Home Blog Page 62

ಕಾರ್ಕಳ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ; ಅರ್ಜಿ ಆಹ್ವಾನ

0

ಕಾರ್ಕಳ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ; ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಯುಪಿಎಸ್‌ಸಿ ಮತ್ತು ಬ್ಯಾಂಕಿಂಗ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆಯಲು ಇಚ್ಛಿಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ) ಹಾಗೂ 3(ಬಿ)ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in, ಸಂಪರ್ಕಿಸಬಹುದು.

ಶಾಕ್ ಪ್ರಶ್ನೆಯೇ ಇಲ್ಲ-ಗಿರೀಶ್ ರಾವ್ ಸ್ಪಷ್ಟನೆ ದಾಳಿ ಅಲ್ಲವೇ ಅಲ್ಲ;ಪರಿಶೀಲನೆ ಅಷ್ಟೇ…

0

ಕಾರ್ಕಳದ ಮೆಸ್ಕಾಮ್ ಏ.ಓ. ಗಿರೀಶ್ ರಾವ್ ರವರ ಮೇಲೆ ಲೋಕಾಯುಕ್ತ ವಿಚಾರಣೆ ನಡೆಸಿದ ಬಗ್ಗೆ ಹಲವಾರು ಊಹಾಪೋಹ ಅಂತೆಕಂತೆಗಳು ಹಬ್ಬಿದ್ದು ಈ ಕುರಿತು ನೇರವಾಗಿ ಮಾಧ್ಯಮಗಳು ಗಿರೀಶ್ ರಾವ್ ರವರನ್ನು ಪ್ರಶ್ನಿಸಿದ್ದಾಗ ಸಾರ್ವಜನಿಕ ತಿಳಿವಿಗೆ ಅವರು ಪ್ರಕಟಪಡಿಸಿದ ಮಾಹಿತಿ.

*ನಾನು ಕಾರ್ಕಳ ಮೆಸ್ಕಾಂ ವಿಭಾಗದಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯನಿಷ್ಠೆಯಿಂದ,ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಗ್ರಾಹಕರಿಗೆ ನನ್ನ ಸೇವೆಯನ್ನು ನೀಡುತ್ತಾ ಬಂದಿದ್ದು,ನನ್ನ ವಿರುದ್ದ ಇಲಾಖೆಯಲ್ಲಿ ಯಾವುದೇ ದೂರುಗಳಾಗಲೀ ಆಪಾದನೆಗಳಾಗಲೀ ಇಲ್ಲ.ಅಕ್ರಮವಾಗಿ ಕಾನೂನು ಬಾಹಿರ ವಾಗಿ ನಾನು ಯಾವುದೇ ಆಸ್ತಿ ಸಂಪತ್ತು ಹಣ ಒಡವೆ ಹೊಂದಿರುವುದಿಲ್ಲ.ಹಾಗಾಗಿ ಲೋಕಾಯುಕ್ತ ದಾಳಿಯಿಂದ ನನಗೆ ಶಾಕ್ ಆಗಿದೆ ಎನ್ನುವ ವರದಿ ತೀರಾ ಹಾಸ್ಯಾಸ್ಪದ.ನಾನು ನ್ಯಾಯಪರತೆ ಹೊಂದಿರುವುದರಿಂದಲೇ‌ ಯಾವುದೇ ಶಾಕ್ ಗೆ ಒಳಗಾಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.

*2.98 ಕೋಟಿ ಅಕ್ರಮ ಸಂಪತ್ತು ಹೊಂದಿದ್ದೇನೆ ಎಂಬ ವರದಿಯು ಸತ್ಯಕ್ಕೆ ತೀರಾ ದೂರವಾದುದಾಗಿದೆ.ನನ್ನ ಹೆಂಡತಿಯ ಹೆಸರಿನಲ್ಲಿರುವ ಹೊಟೇಲ್ ಗೆ ಸಂಬಂದ ಪಟ್ಟ ಆಸ್ತಿಗೆ 2.25 ಕೋಟಿ ಬ್ಯಾಂಕ್ ಆಫ್ ಬರೋಡಾ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿ ಸಾಲ ಇರುತ್ತದೆ.

*ತಪ್ಪು ತಿಳುವಳಿಕೆಯಿಂದಾಗಿ ಹಲವರು ಸಾರ್ವಜನಿಕವಾಗಿ ಪ್ರಚುರಪಡಿಸಿದಂತೆ ನನ್ನ ಒಡೆತನದಲ್ಲಿ ಯಾವುದೇ ಹೊಟೇಲ್,ವಾಣಿಜ್ಯ ಸಂಕೀರ್ಣ ಇರುವುದಿಲ್ಲ.

*ಮನೆಯಲ್ಲಿ ಇದ್ದದ್ದು ಕೇವಲ ನಾಲ್ಕು ಸಾವಿರ ರೂಪಾಯಿ ಹಾಗೂ 189 ಗ್ರಾಂ ಚಿನ್ನ ಮಾತ್ರ.ಮನೆಯಲ್ಲಿ ಇರುವ ಹಳೆಯ ಹಾಗೂ ಹೊಸ ಸಾಮಾಗ್ರಿಗಳ ಮೌಲ್ಯಗಳನ್ನು ಆದರಿಸಿ ಲೋಕಾಯುಕ್ತದವರು ವರದಿ ನೀಡಿದ್ದಾರೆ.

*ನನ್ನ ಎಲ್ಲಾ ಆಸ್ತಿ ನ್ಯಾಯಬದ್ದವಾಗಿದ್ದು, ಯಾವುದೇ ಅಕ್ರಮ ದಾರಿಯಲ್ಲಿ ಸಂಪಾದನೆ ಮಾಡಿರುವುದಿಲ್ಲ.

*ನನ್ನ ವರಮಾನ ಗಳಿಕೆ ಕಾನೂನು ಪ್ರಕಾರ ತೆರಿಗೆ ಪಾವತಿಸಿ ಸಂಪಾದಿಸಿದ್ದಾಗಿದ್ದು ಎಲ್ಲವೂ ಪಾರದರ್ಶಕವಾಗಿದೆ.ಈ ಹಿನ್ನಲೆಯಲ್ಲಿ ಯಾವುದೇ ಅಳುಕಿಲ್ಲದೇ ಲೋಕಾಯುಕ್ತ ತನಿಖೆಗೆ ಮುಕ್ತ ಸಹಕಾರ ನೀಡಿದ್ದೇನೆ.

ಸಾರ್ವಜನಿಕ ಸೇವೆಯಲ್ಲಿ ಇರುವ ಓರ್ವ ಸರಕಾರಿ ಅಧಿಕಾರಿಯಾಗಿ ಜನರಲ್ಲಿ ಮೂಡಿದ ತಪ್ಪು‌‌ ತಿಳುವಳಿಕೆಯನ್ನು ನಿವಾರಿಸುವ ಸದುದ್ದೇಶದಿಂದ ಈ ಸ್ಪಷ್ಟನೆಯನ್ನು ಮಾಧ್ಯಮದ ಮುಂದಿರಿಸಿದ್ದೇನೆ.

ಎರಡು ದಿನಗಳ ಹಿಂದೆ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

0

ಎರಡು ದಿನಗಳ ಹಿಂದೆ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟುವಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆ ನಿವಾಸಿ ಗುರುಪ್ರಸಾದ್ ಅವರ ಮೃತದೇಹವನ್ನು ಈಜು ತಜ್ಞ ಈಶ್ವರ್ ಮಲ್ಪೆ ಅವರು ಯಶಸ್ವಿಯಾಗಿ ಮೇಲಕ್ಕೆತ್ತಿದ್ದಾರೆ.

ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿದ್ದನ್ನು ಗಮನಿಸಿ, ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದಭ೯ದಲ್ಲಿ ಕಾಲು ಜಾರಿ ನೀರು ಪಾಲಾಗಿದ್ದರು.

ಇಂದು (ಭಾನುವಾರ) ಈಶ್ವರ್ ಮಲ್ಪೆ ಅವರ ತಂಡ ನೀರಿಗೆ ಇಳಿದು ಹುಡುಕಾಟ ನಡೆಸಿ ಶಿತಾ೯ಡಿಯ ಕಜೆ ಬಳಿ ಮೃತ ದೇಹವನ್ನು ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.

ಕಾರ್ಕಳ : ಹಣದಾಸೆಗೆ ನವಜಾತ ಶಿಶುವನ್ನು ಮಾರಿದ ಹೆತ್ತವರು

0

ಕಾರ್ಕಳ : ಹಣದಾಸೆಗೆ ನವಜಾತ ಶಿಶುವನ್ನು ಮಾರಿದ ಹೆತ್ತವರು

ಎರಡು ದಿನದ ಮಗುವನ್ನು ಹಣದಾಸೆಗಾಗಿ ಹೆತ್ತ ತಾಯಿಯೇ ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರಿನ ನರಸಿಂಹಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ಒಂದು ಲಕ್ಷಕ್ಕಾಗಿ ಮಗುವನ್ನು ಕಾರ್ಕಳದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.

ಮಗುವಿನ ತಾಯಿಯನ್ನು ರತ್ನಾ ಎಂದು ಗುರುತಿಸಲಾಗಿದ್ದು, ಈಕೆಯೊಬ್ಬಳೇ ಅಲ್ಲದೇ, ಈ ಕುಕೃತ್ಯಕ್ಕೆ ಪತಿ ಸದಾನಂದ ಮತ್ತು ನಿವೃತ್ತ ನರ್ಸ್ ಕುಸುಮ ಎಂಬವರೂ ಭಾಗಿಯಾಗಿರುವುದು ತಿಳಿದು ಬಂದಿದೆ.

ಮೇ 22 ರಂದು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ವಾತಾವರಣ ಸ್ಪರ್ಶಿಸಿ ಮೂರು ದಿನಗಳಾಗುವ ಮೊದಲೇ ನಿವೃತ್ತ ನರ್ಸ್ ಕುಸುಮಳ ಮೂಲಕ ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಲಾಗಿದೆ. ಈ ಸುದ್ದಿ ತಿಳಿದ ನರಸಿಂಹರಾಜಪುರ ಠಾಣೆಯ ಇನ್ಸ್ಪೆಕ್ಟರ್ ನಿರಂಜನ ಗೌಡ ಮತ್ತು ಅವರ ತಂಡ ತಕ್ಷಣ ಎಚ್ಚೆತ್ತು, ಕಾರ್ಕಳಕ್ಕೆ ಧಾವಿಸಿ, ಆ ಪುಟ್ಟ ಜೀವವನ್ನು ರಕ್ಷಿಸಿದ್ದಾರೆ. ಸದ್ಯ, ಅನಾಥವಾಗಿರುವ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದೆ.

ರತ್ನಾ ಸದಾನಂದ ದಂಪತಿಗೆ ಈಗಾಗಲೇ ಮೂರು ಮಕ್ಕಳಿದ್ದು, ಅವರಲ್ಲಿಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಮಕ್ಕಳಿಗೆ ಸಿನೆಮಾ ತೋರಿಸುವ ಮೊದಲು ಈ ಸುದ್ದಿ ತಿಳಿಯಿರಿ; ಕೇಂದ್ರದಿಂದ ಹೊಸ ರೂಲ್ಸ್

0

ಮಕ್ಕಳಿಗೆ ಸಿನೆಮಾ ತೋರಿಸುವ ಮೊದಲು ಈ ಸುದ್ದಿ ತಿಳಿಯಿರಿ; ಕೇಂದ್ರದಿಂದ ಹೊಸ ರೂಲ್ಸ್

ಸಿನೆಮಾದ ಕಥಾವಸ್ತು ಮತ್ತು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಸಿನೆಮಾ ವೀಕ್ಷಣೆಗೆ ಸಂಬಂಧಿಸಿದಂತೆ ಯು/ಎ ಪ್ರಮಾಣಪತ್ರ ವಿಭಾಗದಲ್ಲಿ ಹೊಸ ವಿಭಾಗಗಳನ್ನು ಸೇರ್ಪಡೆಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಹೊಸ ಅಧಿಸೂಚನೆಯ ಪ್ರಕಾರ, ಪೋಷಕರ ಮಾರ್ಗದರ್ಶನದೊಂದಿಗೆ ಮಕ್ಕಳು ನೋಡಬಹುದಾದ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನಕ್ಕೆ ವಯಸ್ಸಿಗೆ ಅನುಗುಣವಾಗಿ ಯು/ಎ7+, ಯು/ಎ12+,ಯು/ಎ16+ ಎಂಬ ಪ್ರಮಾಣಪತ್ರ ನಿಗದಿ ಮಾಡಲಾಗಿದೆ. ಹಾಲಿ, ಚಲನಚಿತ್ರ ವೀಕ್ಷಣೆಗೆ ಸಂಬಂಧಪಟ್ಟಂತೆ, ಸಿನೆಮಾದ ವಿಷಯದ ಸ್ವರೂಪ ಮತ್ತು ಪ್ರಕಾರಕ್ಕೆ ಅನುಗುಣವಾಗಿ ಯು (ಸರ್ವರೂ ನೋಡಬಹುದಾದ), ಯು/ಎ (ಮಕ್ಕಳಿಗೆ ಪೋಷಕರ ಮಾರ್ಗದರ್ಶನ ಅಗತ್ಯ), ಎ (ವಯಸ್ಕರಿಗೆ) ಪ್ರಮಾಣಪತ್ರ ನೀಡಲಾಗುತ್ತದೆ.

 

ರೆಂಜಾಳ: ಸೋಂಬೆಟ್ಟು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣ ಚಿಕಿತ್ಸೆಗೆ ಬಳಕೆ

0

ರೆಂಜಾಳ: ಸೋಂಬೆಟ್ಟು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣ ಚಿಕಿತ್ಸೆಗೆ ಬಳಕೆ

ಸೋಂಬೆಟ್ಟು ಫ್ರೆಂಡ್ಸ್ ರೆಂಜಾಳ ಇದರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಸೋಂಬೆಟ್ಟು ಪ್ರೆಂಡ್ಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣವನ್ನು ಜಗ್ಗು ರೆಂಜಾಳ ಅವರ ತಾಯಿಯ ಮುಂದಿನ ಚಿಕಿತ್ಸೆಗಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೆಂಜಾಳ ಪಂಚಾಯತ್ ಅಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಮತ್ತು ಸದಸ್ಯರಾದ ರಮೇಶ್ ಶೆಟ್ಟಿ ಮಂಜೊಟ್ಟು ಹಾಗೂ ವೃಷಭ್ ರಾಜ್ ಜೈನ್ ರೆಂಜಾಳ ಇವರು ಉಪಸ್ಥಿತರಿದ್ದರು.

ಮಾಳ : ಶ್ರೀ ಗುರುಕುಲ ಶಾಲೆ ಪ್ರಾರಂಭೋತ್ಸವ

0

ಮಾಳ : ಶ್ರೀ ಗುರುಕುಲ ಶಾಲೆ ಪ್ರಾರಂಭೋತ್ಸವ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೂ ಕೊಟ್ಟು ಸ್ವಾಗತಿಸುವ ಮೂಲಕ 2025 – 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.

ವಿದ್ಯಾಮಾತೆ ಸರಸ್ವತಿ ದೇವಿಗೆ ದೀಪ ಬೆಳಗಿಸಿ ಹೊಸತಾಗಿ ಸೇರ್ಪಡೆಗೊಂಡ ಎಲ್ಲಾ
ವಿದ್ಯಾರ್ಥಿಗಳಿಗೆ ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆ ವತಿಯಿಂದ ವಿತರಿಸಿದ ಉಚಿತ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಮುಖ್ಯ ಶಿಕ್ಷಕಿ ಪೂರ್ಣಿಮಾ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಇವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿದರು. ಅತಿಥಿಯಾಗಿ ಆಗಮಿಸಿದ ವಿದ್ಯಾವರ್ಧಕ ಸಂಘದ ಸದಸ್ಯರಾದ ರಾಮ ಸೇರಿಗಾರ ರವೀಂದ್ರನಾಥ ಜೋಶಿ ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಸಹ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಸುನೀತಾ ಧನ್ಯವಾದ ನೀಡಿದರು.

ಹಲವು ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ನಿಂದ ನೋಟೀಸ್ ಜಾರಿ

0

ಹಲವು ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ನಿಂದ ನೋಟೀಸ್ ಜಾರಿ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆಯನ್ನು ಖಂಡಿಸಿ ಮುಸ್ಲಿಂ ನಾಯಕರು ಸರ್ಕಾರದ ವಿರುದ್ಧ ರಾಜೀನಾಮೆ ಅಸ್ತ್ರ ತೋರಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಿರಿಯ ನಾಯಕರು ಕರೆ ಮಾಡಿ ಪಕ್ಷಕ್ಕೆ ರಾಜಿನಾಮೆ ನೀಡಬಾರದು ಎಂದು ತಿಳಿಸಿದರೂ ಸಭೆ ನಡೆಸಿ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿರುವುದು, ಹಿರಿಯ ಸಚಿವರ ವಿರುದ್ಧ ಹೇಳಿಕೆ ನೀಡಿದ ಮುಸ್ಲಿಂ ನಾಯಕರಿಗೆ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಅಬ್ದುಲ್ ರಹಿಮಾನ್ ಹತ್ಯೆಯ ನಂತರ ಪಕ್ಷದ ಜವಾಬ್ದಾರಿಯುತ ನಾಯಕರಾಗಿ ನೀವು ಸಾರ್ವಜನಿಕರು, ಅಲ್ಪಸಂಖ್ಯಾತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವುದು ಆದ್ಯತೆಯಾಗಿದೆ. ಈ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ನಾಯಕರು సీఎం ಅವರ ಗಮನಕ್ಕೂ ವಿಷಯಗಳನ್ನು ತಂದಿದ್ದು ಎಲ್ಲಾ ನಾಯಕರು ನಿಮಗೆ ದೂರವಾಣಿ ಮೂಲಕ ಯಾವುದೇ ಸಭೆ ನಡೆಸಿ ಪಕ್ಷಕ್ಕೆ ರಾಜಿನಾಮೆ ನೀಡುವಂತಹ ದುಡುಕಿನ ಕ್ರಮ ಕೈಗೊಳ್ಳಬಾರದು, ಎಲ್ಲವನ್ನೂ ಸರಕಾರ ನಿಭಾಯಿಸುತ್ತದೆ ಎಂದು ಹೇಳಿದ ಹೊರತಾಗಿಯೂ ಸಭೆ ನಡೆಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೀರಿ.ಇದು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಕರಣವಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಅವರಿಗೆ ನೀಡಿದ ನೊಟೀಸ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾರೂ ಮಾತನಾಡಬೇಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಮೇಯರ್ ಕೆ.ಅಶ್ರಫ್ ಅವರಿಗೂ ನೋಟಿಸ್‌ ನೀಡಲಾಗಿದೆ.

ಕಾರ್ಕಳ : ಜೂ.3 ರಂದು ವಿವಿಧೆಡೆ ವಿದ್ಯುತ್

0

ಕಾರ್ಕಳ : ಜೂ.3 ರಂದು ವಿವಿಧೆಡೆ ವಿದ್ಯುತ್

ಮೆಸ್ಕಾಂ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 3ರ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಕಳ: ಕೆ.ಎಂ.ಇ.ಎಸ್. ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ನೇಮಕ

0

ಕಾರ್ಕಳ: ಕೆ.ಎಂ.ಇ.ಎಸ್. ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ನೇಮಕ

ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್ ನೇಮಕಗೊಂಡಿದ್ದಾರೆ.

ಇವರು ಆಂಗ್ಲಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 40 ವರ್ಷ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ಎನ್.ಸಿ.ಸಿ. ನೇವಲ್ ವಿಂಗ್ ಕಮಿಶನ್ಸ್ ಆಫೀಸರ್ ಆಗಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್, ವಿಶಾಖಪಟ್ಟಣ ನೇವಲ್ ಬೇಸ್ ಗಳಲ್ಲಿಎನ್.ಸಿ.ಸಿ ತರಬೇತಿ ಪಡೆದಿದ್ದಾರೆ. ಉತ್ತರ ಭಾರತದ ಮನ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್‌ ಪೆಡಿಶನ್‌ನಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಸೋಮನ ಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಸಾಹಿತ್ಯದ ಅಭಿರುಚಿ ಹೊಂದಿರುವ ಇವರು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಕಳ ಇವುಗಳಲ್ಲಿ ಸಕ್ರೀಯರಾಗಿದ್ದಾರೆ. ನಾಟಕ, ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿದ್ದು, ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿದ್ದಾರೆ. ಕಾರ್ಕಳ ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕರಾಗಿಯೂ, ಕಾರ್ಕಳ ಜೇಸೀಸ್ ಸಂಸ್ಥೆ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಇವರು ಬರೆದ ಕನ್ನಡ ಕಾದಂಬರಿ ‘ಪಥ’ ಬಿಡುಗಡೆಯಾಗಿದೆ. ಇವರು ಈ ವಿದ್ಯಾಸಂಸ್ಥೆಗೆ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್ ಅಭಿನಂದಿಸಿದ್ದಾರೆ.