿಸಿತ್ತು.ಈ ಹಿನ್ನಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆರೋಪಿ ದಿಲೀಪ್ ಹೆಗ್ಡೆಗೆ ಜಾಮೀನು ನೀಡಿದೆ.
ಆರೋಪಿ ಪರ ನ್ಯಾಯವಾದಿ ನಿಶ್ಚಿತ್ ಕುಮಾರ್ ಶೆಟ್ಟಿ ವಾದಿಸಿದ್ದರು.

2024ರ ಅ.20ರಂದು ಬಾಲಕೃಷ್ಣ ಪೂಜಾರಿ ಅವರನ್ನು ಅವರ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೆಗೈದಿದ್ದರು.ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ಕಾಂಗ್ರೆಸ್ ವಾರ್ಡ್ ಸಭೆ- ಹಿರಿಯರಿಗೆ ಸನ್ಮಾನ

0

ಕಲ್ಯಾ ಗ್ರಾಮ ವಾರ್ಡ್ ಕಾರ್ಯಕರ್ತರ ಸಭೆಯು
ಮಾರ್ಚ್ 29 ಅದಿತ್ಯವಾರ ಗ್ರಾಮೀಣ ಸಮಿತಿಯ ಅದ್ಯಕ್ಷ ರಘುಪತಿ ಪೂಜಾರಿಯವರ ಮನೆಯಲ್ಲಿ ಜರುಗಿತು.

ಕಾಂಗ್ರೆಸ್ ‌ಮುಖಂಡ ಉದಯ್ ಶೆಟ್ಟಿ ಮಾತನಾಡಿ‌ ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಆಡಳಿತವನ್ನು ನೀಡುತಿದೆ, ಇದರ ಪರಿಣಾಮ ಜನರ ಜೀವನ ಮಟ್ಟ ಸುಧಾರಿಸಿ ಎಲ್ಲರೂ ನೆಮ್ಮದಿಯ ಬದುಕು ಕಟ್ಟುವಂತಾಗಿದೆ, ಸ್ಥಳಿಯ ಸಂಸ್ಥೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಹಾಗಾಗಿ ಸ್ಥಳಿಯ ಕಾಂಗ್ರೆಸ್ ಅಡಳಿತಕ್ಕಾಗಕ ಪಕ್ಷ ಸಂಘಟನೆಗೆ ಸಹಕಾರ ನೀಡುವಂತೆ ಮನವಿ‌ ಮಾಡಿದರು.

ಬ್ಲಾಕ್ ಅದ್ಯಕ್ಷ ಶುಭದರಾವ್ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸ್ಥಳಿಯ‌ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ‌ಪರಿಹರಿಸುವ ನಿಟ್ಟಿನಲ್ಲಿ‌ ಗ್ರಾಮೀಣ ಸಮಿತಿಗೆ ಸರ್ವ ಸಹಕಾರ‌ ನೀಡುತ್ತೇವೆ. ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದರು.

ಪಕ್ಷದ ಹಿರಿಯರಾದ ಅಚ್ಚುತ ಆಚಾರ್ಯ, ಅರುಣ ಜೋಗಿ, ಮತ್ತು ಸಾಧಕ ಯುವ ಕಾರ್ಯಕರ್ತ ರಿತಿನ್ ಪೂಜಾರಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಬದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಪಕ್ಷದ ಪಧಾದಿಕಾರಿಗಳಾದ ಸೋಮನಾಥ ನಾಯಕ್, ದೀಪಕ್ ಕೋಟ್ಯಾನ್, ಸಂತೋಷ್ ದೇವಾಡಿಗ, ಕಿರಣ್ ನಾಯಕ್, ಮಂಜುನಾಥ್ ಜೋಗಿ, ಅವಿನಾಶ್ ಶೆಟ್ಟಿ ಬೋಳ, ಯೋಗೀಶ್ ಬೋಳ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮೀಣ ಸಮಿತಿಯ ಅದ್ಯಕ್ಷ ರಘುಪತಿ ಪೂಜಾರಿ ಸ್ವಾಗತಿಸಿದರು ಗ್ಯಾರಂಟಿ ಸಮಿತಿ ಸದಸ್ಯ ಯತೀಶ್ ನಿರೂಪಿಸಿ ಬೂತ್ ಅದ್ಯಕ್ಷ ಸತೀಶ್ ಧನ್ಯವಾದವಿತ್ತರು.

ಈ ವಾರವೇ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಸಾಧ್ಯತೆ

0

ಹೊಸದಿಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುತ್ತಾರೆಯೇ ಅಥವಾ ಹೊಸಬರ ನೇಮಕ ಆಗಲಿದೆಯೇ ಎಂಬ ಪ್ರಶ್ನೆಗೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

ಜತೆಗೆ ಬಿಜೆಪಿಯ ರಾಷ್ಟೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಅಧಿಕಾರಾವಧಿಯೂ ಮುಕ್ತಾಯ ಆಗಿರುವುದರಿಂದ ಏಪ್ರಿಲ್ ಅಂತ್ಯದೊಳಗೆ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ ಇದೆ.

ಇದಕ್ಕೆ ಮುನ್ನ ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಬಿಜೆಪಿಯ ವರಿಷ್ಠರು ಇನ್ನೊಂದು ವಾರದಲ್ಲಿ ಕರ್ನಾಟಕ,ಉ.ಪ್ರದೇಶ,ತ.ನಾಡು,ಪ.ಬಂಗಾಲ ರಾಜ್ಯಗಳ ಬಿಜೆಪಿ ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಚಿನ್ನದ ಬೆಲೆ ಗಗನಕ್ಕೆ:10 ಗ್ರಾಂ ಚಿನ್ನಕ್ಕೆ ಈಗ 94,150 ರೂ.

0

ಹೊಸದಿಲ್ಲಿ:ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಳೆಯ ನಾಗಾಲೋಟ ಮುಂದುವರೆದಿದೆ.

ಹೊಸದಿಲ್ಲಿಯಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ 2 ಸಾವಿರ ರೂ. ಏರಿಕೆ ಆಗಿದೆ.ಇದರಿಂದಾಗಿ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 94,150 ರೂ. ಆಗಿದೆ.

ಶುಕ್ರವಾರ ಇದರ ಬೆಲೆ 92,150 ರೂ.ಗಳಾಗಿತ್ತು. ಬೆಂಗಳೂರಿನಲ್ಲಿ 10 ಗ್ರಾಂ. ಚಿನ್ನದ ಬೆಲೆ 92,840 ರೂ.ಗೆ ತಲುಪಿದೆ.