ಉಡುಪಿ ಮಲ್ಪೆ ಕೊಡವೂರು ಗ್ರಾಮದ ರತ್ನ ಬಂಗೇರ ಮೊದಲ ಮಗಳು ಕೃತಿ ಬಂಗೇರ (27) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿ ಕಡಿಯಾಳಿ ಓಷನ್ ಪರ್ಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಸುಮಾರು 5 ತಿಂಗಳಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು.
ಆಗಸ್ಟ್ 6 ರಂದು ತಾಯಿ ಕೆಲಸದ ಬಗ್ಗೆ ಮಲ್ಪೆಗೆ ಹೋಗಿದ್ದು, ಎರಡನೇ ಮಗಳು ಕೆಲಸದ ಬಗ್ಗೆ ಉಡುಪಿಗೆ ಹೋಗಿದ್ದರು.
ತಾಯಿ 1 ಗಂಟೆಗೆ ವಾಪಸ್ಸು ಮನೆಗೆ ಬಂದಿದ್ದು, ಆಗ ಮಗಳು ದೂರುದಾರರಾದ ತಾಯಿಯನ್ನು ಹೊರಗೆ ಕಳುಹಿಸಿ ಮನೆಗೆ ಬಾಗಿಲು ಹಾಕಿಕೊಂಡಿದ್ದು, ತಾಯಿ ಬಾಗಿಲು ಬಡಿದರು ಬಾಗಿಲು ತೆಗೆದಿರುವುದಿಲ್ಲ, ನಂತರ ತಾಯಿ ರತ್ನ ಅವರು ಅವರ ಅಣ್ಣ ಚಂದ್ರ ರವರಿಗೆ ಪೋನ್ ಮಾಡಿ ಮನೆಗೆ ಕರೆಸಿಕೊಂಡು ಬಾಗಿಲನ್ನು ಒಡೆದು ಒಳಗೆ ಹೋದಾಗ ಮಗಳು ಮನೆಯ ಬೆಡೆ ರೂಮ್ ನಲ್ಲಿ ಪಕ್ಕಾಸಿಗೆ ವೇಲ್ ಕಟ್ಟಿಕೊಂಡು ನೇಣುಬಿಗಿದುಕೊಂಡು ಮೃತ ಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


















