ಶಬರಿಮಲೆ ಯಾತ್ರಾರ್ಥಿಗಳಿಗೆ ಉಡುಪಿ ಮತ್ತು ಮಂಗಳೂರಿನಿಂದ ಸರಕಾರಿ ವೋಲ್ವೋ ಬಸ್ಸು ಸೌಲಭ್ಯ ಒದಗಿಸಬೇಕಾಗಿ ವಿನಂತಿ

0

ಶಬರಿಮಲೆ ಯಾತ್ರಾರ್ಥಿಗಳಿಗೆ ಉಡುಪಿ ಮತ್ತು ಮಂಗಳೂರಿನಿಂದ ಸರಕಾರಿ ವೋಲ್ವೋ ಬಸ್ಸು ಸೌಲಭ್ಯ ಒದಗಿಸಬೇಕಾಗಿ ವಿನಂತಿ

ವರ್ಷಂಪ್ರತಿ ಡಿಸೆಂಬರ್ ಮತ್ತು ಜನವರಿಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಲಕ್ಷಾಂತರ ಜನರು ಮಾಲೆಯನ್ನು ಹಾಕಿ, ಕಟ್ಟು ನಿಟ್ಟಿನ ವ್ರತ ನಿಯಮವನ್ನು ಪಾಲಿಸಿ, ಶಬರಿಮಲೆಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳು ಯಾತ್ರೆಯನ್ನು ಮಾಡುತ್ತಾರೆ.

ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕುಂದಾಪುರ – ಉಡುಪಿ – ಕಾರ್ಕಳ – ಮೂಡಬಿದ್ರಿ – ಮಂಗಳೂರು ಮಾರ್ಗವಾಗಿ ಶಬರಿಮಲೆಗೆ ವೋಲ್ವೋ ಬಸ್ಸು ಸೌಲಭ್ಯವನ್ನು ಒದಗಿಸಬೇಕಾಗಿ ವಿನಂತಿ.

ಕರ್ಣಾಟಕ ರಾಜ್ಯ ಸರ್ಕಾರ, ಸಾರಿಗೆ ಸಚಿವರು ಹಾಗು ಸಾರಿಗೆ ಇಲಾಖೆ ಇದರ ಬಗ್ಗೆ ಗಮನಹರಿಸಬೇಕಾಗಿ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಕಾರ್ಕಳ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ತಿಳಿಸಿದ್ದಾರೆ.

 

   

LEAVE A REPLY

Please enter your comment!
Please enter your name here