ವಿದ್ಯಾರ್ಥಿಗಳು ಹೊಸ ಹೊಸ ಚಿಂತನೆ, ಸಂಶೋಧನೆಗಳ ಕಡೆಗೆ ಗಮನಹರಿಸಿ : ಎಚ್.ನಾಗರಾಜ್ ಶೆಟ್ಟಿ
ಹೆಬ್ರಿ: ಎಸ್. ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿಯಲ್ಲಿ ಆ. 13 ರಂದು ಶಾಲೆಯ ಎಸ್. ಆರ್. ಸಭಾಂಗಣದಲ್ಲಿ “ಶೈನ್ ಸ್ಪ್ರಿಂಕಲ್ಸ್” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಪ್ರಯತ್ನ ಪಡಬೇಕು. ಮೊಬೈಲ್ಗಳಿಂದ ದೂರವಿದ್ದು ಹೊಸ ಹೊಸ ಚಿಂತನೆ – ಸಂಶೋಧನೆಗಳ, ಹೊಸ ಹೊಸ ಚಟುವಟಿಕೆಗಳ ಕಡೆಗೆ ಗಮನಹರಿಸಬೇಕು ಎಂದು ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಚ್. ನಾಗರಾಜ್ ಶೆಟ್ಟಿ ಅವರು ಹೇಳಿದರು.
ಇವರು ಎಸ್.ಆರ್ ಪಬ್ಲಿಕ್ ಸ್ಕೂಲ್ (ಕೇಂದ್ರೀಯ ಪಠ್ಯಕ್ರಮ) 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಶೈನ್ ಸ್ಪ್ರಿಂಕಲ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯು ವಿದ್ಯಾರ್ಥಿಗಳೇ ತಯಾರಿಸಿದ ವಿದ್ಯುತ್ಚಾಲಿತ ಸೆನ್ಸರ್ ದೀಪಗಳು ಚಪ್ಪಾಳೆಯ ಮೂಲಕ ಬೆಳಗುವುದರೊಂದಿಗೆ ವಿಭಿನ್ನವಾಗಿತ್ತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಅವರು ಮಾತನಾಡಿ, ಪಾಠ ದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾಗವಹಿಸಬೇಕು. ಇಂದಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದ್ದೀರಿ. ಆಯೋಜಿಸಿದ ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ. ಎಲ್ಲರೂ ಸಂಭ್ರಮಿಸಿ, ಭಾಗವಹಿಸಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಕೋಓರ್ಡಿನೇಟರ್ ಹೇಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೆರವಣಿಗೆಯಲ್ಲಿ ಬ್ಯಾಂಡ್ ಸೆಟ್, ಹುಲಿವೇಷ, ನವಿಲು, ಭಾರತಾಂಬೆ, ಚೆಂಡೆ, ಭರತನಾಟ್ಯ, ಸ್ವಾತಂತ್ರ್ಯ ಹೋರಾಟಗಾರರು, ನಾಟ್ಯ ಮೊದಲಾದವು ಆಕರ್ಷಣೆಯಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವು ನಡೆಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಂಶು ನಿರೂಪಿಸಿ, ಅನ್ಶಿ ಸ್ವಾಗತಿಸಿ, ಹಿಶಾಮ್ ವಂದಿಸಿದರು.


















