ಕೇವಲ 4404 ಮತಗಳ ಅಂತರದಲ್ಲಿ ಗೆಲುವು






ಹ್ಯಾಟ್ರಿಕ್ ವಿಜಯದ ನಗೆ ಬೀರಿದ ಸುನೀಲ್ ಕುಮಾರ್
ಕೇವಲ 4404 ಮತಗಳ ಅಂತರದಲ್ಲಿ ಗೆಲುವು
ಕಾರ್ಕಳ:ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಇಂಧನ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ಕಾರ್ಕಳದಲ್ಲಿ ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.
ಸುನೀಲ್ ಕುಮಾರ್ 76,019 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ 71615 ಮತಗಳನ್ನು ಪಡೆದಿದ್ದಾರೆ.ಕಳೆದ ಬಾರಿ 40,000ಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದ ಸುನೀಲ್ ಕುಮಾರ್ ಈ ಬಾರಿ ಕೇವಲ 4404 ಅಂತರದಿಂದ ಗೆದ್ದಿದ್ದಾರೆ.
ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಕಾರ್ಕಳ ಇಡೀ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಮತ್ತು ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ರವರನ್ನು ಸೋಲಿಸಿ ಸುನಿಲ್ ಕುಮಾರ್ ಗೆದ್ದದ್ದು ಕಾರ್ಕಳದ ಜನತೆ ಮತ್ತೆ ಸುನಿಲ್ ಕುಮಾರ್ ಕೈ ಹಿಡಿದಿದ್ದಾರೆ.
