
ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದಿವಂಗತ ಶಾಂತಿನಾಥ ಜೋಗಿ ಇವರ ಸ್ಮರಣಾರ್ಥ ಅವರ ಮಕ್ಕಳಾದ ಪವನ್ ಜೋಗಿ, ಪಲ್ಲವಿ ಹಾಗೂ ಸೊಸೆ ಆರಬಿ ಜೋಗಿ ಇವರು ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಡಿ.3 ರಂದು ಏರ್ಪಡಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪುಂಡಿಕಾಯಿ ಗಣಪಯ್ಯ ಭಟ್, ನಿವೃತ್ತ ಇತಿಹಾಸ ಪ್ರಾಧ್ಯಾಪಕರು, ಧವಳ ಕಾಲೇಜು ಮೂಡಬಿದ್ರೆ , ಆಗಮಿಸಿ ಇತಿಹಾಸದ ಮಹತ್ವ ಹಾಗೂ ಪ್ರಸ್ತುತತೆಯ ಬಗ್ಗೆ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ್ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಯಾದ ರಮೇಶ್ ಕಲ್ಲೊಟ್ಟೆ ಹಾಗೂ ಬಿ.ಇ.ಎಂ. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಇವರು ಭಾಗವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಗೋಪಾಲಕೃಷ್ಣ ಗೋರೆ ಕಾರ್ಯಕ್ರಮದ ಔಚಿತ್ಯತೆಯ ಬಗ್ಗೆ ತಿಳಿಸಿದರೆ, ಅತಿಥಿಗಳ ಪರಿಚಯವನ್ನು ಉಪನ್ಯಾಸಕ ನರಸಿಂಹ ವರ್ಧನ್ ಮಾಡಿದರು.
ವಿದ್ಯಾರ್ಥಿಗಳಾದ ಕುಮಾರ್ ತೇಜಾಕ್ಷ ಸ್ವಾಗತಗೈದರೆ, ಕುಮಾರ್ ಪ್ರಸಾದ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕುಮಾರಿ ಲೆನಿಶಾ ನಡೆಸಿಕೊಟ್ಟರು.













