ಕಾರ್ಕಳದ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಚಲನಚಿತ್ರ ‘ಪ್ರತ್ಯರ್ಥ’ ಇದರ ಶೀರ್ಷಿಕೆಯನ್ನು ನಟ ಪೃಥ್ವಿ ಅಂಬರ್ ಅವರು ಆನ್ಲೈನ್ ನಲ್ಲಿ ಅನಾವರಣಗೊಳಿಸಿದ್ದಾರೆ.
ಟೈಟಲ್ ಲಾಂಚ್ ವಿಭಿನ್ನವಾಗಿ ಮಾಡಿದ ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ಪಡೆಯುತ್ತಿದೆ. ಅರ್ಜುನ್ ಕಾಮತ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ
ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಯೂಥ್ ಎಂಟರ್ಟೈನರ್ ಸಿನಿಮಾದಲ್ಲಿ ಸುಮನ್ ತಲ್ವಾರ್ , ರಮೇಶ್ ಭಟ್ , ನವೀನ್ ಡಿ ಪಡೀಲ್ ಹಾಗೂ ದೀಪಕ್ ರೈ ಪಾಣಾಜೆ ಅಂತಹ ಹಲವಾರು ಕಲಾವಿದರು ನಟಿಸಿದ್ದಾರೆ.
ಅಕ್ಷಯ್ ಕಾರ್ಕಳ,ರಾಮ್ ಹಾಗೂ ಶ್ರುತಿ ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುನಾದ್ ಗೌತಮ್ ಅವರ ಸಂಗೀತ ಮತ್ತು ವಿನೂಥ್ ಕೆ ಅವರ ಛಾಯಾಗ್ರಹಣವನ್ನು ಹೊಂದಿದೆ.
ಸ್ಯಾಂಡಲ್ವುಡ್ ಫಿಲಂಸ್ ಸಂಸ್ಥೆಯ ನಾಗೇಶ್ ಎಂ ಮತ್ತು ವಿಶಿಷ್ಟ ಫಿಲಂಸ್ ಸಂಸ್ಥೆಯ ಜಯರಾಮ್ ಆರ್ ಪ್ರಭು ನಿರ್ಮಾಣ ಮಾಡಿದ್ದು , ನಿತ್ಯಾನಂದ ಪೈ , ಪ್ರೇಮ್ ಕುಮಾರ್ ವಿ ಹಾಗೂ ಭಾರತ್ ಕೆ ಶೆಟ್ಟಿ ಸಹ ನಿರ್ಮಾಣಗೊಳಿಸಿದ್ದಾರೆ. 2025ರಲ್ಲಿ ಆದಷ್ಟು ಬೇಗ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.