ನಿಟ್ಟೆ : ಪರಿಣಾಮಕಾರಿ ಕಲಿಕಾ ವಿಧಾನಗಳ ಕುರಿತು ಕಾರ್ಯಗಾರ
ನಿಟ್ಟೆಯ ಡಾ.ಎನ್. ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಜೂ.17 ಮತ್ತು 18 ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್ ಮತ್ತು ಐಕ್ಯೂಎಸಿಗಳ ಜಂಟಿ ಆಶ್ರಯದಲ್ಲಿ ಬೋಧಕ ಸಿಬ್ಬಂದಿಗಳಿಗೆ ಎರಡು ದಿನಗಳ ಪರಿಣಾಮಕಾರಿ ಕಲಿಕಾ ವಿಧಾನಗಳ ಕುರಿತ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕೋವಿಡ್ ನಂತರದ ವಿದ್ಯಾರ್ಥಿಗಳ ಮನಸ್ಥಿತಿಯಲ್ಲಿನ ಬದಲಾವಣೆಗಳು, ಕಲಿಕಾ ತಾಂತ್ರಿಕತೆಯಲ್ಲಿ ಆದ ಬೆಳವಣಿಗೆಗಳು ಸಾಂಪ್ರದಾಯಿಕ ಕಲಿಕಾ ವಿಧಾನಗಳಿಗಿಂತ ಭಿನ್ನವಾದ ಮತ್ತು ಪರಿಣಾಮಕಾರಿ ಕಲಿಕಾ ವಿಧಾನಗಳನ್ನು ವಿದ್ಯಾರ್ಥಿ ಸಮುದಾಯ ಅಪೇಕ್ಷಿಸುತ್ತಿದೆ. ಈ ಹಿನ್ನಲೆಯಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ಬೋಧಕ ಸಿಬ್ಬಂದಿಗಳಿಗೆ ನಿರಂತರವಾಗಿ ಸಿಬ್ಬಂದಿಗಳ ಅಭಿವೃದ್ದಿ ವಿಭಾಗದಿಂದ ನವೀನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ‘ಇ-ಕಲಿಕಾ’ ಸಾಮಾಗ್ರಿಗಳನ್ನು ಪೂರೈಸುವ ಕಡೆಗೂ ಗಮನವನ್ನು ಹರಿಸುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಕಾರ್ಯಗಾರದ ಉದ್ಘಾಟನಾ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಅಧ್ಯಾಪಕರಿಗೆ ‘ಇ ಕಲಿಕಾ’ ಸಾಮಾಗ್ರಿಗಳ ತಯಾರಿ, ಮೌಲ್ಯಮಾಪನ, ಬೋಧನಾ ವಿಧಾನದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಳ ಕುರಿತು ತರಬೇತಿ ಹಾಗೂ ‘ಎನ್.ಯು ಲರ್ನಿಂಗ್’ ನಲ್ಲಿ ಮಾದರಿ ತರಗತಿಗಳನ್ನು ರೂಪಿಸಲು ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.
ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಗ್ರೇನಲ್ ಡಿ ಮೆಲ್ಲೋ, ಸಹಪ್ರಾಧ್ಯಾಪಕರು ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ, ಪ್ರಜ್ವಲ್ ಹೆಗ್ಡೆ, ಸಾಹಾಯಕ ಪ್ರಾಧ್ಯಪಕರು ಎನ್.ಎಮ್.ಎ.ಎಮ್.ಐ.ಟಿ ನಿಟ್ಟೆ, ಪ್ರದೀಪ್ ಕುಮಾರ್ ಸಾಹಾಯಕ ಪ್ರಾಧ್ಯಪಕರು ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ, ಕಾಲೇಜು ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ಉಪಸ್ಥಿತರಿದ್ದರು. ಎಸ್.ಡಿ.ಸಿ. ಸಂಯೋಜಕ ಡಾ. ರಾಘವೇಂದ್ರ ರಾವ್ ಅತಿಥಿಗಳನ್ನು ಪರಿಚಯಿಸಿದರು.
\