ಅಜೆಕಾರು: ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ ; ಆರೋಪಿ ಪ್ರತಿಮಾಗೆ ಷರತ್ತುಬದ್ಧ ಜಾಮೀನು

0

ಅಜೆಕಾರು: ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ ; ಆರೋಪಿ ಪ್ರತಿಮಾಗೆ ಷರತ್ತುಬದ್ಧ ಜಾಮೀನು

ಕಳೆದ ಅಕ್ಟೋಬರ್ 20 ರಂದು ರಾಜ್ಯಾದ್ಯಂತ ಸುದ್ದಿಯಾಗಿದ್ದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದ್ದ ಬಾಲಕೃಷ್ಣ ಪೂಜಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಪತ್ನಿ ಪ್ರತಿಮಾ(37)ಗೆ ರಾಜ್ಯ ಉಚ್ಚ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಜಾರಿಗೊಳಿಸಿದೆ.

ಕೊಲೆಯಾದ ಐದು ದಿನದಲ್ಲೇ ಅಂದರೆ ಅಕ್ಟೋಬ‌ರ್ 25 ರಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸರು ಮೃತ ಬಾಲಕೃಷ್ಣ ಪೂಜಾರಿಯ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರು ಸೇರಿ ಈ ಕೊಲೆ ಮಾಡಿದ್ದಾರೆಂಬ ಆರೋಪದಡಿ ಇಬ್ಬರನ್ನೂ ಬಂಧಿಸಿದ್ದರು. ತನಿಖೆ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಜೆಕಾರು ಪೊಲೀಸರು ನ್ಯಾಯಾಲಯಕ್ಕೆ ಆರೋಪಪತ್ರ ಸಲ್ಲಿಸಿದ್ದರು.

ವಿಚಾರಣೆ ಬಳಿಕ ಕಳೆದ ಕೆಲವು ತಿಂಗಳ ಹಿಂದೆ ಆರೋಪಿ ದಿಲೀಪ್ ಹೆಗ್ಡೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಇದೀಗ ರಾಜ್ಯ ಹೈಕೋರ್ಟ್ ಪ್ರಕರಣದ ಪರಿಶೀಲನೆಯ ನಂತರ, ಪ್ರತಿಮಾಳಿಗೂ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

   

LEAVE A REPLY

Please enter your comment!
Please enter your name here