ಅಂತಾರಾಷ್ಟ್ರೀಯ ಪಂದ್ಯ ಗಳ ವೇಳೆ ತಂಡದ ಶಿಬಿರದಿಂದ ಅರ್ಧದಲ್ಲೇ ಹೊರನಡೆದ ಪೋರ್ಚುಗಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡ್ ಅವರನ್ನು ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ಅಮಾನತುಗೊಳಿಸಿದೆ. ಅಲ್ಲದೆ ಅವರ ವಿರುದ್ಧಶಿಸ್ತು ಕ್ರಮ ಜರುಗಿಸಲು ಸಮಿತಿಯೊಂದನ್ನು ರಚಿಸಿದೆ.
ಮುಖ್ಯ ಕೋಚ್ ಜಾರ್ಜ್ ಜೀಸಸ್ ಜತೆಗಿನ ಮನಸ್ತಾಪ ಹಾಗೂ ಆಡುವ ಬಳಗದಲ್ಲಿ ಅವಕಾಶ ನೀಡದ ಕಾರಣಕ್ಕೆ 41ರ ಹರೆಯದ ರೊಸ ಸಿಟ್ಟಿನಿಂದ ತಂಡ ತೊರೆದಿದ್ದರು. ಇದು ಶಿಸ್ತು ಉಲ್ಲ ಎಂದು ಒಕ್ಕೂಟ ಗಂಭೀರವಾಗಿ ಪರಿಗಣಿಸಿದೆ.
ಒಕ್ಕೂಟದ ನಿಯಮಗಳ ಪ್ರಕಾರ, ಸೂಕ್ತ ಕಾರಣವಿಲ್ಲದೆ ತಂಡ ತೊರೆದರೆ 1 ರಿಂದ 6 ತಿಂಗಳ ನಿಷೇಧ ಹೇರುವ ಸಾಧ್ಯತೆಯಿದೆ. ಈ ಬಗ್ಗೆ ಇನ್‌ಸ್ಟ್ರಾಗ್ರಾಮ್ ನಲ್ಲಿ ಪ್ರತಿಕ್ರಿಯಿಸಿರುವ ರೊನಾಲ್ಡೊ “ನನ್ನ ವರ್ತನೆಗೆ ಕ್ಷಮೆಯಾಚಿಸುತ್ತೇನೆ. ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತದೆ. ಆದರೆ ಅಭಿಮಾನಿಗಳಿಗಾಗಿ ವಿದಾಯ ಪಂದ್ಯವನ್ನಾಡಲಿದ್ದೇನೆ,’ ಎಂದು ಬರೆದುಕೊಂಡಿದ್ದಾರೆ. ರೊನಾಲ್ಡೊ ಗೈರಿನಲ್ಲೂ ಪೋರ್ಚುಗಲ್ ಹ್ಯಾಟ್ರಿಕ್ ಜಯ ಸಾಧಿಸಿರುವುದು ವಿಶೇಷ.




























