ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ ತಮ್ಮ ವಿಚ್ಛೇದನ ಪ್ರಕರಣವನ್ನು ಶುಕ್ರವಾರ ಹಿಂಪಡೆದಿದ್ದಾರೆ. ವಿಡಿಯೋ ಕಾನ್ಸರೆನ್ಸ್ ಮೂಲಕ ಕೋಲ್ಟ್ ವಿಚಾರಣೆಗೆ ಹಾಜರಾಗಿ, ಅಗತ್ಯ ದಾಖಲೆ ಗಳನ್ನು ಸಲ್ಲಿಸಿ ಪ್ರಕರಣ ಹಿಂತೆಗೆ ದುಕೊಂಡಿದ್ದಾರೆ.
ಫೆಬ್ರವರಿಯಲ್ಲಿ ಚೆಂಗಲ್‌ಪಟ್ಟು ಕೋರ್‌ನಲ್ಲಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸಾಕಷ್ಟು ಬಾರಿ ವಿಚಾರಣೆ ಮುಂದೂಡಿಕೆಯಾಗಿ ಆ.7ಕ್ಕೆ ನಿಗದಿಯಾಗಿತ್ತು. ಇದೀಗ ಹಾಜರಾದ ಸಂಗೀತಾ ವಿಚ್ಛೇದನವನ್ನು ಹಿಂಪಡೆದಿದ್ದಾರೆ. ಇನ್ನು ವಿಜಯ್ ಅಭಿಮಾನಿಗಳು ಇದರಿಂದ ಸಂತಸಗೊಂ ಡಿದ್ದು, ವಿಜಯ್ ಹಾಗೂ ಸಂಗೀತಾ ಅವರನ್ನೊಳ ಗೊಂಡ ಹಳೇ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.


















