Home Blog Page 79

ಅ.11-12:ಎರಡು ದಿನಗಳ ‘ಬಜಗೋಳಿ ದಸರಾ’ ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

0

ಅ.11-12:ಎರಡು ದಿನಗಳ ‘ಬಜಗೋಳಿ ದಸರಾ’

ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಬಜಗೋಳಿ ಇದರ ವತಿಯಿಂದ ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವ ‘ಬಜಗೋಳಿ ದಸರಾ’ ವೇದಮೂರ್ತಿ ಎಂ.ರಾಮ್ ಭಟ್ ಅರ್ಚಕರು ಮುಡ್ರಾಲು ಇವರ ನೇತೃತ್ವದಲ್ಲಿ ಬಜಗೋಳಿ ಪೇಟೆಯಲ್ಲಿರುವ ಪಂಚಾಯತ್ ಮೈದಾನದಲ್ಲಿ ದಿನಾಂಕ 11-10-2024 ಶುಕ್ರವಾರ ಮತ್ತು 12-10-2024 ಶನಿವಾರದಂದು ನಡೆಯಲಿದೆ.

ಕಾರ್ಯಕ್ರಮದ ವಿವರಗಳು.

ದಿನಾಂಕ 11.02.2024 ಶುಕ್ರವಾರ
ಬೆಳಿಗ್ಗೆ ಗಂಟೆ 7-15ಕ್ಕೆ:ವಿಗ್ರಹ ತರುವುದು(ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ)
ಪೂರ್ವಾಹ್ನ ಗಂಟೆ 8-00ಕ್ಕೆ:ಅಪ್ಪಾಯಿ ಬಸದಿ ಬಳಿಯಿಂದ ವಿಗ್ರಹದ ಪುರಪ್ರವೇಶ ಮೆರವಣಿಗೆ
ಪೂರ್ವಾಹ್ನ ಗಂಟೆ 9-00ಕ್ಕೆ:ಗಂಟೆಗೆ ವಿಗ್ರಹದ ಪ್ರತಿಷ್ಠಾಪನೆ
ಪೂರ್ವಾಹ್ನ ಗಂಟೆ 9-30ರಿಂದ ಭಜನಾ ಕಾರ್ಯಕ್ರಮ

ಪೂರ್ವಾಹ್ನ ಗಂಟೆ 11.00ರಿಂದ ಧಾರ್ಮಿಕ ಸಭೆ ನಡೆಯಲಿದೆ.

ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 1.00 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಗಂಟೆ 2.00ರಿಂದ 3.00ರ ವರೆಗೆ ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,3.00ರಿಂದ 6.00ರ ವರೆಗೆ ಬಜಗೋಳಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,4.30ರಿಂದ 6.00ರ ವರೆಗೆ ಓಂಕಾರ ಭಜನಾ ಮಂಡಳಿ ಕಾಬೆಟ್ಟು ಕಾರ್ಕಳ ಇವರಿಂದ ಭಕ್ತಿ ಸುಧೆ, 6.00ರಿಂದ 7.00ವರೆಗೆ ಸಭಾ ಕಾರ್ಯಕ್ರಮ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾರ್ಲರ್ಶಿಪ್ ವಿತರಣಾ ಕಾರ್ಯಕ್ರಮ,7.00ರಿಂದ ಮಹಾಪೂಜೆ 7.300 ರಂಗಪೂಜೆ 8.00ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8.30ರಿಂದ 9.30ರ ವರೆಗೆ ತೆಂಕುತಿಟ್ಟು ಯಕ್ಷಗಾನ ವೈಭವ ಹಾಗೂ,9.30 ರಿಂದ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಮಣಿಕೋಟೆ ಬಾಗಿಲು ಸಾರಥ್ಯದ ಭಕ್ತಿ ಪ್ರಧಾನ ವಿಭಿನ್ನ ಶೈಲಿಯ ರಂಘ ವಿನ್ಯಾಸದ ಕುತೂಹಲ ಭರಿತ ನಾಟಕ ಕದಂಬ ಪ್ರದರ್ಶನಗೊಳ್ಳಲಿದೆ.

ದಿನಾಂಕ 12.02.2024 ಶನಿವಾರ

ಪೂರ್ವಾಹ್ನ ಗಂಟೆ 7-15ಕ್ಕೆ ಅಲಂಕಾರ ಪೂಜೆ
ಪೂರ್ವಾಹ್ನ ಗಂಟೆ 9-00ಕ್ಕೆ ಕಳಸ ಶುದ್ದಿ
ಪೂರ್ವಾಹ್ನ ಗಂಟೆ 10.00ರಿಂದ ಮುದ್ದು ಶಾರದೆ ಮತ್ತು ಮುದ್ದು ಕೃಷ್ಣ ಸ್ಪರ್ಧೆಗಳು
ಪೂರ್ವಾಹ್ನ ಗಂಟೆ 11.30ರಿಂದ 12.30ರ ವರೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ
12.30ರಿಂದ ಮಹಾಪೂಜೆ ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಗಂಟೆ 2.00ರಿಂದ ತುಳುನಾಡ ಗಾನ ಗಂಧರ್ವ ಕಲರ್ಸ್ ಕನ್ನಡ ಖ್ಯಾತಿಯ ಜಗದೀಶ್ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ, ಸಂಜೆ 4.30ರಿಂದ ವಿಸರ್ಜನಾ ಪೂಜೆ, ಹುಲಿ ಕುಣಿತ,ಸಂಜೆ 5.30ರಿಂದ ವಿವಿಧ ವಿಶೇಷ ತಂಡಗಳೊಂದಿಗೆ ವಿಜೃಂಭಣೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.

 

 

 

ತಳಮಟ್ಟದ ಗ್ರಾಮೀಣಾಭಿವೃದ್ಧಿಯ ಗುರಿಸಾಧನೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ- ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆ

0

ತಳಮಟ್ಟದ ಗ್ರಾಮೀಣಾಭಿವೃದ್ಧಿಯ ಗುರಿಸಾಧನೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಪೂರ್ವತಯಾರಿಯ ನಿಮಿತ್ತ ನಡೆದ ಗ್ರಾಮ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತಾಡುತ್ತಿದ್ದರು.
ಕಾಂಗ್ರೆಸ್ ಸಾಮಾಜಿಕ ಕಾಳಜಿಯ ಕಾರ್ಯಸಾಧನೆಯ ಬದ್ಧತೆಯ ಮೇಲೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹಾಗೂ ಸಹಕಾರೀ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ರಾಜು ಪೂಜಾರಿ ಯವರನ್ನು ಚುನಾವಣಾ ಕಣಕ್ಕಿಳಿಸಿದೆ. ಗ್ರಾಮ ಪಂಚಾಯತ್ ಸದಸ್ಯನಾಗಿ ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯ ಅಧ್ಯಕ್ಷನಾಗಿ ಅವಿಭಜಿತ ದ.ಕ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿ ಕೊಟ್ಟವರು ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ವಿನಯ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತಾಡಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಈ ಭಾರಿ ನಮ್ಮ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಎಂದು ಕರೆನೀಡಿದರು.
ಅಭ್ಯರ್ಥಿ ರಾಜು ಪೂಜಾರಿ ಮಾತಾಡಿ ತನ್ನ ಸಾಧನೆಗಳನ್ನು ಕಾರ್ಯಕರ್ತರ ಮುಂದಿಟ್ಟು ಮತಯಾಚಿಸಿ ತನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಖೆಬೈಲ್, ಕೆಪಿಸಿಸಿ ಉಸ್ತವಾರಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಿರಿ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಸಯಿಫುದ್ದೀನ್ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಸಂದರ್ಭೋಜಿತ ಮಾತಾಡಿ ವಂದನಾರ್ಪಣೆ ಗೈದರು.

ಡಾ| ಅರುಣ್‌ ಉಳ್ಳಾಲ ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ-ರಮಿತಾ ಶೈಲೇಂದ್ರ ಕಾರ್ಕಳ

0

ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್‌ ಉಳ್ಳಾಲ ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ.

ಉಳ್ಳಾಲ ತಾಲೂಕಿನ ಕಿನ್ಯ ಬೆಳರಿಂಗೆಯ ಕೇಶವ ಶಿಶುಮಂದಿರದಲ್ಲಿ ನವದಂಪತಿಗಳ ಸಮಾವೇಶದಲ್ಲಿ ಹಿಂದೂ ವಿಚಾರ ಪದ್ಧತಿಗಳ ಮತ್ತು ಕೌಟುಂಬಿಕ ಸಂಗತಿಗಳ ಬಗ್ಗೆ ಬೋಧನೆ ಮಾಡುತ್ತ, ಹಿಂದೂ ಸಮಾಜದ ಮಕ್ಕಳು ಹಿಂದೂ ಸಂಸ್ಕೃತಿಯ ಸಂಸ್ಕಾರ ನೀಡುವ ಶಾಲೆಗಳಿಗೆ ಹೋದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೆಪ ಮಾಡಿಕೊಂಡು ಅವರ ಮೇಲೆ ಕೇಸು ದಾಖಲಿಸಿಸಲಾಗಿದೆ.

ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡಿದ ಉಪನ್ಯಾಸಕರ ಮೇಲೆ ಕೇಸು ದಾಖಲು ಮಾಡುವ ಮೂಲಕ, ಸರಕಾರ ಕೂಡ ಸಮಾಜದಲ್ಲಿ ಅಶಾಂತಿ, ಅಸಮಾನತೆಗೆ ಪ್ರೋತ್ಸಾಹಿಸುವವರ ಪರ ನಿಂತಿರುವುದು ಇದರಿಂದ ಸ್ಪಷ್ಟವಾಗಿದೆ, ದಾಖಲಿಸಿಕೊಂಡ ಕೇಸ್‌ ಅನ್ನು ತಕ್ಷಣವೇ ವಾಪಸ್ ತೆಗೆದುಕೊಳ್ಳಬೇಕು.

ಮಂಗಳೂರು ಪೊಲೀಸರು ಸ್ವಯಂ ಪ್ರೇರಿತ ಕೇಸನ್ನು ದಾಖಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಖುಷಿ ಪಡಿಸುವ ಉದ್ದೇಶ ಹೊಂದಿದೆ. ಈ ಹಿಂದೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ರಾಜ್ಯ ಭವನಕ್ಕೆ ನುಗ್ಗುತ್ತೇವೆ ಎಂದು ಹೇಳಿಕೆ ಕೊಟ್ಟರೂ ಅವರ ಮೇಲೆ ಪ್ರಕರಣ ದಾಖಲಸಿಕೊಳ್ಳದೆ, ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡುವವರ ಬಗ್ಗೆ ಕೇಸು ದಾಖಲಿಸಲು ತೋರಿಸುವ ಆಸಕ್ತಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಿರಂತರ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ನನ್ನ ದಿಕ್ಕಾರವಿದೆ. ಡಾ ಅರುಣ್ ಉಳ್ಳಾಲ ಅವರ ಮೇಲೆ ಕೇಸು ದಾಖಲಿಸಿದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ ಅವರು ತಿಳಿಸಿದ್ದಾರೆ

‘ಕಾರ್ಕಳ ಟೈಗರ್ಸ್’ ಅಬ್ಬರಕ್ಕೆ ಸಜ್ಜಾದ ವೇದಿಕೆ ಇಂದು ಊದು ಪೂಜೆ ನಾಳೆ (ಅ.5) ಪಿಲಿ ರಂಗ್ ದೈಸಿರ

0

‘ಕಾರ್ಕಳ ಟೈಗರ್ಸ್’ ಅಬ್ಬರಕ್ಕೆ ವೇದಿಕೆ ಸಜ್ಜಾದ ವೇದಿಕೆ

ಇಂದು ಊದು ಪೂಜೆ ನಾಳೆ ಪಿಲಿ ರಂಗ್ ದೈಸಿರ

ಪಶ್ಚಿಮ ಘಟ್ಟದ ತಪ್ಪಲಲ್ಲಿ ಹುಲಿ ಹೆಜ್ಜೆ…
ಅಕ್ಟೋಬರ್ ೪ ಹಾಗೂ ೫ ರಂದು ಪಿಲಿ ರಂಗ್ ದೈಸಿರ

ಕಾರ್ಕಳದಲ್ಲಿ ಈ ವರ್ಷದಲ್ಲಿ ಕಾರ್ಕಳ ಟೈಗರ್ಸ್ ಬಹಳ ಸದ್ದು ಮಾಡತೊಡಗಿದೆ. ಈ ಕಾರ್ಕಳ ಟೈಗರ್‍ಸ್‌ನ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗವು ಇಂದು (ಅಕ್ಟೋಬರ್ 4) ಹಾಗೂ ನಾಳೆ (ಅಕ್ಟೋಬರ್ 5) ಕಾರ್ಕಳದಲ್ಲಿ ಪಿಲಿ ರಂಗ್ ದೈಸಿರ ಎಂಬ ವಿಶೇಷ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದೆ.

ಕಾರ್ಕಳ ಟೈಗರ್ಸ್ ನ ಚಿಂತನೆಗಳೇ ವಿಶೇಷವಾದುದು. ಕಾರ್ಕಳದಲ್ಲಿನ ಜನರನ್ನು ರಾಜಕೀಯ ಮಾತ್ರವಲ್ಲ ಸಮಾಜ ಸೇವೆಯ ಮೂಲಕವೂ ತಲುಪಲು ಸಾಧ್ಯವಿದೆ ಎಂಬುದನ್ನು ಈ ಸಂಘಟನೆ ಜನರಿಗೆ ಮನದಟ್ಟು ಮಾಡ ಹೊರಟಿರುವುದೇ ಕಾರ್ಕಳದ ವಿಶೇಷವಾಗಿದೆ.

2023ನೇ ಸಾಲಿನ ಡಿಸೆಂಬರ್ ತಿಂಗಳ 10ನೇ ತಾರೀಕಿನಂದು ಮಕ್ಕಳಿಗೆ ಹುಲಿವೇಷ ಕಲಿಸಬೇಕೆಂಬ ನಿಟ್ಟಿನಲ್ಲಿ ಆರಂಭಗೊಂಡಿತು ಈ ಟೈಗರ್ಸ್ ಸಂಘಟನೆ.ಕಾರ್ಕಳದಲ್ಲಿ ಬಹಳಷ್ಟು ಪ್ರಖ್ಯಾತಿ ಪಡೆದಿರುವ ಗೇರುಬೀಜ ಉದ್ಯಮಿ ಬೋಳ ಪ್ರಶಾಂತ್ ಕಾಮತ್‌ರ ಮಿತ್ರರು ಅವರ ಅಭಿಮಾನಿ ಬಳಗವನ್ನು ಮಾಡಿ ಕೊಂಡು ಈ ವಿಶೇಷ ಸಂಘಟನೆ ಕಟ್ಟಲು ಮುನ್ನಡಿ ಇಟ್ಟಿರುವುದೇ ಈ ಸಂಘಟನೆ ಇಂದು ಕಾರ್ಕಳದಲ್ಲಿ ಪ್ರಬಲಗೊಳ್ಳಲು ಕಾರಣವಾಗಿದೆ.

ಆರಂಭಗೊಂಡ ಕೇವಲ ಹತ್ತೇ ತಿಂಗಳಲ್ಲಿ ಸುಮಾರು 75 ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದ ಹೆಗ್ಗಳಿಕೆ ಈ ಸಂಘಟನೆಯದ್ದು. ವಿದ್ಯಾರ್ಥಿಗಳಿಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಕಾರ, ಸಂಸ್ಕ್ರತಿ ಉಳಿಸುವ ನಿಟ್ಟಿನಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಈ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ.

ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುವ ಮೂಲಕ ಈ ಸಂಘಟನೆ ಜನಾನುರಾಗಿಯಾಗಿದೆ. ಒಂದರ್ಥದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಸೇವೆ ಮಾಡುವುದಲ್ಲ, ಸಾಮಾಜಿಕ ಸೇವೆಯ ಮೂಲಕವೂ ಜನರನ್ನು ತಲುಪಲು ಸಾಧ್ಯ ವಾಗುತ್ತದೆ ಎಂಬುದನ್ನು ಈ ಸಂಘಟನೆ ತೋರಿಸಿ ಕೊಟ್ಟಿರುವುದು ನಿಜಕ್ಕೂ ಎಲ್ಲರೂ ಹೆಮ್ಮೆ ಪಡ ಬೇಕಾದ ವಿಚಾರ.

ಕಾರ್ಯಕ್ರಮಗಳು:ಎರಡು ದಿನಗಳಲ್ಲಿ ಕಾರ್ಕಳದಲ್ಲಿ ಪಿಲಿ ರಂಗ್ ದೈಸಿರ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 4 ರಂದು ಶುಕ್ರವಾರ ಸಂಜೆ ಕಾರ್ಕಳ ಸಾಲ್ಮರದ ಇಂದ್ರ ಪ್ರಸ್ಥ (ಗುರುದೀಪ್ ಗಾರ್ಡನ್)ನಲ್ಲಿ ಸಂಜೆ ಗಂಟೆ 6 ರಿಂದ ಊದು ಪೂಜೆ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳಿಗೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳ ಬೇಕಿದೆ.ಅಕ್ಟೋಬರ್ 5 ರಂದು ಕಾರ್ಕಳದ ಅನಂತ ಶಯನದಿಂದ ಬಂಡಿ ಮಠದವರೆಗೆ ಶೋಭಾ ಯಾತ್ರೆ ನಡೆಯಲಿದೆ ಈ ಶೋಭ ಯಾತ್ರೆಯು ಕಾರ್ಕಳದಲ್ಲಿ ಬಹಳಷ್ಟು ಮಂದಿ ಜನರನ್ನು ಆಕರ್ಷಿಸಲಿದೆ.
ಈ ಮೆರವಣಿಗೆಯಲ್ಲಿ 100 ಹುಲಿ ವೇಷಧಾರಿಗಳು ೨2 ಟ್ರೈಲರ್ ವಾಹನದಲ್ಲಿ ಅಬ್ಬರಿಸಲಿದ್ದಾರೆ.5 ವಾಹನಗಳಲ್ಲಿ ಸಂಸ್ಕೃತಿಯುಕ್ತ ನವ ದುರ್ಗೆ, ಶಾರದಾ, ಭಾರತ ಮಾತೆ, ಶಿವಾಜಿ, ಸಾವರ್ಕರ್ ಹೀಗೆ ಹಲವಾರು ಸ್ಥಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿದೆ.ಮೆರವಣಿಗೆ ಬಂಡಿ ಮಠದಲ್ಲಿ ಸಮಾಪನ ಗೊಳ್ಳಲಿದ್ದು ಅಲ್ಲಿ ಹುಲಿ ನೃತ್ಯ ಪ್ರದರ್ಶನಗೊಳ್ಳಲಿದೆ.

ಬೋಳ ಪ್ರಶಾಂತ್ ಕಾಮತ್
ತೆರೆ ಮರೆಯಲ್ಲಿ ಸಮಾಜ ಸೇವೆ ಮಾಡುತ್ತಿದ್ದ ಬೋಳ ಪ್ರಶಾಂತ್ ಕಾಮತ್ ಎಂಬ ಯುವಕನನ್ನು ಸಮಾಜ ಸೇವೆಗೆ ತರಲೇ ಬೇಕೆಂಬ ಪಣ ತೊಟ್ಟ ಅವರ ಹಿತೈಷಿಗಳ ಪ್ರಯತ್ನವೇ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್‍ಸ್‌ನ ಆರಂಭಕ್ಕೆ ಕಾರಣವಾಗಿದೆ.

ಕಾರ್ಕಳದಲ್ಲಿ ಜನ ಸಂಘ ಹಾಗೂ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಲು ನಿರಂತರ ಹೋರಾಟ ಮಾಡಿದವರು ಕಾರ್ಕಳದ ಬೋಳ ಪ್ರಭಾಕರ ಕಾಮತ್‌ರು. ಬೋಳ ಪ್ರಭಾಕರ ಕಾಮತ್ ಎಂದರೆ ಕಾರ್ಕಳ ತಾಲೂಕು ಮಾತ್ರವಲ್ಲದೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಪ್ರಭಾವೀ ಹೆಸರು. ಕಾರ್ಕಳದಲ್ಲಿ ಬಿಜೆಪಿ ಪಕ್ಷವು ಪರಿಣಾಮಕಾರಿಯಾಗಿ ಇಂದಿನ ಮಟ್ಟದಲ್ಲಿ ಸಾಗ ಬೇಕಾದರೆ ಅವರು ಅಂದಿನ ದಿನಗಳಿಂದಲೂ ಮಾಡಿದ ಹೋರಾಟಕ್ಕೆ ಯಾರು ಕೂಡಾ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ.

ಅವರ ಪಕ್ಷ ಸಿದ್ದಾಂತ, ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಬಹಳ ಅಗತ್ಯವಾದುದಾಗಿದೆ. ಅವರ 4ಮಂದಿ ಮಕ್ಕಳಲ್ಲಿ ಬೋಳ ಶ್ರೀನಿವಾಸ ಕಾಮತ್ ಹಾಗೂ ಬೋಳ ಪ್ರಶಾಂತ್ ಕಾಮತ್‌ರು ಸಾಮಾಜಿಕ ಕ್ಷೇತ್ರದಲ್ಲಿ ಬಹಳ ಪ್ರಮುಖವಾದವರು. ಅವರಲ್ಲಿ ಬೋಳ ಪ್ರಶಾಂತ್ ಕಾಮತ್‌ರ ಮಿತ್ರರು ಒಗ್ಗೂಡಿ ಬೋಳ ಪ್ರಶಾಂತ್ ಕಾಮತ್‌ರು ತೆರೆ ಮರೆಯಲ್ಲಿ ಮಾಡುತ್ತಿದ್ದ ಸಮಾಜ ಸೇವೆಯನ್ನು ಸಮಾಜದ ಮುಂದಿಡುವ ಪ್ರಯತ್ನವೇ ಈ ಸಂಘಟನೆಯ ಉಗಮಕ್ಕೆ ಕಾರಣವಾಗಿದೆ.

 

ಜೋಡುರಸ್ತೆ A1ಸೂಪರ್ ಮಾರ್ಟ್ ನಲ್ಲಿ ನವರಾತ್ರಿ-ದೀಪಾವಳಿ ಆಫರ್ ಲಕ್ಕಿ ಕೂಪನ್ ಮೂಲಕ ವಾಷಿಂಗ್ ಮೆಷಿನ್ ಜತೆಗೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.

0

A-1ಸೂಪರ್ ಮಾರ್ಟ್ ಜೋಡುರಸ್ತೆ ಯಲ್ಲಿ ನವರಾತ್ರಿ-ದೀಪಾವಳಿ ಆಫರ್.

ಲಕ್ಕಿ ಕೂಪನ್ ಮೂಲಕ ವಾಷಿಂಗ್ ಮೆಷಿನ್ ಜತೆಗೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.
ಗ್ರಾಹಕರು 1000 ರೂ. ಮೇಲ್ಪಟ್ಟು ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿದರೆ ವಾಷಿಂಗ್ ಮೆಷಿನ್ ಸೇರಿದಂತೆ ಹಲವು ಬಹುಮಾನ ಗೆಲ್ಲುವ ಸುವರ್ಣಾವಕಾಶ.

A1 ಸೂಪರ್ ಮಾರ್ಟ್ ಜೋಡುರಸ್ತೆಯಲ್ಲಿ ದಸರಾ ದೀಪಾವಳಿ ಆಫರ್ ಜೊತೆಗೆ “ಬಿಗ್ ವಿನ್“ಆಫರ್

ಕಾರ್ಕಳ ಜೋಡುರಸ್ತೆಯಲ್ಲಿರುವ A1 ಸೂಪರ್ ಮಾರ್ಟ್ ನಲ್ಲಿ ದಸರಾ ದೀಪಾವಳಿ ಹಾಗು ಬಿಗ್ ವಿನ್ ಆಫರ್ ನಡೆಯುತ್ತಿದೆ.ಮನೆಗೆ ಬೇಕಾಗಿರುವ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಬಂಪರ್ ಆಫರ್ ಲಭ್ಯವಿದೆ.

ಒಂದು ಸಾವಿರ ರೂಪಾಯಿ ಮೇಲ್ಪಟ್ಟು ಖರೀದಿ ಜೊತೆಗೆ ಏರಿಯಲ್ ಲಿಕ್ವಿಡ್ ಡಿಟರ್ಜೆಂಟ್ ಕೊಂಡರೆ ಲಕ್ಕಿ ಕೂಪನ್ ಸಿಗಲಿದೆ.ಲಕ್ಕಿ ಕೂಪನ್ ವಿಜೇತರಿಗೆ ವಾಷಿಂಗ್ ಮೆಷೀನ್,ಮಿಕ್ಷರ್ ಗ್ರೈ೦ಡರ್ ಹಾಗು ಸ್ಪಿನ್ ಮಾಪ್ ಬಹುಮಾನವಾಗಿ ಸಿಗಲಿದೆ.

ಜೊತೆಗೆ 1999 ಖರೀದಿ ಮೇಲೆ 1 ಕೆಜಿ ಸಕ್ಕರೆ ₹9/-ಗೆ,
2999 ಖರೀದಿ ಮೇಲೆ 1 ಕೆಜಿ ಗೋಧಿ ಹಿಟ್ಟು ₹19/- ಗೆ ಹಾಗು 3999 ಖರೀದಿ ಮೇಲೆ 1ಲಿ ಸನ್ ಫ್ಲವರ್ ಎಣ್ಣೆ ಕೇವಲ ₹49/- ಗೆ ದೊರೆಯಲಿದೆ.

ನವೆಂಬರ್ 3 ರ ವರೆಗೆ ಈ ಆಫರ್ ನಡೆಯಲ್ಲಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-6360078834.

ಸೂಪರ್ ಮಾರ್ಟ್ ನ ಆಫರ್ ನವರಾತ್ರಿ ಹಾಗೂ ದೀಪಾವಳಿ ಆಫರ್ ಈ ರೀತಿ ಇದೆ👇

ಸೂಪರ್ ಮಾರ್ಟ್ ನ ಆಫರ್ ನವರಾತ್ರಿ ಹಾಗೂ ದೀಪಾವಳಿ ಆಫರ್ ಈ ರೀತಿ ಇದೆ👇

 

ಕಾರ್ಕಳ:ಕುಸ್ತಿ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಪೂರ್ಣಿಮ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ

0

ಕಾರ್ಕಳ:ಕುಸ್ತಿ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಪೂರ್ಣಿಮ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಪೂರ್ಣಿಮಾ ಪ್ರಭು ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇದೇ ಪಂದ್ಯಾಟದಲ್ಲಿ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸುದೀಕ್ಷಾ ಕಾಮತ್ ಹಾಗೂ ಪ್ರಥಮ ವಿಜ್ಞಾನ ವಿಭಾಗದ ದಿಶಾ ಡಿ’ಮೆಲ್ಲೊ ದ್ವಿತೀಯ ಸ್ಥಾನ, ಪ್ರಥಮ ವಾಣಿಜ್ಯ ವಿಭಾಗದ ನೇಹಾ ವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

0

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ.

ಸೆ 27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯಮಟ್ಟದ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆ ಆಗಿರುವ ” ಟೇಕ್ವಾಂಡೋ ” ಸ್ಪರ್ಧೆಯಲ್ಲಿ ಅದಿತಿ ಶರ್ಮಾ ಅವರು ಪ್ರಥಮ ಸ್ಥಾನ ಹಾಗೂ ರತಿ ಶರ್ಮಾ ಅವರು ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರು ಸುರೇಶ್ ದೇವಾಡಿಗ ಅವರ ಬಳಿ ಟೇಕ್ವಾಂಡೋ ಅಭ್ಯಾಸ ಮಾಡುತ್ತಿದ್ದಾರೆ.
ಇವರು ಹಿರ್ಗಾನದ ಅನಿಲ್ ಶರ್ಮಾ ಮತ್ತು ನಿತ್ಯ ಬರ್ಕೆ ಅವರ ಪುತ್ರಿಯರು.

 

ಅ.2:ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷಕ್ಕೆ ಪಾದಾರ್ಪಣೆ ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ & ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

0
ಅಕ್ಟೋಬರ್ 2ರಂದು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷಕ್ಕೆ ಪಾದಾರ್ಪಣೆ                                   ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ & ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಯು ಅಕ್ಟೋಬರ್ 2ರಂದು 25ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳಲಿದೆ ಆದಿನ ಮಧ್ಯಾಹ್ನ ಗಂಟೆ ೦೨ಕ್ಕೆ ಸರಿಯಾಗಿ ರಜತ ವರ್ಷಾಚರಣೆಗೆ ಚಾಲನೆ ಕಾರ್ಯಕ್ರಮ ನಡೆಯಲಿದೆ.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು ಮತ್ತು ಯಕ್ಷರಂಗದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತಾರಾಮ್ ಕುಮಾರ್ ಕಟೀಲು ಅವರು ರಜತ ವರ್ಷಾಚರಣೆಗೆ ಚಾಲನೆ ನೀಡಲಿದ್ದಾರೆ.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ರಜತ ವರ್ಷದ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಂಗಳೂರು ಕೇಂದ್ರ ಸಮಿತಿ ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಎರ್ಲಪಾಡಿ ಶ್ರೀನಿವಾಸ ಪೂಜಾರಿ ಅವರು ಸಂಘದ ಹಾಡು ಬಿಡುಗಡೆ ಮಾಡಲಿದ್ದಾರೆ.
ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಜಯಂತಿ ಆರ್. ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ಅವರಿಗೆ ಸನ್ಮಾನ ಸ್ವೀಕರಿಸಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷತೆ: ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷದ ಸ್ಥಾಪನಾ ದಿನಾಚರಣೆ, ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ, ಭಜನಾ ಮಂಡಳಿಗಳಿಗೆ ಸನ್ಮಾನ, ಸಹಾಯಧನ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ, ಪೂರ್ವಾಧ್ಯಕ್ಷರುಗಳ ಸನ್ಮಾನ, ಸಂಘದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟ:ಬೈಲೂರುತಂಡ ರಾಜ್ಯಮಟ್ಟಕ್ಕೆ

0

ಬೈಲೂರುತಂಡ ರಾಜ್ಯಮಟ್ಟಕ್ಕೆ

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜ್ ಕಲ್ಯಾಣಪುರ ,ಉಡುಪಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಬೈಲೂರು ನೇತೃತ್ವದ ಬಾಲಕರ ತಂಡ ಸತತ ಎರಡನೇ ಬಾರಿಗೆ ಜಿಲ್ಲಾ ಪ್ರಶಸ್ತಿಯನ್ನು ಗೆದ್ದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ಮಣಿಕಂಠ ಇವರಿಗೆ ಅತ್ಯುತ್ತಮ ಅಟಾಕರ್, ಸುಜಿತ್ ಇವರಿಗೆ ಅತ್ಯುತ್ತಮ ಲಿಬ್ರೋ ಗೌರವ ಲಭಿಸಿರುತ್ತದೆ. ತಂಡವನ್ನು ತರಬೇತು ಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಫೆಡ್ರಿಕ್ ರೆಬೆಲ್ಲೋ, ಕ್ರೀಡಾ ಸಂಚಾಲಕ ಉಪನ್ಯಾಸಕ ರತ್ನಾಕರ ಪೂಜಾರಿ ಹಾಗೂ ಕಾಲೇಜಿನ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳಾದ ಮೊಹಮ್ಮದ್ ಶೇಕ್ ಅಮನ್ ಹಾಗೂ ಮಹಮದ್ ಶೇಕ್ ಅಯಾನ್ ಹಾಗೂ ಕಾಲೇಜಿಗೆ ಕೀರ್ತಿ ತಂದಿರುವ ತಂಡದ ಎಲ್ಲಾ ಸದಸ್ಯರುಗಳಿಗೆ ಪ್ರಾಂಶುಪಾಲರು, ಕಾಲೇಜ್ ಅಭಿವೃದ್ಧಿ ಸಮಿತಿ ಹಾಗೂ ಉಪನ್ಯಾಸಕ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.

ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್ ಪರಪು ಸತ್ಯಪ್ರಸಾದ್ ರಾವ್ ಪ್ರಥಮಸ್ಥಾನ

0

ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್
ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ

ಸೆ.27-28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟೀಯ ಮಟ್ಟದ ದಕ್ಷಿಣಕೊರಿಯಾದ ರಾಷ್ಟೀಯ ಕ್ರೀಡೆ ಆಗಿರುವ ‘ಟೇಕ್ವಾoಡೋ’ ಸ್ಪರ್ಧೆಯಲ್ಲಿ ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ ಗಳಿಸಿದ್ದಾರೆ.ಇವರು ಸುರೇಶ್ ದೇವಾಡಿಗ ಇವರ ಬಳಿ ‘ಟೇಕ್ವಾoಡೋ’ ಅಭ್ಯಾಸ ಮಾಡುತ್ತಿದ್ದಾರೆ.

ಇವರು ಕಾರ್ಕಳದ ಯುವ ಉದ್ಯಮಿ ರಾಜೇಶ್ ರಾವ್ ಪರಪು ಮತ್ತು ಸುನೀತ ರಾವ್ ದಂಪತಿಗಳ ಪುತ್ರ.