
ಅಜೆಕಾರು:ಪಾರ್ಟ್ ಟೈಮ್ ಜಾಬ್ ನಂಬಿ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ
ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸತೀಶ್ ಎಂಬುವವರ ಟೆಲಿಗ್ರಾಂ ಖಾತೆಗೆ Trishna Das ಎಂಬುವವರ ಖಾತೆ ಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು,Skechers Society ZB70 ಆನ್ ಲೈನ್ ಪ್ರೊಡೆಕ್ಟ್ ಸೆಲ್ಲಿಂಗ್ ಕಂಪನಿಗೆ ಮೊದಲು ರೂಪಾಐಿ 10,000/- ವನ್ನು ಹೂಡಿಕೆ ಮಾಡುವಂತೆ ಹಾಗೂ ಕಂಪನಿಯ ಪ್ರೊಡೆಕ್ಟ್ ಗಳನ್ನು ಸೇಲ್ ಮಾಡಿದಲ್ಲಿ ಕಮೀಷನ್ ಸಿಗುವುದಾಗಿ ತಿಳಿಸಿ Skechers Society ZB70 ಕಂಪನಿಯ ಲಿಂಕನ್ನು ಕಳುಹಿಸಿದ್ದು , ಲಿಂಕನ್ನು ತೆರೆದು ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.
ಕಂಪನಿಯವರು ಹೇಳಿದಂತೆ ಸತೀಶ್ ರವರು ಅವರ ಖಾತೆಯಿಂದ ರೂಪಾಯಿ 3,74,114/- ನ್ನು ವರ್ಗಾವಣೆ ಮಾಡಿದ್ದು, ನಂತರ ಜಮೆ ಮಾಡಿದ ಹಣವನ್ನಾಗಲೀ ಆದಾಯದ ಹಣವನ್ನಾಗಲೀ ಖಾತೆಗೆ ಜಮೆ ಮಾಡಿರುವುದಿಲ್ಲ.
ಟೆಲಿಗ್ರಾಂ ಖಾತೆ, ವ್ಯಾಟ್ಸಪ್ ಮುಖಾಂತರ ಸಂಪರ್ಕಿಸಿ, ಲಾಭ ಬರುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2025 ಕಲಂ: 319(2), 318(4)BNS ಮತ್ತು 66 (D) INFORMATION TECHNOLOGY ACT 2000 ರಂತೆ ಪ್ರಕರಣ ದಾಖಲಾಗಿರುತ್ತದೆ.












