ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ಮೋದಿ ಸರಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಸಾರ್ವಜನಿಕರು ಎಂದಿಗೂ ಕ್ಷಮಿಸುವುದೂ ಇಲ್ಲ, ಮರೆಯುವುದೂ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ಸರಕಾರಕ್ಕೆ 3 ಪ್ರಶ್ನೆ ಕೇಳಿ ರುವ ಖರ್ಗೆ, ದೇಶದಲ್ಲಿ ಸಕ್ಕರೆ ದಾಸ್ತಾನು 9 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿರುವುದು ಏಕೆ? ಹಬ್ಬಗಳ ಋತುವಿಗೂ ಮುನ್ನವೇ ಸಕ್ಕರೆ ಬೆಲೆಯೇರಿಕೆಯಾದರೆ ಅದಕ್ಕೆ ಹೊಣೆ ಯಾರು? ಇ20 ಇಂಧನದ ಎಥೆನಾಲ್ ಗಾಗಿ ಕಬ್ಬು ಬಳಕೆ ಮಾಡುವ ನೀತಿಯನ್ನು ಮತ್ತೆ ಪರಿಶೀಲನೆ ಮಾಡಬೇಕೇ? ಎಂದು ಪ್ರಶ್ನಿಸಿದ್ದಾರೆ.


















