Home Blog Page 9

ಉಡುಪಿ: ‘ಗಿರಿಜಾ ಸರ್ಜಿಕಲ್ಸ್’ ನೂತನ ಶೋ ರೂಂ ಉದ್ಘಾಟನೆ

0

 

ಉಡುಪಿಯ ಜೋಡುಕಟ್ಟೆ ಬಳಿಯ ಆಶ್ರಯ ಟವರ್ಸ್‌ ನೆಲ ಮಹಡಿಯಲ್ಲಿ ಸ್ಥಳಾಂತರಗೊಂಡ ನೂತನ ‘ಗಿರಿಜಾ ಸರ್ಜಿಕಲ್ಸ್’ ಶೋ ರೂಂ ರವಿವಾರ ಉದ್ಘಾಟನೆಗೊಂಡಿತು.

ಮಾಜಿ ಉಪಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಶಾಸಕರಾದ ಯತ್ನಾಲ್ ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಶೋ ರೂಂ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಚ್.ಎಸ್. ಬಲ್ಲಾಳ್, ಗಿರಿಜಾ ಸರ್ಜಿಕಲ್ಸ್ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಮಾಲೀಕ ರವೀಂದ್ರ ಶೆಟ್ಟಿ ಅವರನ್ನು ಶ್ಲಾಘಿಸಿದರು. ಈ ಶೋರೂಂನಲ್ಲಿ ಉತ್ತಮ ದರ್ಜೆಯ ಹೆಲ್ತ್ ಕೇರ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಸಿಗುತ್ತದೆ. ಇದು ವಿಶೇಷವಾಗಿ ವೃದ್ಧರಿಗೆ ಪ್ರಯೋಜನಕಾರಿಯಾಗಿದೆ ಎಂದರು. COVID-19 ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಬದ್ರತೆಯ ಕೆಲಸ ಸಂಸ್ಥೆಯು ಮತ್ತಷ್ಟು ಗ್ರಾಹಕ ಸ್ನೇಹಿ ಆಗುವಂತೆ ಮಾಡಿದೆ ಎಂದು ಹೇಳಿದರು.

ಕಂಪನಿಯು ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ಜನರಿಗೆ ಅಗತ್ಯವಿರುವ ಎಲ್ಲಾ ಉತ್ಪನ್ನಗಳನ್ನು ಹಲವು ವರ್ಷಗಳಿಂದ ಜನಸಾಮಾನ್ಯರಿಗೆ ನೀಡುತ್ತಿದೆ. “ವಿಶೇಷವಾಗಿ ಮಧುಮೇಹ ರೋಗಿಗಳಿಗೆ ಅಗತ್ಯವಿರುವ ಉತ್ಪನ್ನಗಳಾದ ನೀರಿನ ಹಾಸಿಗೆ, ಮಧುಮೇಹ ಪಾದರಕ್ಷೆಗಳು ಇಲ್ಲಿ ಲಭ್ಯವಿದೆ. ಕೆಲವು ಶಸ್ತ್ರಚಿಕಿತ್ಸಾ ವಸ್ತುಗಳು ದುಬಾರಿಯಾಗಿರುತ್ತವೆ. ಆದ್ದರಿಂದ ಕಂಪನಿಯು ಬಾಡಿಗೆ ಆಧಾರದ ಬಳಕೆಯನ್ನು ಪರಿಚಯಿಸಿದೆ. ಇದು ತುಂಬಾ ಆದರ್ಶ ಪರಿಕಲ್ಪನೆಯಾಗಿದೆ” ಎಂದು ಅವರು ಹೇಳಿದರು.

ಜಿ ಶಂಕ‌ರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ ಶಂಕರ್ ಮಾತನಾಡಿ ‘ರವೀಂದ್ರ ಶೆಟ್ಟಿ ಎರಡು ಜಿಲ್ಲೆಗಳಲ್ಲಿ ಐದು ಶಾಖೆಗಳನ್ನು ತೆರೆದಿದ್ದಾರೆ. ಇದು ಶ್ಲಾಘನೀಯ ಸಾಧನೆಯಾಗಿದೆ. ಗಿರಿಜಾ ಹೆಲ್ತ್ಕರ್ ಮತ್ತು ಸರ್ಜಿಕಲ್ಸ್ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಮಾಲೀಕ ರವೀಂದ್ರ ಶೆಟ್ಟಿ ತಮ್ಮ ಗ್ರಾಹಕ ಸ್ನೇಹಿ ವಿಧಾನದಿಂದ ಗ್ರಾಹಕರನ್ನು ಆಕರ್ಷಿಸುತ್ತಾರೆ. ವ್ಯವಹಾರದಲ್ಲಿ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಜ್ವಲ್ ಡೆವಲಪರ್ಸ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ, ಕಿದಿಯೂರು ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಸಮಾಜ ಸೇವಕಿ ಐ.ನಿರುಪಮಾ ಪ್ರಸಾದ್ ಮತ್ತು ಇತರರು ಹಾಜರಿದ್ದು ಶುಭ ಹಾರೈಸಿದರು.

ಕರಾವಳಿ ಕರ್ನಾಟಕದ ಅತಿದೊಡ್ಡ ವೈದ್ಯಕೀಯ ಸಲಕರಣೆಗಳ ಮಳಿಗೆ ಗಿರಿಜಾ ಸರ್ಜಿಕಲ್ಸ್ ಗ್ರಾಹಕರು ಖರೀದಿಸುವ ಮೊದಲು ವೈಯಕ್ತಿಕವಾಗಿ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಬಹುದಾದ ಮತ್ತು ಖಚಿತಪಡಿಸಿಕೊಳ್ಳಬಹುದಾದ ವಿಶಿಷ್ಟ ಅನುಭವವನ್ನು ನೀಡಲು ಬದ್ಧವಾಗಿದೆ.
ಹೊಸ ಶೋರೂಮ್‌ನಲ್ಲಿ ಕುಟುಂಬ ಆರೋಗ್ಯ ಸಾಧನಗಳು, ನೆಬ್ಯುಲೈಸರ್ಗಳು ಪಲ್ಸ್ ಆಕ್ಸಿಮೀಟರ್ಗಗಳು, ಶಿಶು ಆರೈಕೆ ಮತ್ತು ಚರ್ಮದ ಆರೈಕೆ ಉತ್ಪನ್ನಗಳು, COVID ಮತ್ತು ಸುರಕ್ಷತಾ ಅಗತ್ಯ ವಸ್ತುಗಳು, ಜೆನೆರಿಕ್ ಔಷಧಿಗಳು ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಮಾಣೀಕೃತ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒಂದೇ ಸೂರಿನಡಿ ನೀಡುತ್ತದೆ.

ಮಾಲೀಕ ರವೀಂದ್ರ ಶೆಟ್ಟಿ ಎಲ್ಲಾ ಗಣ್ಯರು ಮತ್ತು ಹಿತೈಷಿಗಳಿಗೆ ಅವರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ರಾಘವೇಂದ್ರ ಪ್ರಭು ನಿರೂಪಿಸಿದರು. ರವೀಂದ್ರ ಶೆಟ್ಟಿ, ಸುರೇಖಾ ಶೆಟ್ಟಿ, ಹರೀಶ್ ಕುಮಾರ್, ಪಾಲುದಾರರು, ಸ್ನೇಹಿತರು, ಕುಟುಂಬ ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ : ವೃತ್ತಿ ಮಾರ್ಗದರ್ಶನ

0

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಡುಪಿಯ ವಿ-ರೀಚ್ ಅಕಾಡೆಮಿಯ ಮುಖ್ಯಸ್ಥ ಸಿ.ಎಸ್ ಸಂತೋಷ್ ಪ್ರಭು ಇವರಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು.

ಪ್ರಸ್ತುತ ವಾಣಿಜ್ಯ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ತಿಳಿಸುತ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಟ್ಟರು. ಇದೇ ಸಂದರ್ಭ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಸಾಹಿತ್ಯ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಶೈಲೇಶ್ ಉಪಸ್ಥಿತರಿದ್ದರು.

ಸಾಮಾಜಿಕ ಸೌಹಾರ್ದತೆ ಕದಡುವ ಜಾತಿಗಣತಿ. ಜನರೇ ಬಹಿಷ್ಕರಿಸುವ ಮುನ್ನ, ಅವೈಜ್ಞಾನಿಕ ಜಾತಿಗಣತಿಯನ್ನು ತಕ್ಷಣವೇ ನಿಲ್ಲಿಸಿ- ಕಾರ್ಕಳ ಬಿಜೆಪಿ ಆಗ್ರಹ

0

 

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜಾತಿ ಜನಗಣತಿ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಜನಗಣತಿ ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಸರ್ಕಾರದ ಮೂಲಕ ನಡೆಸಲ್ಪಡುತ್ತಿದೆ. ಈ ಜನಗಣತಿ ವೈಜ್ಞಾನಿಕವಾಗಿಲ್ಲ, ಸಮಾಜದ ಹಿತಾಸಕ್ತಿಯ ದೃಷ್ಟಿಯಿಂದಲೂ ಇದು ಸರಿಯಿಲ್ಲ; ಈ ಸರ್ಕಾರಕ್ಕೆ ಜನರ ಹಿತಾಸಕ್ತಿ ಮುಖ್ಯವಾಗಿದ್ದರೆ, ಸರಿಯಾದ ಸಮಯದಲ್ಲಿ, ಸೂಕ್ತ ಸಿದ್ಧತೆಗಳೊಂದಿಗೆ ಜನಗಣತಿ ನಡೆಸಬಹುದಾಗಿತ್ತು. ಆದರೆ, ತರಾತುರಿಯಲ್ಲಿ ಹಾಗೂ ಹಬ್ಬದ ಕಾಲದಲ್ಲಿ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಸರ್ಕಾರದ ನಿಜಸ್ವಭಾವವನ್ನು ಬಹಿರಂಗಪಡಿಸುತ್ತದೆ.

ನವರಾತ್ರಿ ಹಬ್ಬದ ಪವಿತ್ರ ಕಾಲದಲ್ಲಿ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ಬಲವಂತವಾಗಿ ತೊಡಗಿಸುವ ಮೂಲಕ, ಅವರ ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಶಿಕ್ಷಕರನ್ನು ಹಬ್ಬದಿಂದ ದೂರವಿಟ್ಟು ಆಡಳಿತಾತ್ಮಕ ಒತ್ತಡಕ್ಕೆ ಒಳಪಡಿಸಿರುವುದು ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ.

ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ಈ ಪವಿತ್ರ ಹಬ್ಬದ ಸಮಯವನ್ನು ಗುರಿಯಾಗಿಸಿಕೊಂಡು, ಸಮಾಜದ ಶಾಂತಿಕದಡಲು ಪ್ರಯತ್ನಿಸುತ್ತಿದೆ. ಜನರನ್ನು ಜಾತಿ ಆಧಾರದ ಮೇಲೆ ವಿಭಜಿಸಿ ಸಮುದಾಯಗಳ ನಡುವೆ ಭಿನ್ನತೆ ಹೆಚ್ಚಿಸಲು ಹಾಗೂ ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಜನಗಣತಿ ಎಂಬ ಸೂಕ್ಷ್ಮ ವಿಚಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಅಷ್ಟೇ ಅಲ್ಲದೇ,

1. ಈಗ ನಡೆಸುತ್ತಿರುವ ಜಾತಿಗಣತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ, ಪಾರದರ್ಶಕತೆಯೂ ಇಲ್ಲ.
2. ಶಿಕ್ಷಕರು ಈ ರೀತಿಯ ಸೂಕ್ಷ್ಮ ಸಮೀಕ್ಷೆಗೆ ತಯಾರಾಗಿಲ್ಲ, ಅವರಿಗೆ ಅಗತ್ಯವಾದ ತರಬೇತಿಯನ್ನೂ ನೀಡಲಾಗಿಲ್ಲ.
3. ಕ್ಷೇತ್ರದ ಭೌಗೋಳಿಕ ಮಾಹಿತಿಯೆ ಇಲ್ಲದ ಕಡೆ ಶಿಕ್ಷಕರನ್ನು ಜಾತಿಗಣತಿಗೆ ನಿಯೋಜಿಸಲಾಗಿದೆ. ಇದರಿಂದ ಸಾಕಷ್ಟು ಕಷ್ಟ ಪಡುವಂತಾಗಿದೆ ಮಾತ್ರವಲ್ಲದೆ ಮನೆಗಳು ಗಣತಿಗೆ ಸಿಗದೇ ಇರುವ ಸಾಧ್ಯತೆಗಳಿವೆ.
4. ನೆಟ್ವರ್ಕ್ ಸಮಸ್ಯೆ ಬಹಳಷ್ಟು ಕಡೆಗಳಲ್ಲಿದೆ, ಅಂತಹ ಕ್ಷೇತ್ರಗಳಲ್ಲಿ ಜಾತಿಗಣತಿ ಡೇಟಾ ಎಂಟ್ರಿ ಅಸಾಧ್ಯ. ಪರ್ಯಾಯ ಮಾರ್ಗವನ್ನು ಸರ್ಕಾರ ಸೂಚಿಸಿದೆಯೇ? ಹಾಗಾಗಿ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ನಿಖರತೆಯ ಬಗ್ಗೆ ಗ್ಯಾರಂಟಿ ಇಲ್ಲ.
6. ಈ ಹಬ್ಬದ ಸಮಯದಲ್ಲಿ, ಹಬ್ಬದ ಒತ್ತಡದಲ್ಲಿ ಸಂಗ್ರಹವಾಗುತ್ತಿರುವ ಮಾಹಿತಿಯ ನಿಖರತೆ ಅನುಮಾನಾಸ್ಪದವಾಗಿದೆ.

ಒಟ್ಟಾರೆಯಾಗಿ ಈ ಜಾತಿಗಣತಿ ಸಮಾಜದಲ್ಲಿ ಜಾತ್ಯಾತೀತ ಭಿನ್ನತೆಗಳನ್ನು ಹೆಚ್ಚಿಸಿ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯುಂಟುಮಾಡಲಿದೆ.

ಆದ್ದರಿಂದ, ಸಮಾಜದ ಹಿತದೃಷ್ಟಿಯಿಂದ ಈ ಅವೈಜ್ಞಾನಿಕ, ಸೂಕ್ತ ಸಿದ್ಧತೆಗಳಿಲ್ಲದೆ, ಮತ ಬ್ಯಾಂಕ್ ರಾಜಕೀಯಕ್ಕಾಗಿ ನಡೆಸಲಾಗುತ್ತಿರುವ ಜಾತಿ ಜನಗಣತಿಯನ್ನು ಜನರೇ ಬಹಿಷ್ಕರಿಸುವ ಮುನ್ನ, ಜಾತಿಗಣತಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಕಾರ್ಕಳ ಬಿಜೆಪಿ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 25ನೇ ವರ್ಷದ ವಾರ್ಷಿಕ ಮಹಾಸಭೆ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 25ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ, ವಾರ್ಷಿಕ ಲೆಕ್ಕಪತ್ರ ಮತ್ತು 19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಮಾರಂಭದ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು.

ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದವರು ಕಳೆದ 25 ವರ್ಷಗಳ ಹಿಂದೆ ನಮ್ಮಿ ಸಂಸ್ಥೆಯನ್ನು ಅಂದಿನ ಸದಸ್ಯರುಗಳ ಸಹಕಾರದೊಂದಿಗೆ ಬಹಳಷ್ಟು ಶ್ರಮ ವಹಿಸಿ ಸಮಾಜಮುಖಿ ಕಾರ್ಯಕ್ರಮದೊಂದಿಗೆ ನಮ್ಮೀ ಸಂಸ್ಥೆಯನ್ನು ಕಟ್ಟಿ ಮುನ್ನಡೆಸಿಕೊಂಡು ಬಂದಿದ್ದು, ಅಂದು ಬಹಳಷ್ಟು ಸಧೃಢವಾಗಿ ಹಾಕಿ ಕೊಟ್ಟ ಪಂಚಾಂಗ ಇಂದು ಅತ್ಯಂತ ಎತ್ತರಕ್ಕೆ ಸಂಸ್ಥೆ ಬೆಳೆಯಲು ಸಾಧ್ಯವಾಗುತ್ತಿದೆ ಎಂದರು.

2025- 2027ನೇ ಸಾಲಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ವೇದಿಕೆಯಲ್ಲಿ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸರಬೈಲು, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಪೂವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತಿತರಿದ್ದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಕೆದಿಂಜೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಲೇಖನಾ ಸಾಮಾಗ್ರಿ ವಿತರಣೆ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ರಜತ ವರ್ಷಾಚರಣೆಯ ಸಮಾರೋಪ ಸಮಾರಂಭದ ಪ್ರಯುಕ್ತ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಬ್ಬನಡ್ಕ ಸದಾಶಿವ ಪುತ್ರನ್ ಅವರ ಪ್ರಯೋಜಕತ್ವದಲ್ಲಿ ಉಚಿತ ಬರೆಯುವ ಪುಸ್ತಕ ಹಾಗೂ ಲೇಖನಾ ಸಾಮಾಗ್ರಿ ವಿತರಣೆ ಮಾಡಲಾಯಿತು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಉಪಾಧ್ಯಕ್ಷ ಸತೀಶ್ ಅಬ್ಬನಡ್ಕ, ನಿಕಟ ಪೂರ್ವ ಕಾರ್ಯದರ್ಶಿ ವೀಣಾ ಹರೀಶ್ ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಶಾಲಾ ಗೌರವ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.

 

ನಲ್ಲೂರು ಶಾಲೆಯಲ್ಲಿ ಬಜಗೋಳಿ ಕಾಲೇಜಿನ ಎನ್ ಎಸ್ ಎಸ್ ಶಿಬಿರ

0

 

ಶಿಬಿರದಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸ ಸಾಧ್ಯ ಗಣೇಶ್ ಬರ್ಲಾಯ ಅಭಿಮತ

” ‘ಶಿಕ್ಷಣದೊಂದಿಗೆ ಸಮಾಜ ಸೇವೆ; ಸಮಾಜ ಸೇವೆಯೊಂದಿಗೆ ಶಿಕ್ಷಣ’ ಇದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು. ಈ ಕನಸನ್ನು ನನಸು ಮಾಡಲು ಗಾಂಧೀಜಿಯವರ ಶತಮಾನೋತ್ಸವ ವರ್ಷದಲ್ಲಿ ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾ ಯೋಜನೆ. ಇಂತಹ ಯೋಜನಾ ಘಟಕದ ಪರಿಪೂರ್ಣ ಉದ್ದೇಶ ಈಡೇರುವುದೇ ವಾರ್ಷಿಕ ವಿಶೇಷ ಶಿಬಿರದಲ್ಲಿ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸ, ಹೊಂದಾಣಿಕೆಯ ಜೀವನ, ಸಮಯ ಪ್ರಜ್ಞೆ, ಪರಸ್ಪರ ಸಹಕಾರ, ಸಂವಹನ ಕಲೆ, ಶ್ರಮಜೀವನದ ಮಹತ್ವದಂತಹ ಸತ್ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ. ಆದ್ದರಿಂದ ಶಿಬಿರಾರ್ಥಿಗಳು ಈ ಶಿಬಿರದ ಮಹತ್ವವನ್ನು ಅರಿತು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು” ಎಂದು ನಿವೃತ್ತ ಪ್ರಾಂಶುಪಾಲರಾದ ಶ್ರೀ ಗಣೇಶ್ ಬರ್ಲಾಯರು ಹೇಳಿದರು.

ಅವರು ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್ ಅವರು ವಹಿಸಿ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನದ ಮಹತ್ವವನ್ನು ತಿಳಿಸಿದರು.

ವಿಶೇಷ ಸಾಧನೆ ಮಾಡಿದ ಪೂರ್ವ ಸ್ವಯಂಸೇವಕರಾದ ಗುರುಪ್ರಸಾದ್, ನವನೀತ್, ಸುಮಂತ್ ಹಾಗು ಸುರೇಂದ್ರ, ಕೃಷ್ಣಕುಮಾರ್ ಎನ್. ಇವರನ್ನು ಎನ್.ಎಸ್.ಎಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ನಲ್ಲೂರು ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವಸಂತ ಪೂಜಾರಿ, ಉದ್ಯಮಿ ದಿವಾಕರ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕರಾದ ನಾಗೇಶ್, ಹೊಸ್ಮಾರು ವಲಯ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್ ಎನ್. ಇ ಉಪಸ್ಥಿತರಿದ್ದರು.

ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಇವರು ಸಮ್ಮಾನಿತರನ್ನು ಪರಿಚಯಿಸಿದರೆ, ಶಿಬಿರದ ನಿರ್ದೇಶಕರಾದ ಪ್ರಾಂಶುಪಾಲ, ಲಕ್ಷ್ಮೀನಾರಾಯಣ ಕೆ.ಪಿ ಅಭ್ಯಾಗತರನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ವೀರೇಂದ್ರ ವಿ ಪಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರೆ, ಉಪನ್ಯಾಸಕ ಅಂಬರೀಷ ಭಾರದ್ವಾಜ್ ಇವರು ಕಾರ್ಯಕ್ರಮ ನಿರೂಪಿಸಿದರು.

ಕ್ರೈಸ್ಟ್ ಕಿಂಗ್ : ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಅಗ್ನಿಶಮನ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಪ್ರಯುಕ್ತಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಅಗ್ನಿಶಮನ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.

ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಅಲ್ಬರ್ಟ್ ಮೋನಿಸ್ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಅಗ್ನಿಶಮನ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸಂಸ್ಥೆಯ
ಹೊರಾವರಣದಲ್ಲಿ ಅಗ್ನಿಶಮನ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವರ್ಗದವರು, ಸಂಸ್ಥೆಯ ಪ್ರಾಚಾರ್ಯರು ಉಪಸ್ಥಿತರಿದ್ದರು. ನಂತರ ಸೇವಾ ಯೋಜನೆಯ ಸದಸ್ಯರು ಸ್ಥಳೀಯ ಪರಿಸರ ಸ್ವಚ್ಚತಾ ಕಾರ್ಯ ಕೈಗೊಂಡರು.

ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಕನ್ಯಾ, ಉಪನ್ಯಾಸಕ ದೀಪಕ್ ಕಾರ್ಯಕ್ರಮ ಸಂಘಟಿಸಿದ್ದರು.

ವಿಶ್ವ ಹೃದಯ ದಿನಾಚರಣೆ : ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿ ಗೆದ್ದ ಕ್ರಿಯೇಟಿವ್ ಪ.ಪೂ. ಕಾಲೇಜು

0

 

ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು
ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಹಾಗೂ ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ವಾಕಥಾನ್ ಹೃದಯ ದಿನಾಚರಣೆಯ ಅವಾರ್ಡ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಗರಿಷ್ಠ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಪ್ರಥಮ ಸ್ಥಾನ, ಅತ್ಯಂತ ಶಿಸ್ತಿನ ತಂಡಕ್ಕೆ ಪ್ರಥಮ ಸ್ಥಾನ, ಘೋಷಣೆ ಕೂಗುವಿಕೆಯಲ್ಲಿ ಪ್ರಥಮ, ಸ್ಕಿಟ್ ಸ್ಪರ್ಧೆಯಲ್ಲಿ ದ್ವಿತೀಯ, ಫ್ಲಕಾರ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗದವರು ಪ್ರಶಂಸಿಸಿದ್ದಾರೆ.

 

ಕಾರ್ಕಳ: ಶಿರ್ಲಾಲಿನಲ್ಲಿ ಮಹಿಳೆಯೊರ್ವರ ಮನೆಗೆ ಗೋ ಕಳ್ಳರು ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಗೋ ಕಳ್ಳತನ ನಡೆಸಿರುವುದು ಅತ್ಯಂತ ಖಂಡನೀಯ.- ಯುವಮೊರ್ಚಾ ಕಾರ್ಕಳ ಅಧ್ಯಕ್ಷ ರಾಕೇಶ್‌ ಶೆಟ್ಟಿ

0

 

ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಹೈನುಗಾರಿಕೆ ನಡೆಸಿ ಜೀವ ನಡೆಸುತ್ತಿರುವ ಮಹಿಳೆಯ ಮನೆಯ ಹಟ್ಟಿಯಿಂದಲೇ ದನಗಳ ಕಳ್ಳತನ ನಡೆದಿದೆ. ಮಾತ್ರವಲ್ಲದೆ ಮಹಿಳೆಗೆ ಮಾರಕಾಸ್ತ್ರದಿಂದ ಬೆದರಿಸಿರುವುದು ಅತಂಕಕಾರಿ ಘಟನೆ. ಈ ರೀತಿ ಪೋಲಿಸರ ಭಯವಿಲ್ಲದೆ ಕಳ್ಳತನ ನಡೆಯುವುದನ್ನು ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾದ ಹಾಗೆ ತೋರುತ್ತಿದೆ.

ಈ ರೀತಿಯ ಘಟನೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದು, ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡಂತಿದೆ. ಪರೋಕ್ಷವಾಗಿ ಪೊಲೀಸ್ ಇಲಾಖೆ ಬೆಂಬಲ ಈ ದುಷ್ಕರ್ಮಿಗಳಿಗೆ ಸಿಗುತ್ತಿದೆಯೋ ಎನ್ನುವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಈ ರೀತಿಯ ಪ್ರಕರಣ ಕಾರ್ಕಳದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಪೋಲಿಸ್‌ ಇಲಾಖೆ ದನಗಳ್ಳರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ. ಒಂದು ರೀತಿಯಲ್ಲಿ ರಾಜ್ಯ ಕಾಂಗ್ರೆಸ್ಸ್‌ ಸರ್ಕಾರದ ಓಲೈಕೆ ನೀತಿಯು ಗೋ ಕಳ್ಳರಿಗೆ ವರದಾನ ಆದಂತಿದೆ. ಈ ದುಷ್ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಸಮಸ್ತ ಹಿಂದೂ ಸಮಾಜ ತಮ್ಮ ರಕ್ಷಣೆಗೆ ಬೀದಿಗಿಳಿದು ಪೊಲೀಸ್ ಠಾಣೆಯ ಮುಂದೆಯೇ ಪ್ರತಿಭಟಿಸುವ ಸಮಯ ಬರಬಹುದು ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ ಕುಕ್ಕುಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ

0

ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ

ಧರ್ಮಸ್ಥಳ ಗ್ರಾಮ ಪಂಚಾಯತ್ ನ 4 ಮಂದಿ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣ ಸಂಬಂಧ ಎಸ್ ಐ ಟಿ ವಿಚಾರಣೆ ಮುಂದುವರಿದಿದ್ದು ಅಧಿಕಾರಿಗಳು ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟೀಸ್ ನೀಡಿದ್ದು, ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯತ್ ನಾಲ್ಕು ಮಂದಿ ಮಾಜಿ ಅಧ್ಯಕರಾದ ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ,ಹಾಗೂ ಚಂದನ್ ಕಾಮತ್ ಇವರು ಸೆ.29 ರಂದು ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ.

ಈ ನಾಲ್ಕು ಮಂದಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆ‌ರ್ ಪ್ರಕರಣದಲ್ಲಿ ಶವ ಹೂತ ಬಗ್ಗೆ ಬಿಲ್‌ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತನಿಖೆಗಾಗಿ ಕರೆಸಿರುವುದಾಗಿ ತಿಳಿದು ಬಂದಿದೆ.