ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಆವಿರ್ಭವ – ಸಿಂದೂರ ಸಂಭ್ರಮ ” ವಾರ್ಷಿಕೋತ್ಸವ ಸಮಾರಂಭ

0

ಡಿ. 4ರಿಂದ 6ರವರೆಗೆ ಸಾಂಸ್ಕೃತಿಕ ವೈಭವ

ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನು ಶ್ರೀಮಂತಗೊಳಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮಹೋತ್ಸವ “ಕ್ರಿಯೇಟಿವ್ ಆವಿರ್ಭವ–2025” ಡಿ. 4, 5 ಮತ್ತು 6 ರಂದು ವೈಭವದೊಂದಿಗೆ ನಡೆಯಲಿದೆ.

ಈ ಮೂರು ದಿನಗಳ ಸಂಭ್ರಮವು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ವಿವಿಧ ಸಾಂಸ್ಕೃತಿಕ, ವಿದ್ಯಾಭ್ಯಾಸಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.

ಡಿ. 4 ರಂದು – ಸಂಜೆ 6.00 ಗಂಟೆಗೆ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಕರಾವಳಿಯ ಸಾಂಪ್ರದಾಯಿಕ ಕಲಾ ವೈಭವ, ಯಕ್ಷಗಾನ, ನೃತ್ಯ, ನಾಟಕ ಹಾಗೂ ಜಾನಪದ ಕಲಾಪ್ರದರ್ಶನಗಳು ಮುಖ್ಯ ಆಕರ್ಷಣೆಯಾಗಿವೆ. ಡಿ. ೫ – ಮಧ್ಯಾಹ್ನ 2.30 ರಿಂದ ವಿವಿಧ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಹಾಗೂ ವಿಶೇಷ ಅತಿಥಿ ಉಪನ್ಯಾಸಗಳು ನಡೆಯಲಿವೆ.

ಡಿ. 6 – ಬೆಳಗ್ಗೆ 10.30 ಕ್ಕೆ ಸಾಧಕರಿಗೆ ಗೌರವ ಸಮರ್ಪಣೆ, ಸನ್ಮಾನ್ಯ ಅತಿಥಿಗಳಿಂದ ಸಂದೇಶಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾವಿರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.

ಆಕರ್ಷಣೀಯ ಕಾರ್ಯಕ್ರಮಗಳು:
4 ರಂದು ಸಂಜೆ 6.00ರಿಂದ ‘ಕ್ರಿಯೇಟಿವ್ ಯಕ್ಷಾರಾಧನಮ್’ ಹವ್ಯಾಸಿ ಕಲಾವಿದರಿಂದ ʼ ಶ್ರೀರಾಮಾನುಗ್ರಹ ಸಿಂದೂರ ವಿಜಯ” ಯಕ್ಷಗಾನ ಪ್ರದರ್ಶನ.
5 ರಂದು ಅಪರಾಹ್ನ 2:30 ರಿಂದ ದಿ. ಎಚ್. ಎಸ್ ವೆಂಕಟೇಶಮೂರ್ತಿಯವರ ಕುರಿತು ಭಾವ ನಮನ ಕಾರ್ಯಕ್ರಮ. ಸಂಜೆ 7.00ರಿಂದ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಮ್ಯಾಜಿಕ್ ಶೋ. 6 ರಂದು ಅಪರಾಹ್ನ 12.15 ರಿಂದ ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ ಸಂವಾದ: ಚುಟುಕುಬ್ರಹ್ಮ ಎಚ್. ಡುಂಡಿರಾಜ್ ರವರ ಉಪಸ್ಥಿತಿಯಲ್ಲಿ ಮಾತು ಕ(ವಿ)ತೆ.

ವಾರ್ಷಿಕೋತ್ಸವ ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ವೀರಪ್ಪ ಮೊಯ್ಲಿ ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಎಚ್. ಡುಂಡಿರಾಜ್ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರು, ಡಾ. ಎಚ್.ಎಸ್ ಬಲ್ಲಾಳ್ ಆಡಳಿತಗಾರರು, ರೇಡಿಯೋಲಜಿ ತಜ್ಞರು, ಮಣಿಪಾಲ ವಿ.ವಿಯ ಪ್ರೊ- ಚಾನ್ಸಲರ್ ಹಾಗೂ ಅಧ್ಯಕ್ಷರು, ಡಾ. ಜಿ. ರಾಮಕೃಷ್ಣ ಆಚಾರ್, ಸ್ಥಾಪಕರು ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಸಂಜೀವಿನಿ ಗೋಧಾಮ, ಮುನಿಯಾಲು, ಕೆ. ಗುಣಪಾಲ್ ಕಡಂಬ ವಿಶ್ರಾಂತ ಪ್ರಾಚಾರ್ಯರು, ಸಂಘಟನಾ ಕಾರ್ಯದರ್ಶಿಗಳು ಮಿಯ್ಯಾರು ಕಂಬಳ ಸಮಿತಿ, ಶನಿಲ್ ಗೌತಮ್, ಖ್ಯಾತ ನಟರು, ಸೋ ಫ್ರಂ ಸೋ ಖ್ಯಾತಿ ಇವರು ಆಗಮಿಸಲಿದ್ದಾರೆ.

ಈ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಬ್ಬಕ್ಕೆ ಎಲ್ಲಾ ನಾಗರಿಕರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಆಹ್ವಾನಿಸಿದೆ.

 

LEAVE A REPLY

Please enter your comment!
Please enter your name here