ಕಾರ್ಕಳ : ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ ವಂಚನೆ

0

ಕಾರ್ಕಳ : ವರ್ಕ್ ಫ್ರಮ್ ಹೋಂ ಕೊಡಿಸುವುದಾಗಿ ನಂಬಿಸಿ ಆನ್ಲೈನ್ ಧೋಖಾ

ವರ್ಕ್ ಫ್ರಮ್ ಹೋಂ ಕೊಡಿಸುವುದಾಗಿ ಹೇಳಿ ಆನ್ಲೈನ್ ನಲ್ಲಿ ಮಹಿಳೆಯಿಂದ 95 ಸಾವಿರ ರೂ. ಎಗರಿಸಿದ ಘಟನೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್ಕಳ ತಾಲೂಕು ರೆಂಜಾಳ ಮೂಲದ ಮಹಿಳೆಯೋರ್ವರು, ಫೇಸ್ಬುಕ್ ನಲ್ಲಿ ವರ್ಕ್ ಫ್ರಮ್ ಹೋಂ ಗೆ ಅಪ್ಲೈ ಮಾಡಿದಾಗ ತಮ್ಮ ಮೊಬೈಲ್ ನಲ್ಲಿ ಟೆಲಿಗ್ರಾಂ ಆಪ್‌ ಡೌನ್‌ ಲೋಡ್‌ ಮಾಡಲು ಅಪರಿಚಿತನೋರ್ವ ವಾಟ್ಸಾಪ್ ಮೂಲಕ ಲಿಂಕ್‌ ಕಳುಹಿಸಿದ್ದಾನೆ. ಅದರಂತೆಯೇ ಮಹಿಳೆ ಟೆಲಿಗ್ರಾಂನಲ್ಲಿ ಸಂವಹನ ನಡೆಸಿದ್ದಾರೆ. ಆರೋಪಿಯು ಮಹಿಳೆಯ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಪಡೆದು, ಆಕೆಗೆ ದಿನಕ್ಕೆ 20 ಟಾಸ್ಕ್‌ ನೀಡುವುದಾಗಿ ಪ್ರತಿ ಟಾಸ್ಕ್‌ಗೆ ರೂ.10ರಂತೆ, 20 ಟಾಸ್ಕ್‌ ಕೊಡುವುದಾಗಿಯೂ, 20 ಟಾಸ್ಕ್‌ ನಂತರ ನಂತರ 1 ಟಾಸ್ಕ್‌ಗೆ ರೂ .50 ರಂತೆ ನೀಡುವುದಾಗಿ ನಂಬಿಸಿ, ಜೂನ್‌ 10 ರಂದು 3ನೇ ಟಾಸ್ಕ್‌ಗೆ 800 ರೂ. ನೀಡುತ್ತೇವೆಂದು ತಿಳಿಸಿದ್ದಾನೆ. ಆರೋಪಿ ತಿಳಿಸಿದಂತೆ ಮಹಿಳೆ ಆನ್‌ಲೈನ್‌ ಮೂಲಕ ತನ್ನ ಖಾತೆಯಿಂದ ಹಂತ ಹಂತವಾಗಿ ದಿನಾಂಕ 11/06/2025 ರಿಂದ 13/06/2025 ರವರೆಗೆ ಒಟ್ಟು ರೂ. 95,000 ವನ್ನು ಅಪರಿಚಿತ ವ್ಯಕ್ತಿಗಳ ಖಾತೆಗೆ ಜೀ ಪೇ ಮೂಲಕ ವರ್ಗಾವಣೆ ಮಾಡಿದ್ದು, ಆರೋಪಿಯು ತಾವು ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.

ಈ ಬಗ್ಗೆ ಆನ್ಲೈನ್ ಮೋಸಜಾಲಕ್ಕೆ ಬಿದ್ದು ಹಣ ಕಳೆದುಕೊಂಡ ಮಹಿಳೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here