Home Blog Page 13

ನಿಟ್ಟೆ:ಅಭಿಲಾಷ್ ಆಚಾರ್ಯ ಆತ್ಮಹತ್ಯೆ ಪ್ರಕರಣ ಇದು ಸಂಘಟಿತ ಅಪರಾಧ ಚಟುವಟಿಕೆಯಂತೆ ಗೋಚರಿಸುತ್ತದೆ-ಹರ್ಷವರ್ಧನ್ ನಿಟ್ಟೆ

0

ನಿಟ್ಟೆ:ಅಭಿಲಾಷ್ ಆಚಾರ್ಯ ಆತ್ಮಹತ್ಯೆ ಪ್ರಕರಣ

ಇದು ಸಂಘಟಿತ ಅಪರಾಧ ಚಟುವಟಿಕೆಯಂತೆ ಗೋಚರಿಸುತ್ತದೆ-ಹರ್ಷವರ್ಧನ್ ನಿಟ್ಟೆ

ನಿಟ್ಟೆಯ ಯುವಕ ಅಭಿಲಾಷ್ ಅವರ ಆತ್ಮಹತ್ಯೆ ಅತ್ಯಂತ ದುಃಖಕರ ಹಾಗೂ ಆತಂಕಕಾರಿ. ಅಭಿಲಾಷ್ ತನ್ನ ಸಾವಿನ ಮುನ್ನ 7 ಪುಟಗಳ ಡೆತ್ ನೋಟ್ ಬರೆದಿದ್ದು, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ, ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಆತ ಅದರಲ್ಲಿ ನಾಲ್ಕು ಜನರನ್ನು ತಮ್ಮ ಸಾವಿಗೆ ಹೊಣೆಗಾರರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.
ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಿರುವುದಾಗಿ ಬರೆದಿದ್ದಾನೆ. ಈ ವ್ಯಕ್ತಿಗಳು ಅಭಿಲಾಷ್ ಅವರ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಬ್ಲಾಕ್‌ಮೇಲ್ ಮಾಡಿ, ಹಣಕ್ಕಾಗಿ ಕಿರುಕುಳ ನೀಡಿ, ಕೊಲೆಗೈಯುವ ಬೆದರಿಕೆ ನೀಡಿದ್ದರೆಂಬ ವಿಷಯಗಳು ಸಹ ಬಹಿರಂಗವಾಗಿವೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ.

ಈ ಘಟನೆ ಸಾಮಾನ್ಯ ಆತ್ಮಹತ್ಯೆಯ ಪ್ರಕರಣವಲ್ಲ. ಇದು ಸಂಘಟಿತ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಯುವಕರನ್ನು ಬಲೆಗೆಳೆಯುವ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅನೇಕ ಅಮಾಯಕ ಯುವಕರು ಈ ರೀತಿಯ ಕೃತ್ಯಗಳ ಬಲಿಪಶುಗಳಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ, ಶೀಘ್ರ ಹಾಗೂ ಗಂಭೀರ ತನಿಖೆ ನಡೆಸಿ, ಈ ಘಟನೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡುತ್ತೇನೆ.

ಈ ಸಂದರ್ಭದಲ್ಲಿ ಇಡೀ ಸಮಾಜ ಅಭಿಲಾಷ್ ಅವರ ಕುಟುಂಬದೊಂದಿಗೆ ಬೆಂಬಲವಾಗಿ ನಿಲ್ಲುತ್ತದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನ್ಯಾಯ ಒದಗಿಸಬೇಕೆಂದು ಉಡುಪಿ ಮತ್ತು ದ. ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟ (ರಿ.) ಇದರ ಪ್ರತಿನಿಧಿ,ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ಅಧ್ಯಕ್ಷ ಹರ್ಷವರ್ಧನ್ ನಿಟ್ಟೆ ಒತ್ತಾಯಿಸಿದ್ದಾರೆ.

ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಪ್ರೇಕ್ಷಣೀಯ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮ

0

 

ಅ. 05 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ಧೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ‘ ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ. ನಮ್ಮ ಮನಸ್ಸಿನ, ಸಮಾಜದ ಮತ್ತು ಸಂಸ್ಕೃತಿಯ ಶುದ್ಧತೆಯ ಪ್ರತೀಕವೂ ಹೌದು. ಯುವಕರು ಇಂತಹ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುತ್ತಾರೆ ‘ ಎಂದು ಹೇಳಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ. ಬಿ. ಗಣನಾಥ ಶೆಟ್ಟಿ ಮಾತನಾಡಿ ‘ಸ್ವಚ್ಛತೆಯು ಕೇವಲ ಕಾರ್ಯವಲ್ಲ. ಅದು ಜೀವನಶೈಲಿ ಆಗಬೇಕು. ಯುವಕರು ಇಂತಹ ಸಾಮಾಜಿಕ ಜವಾಬ್ದಾರಿಗಳಲ್ಲಿ ತೊಡಗಿದಾಗ ಸಮಾಜದ ಬೆಳವಣಿಗೆ ಖಚಿತ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್.ಎಲ್, ಎನ್.ಎಸ್.ಎಸ್ ಶಿಬಿರಾಧಿಕಾರಿ ಉಮೇಶ್, ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ಸುಮಾರು 150ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡು, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿದರು. ಈ ಸ್ವಚ್ಛತಾ ಆಂದೋಲನಕ್ಕೆ ಕಾರ್ಕಳ ಪುರಸಭೆಯ ಸಂಪೂರ್ಣ ಸಹಕಾರ ದೊರಕಿತು.

ಸಭಾ ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕರಾದ ಲೋಹಿತ್ ಎಸ್.ಕೆ ರವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಭಾಗವಹಿಸಿದ ಎಲ್ಲರನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.

 

default

ಕಾರ್ಕಳ ಜ್ಞಾನಸುಧಾ : ಎನ್.ಸಿ.ಸಿ ನೇವಲ್ ಉದ್ಘಾಟನೆ

0

ಜಲಸೇನೆಯ ಕೊಡುಗೆ ಗಣನೀಯ : ಅಶ್ವಿನ್ ಎಂ. ರಾವ್

ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮವನ್ನು ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್.ಸಿ.ಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿಯ ಎನ್.ಸಿ.ಸಿ ನೇವಲ್ ವಿಭಾಗದ ಕಮಾಂಡರ್ ಅಶ್ವಿನ್ ಎಂ ರಾವ್ ತ್ತಿಳಿಸಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್.ಸಿ.ಸಿ ನೇವಲ್ ಘಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿಗೆ ಎನ್.ಸಿ.ಸಿ. ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು.

ಇದೇ ಸಂದರ್ಭ ಎನ್.ಸಿ.ಸಿಯ ಧ್ವಜದ ಮಹತ್ವವನ್ನು, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯಲ್ಲಿ ಓದಿದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯು ಎನ್.ಸಿ.ಸಿ. ಕೋಟದಡಿಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂ.ಬಿ.ಬಿ.ಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಗೆ ರೂ.10ಸಾವಿರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್ ಎನ್.ಸಿ.ಸಿಯ ಪಿ.ಐ. ಅಧಿಕಾರಿ ಅಮಿತ್ ರಾವತ್, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್, ಸಂಸ್ಥೆಯ ಪಿ.ಆರ್.ಒ ಜ್ಯೋತಿಪದ್ಮನಾಭ್ ಭಂಡಿ, ಲೆಫ್ಟಿನೆಂಟ್ ಮಂಜುನಾಥ್ ಮುದೂರ್ ಉಪಸ್ಥಿತರಿದ್ದರು.
ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿ ಕೃಷ್ಣಪ್ರಸಾದ್ ಸ್ವಾಗತಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಕಳ: ಆತ್ಮನಿರ್ಭರ ಭಾರತ್ ಸಂಕಲ್ಪ ಅಭಿಯಾನ ಮತ್ತು ಕಾರ್ಯಗಾರ

0

 

ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಮತ್ತು ಕಾರ್ಯಗಾರ ಕಾರ್ಕಳ ಶಾಸಕರ ವಿಕಾಸ ಕಚೇರಿಯಲ್ಲಿ ನಡೆಯಿತು. ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಆತ್ಮನಿರ್ಭರ ಭಾರತದ ಅಭಿಯಾನದ ಜಿಲ್ಲಾ ವಕ್ತಾರ ಶ್ರೀಕಾಂತ್ ನಾಯಕ್ ಈ ಅಭಿಯಾನದ ಕಾರ್ಯಯೋಜನೆಗಳ ಮಾಹಿತಿ ನೀಡಿದರು.

ಈ ಅಭಿಯಾನದ ಮಂಡಲ ಸಂಚಾಲಕ ಅನಂತಕೃಷ್ಣ ಶೆಣೈ ಸ್ವಾಗತಿಸಿದರು. ರವೀಂದ್ರ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಆತ್ಮ ನಿರ್ಭರ ಭಾರತ ಯೋಜನೆಯ ಉದ್ದೇಶ ಹಾಗೂ ಅದರ ಅಗತ್ಯತೆಯ ಬಗ್ಗೆ ವಿವರಿಸಿದರು. ಕಾರ್ಕಳ ಬಿಜೆಪಿಯ ಮಂಡಲಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ಬಂದರೂ ದೇಶ ಇನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ, ನಾವೆಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು, ನಮ್ಮ ಸ್ಥಳೀಯ ಕೈಗಾರಿಕೆ, ವ್ಯಾಪಾರ ಉದ್ಯಮಗಳಿಗೆ ನಾವು ಹೆಚ್ಚಿನ ಬೆಂಬಲ ನೀಡಬೇಕು ಹಾಗೂ ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ವಿದೇಶಿ ವಸ್ತುಗಳ ಮೋಹವನ್ನು ಬಿಟ್ಟು ಸ್ವದೇಶೀ ವಸ್ತುಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಮುಂದೆ ಈ ಅಭಿಯಾನದಡಿಯಲ್ಲಿ ಕಾರ್ಕಳ ಕ್ಷೇತ್ರಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುಲಾಗುವುದು. ಪ್ರಧಾನಿ ಆಶಯದಂತೆ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಲು ಕಾರ್ಕಳ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದರು. ಕಾರ್ಯದರ್ಶಿ ಪ್ರವೀಣ್ ಸಾಲಿಯಾನ್ ಆತ್ಮನಿರ್ಭರ ಭಾರತ್ ಸಂಕಲ್ಪದ ಪ್ರತಿಜ್ಞಾ ವಿಧಿ ಭೋಧಿಸಿದರು, ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ ವಂದಿಸಿದರು, ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಶ ಜಯರಾಮ್ ಸಾಲಿಯಾನ್, ಮಾಲಿನಿ ಜೆ ಶೆಟ್ಟಿ, ಸುರೇಶ ಶೆಟ್ಟಿ ಶಿವಪುರ, ರಮೇಶ್ ಶೆಟ್ಟಿ ಶಿವಪುರ, ಮಂಡಲ ಪಧಾಧಿಕಾರಿಗಳು, ವಿವಿಧ ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬೂತ್ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ನಿಟ್ಟೆಯ ವಿದ್ಯಾರ್ಥಿ ಪ್ರೀತಮ್ ಪಿ.ಎ. ರಾಷ್ಟ್ರಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಸೈಂಟ್ ಕ್ಲಾರೆಟ್ ಪದವಿ ಪೂರ್ವ ಕಾಲೇಜು, ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿಅ. 3, 4, 5 ರಂದು ನಡೆದ 2025-26ನೇ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು, ನಿಟ್ಟೆಯ ವಿದ್ಯಾರ್ಥಿ ಪ್ರೀತಮ್ ಪಿ.ಎ. ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಬೆಳ್ಮಣ್ಣು: ರಿಕ್ಷಾ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿ ಸಾವು

0

 

ಅ.5 ರಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ರಿಕ್ಷಾವೊಂದು ನಿಯಂತ್ರಣ ತಪ್ಪಿ ಡಿಕ್ಕಿಯಾಗಿದ್ದು, ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಅ.7 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಝಾರ್ಖಂಡ್ ಮೂಲದ ರಾಜೇಶ್ ಎಂದು ಗುರ್ತಿಸಲಾಗಿದ್ದು, ಇವರು ಸ್ನೇಹಿತರೊಂದಿಗೆ ನಂದಳಿಕೆಯ ಜೀಸಸ್ ವುಡ್ ಇಂಡಸ್ಟ್ರೀಸ್ ನಲ್ಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಂದಿನಂತೆ ರಾತ್ರಿ ವೇಳೆ ಬೆಳ್ಮಣ್ಣು ಪೇಟೆಗೆ ತೆರಳಿ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ.

ಈ ಬಗ್ಗೆ ಮೃತರ ಸ್ನೇಹಿತ ರೂಪಾನ್ ಮರಾಂಡಿ ನೀಡಿರುವ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮ್ಮಿನ ಸಿರಪ್ ನಲ್ಲಿ ಪೈಂಟ್ ಗೆ ಬಳಸುವ ರಾಸಾಯನಿಕ ಪತ್ತೆ

0

 

ತಮಿಳುನಾಡಿನ SIT ಸಲ್ಲಿಸಿದ ವರದಿಯಲ್ಲಿ ಬಹಿರಂಗ

ಔಷಧ ತಯಾರಿಕೆ ಕಂಪೆನಿಯಿಂದ 35ಕ್ಕೂ ಹೆಚ್ಚು ಲೋಪ: ವರದಿಯಲ್ಲಿ ಉಲ್ಲೇಖ

ಹದಿನಾರು ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ನಲ್ಲಿ ಪೈಂಟ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕಗಳು ಭಾರಿ ಪ್ರಮಾಣದಲ್ಲಿ ಪತ್ತೆಯಾಗಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಔಷಧ ತಯಾರಿ ಸಂಸ್ಥೆಯ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಸರ್ಕಾರ ನೇಮಕ ಮಾಡಿದ್ದ ಎಸ್ ಐ ಟಿ ಸಲ್ಲಿಸಿರುವ 26 ಪುಟಗಳ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಮಿಳುನಾಡಿನ ಔಷಧ ನಿಯಂತ್ರಣ ಪ್ರಾಧಿಕಾರ ಕೋಲ್ಡ್ರಿಫ್ ತಯಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ 35ಕ್ಕೂ ಹೆಚ್ಚು ಲೋಪಗಳು ಕಂಡುಬಂದಿದೆ. ವೈದ್ಯಕೀಯವಾಗಿ ಬಳಸಲು ಸಾಧ್ಯವಿಲ್ಲದ ರಾಸಾಯನಿಕಗಳನ್ನು ಶೇಖರಿಸಿಡಲಾಗಿತ್ತು ಎಂದು ವರದಿ ತಿಳಿಸಿದೆ.

ಈ ಘಟಕದಲ್ಲಿ ಸುಮಾರು 50 ಕೆಜಿ ಪ್ರೊಪಲೈನ್ ಗ್ಲೈಕೋಲ್ ಮತ್ತು ಮಾರಣಾಂತಿಕವಾಗುವ ಥೈಡಲೀನ್ ಗ್ಲೈಕೋಲ್ ರಾಸಾಯನಿಕವನ್ನು ಸಂಗ್ರಹಿಸಿಡಲಾಗಿತ್ತು. ಈಗಾಗಲೇ ಕೋಲ್ಡ್ರಿಫ್ ನಲ್ಲಿ ಅನುಮತಿ ನೀಡಲಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೈಥಲೀನ್ ಗ್ಲೈಕೋಲ್ ಇತ್ತು ಎಂದು ಕೇಂದ್ರ ಅರೋಗ್ಯ ಇಲಾಖೆ ಹೇಳಿತ್ತು. ಈ ರಾಸಾಯನಿಕವನ್ನು ಪೈಂಟ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ, ದ್ರಾವಣಗಳು ಗಟ್ಟಿಯಾಗುವುದನ್ನು ತಪ್ಪಿಸಲು ಬಳಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಮಾಳ: ಭಜನಾ ಸ್ಪರ್ಧೆ ಮತ್ತು ಶಾರದಾ ಪೂಜೆ ಕಾರ್ಯಕ್ರಮ

0

 

ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.7 ರಂದು ಅಮೃತ ಮಹೋತ್ಸವದ ಪ್ರಯುಕ್ತ ನಡೆಸಲಾಗುವ ತಿಂಗಳ ಸರಣಿ ಕಾರ್ಯಕ್ರಮದ ಅಕ್ಟೋಬರ್ ತಿಂಗಳ ಕಾರ್ಯಕ್ರಮ ಭಜನಾ ಸ್ಪರ್ಧೆ ಮತ್ತು ಶಾರದಾ ಪೂಜೆ ನಡೆಯಿತು.

ಮಾಳದ ಹಿರಿಯ ಭಜಕ ಆನಂದ ನಾಯಕ್ ಇವರು ದೀಪ ಬೆಳಗಿಸುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ವಿಭಾಗದಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ಶ್ರೀರಂಗ ಜೋಶಿ, ಯೋಗೀಶ್ ಕಿಣಿ ಮತ್ತು ವಾರಿಜಾ ಕಾಮತ್ ಇವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾ ವಿಜೇತರಿಗೆ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ಸಭಾಧ್ಯಕ್ಷತೆಯನ್ನು ವಹಿಸಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿದರು. ನಿವೃತ್ತ ಶಿಕ್ಷಕರು ಹಾಗೂ ದಾನಿಗಳು ಆಗಿರುವಂತಹ ನಾಗಭೂಷಣ ಜೋಶಿ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿರುವ ವಿಮಲಾ ಪೂಜಾರಿ, ಶಾರದಾ ಪೂಜೆಯ ಪ್ರಾಯೋಜಕರಾಗಿರುವ ಸೋಮಯ್ಯ ಮೇರ, ಆನಂದ ನಾಯಕ್ ಮತ್ತು ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಹಾಗೂ ಸ್ಪರ್ಧಾ ತೀರ್ಪುಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ 60 ವರ್ಷಗಳಿಂದ ಶಾರದಾ ಪೂಜೆಯನ್ನು ಪ್ರಾಯೋಜಿಸುತ್ತಿರುವ ಸೋಮಯ್ಯ ಮೇರ, ಮಾಳದ ಭಜನೆ ಕಲಾವಿದ ಆನಂದ ನಾಯಕ್ ಇವರನ್ನು ಮತ್ತು ತೀರ್ಪುಗಾರರನ್ನು ಗೌರವಿಸಲಾಯಿತು.

ಅರ್ಚಕರಾದ ಅನಂತ ಪದ್ಮನಾಭ ಗೋರೆ ಇವರ ನೇತೃತ್ವದಲ್ಲಿ ಶಾರದಾ ಪೂಜೆಯು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಜನಾ ಸ್ಪರ್ಧೆಯ ತೀರ್ಪುಗಾರರು, ಭಜನಾ ಸ್ಪರ್ಧಿಗಳು, ಶಾಲಾ ಸಂಚಾಲಕರು, ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸರ್ವ ಸದಸ್ಯರು, ಊರಿನ ಹಿರಿಯರು,
ಪೋಷಕರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕ ವೃಂದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಶುಭಾ ಸ್ವಾಗತಿಸಿದರು. ಪ್ರಜ್ಞಾ ವಂದನಾರ್ಪಣೆಗೈದರು.

ಕ್ರೈಸ್ಟ್ ಕಿಂಗ್ : ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನೆ ಮತ್ತು ತರಬೇತಿ ಶಿಬಿರ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳ ಮಂಜುನಾಥ ಪೈ ಮೆಮೊರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಸುರೇಶ್ ರೈ.ಕೆ ಅವರು ದೀಪ ಬೆಳಗಿ ಎನ್‌ಎಸ್‌ಎಸ್‌ನ ನೂತನ ಘಟಕಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ರಾಷ್ಟ್ರೀಯ ಸೇವಾ ಯೋಜನೆಯಿಂದ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಎನ್‌ಎಸ್‌ಎಸ್ ನಮ್ಮನ್ನು ನಾವು ಅರಿತುಕೊಳ್ಳಲು ಸಹಕಾರಿ, ಮನುಷ್ಯರಾದ ನಾವು ನಾನು ಎಂಬುದನ್ನು ಬಿಟ್ಟು ನಾವು ಎಂದು ಬದುಕಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ರಾಜ್ಯ ಅಧಿಕಾರಿ ಹಾಗೂ ಜಾನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರು ಮಾತನಾಡಿ “ವ್ಯಕ್ತಿತ್ವದಲ್ಲಿ ಆಗುವ ಗುಣಾತ್ಮಕ ಬದಲಾವಣೆಯೇ ಮಾನವ ಸಂಪನ್ಮೂಲಾಭಿವೃದ್ಧಿ, ಇಂತಹ ಅಭಿವೃದ್ಧಿ ಎನ್‌ಎಸ್‌ಎಸ್‌ನಿಂದ ಸಾಧ್ಯ” ಎಂದು ಹೇಳಿದರು.

ಇನ್ನೋರ್ವ ಅತಿಥಿ ಕಾರ್ಕಳ ತಾಲೂಕು ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ ಆರ್ ಅವರು ಮಾತನಾಡಿ “ಮಕ್ಕಳಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿಕೆ, ತಪ್ಪು ಒಪ್ಪುಗಳನ್ನು ತಿಳಿಯಲು ಕೂಡಾ ಎನ್‌ಎಸ್‌ಎಸ್ ಸಹಕಾರಿ, ಇಚ್ಚಾಶಕ್ತಿ ಇದ್ದಲ್ಲಿ ಕಠಿಣ ಪರಿಶ್ರಮ ಪಟ್ಟರೆ ಅಂದುಕೊಂಡ ಸಾಧನೆಯನ್ನು ಮಾಡಬಹುದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ
ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಯುವ ಜನತೆ ದೇಶಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಾಗ ಭಾರತ ವಿಶ್ವನಾಯಕನಾಗಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಮಕ್ಕಳಲ್ಲಿ ಪ್ರಬುದ್ಧತೆ ಹೆಚ್ಚುತ್ತದೆ. ಮಕ್ಕಳಲ್ಲಿ ಜೀವನ ಕೌಶಲ ವೃದ್ಧಿಸಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಸಹಕಾರಿ” ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರು. ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸ್ತ್ರಿಬ್ರೂಣ ಹತ್ಯೆ ಹಾಗೂ ಮಾದಕದ್ರವ್ಯ ವಿರೋಧಿ ಕಿರುಪ್ರಹಸನಗಳು ನಡೆದವು.

ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಎನ್‌ಎಸ್‌ಎಸ್ ಸಹಯೋಜನಾಧಿಕಾರಿ ದೀಪಕ್ ಸ್ವಾಗತಿಸಿ ಎನ್‌ಎಸ್‌ಎಸ್ ಯೋಜನಾಧಿಕಾರಿ ಸುಕನ್ಯಾ ಜೈನ್ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

?????????????
??????????????

ಕುಂದಾಪುರದಲ್ಲಿ ಆರ್‌.ಕೆ. ಆರ್ಥೋ & ಹ್ಯಾಂಡ್‌ ಕ್ಲಿನಿಕ್‌ ಶುಭಾರಂಭ

0

 

ಕುಂದಾಪುರದಲ್ಲಿ ಗಿರೀಜಾ ಸರ್ಜಿಕಲ್ಸ್‌ & ಹೆಲ್ತ್‌ಕೇರ್ ಸಂಕೀರ್ಣದಲ್ಲಿ ನೂತನವಾಗಿ ಪ್ರಖ್ಯಾತ ಎಲುಬು ಮತ್ತು ಮೂಲೆ ತಜ್ಞರಾದ ರಂಜಿತ್ ಕುಮಾರ್ ರವರ ಆರ್‌.ಕೆ. ಆರ್ಥೋ & ಹ್ಯಾಂಡ್‌ ಕ್ಲಿನಿಕ್‌ ಸೇವೆಗೆ ಚಾಲನೆ ದೊರಕಿದೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೋಡಗಿ ಕ್ಲಿನಿಕ್ ಉದ್ಘಾಟಿಸಿ ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಯುಷ್ ಫೆಡರೇಷನ್ ಒಫ್ ಇಂಡಿಯಾ ಉಡುಪಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ, ಹೆಲ್ಪಿಂಗ್ ಹ್ಯಾಂಡ್ಸ್ ನ ಪ್ರದೀಪ್ ಕೋಟೇಶ್ವರ, ಮೂರ್ತೆದಾರರ ಕೋ ಆಪರೇಟಿವ್ ಸೊಸೈಟಿಯ ಸಿಇಓ ಜಗದೀಶ್ ಕೆಮ್ಮಣ್ಣು, ಸಮಾಜ ಸೇವಕ ಹುಸೈನ್ ಹೈಕಾಡಿ ಭಾಗವಹಿಸಿದರು.

ಕ್ಲಿನಿಕ್ ಪ್ರತಿದಿನ ಬೆಳಗ್ಗೆ 9.30 ರಿಂದ ಮದ್ಯಾಹ್ನ 1.30 ವರೆಗೆ ಸೇವೆಗೆ ಲಭ್ಯವಿರಲಿದೆ.

ಗಿರಿಜಾ ಸರ್ಜಿಕಲ್ಸ್ ನ ಮಾಲಕ ರವೀಂದ್ರ ಶೆಟ್ಟಿಯವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿ, ವಂದನೆಗಳನ್ನು ಅರ್ಪಿಸಿದರು.