Home Blog Page 80

ಮಸೀದಿ ಸಮೀಕ್ಷೆಗೆ ಬಂದಾಗ ಹಿಂಸೆ-ಗೋಲಿಬಾರ್: 3 ಸಾವು

0

ಮಸೀದಿ ಸಮೀಕ್ಷೆಗೆ ಬಂದಾಗ ಹಿಂಸೆ-ಗೋಲಿಬಾರ್: 3 ಸಾವು

ಉತ್ತರ ಪ್ರದೇಶದ ಸಂಭಲ್ ನಲ್ಲಿ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿ ಆರಂಭವಾದ ವಿವಾದವು ಹಿಂಸಾಚಾರಕ್ಕೆ ತಿರುಗಿ,ಮೂವರು ಸಾವಿಗೆ ಕಾರಣವಾಗಿದೆ.ಈ ಘಟನೆಯಲ್ಲಿ 20 ಪೊಲೀಸರು ಸಹಿತ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮೊಘಲರ ಕಾಲದಲ್ಲಿ ದೇಗುಲವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ಮಸೀದಿಯ ಸಮೀಕ್ಷೆಯನ್ನು ವಿರೋಧಿಸಿ ಜನರ ಗೊಂಪೊಂದು ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆಸಿದೆ. ಜತೆಗೆ ಪೊಲೀಸರತ್ತ ಕಲ್ಲು,ಚಪ್ಪಲಿ ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಉದ್ರಿಕ್ಕ ಗುಂಪಿನತ್ತ ಗುಂಡು ಹಾರಿಸಿದ್ದಾರೆ. ಹೀಗಾಗಿ 3 ಮಂದಿ ಅಸುನೀಗಿದ್ದಾರೆ.

ರವಿವಾರ ಬೆಳೆಗ್ಗೆ 7.30 ಕ್ಕೆ ಕೋರ್ಟ್ ನಿಂದ ನಿಯೋಜಿತವಾಗಿರುವ ಕೋರ್ಟ್ ಆಯುಕ್ತರ ತಂಡ ಸಮೀಕ್ಷೆ ನಡೆಸಲು ಆಗಮಿಸುತ್ತಿದ್ದಂತೆಯೇ ಪ್ರತಿಘಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿದರು.ಅದಕ್ಕೂ ಬಗ್ಗದೆ ಇದ್ದಾಗ ಪೊಲೀಸರು ಗುಂಡು ಹಾರಿಸಿದರು.ಹೀಗಾಗಿ ಮೂವರು ಮೃತಪಟ್ಟಿದಾರೆ.ಮುಂದಿನ 24 ಗಂಟೆಗಳ ಕಾಲ ಸಂಭಲ್ ತಾಲೂಕಿನಲ್ಲಿ ಮೊಬೈಲ್ ಇಂಟರನೆಟ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

15 ಮಂದಿ ವಶಕ್ಕೆ
ಗಲಾಟಿಗೆ ಸಂಬಂಧಿಸಿ ಮೂವರು ಮಹಿಳೆಯರು ಸಹಿತ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಮೊರದಾಬಾದ್ ಪೊಲೀಸ್ ಆಯುಕ್ತ ಅನಂಜ್ಯ ಕುಮಾರ್ ಸಿಂಗ್ ಹೇಳಿದ್ದಾರೆ.

ಕಾರ್ಕಳ:ಡಿ.ಆರ್.ರಾಜುರವರಿಗೆ ಶೃದ್ದಾಂಜಲಿ

0

ಸ್ವರ್ಗೀಯ ಡಿ.ಅರ್.ರಾಜು ಒಬ್ಬ ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ. ಅವರು ತಮ್ಮ ಬದುಕಿನಲ್ಲಿ ಪ್ರತಿಪಾದಿಸಿಕೊಂಡು ಬಂದ ಸಮಾಜಮುಖೀ ಕೆಲಸಗಳ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಬದ್ಧತೆಯಾಗಿದೆ. ಆಮೂಲಕ ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ ಎಂದು ಮಾಜಿ ಮುಖ್ಯ ಡಾ.ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.

ಅವರು ಬ್ಲಾಕ್ ಕಾರ್ಕಳ ಹಾಗೂ ಬ್ಲಾಕ್ ಕಾಂಗ್ರೆಸ್ ಹೆಬ್ರಿ ಜಂಟಿಯಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಿ ಆರ್ ರಾಜುರವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ದಿ.ರಾಜುರವರು ಕಾಂಗ್ರೆಸ್ ಪಕ್ಷದ ಒಬ್ಬ ಅತಿ ನಿಷ್ಠಾವಂತ ಕರ್ತವ್ಯನಿಷ್ಟ ಜನಪರ ಚಿಂತನೆಯ ಕಾರ್ಯಸಾಧಕ ನಾಯಕರಾಗಿದ್ದರು. ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ಶಾಂತಿ ಸೌಹಾರ್ಧತೆ ಅವರ ಬದುಕಿನ ಜೀವಾಳವಾಗಿತ್ತು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಉದಯ್ ಶೆಟ್ಟಿ ಮಾತನಾಡಿ ದಿ. ರಾಜುರವರು ಸಮಾಜದ ಸರ್ವಾಂಗೀಣ ಚಿಂತೆನೆ ಉಳ್ಳವರು ಸಮಾಜದ ಸರ್ವ ವ್ಯಕ್ತಿಗಳನ್ನು ಹೊಂದಿಕೊಂಡ ಜೀವನ ಸಾಧನೆ ಮಾಡಿದವರು ಕೊರೋನಾ ಕಷ್ಟ ಕಾಲದ ಸಂದರ್ಭದಲ್ಲಿ ಅವರು ಮಾಡಿದ ಜನಸೇವೆ ಅವಿಸ್ಮರಣೀಯ ಅವರ ಅಗಲಿಕೆ ನನಗೆ ಪಕ್ಷ ಸಂಘಟನೆಯ ವಿಚಾರವಾಗಿಯೂ ಅಪಾರ ನಷ್ಟ ಉಂಟು ಮಾಡಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುದ್ರಾಡಿ ಮಂಜುನಾಥ ಪೂಜಾರಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ನುಡಿ ನಮನ ಸಲ್ಲಿಸಿ ಮೃತರ ಗುಣಗಾನಗೈದರು.

ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಅದ್ಯಕ್ಷರುಗಳಾದ ಶುಭದ ರಾವ್ ಹಾಗೂ ಗೋಪಿನಾಥ್ ಭಟ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗಡೆ, ಶೃಂಗೇರಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ನಾಗರಾಜ್, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ವಿವಿದ ಘಟಕಗಳ ಅದ್ಯಕ್ಷರುಗಳು, ಗ್ರಾಮೀಣ ಸಮಿತಿಯ ಅದ್ಯಕ್ಷರುಗಳು ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

0

ಬೈಲೂರು:ನಿವೃತ್ತ ಉಪನ್ಯಾಸಕ ಶಾಂತಿನಾಥ ಜೋಗಿ ನಿಧನ

ಕಾರ್ಕಳ:ಬೈಲೂರು ಸರಕಾ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ, ನೀರೆ ಬೈಲೂರು ನಿವಾಸಿ ಶಾಂತಿನಾಥ ಜೋಗಿ (63 ) ಅವರು ನ. 23 ರಂದು
ನಿಧನ ಹೊಂದಿದರು.

ಮೃತರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಅವರು 35 ವರ್ಷದ ಶಿಕ್ಷಕ ವೃತ್ತಿಯಲ್ಲಿ ಸುಧೀರ್ಘ ಸೇವೆಯನ್ನು ಬೈಲೂರಿನ ಸರಕಾರಿ ಅಡವಿ ಪೂರ್ವ ಕಾಲೇಜಿನಲ್ಲಿ ಸಲ್ಲಿಸಿದ್ದರು.

ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರಪಾಂಡಿ ಸಂಸ್ಮರಣಾ ಪ್ರಶಸ್ತಿ

0

ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರಪಾಂಡಿ ಸಂಸ್ಮರಣಾ ಪ್ರಶಸ್ತಿ

ಕಾರ್ಕಳ: ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷದಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರಾದ ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ “ಸಾವಿರದ ನೆನಪು” ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ ವಿದ್ವಾಂಸ ರಾಘವ ನಂಬಿಯಾರ್ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಕೆ.ಗುಣಪಾಲ ಕಡಂಬ, ಇರ್ವತ್ತೂರು ಉದಯ ಕುಮಾರ್ ಜೈನ್, ಹಾಗೂ ಮದ್ರಬೆಟ್ಟು ವಸಂತ ಅಧಿಕಾರಿ, ಜಗದೀಶ ಅಧಿಕಾರಿ,ಪತ್ನಿ ಶ್ರೀಮತಿ ವಿಜಯ ಶ್ರೀಧರ ಪಾಂಡಿ, ಪುತ್ರಿ ಶ್ರೀಮತಿ ಶ್ರೀಶಾ, ಪುತ್ರ ಶ್ರೀಕಾಂತ್ ಕುಮಾರ್ ಉಪಸ್ಥಿತರಿದ್ದರು.

ನಿ. ಅಧ್ಯಾಪಕ ವಾಗ್ಮಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು ಮೂಡಬಿದಿರೆಯ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ವಂದಿಸಿದರು.ನಂತರ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಬೀಷ್ಮ ವಿಜಯ ತಾಳಮದ್ದಳೆ ಜರಗಿತು.

 

ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖರಾಗಿ ಅಜೆಕಾರು ವ್ಯವಸಾಯ ಸಂಘದ ನಿದೇ೯ಶಕರಾದ ವಿಜೇತಾ ಪೈ ಆಯ್ಕೆ.

0

ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖರಾಗಿ ಅಜೆಕಾರು ವ್ಯವಸಾಯ ಸಂಘದ ನಿದೇ೯ಶಕರಾದ ವಿಜೇತಾ ಪೈ ಆಯ್ಕೆ.

ದಾವಣಗೆರೆಯ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನವೆಂಬರ್ 22 ಶುಕ್ರವಾರದಂದು ಜರುಗಿದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ವಿಜೇತಾ ಪೈಯವರನ್ನು ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಮಹಿಳಾ ಪ್ರಮುಖರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕರಾದ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹರಾದ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯರಾದ ಅರವಿಂದ ದೇಶಪಾಂಡೆ, ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷರಾದ ಬಾಗಲಕೋಟೆಯ  ರಾಜಶೇಖರ ಶೀಲವಂತ,ನೂತನ ಅಧ್ಯಕ್ಷರಾದ ದಾವಣಗೆರೆಯ ಪ್ರಭುದೇವ ಆರ್ ಎಂ, ರಾಯಚೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.

 

ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

0

ಜನತೆ ಕಾಂಗ್ರೆಸ್ ಮೇಲಿಟ್ಟ ಅತೀವ ಪ್ರೀತಿಯಿಂದ ಕಾಂಗ್ರೆಸ್ ಭರ್ಜರಿ ಗೆಲುವು : ಉದಯ ಶೆಟ್ಟಿ ಮುನಿಯಾಲು

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಮೂರೂ ಕ್ಷೇತ್ರದ ವಿಜಯದಿಂದಾಗಿ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿರುವುದು ಸ್ಪಷ್ಟ ಆಗಿದೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವ ಕುಮಾರ್ ರವರ ಕಾರ್ಯ ವೈಖರಿಯನ್ನು ಜನತೆ ಒಪ್ಪಿ ಕೊಂಡಿದ್ದಾರೆ.ಜನರ ಮನೆಗೆ ತಲುಪುವ ವಿವಿಧ ಭಾಗ್ಯಗಳ ಸೇವೆಯನ್ನು ಜನ ಒಪ್ಪಿ ಕೊಂಡಿರುವುದು ಈ ಚುನಾವಣೆಯಲ್ಲಿ ಸ್ಪಷ್ಟ ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಮೂರೂ ವಿಧಾನಸಭಾ ಕ್ಷೇತ್ರಗಳ ಗೆಲುವು ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ. ಕ್ಲೀನ್ ಇಮೇಜನ್ನು ಹೊಂದಿರುವ ಸಿದ್ದರಾಮಯ್ಯನವರು ಕಳಂಕರಹಿತ ಮುಖ್ಯಮಂತ್ರಿ ಹಾಗೂ ಡಿ ಕೆ ಶಿವ ಕುಮಾರ್ ರವರು ಉತ್ತಮ ಆಡಳಿತಗಾರ ಎಂಬುದನ್ನು ಮತದಾರ ಪ್ರಭುಗಳು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಕಾಂಗ್ರೆಸ್ ಆಡಳಿತವು ರಾಜ್ಯದ ಜನತೆಯ ಮನಸ್ಸು ಗೆದ್ದಿದೆ ಎನ್ನುವುದಕ್ಕೆ ಇಂದಿನ ತೀರ್ಪು ಸಾಕ್ಷಿಯಾಗಿದೆ. ಕಾಂಗ್ರೆಸ್ ಆಡಳಿತವನ್ನು ಪೂರ್ಣ ಮನಸ್ಸಿನಿಂದ ಬೆಂಬಲಿಸಿದ ಮತದಾರ ಪ್ರಭುವಿಗೆ ಧನ್ಯವಾದಗಳು ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಉಡುಪಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ಮೈಸೂರು ವಿಭಾಗೀಯ ಮಟ್ಟಕ್ಕೆ

0

ಉಡುಪಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ:ಕಾರ್ಕಳ ಜ್ಞಾನಸುಧಾದ ಇಬ್ಬರು ಮೈಸೂರು ವಿಭಾಗೀಯ ಮಟ್ಟಕ್ಕೆ

ಉಡುಪಿ : ರಾಜ್ಯ ಕ್ಷೇಮಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನ.21ರಂದು ನಡೆದ 2024-25ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಇಂಗ್ಲಿಷ್ ಪ್ರಬಂಧದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮಯೂರ್.ಎಂ.ಗೌಡ ಪ್ರಥಮ ಸ್ಥಾನವನ್ನು ಹಾಗೂ ಪ್ರಥಮ ವಿಜ್ಞಾನ ವಿಭಾಗದ ಜಾಹ್ನವಿ ಜೆ. ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದು ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಈ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ.

ನಿಟ್ಟೆಯಲ್ಲಿ ಡೆವ್ ರೆವ್ ಕಂಪೆನಿ ಸಹಯೋಗದೊಂದಿಗೆ ನಡೆದ ಮಹಿಳಾ ಎಐ ಹ್ಯಾಕಥಾನ್ ಓರಿಯಂಟೇಶನ್

0

ನಿಟ್ಟೆಯಲ್ಲಿ ಡೆವ್ ರೆವ್ ಕಂಪೆನಿ ಸಹಯೋಗದೊಂದಿಗೆ ನಡೆದ ಮಹಿಳಾ ಎಐ ಹ್ಯಾಕಥಾನ್ ಓರಿಯಂಟೇಶನ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ.೧೮ ರಿಂದ ವಿದ್ಯಾರ್ಥಿನಿಯರಿಗಾಗಿ ಡೆವ್ ರೆವ್ ಹಾಗೂ ಜಿಆರ್-ಎಐ-ಸಿಇ ಕಂಪೆನಿ ಆಯೋಜಿಸಿದ 2 ವಾರಗಳ ಮಹಿಳಾ ಎಐ ಹ್ಯಾಕಥಾನ್ ಈವೆಂಟ್ ನ ಓರಿಯಂಟೇಶನ್ ಮತ್ತು ಇಂಡಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಂಜಿನಿಯರಿಂಗ್ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡೆವ್ ರೆವ್ ನ 12 ಮಂದಿ ನುರಿತ ತರಬೇತುದಾರರ ತಂಡವು ನಿಟ್ಟೆ ಕ್ಯಾಂಪಸ್ ಗೆ ಬಂದು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಓರಿಯಂಟ್ ಮಾಡುವ ಮೂಲಕ ಮತ್ತು ಭಾಗವಹಿಸುವವರಿಗೆ ಪ್ರಾಬ್ಲೆಮ್ ಸ್ಟೇಟ್ಮೆಂಟ್ ನೀಡುವ ಮೂಲಕ ಹ್ಯಾಕಥಾನ್ ಗೆ ಚಾಲನೆ ನೀಡಿದರು. ಹ್ಯಾಕಥಾನ್ ನ ವಿಜೇತರನ್ನು ಡಿಸೆಂಬರ್ ನಲ್ಲಿ ಘೋಷಿಸಲಾಗುವುದು ಮತ್ತು ವಿಜೇತರು ಆಕರ್ಷಕ ನಗದು ಬಹುಮಾನಗಳನ್ನು ಮತ್ತು ಡೆವ್ ರೆವ್ ಅವರೊಂದಿಗೆ ಇಂಟರ್ನ್ ಶಿಪ್ ಗೆ ಅವಕಾಶವನ್ನು ಪಡೆಯುತ್ತಾರೆ.

ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಅವರು ಡೆವ್ ರೆವ್ ತಂಡವನ್ನು ಸ್ಪರ್ಧಿಗಳಿಗೆ ಪರಿಚಯಿಸಿದರು ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹ್ಯಾಕರ್ ಅರ್ತ್ ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

0

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ ಅಂಚನ್ ಪ್ರಥಮ ಸ್ಥಾನ

ದಕ್ಷಿಣ ಕನ್ನಡ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (ರಿ.) ಇದರ ವತಿಯಿಂದ ನಡೆದ ರಾಜ್ಯ ಮಠದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕೆರ್ವಾಶೆಯ ಆಯುಷ್ ಪಿ. ಅಂಚನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಆಯುಷ್ ಪಿ. ಅಂಚನ್ ಸೆಕ್ರೆಡ್ ಹಾರ್ಟ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು,ಇವರು ಕೆರ್ವಾಶೆಯ ಪಾಲ್ದಕ್ಯಾರ್ ಪ್ರಕಾಶ್ ಪೂಜಾರಿ ಮತ್ತು ಸುನೀತಾ ದಂಪತಿಯ ಪುತ್ರ.

ನೇಜಾರು ಕೊಲೆ ಪ್ರಕರಣ- ಆರೋಪಿ ಪರ ವಾದ ಮಂಡನೆ ಹಿಂಪಡೆದ ವಕೀಲರು

0

ಉಡುಪಿ ಸಮೀಪದ ನೇಜಾರಿನಲ್ಲಿ ವರ್ಷದ ಹಿಂದೆ ನಡೆದಿದ್ದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ವಾದ ಮಂಡಿಸುತ್ತಿದ್ದ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವುದರಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನವೆಂಬರ್ 20ರಂದು ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಲಾಗಿದೆ.

ನ್ಯಾಯಾಲಯವು ಅಕ್ಟೋಬರ್ 24 ರಂದು 1 ಮತ್ತು 2 ಸಾಕ್ಷಿಗಳಿಗೆ ನವೆಂಬರ್ 20 ರಂದು ವಿಚಾರಣೆಗೆ ಮತ್ತು 3 ಮತ್ತು 4 ಸಾಕ್ಷಿಗಳಿಗೆ ನವೆಂಬರ್ 21 ರಂದು ಹಾಜರಾಗಲು ದಿನಾಂಕ ನಿಗದಿಪಡಿಸಿತ್ತು. ಅದರಂತೆ ಆರೋಪಿ ಪ್ರವೀಣ್ ಚೌಗುಲೆಯನ್ನು ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಕರೆತರಲಾಯಿತು.

ಆರೋಪಿಯನ್ನು ಮಲ್ಪೆ ಠಾಣೆಯ ಸಿಪಿಐ ಮಂಜುನಾಥಗೌಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಚೌಗುಲೆ ಪರ ವಕೀಲರು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಚೌಗುಲೆ ಅವರ ಪತ್ನಿ ಹೊಸ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕೂಡಲೇ ವಕೀಲರನ್ನು ನೇಮಿಸುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗಳಿಗೆ ಸೂಚಿಸಿದರು. ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವ ಅವರು ಕೊನೆ ಕ್ಷಣದಲ್ಲಿ ವಕೀಲರನ್ನು ಹಿಂಪಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ನಡೆಯಬೇಕಿದ್ದ ಸಾಕ್ಷಿ ವಿಚಾರಣೆಯನ್ನು ಇದೀಗ ಗುರುವಾರಕ್ಕೆ ಮುಂದೂಡಲಾಗಿದೆ. ಚೌಗುಲೆ ಅವರನ್ನು ಹೆಚ್ಚಿನ ಭದ್ರತೆಯಲ್ಲಿ ಮತ್ತೆ ಹಿರಿಯಡ್ಕ ಜೈಲಿಗೆ ಕರೆದೊಯ್ಯಲಾಯಿತು. ಇದೇ ವೇಳೆ ಚೌಗುಲೆ ಅವರು ಪ್ರಸ್ತುತ ಇರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಧೀಶ ಸಮೀವುಲ್ಲಾ ಅವರಿಗೆ ಮನವಿ ಮಾಡಿದರು.