ದೈಹಿಕ ಸಂಬಂಧಕ್ಕೆ ನಿರಾಕರಣೆ ಮತ್ತು ಪತಿ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುವುದು ಕ್ರೌರ್ಯಕ್ಕೆ ಸಮನಾಗಿರುವುದರಿಂದ ಅದು ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಪತ್ನಿಯು ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸುತ್ತಿದ್ದುದ್ದೇ ಅಲ್ಲದೆ ನನ್ನ ಸ್ನೇಹಿತರ ಮುಂದೆ ನನಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸುವ ಮೂಲಕ ಅವಮಾನಿಸುತ್ತಿದ್ದಳು. ಇದರಿಂದ ಮನನೊಂದು ತಾನು ಆಕೆಯಿಂದ ವಿಚ್ಛೇದನ ಬಯಸಿ ಕೌಟಿಂಬಿಕ ನ್ಯಾಯಾಲಯದ ಮೊರೆ ಹೋಗಿದ್ದೆ ಎಂದು ಆಕೆಯ ವಿಚ್ಛೇದಿತ ಪತಿ ಹೇಳಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.