ಜೈಲಿನಲ್ಲಿರುವ ಚಿತ್ರನಟ ದರ್ಶನ್ ಅವರಿಗೆ ಕಾನೂನು ಹೋರಾಟದಲ್ಲಿ ಗೆಲುವಾಗಿ, ಶೀಘ್ರ ಬಿಡುಗಡೆಯಾಗುವಂತಾಗಲಿ ಎಂದು ಪ್ರಾರ್ಥಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಬಂಟ್ವಾಳ ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಗಂಧಪ್ರಸಾದ ಸ್ವೀಕರಿಸಿದರು.
ಮಂಗಳೂರಿನ ಕುತ್ತಾರಿನ ದೆಕ್ಕಾಡು ಶ್ರೀ ಕೊರಗಜ್ಜ ಕ್ಷೇತ್ರ ಮತ್ತು ಶ್ರೀಕ್ಷೇತ್ರ ಮಂದಾರ ಬೈಲಿನ ರಕೇಶ್ವರೀ ದೈವದ ಸನ್ನಿಧಿಗೂ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭ ವಿಜಯಲಕ್ಷ್ಮಿ ಅವರ ಆಪ್ತವಲಯದ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.


















