“ಯಾವುದೇ ಸರಕಾರ ಸಕ್ರಿಯವಾಗಬೇಕಾದರೆ ವಿರೋಧ ಪಕ್ಷದ ಪಾತ್ರ ಬಹು ಮುಖ್ಯ. ಸರಕಾರದಲ್ಲಿ ಮುಖ್ಯಮಂತ್ರಿಗೆ ಇರುವಷ್ಟೇ ಜವಾಬ್ದಾರಿ ಉಳಿದ ಮಂತ್ರಿಗಳಿಗೆ ಕೂಡ ಇರುತ್ತದೆ. ವಿದ್ಯಾರ್ಥಿಗಳ ಮಂತ್ರಿಮಂಡಲದ ಜವ ಬ್ದಾರಿಯಬಗ್ಗೆ, ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಕರ್ತವ್ಯಗಳಬಗ್ಗೆ ಶ್ರೀಯುತರು ಮಾತನಾಡುತ್ತಾ, ನಾವು ಕಲಿತ ವಿದ್ಯಾ ಸಂಸ್ಥೆಯನ್ನು ಮತ್ತು ಕಲಿಸಿದ ಗುರುಗಳನ್ನು ಮರೆಯಬಾರರು. ಪೂರ್ವ ವಿದ್ಯಾರ್ಥಿಗಳು ಶಾಲೆಯ ಒಳಿತನ್ನು ಬಯಸಿ, ಸಹಾಯ ಮಾಡಬೇಕು” ಎ೦ದು ತಮ್ಮ ಭಾಷಣದಲ್ಲಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕ್ಕಷ್ಣರಾವ್ ರವರು ವಿದ್ಯಾರ್ಥಿ ಸಂಸತ್ತಿಗೆ ಶುಭ ಹಾರೈಸಿದರು.
ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪಾಟಕ್ ರವರು, ಪೈಮರಿ ವಿಭಾಗದ ಮುಖ್ಯಸ್ಥೆ ಲೊಲಿಟ ಡಿ’ಸಿಲ್ವ, ಎಲ್ಲಾ ಅಧ್ಯಾಪಕರು, ಉಪಸ್ಥಿತರಿದ್ದರು.



















