
ಚೈತನ್ಯ ಕಲಾವಿದರು ಬೈಲೂರು ಇವರ ತಂಡದಿಂದ ಈ ವರ್ಷದ ನೂತನ ಹಾಸ್ಯಮಯ ನಾಟಕ ರಾಘು ಮೇಸ್ಟ್ರು ಉಚಿತ ಪ್ರದರ್ಶನವು ಡಿ.6ರಂದು ಸಂಜೆ 6 ಗಂಟೆಗೆ ಕಾರ್ಕಳದ ಗಾಂಧಿ ಮೈದಾನ ಬಳಿಯ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಎಕ್ಸೆಲೆನ್ಸ್ ಡಿಗ್ರಿ ಕಾಲೇಜು ಮೂಡಬಿದ್ರೆ, ಹೋಟೆಲ್ ಕಾರ್ಕಳ ಇನ್ ಅನಘ ಗ್ರಾಂಡ್ , ಬಲ್ಮಠ ಫೌಂಡೇಶನ್, ಬಾಲಾಜಿ ಮೊಬೈಲ್ಸ್ ಕಾರ್ಕಳ, ನಿತ್ಯಾನಂದ ಎಲೆಕ್ಟ್ರಿಕಲ್ಸ್, ವಿಜಯಾನಂದ ಎಲೆಕ್ಟ್ರಿಕಲ್ಸ್ ಕಾರ್ಕಳ, ಜೆಎಂಜೆ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ಕಾರ್ಕಳ, ದೈವಾನುಗ್ರಹ ಟೂರ್ಸ್ ಅಂಡ್ ಟ್ರಾವೆಲ್ಸ್ ಜೋಡುರಸ್ತೆ ಅವರ ಸಹಕಾರದೊಂದಿಗೆ ಈ ಉಚಿತ ಪ್ರದರ್ಶನ ನಡೆಯಲಿದೆ.
ಪ್ರಸನ್ನ ಶೆಟ್ಟಿ ಬೈಲೂರುರವರ ಸಾರಥ್ಯ, ಕಥೆ, ನಿರ್ದೇಶನದಲ್ಲಿ ನಾಟಕ ಮೂಡಿಬಂದಿದೆ. ಕಿರಣ್ ಗರಡಿಮಜಲು ಸಂಗೀತ, ಉಮೇಶ್ ಪರಪು ರಂಗವಿನ್ಯಾಸ, ನಿಧೀಶ್ ಸೌಂಡ್ಸ್ ರಂಗನಪಲ್ಕೆ ಧ್ವನಿ ಮತ್ತು ಬೆಳಕು ನೀಡಿ ನಾಟಕ ರಚನೆಗೆ ಸಹಕರಿಸಿದ್ದಾರೆ.
ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಾಗಿದ್ದು, ಕಲಾಭಿಮಾನಿಗಳೆಲ್ಲರೂ ಬಂದು ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಚಿತ್ರ ತಂಡ ವಿನಂತಿಸಿದೆ.















