ಎನ್‌ಡಿಎ ಕೂಟದ ಸಂಸದರೊಂದಿಗೆ ಶುಕ್ರವಾರ ಉಪಾಹಾರ ಕೂಟ ನಡೆಸಿದ ಪ್ರಧಾನಿ ಮೋದಿ ಬಂಡಾಯ ಟಿಎಂಸಿ ಮತ್ತು ಉದ್ಧವ್ ಸೇನಾ ಸಂಸದರಿಗೆ, ‘ನಾನಿದ್ದೇನೆ, ಆತಂಕ ಬೇಡ’ ಎಂಬ ಅಭಯ ನೀಡಿದ್ದಾರೆ.
ಟಿಎಂಸಿ 20 ಸಂಸದರು ಬಂಡಾಯ ವೆದ್ದು ಎನ್‌ಸಿಪಿಐ ಪಕ್ಷವನ್ನು ಸೇರಿದ್ದರು. ಅದೇ ರೀತಿ ಶಿವಸೇನೆ(ಯುಬಿಟಿ)ಯ 6 ಸಂಸದರು ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದರು. ‘ಎನ್‌ಡಿಎ ಕುಟುಂಬವಿದ್ದಂತೆ. ನಾವು ಮಿತ್ರಪಕ್ಷಗಳೊಂದಿಗಿದ್ದೇವೆ. ಪ್ರತಿಯೊಬ್ಬರಿಗೂ ಗೌರವ ಮತ್ತು ಅವಕಾಶ ನೀಡಲಾಗುವುದು. ಎನ್ ಡಿಎಯ ಪ್ರತಿಯೊಬ್ಬ ಸಂಸದರೊಂದಿಗೆ ನಿಲ್ಲುವೆ’ ಎಂದು ಮೋದಿ ಭರವಸೆ ನೀಡಿದ್ದಾರೆ.


















