Home Blog Page 4

ಕ್ರೈಸ್ಟ್ ಕಿಂಗ್ : ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ಅನ್ವೇಷಣೆ-2025

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ‘ಅನ್ವೇಷಣೆ 2025’ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಇಂದಿನ ವಿದ್ಯಾರ್ಥಿಗಳಿಗೆ ಅನ್ವೇಷಣೆಯಂತಹ ಕಾರ್ಯಕ್ರಮಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು ವೇದಿಕೆಯಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಕಳ ಜೆಸಿಐ ರೂರಲ್‌ನ ಅಧ್ಯಕ್ಷ ಅರುಣ್ ಮಾಂಜ ಮಾತನಾಡಿ “ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರವು ಅತ್ಯಗತ್ಯವಾಗಿ ಬೇಕಾಗಿದೆ. ಈ ವಿದ್ಯಾಸಂಸ್ಥೆಯು ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣವನ್ನು ಕೂಡಾ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕೂಡಾ ಕೌಶಲ್ಯಗಳು ಇದ್ದೇ ಇರುತ್ತದೆ. ಆ ಕೌಶಲ್ಯಗಳಿಗೆ ಹೊರ ಹೊಮ್ಮಲು ಅವಕಾಶ ನೀಡಿದಾಗ ಆ ವಿದ್ಯಾರ್ಥಿ ಉನ್ನತ ಹಂತಕ್ಕೆ ಏರಲು ಸಾಧ್ಯ” ಎಂದರು.

ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಶ್ರೀ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರು. ಶೈಲಿ ಹೆಗ್ಡೆ ಸ್ವಾಗತಿಸಿ, ದೀಪಕ್ ಕೆ. ಅವರು ನಿರೂಪಿಸಿ ವಂದಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಕಳ, ಕ್ಷೇತ್ರ ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯ್ಕ್, ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸೈಂಟ್ ಜೋಸೆಫ್ ಪ್ರೌಢ ಶಾಲೆ, ಬೆಳ್ಮಣ್ ಇಲ್ಲಿಯ ಮುಖ್ಯ ಶಿಕ್ಷಕ ಡೋಮಿನಿಕ್ ಅಂದ್ರಾದೆ ಹಾಗೂ ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯಾನಂದರವರು ಅತಿಥಿಗಳಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬಹುಮಾನ ವಿತರಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಲಕ್ಷ್ಮಿ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರುಢಾಲ್ಫ್ ಕಿಶೋರ್ ಲೋಬೋ, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಸುಂದರ ಪುರಾಣಿಕ ಸರ್ಕಾರಿ ಪ್ರೌಢ ಶಾಲೆ, ಪೆರ್ವಾಜೆ ಹಾಗೂ ಪದವಿ ಪೂರ್ವ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜು, ನಿಟ್ಟೆ ಪಡೆದುಕೊಂಡಿತು. ಉಪನ್ಯಾಸಕಿ ಪಾವನ ಹಾಗೂ ದೀಪಕ್ ಕೆ. ಇವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಶ್ರೀ ಗುರು ಜನರಲ್ ಸ್ಟೋರ್ ಮತ್ತು ಲೇಡೀಸ್ ಟೈಲರಿಂಗ್ ಶುಭಾರಂಭ

0

ಕಾರ್ಕಳದ ಬಲಿಪರಪ್ಪಾಡಿಯಲ್ಲಿ ನೂತನವಾಗಿ ಶ್ರೀ ಗುರು ಜನರಲ್ ಸ್ಟೋರ್ ಮತ್ತು ಲೇಡೀಸ್ ಟೈಲರಿಂಗ್ ಅಂಗಡಿಯು ನ.೫ ರಂದು ಉದ್ಘಾಟನೆಗೊಂಡಿತು.

ರೆಂಜಾಳ ದಿನೇಶ್ ಆಚಾರ್ಯರು ನೂತನವಾಗಿ ಆರಂಭಿಸಿದ ಈ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ, ಕಾರ್ಕಳ ನೆಕ್ಲಾಜೆ ಕಾಳಿಕಾಂಬ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯರು ಉದ್ಘಾಟನೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಣೂರು ಹರೀಶ್ ಪುರೋಹಿತರು, ಪ್ರಕಾಶ್ ಜೈನ್ ರೆಂಜಾಳ, ಅರಣ್ಯ ಇಲಾಖೆಯ ACF ಸತೀಶ್ ಆಚಾರ್ಯ ಕಾರ್ಕಳ, ವಿ.ಬಿ.ಎಸ್ ಸಭಾ ರೆಂಜಾಳ ಇದರ ಅಧ್ಯಕ್ಷ ಹರೀಶ್ ಆಚಾರ್ಯ, ವಾಸು ಆಚಾರ್ಯ ಪರಪು ಮುಂಬೈ, ಇರ್ವತ್ತೂರು ಗ್ರಾಮ ಮೊಕ್ತೇಸರ್ ಉದಯ ಆಚಾರ್ಯ, ಸದಾನಂದ ಎಸ್ ಆಚಾರ್ಯ, ಯಕ್ಷತೀರ್ಥ ಕಲಾಸೇವೆ ನೂರಳಬೆಟ್ಟು ಇವರೆಲ್ಲರೂ ಭಾಗವಹಿಸಿದರು.

ಕಾರ್ಕಳ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

0

 

ಮೊಬೈಲ್ ಗೀಳು ಬದುಕು ಹಾಳು : ಸುಕೇಶ್ ಶೆಟ್ಟಿ ಹೊಸಮಠ

ಕ್ರೀಡೆಯು ಬದುಕಿನಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಆದರೆ ಇಂದಿನ ಯುವಜನತೆ ಮೊಬೈಲ್ ಗೀಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ಸಮಾಜಕ್ಕಾಗಿದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದೇಶದ ಉನ್ನತಿಗೆ ಕೈಜೋಡಿಸುವವರಾಗಿ, ಸಮಾಜಮುಖಿ ವ್ಯಕ್ತಿತ್ವವಾಗಿ ರೂಪುಗೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ಮೂಕಾಂಬಿಕಾ ದೇವಳ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ್ ಶೆಟ್ಟಿ ಹೊಸಮಠ ನುಡಿದರು.

ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್ ವಹಿಸಿದ್ದರು.

ಅರ್ನ್ ಲರ್ನ್ ಬಿಸ್‌ನೆಸ್ ಪೈರ್ ಉದ್ಘಾಟನೆ

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ ಅರ್ನ್ ಲರ್ನ್ ಬಿಸ್‌ನೆಸ್ ಪೈರನ್ನು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ್ ಶೆಟ್ಟಿ ಹೊಸಮಠ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಉಷಾ ರಾವ್ ಯು. ಹಾಗೂ ವಾಣಿ ಕೆ., ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಸುವರ್ಣ, ವ್ಯವಹಾರ ಅಧ್ಯಯನದ ಉಪನ್ಯಾಸಕ ಶೈಲೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಹಾಗೂ ಸಂಸ್ಥೆಯ ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಮತ್ತು ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಸ್ವಾಗತಿಸಿ, ಪಥಸಂಚಲನದ ಉದ್ಘೋಷಣೆಯನ್ನು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಡೆಸಿಕೊಟ್ಟರು.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗರವರಿಗೆ ಸನ್ಮಾನ

0

 

ಅಂಗ ವೈಕಲ್ಯವನ್ನು ಮೀರಿ ಪಾಂಡು ದೇವಾಡಿಗರವರ ವಾದ್ಯ ಸೇವೆ, ಧಾರ್ಮಿಕ ಚಿಂತನೆಗಳಿಗೆ ನಮ್ಮೆಲ್ಲರನ್ನ ಹತ್ತಿರ ಮಾಡಿದೆ-ಗಿರೀಶ್ ರಾವ್, ಆಡಳಿತ ಮೊಕ್ತೆಸರರು ಶ್ರೀ ಕ್ಷೇತ್ರ ಹಿರಿಯಂಗಡಿ

ವಾದ್ಯ ಕಲಾ ಸೇವೆಯನ್ನು ನಿರಂತರವಾಗಿ ಧಾರ್ಮಿಕ ಸೇವೆಗಳಿಗೆ ನೀಡುತ್ತಾ ಬಂದ ಕಾರ್ಕಳದ ಅತ್ಯಂತ ಹಿರಿಯ ವಾದ್ಯಗಾರ ಪಾಂಡು ದೇವಾಡಿಗರವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದರಿಂದ. ಅವರು ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 40 ವರ್ಷಗಳ ಕಾಲ ನಿರಂತರವಾಗಿ ನೀಡಿದ ಹಾಗೂ ನೀಡುತ್ತಿರುವ ಸೇವೆಯನ್ನ ಸ್ಮರಿಸಿ ದೇವಳದ ಆಡಳಿತ ಮಂಡಳಿಯ ಪರವಾಗಿ ದೀಪೋತ್ಸವದ ಸಂದರ್ಭ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೆಸರ ಗಿರೀಶ್ ರಾವ್, ಮೊಕ್ತೆಸರರಾದ ಸುಧೀಂದ್ರ ರಾವ್ ದಯಾನಂದ ರಾವ್ ರಾಮಚಂದ್ರರಾವ್ ಹಾಗೂ ತಾನೋಜಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ. 9 ರಂದು ಕಾರ್ಕಳದಲ್ಲಿ ನಿತ್ಯಾಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ

0

ಕಾರ್ಕಳದಲ್ಲಿ ನ. 9 ರಂದು ನೂತನವಾಗಿ ನಿತ್ಯಾಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭಗೊಳ್ಳಲಿದೆ.

ಕಾರ್ಕಳದ ಕ್ರೈಸ್ಟ್ ಕಿಂಗ್ ಮೈದಾನದಲ್ಲಿ ಸಂಸ್ಥೆಯ ಉದ್ಘಾಟನಾ ಸಭಾರಂಭ ಕಾರ್ಯಕ್ರಮ ನಡೆಯಲಿದ್ದು, ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಹಾಯಕ ಧರ್ಮ ಗುರು ವಂದನೀಯ ರೋಬಿನ್ ಸಾಂತುಮಾಯೆರ್ ರವರ ದಿವ್ಯ ಹಸ್ತದ ಮೂಲಕ ಉದ್ಘಾಟನೆ ನಡೆಯಲಿದೆ.

ನಿತ್ಯಾಧಾರ ಕೋ ಆಪರೇಟಿವ್ ಸೊಸೈಟಿ ನಿ. ಇದರ ಅಧ್ಯಕ್ಷ ಜೋಕಿಂ ಮೈಕಲ್ ಎಚ್. ಪಿಂಟೋ ಅಧ್ಯಕ್ಷತೆಯಲ್ಲಿ ಈ ಸಮಾರಂಭ ಕಾಯಕ್ರಮ ನಡೆಯಲಿದ್ದು, ಕಾಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಸಹಾಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್., ಜೋನ್ ಡಿ’ಸಿಲ್ವಾ ವೆಟೆರೆನ್ ಕೋ ಆಪರೇಟಿವ್ ಬ್ಯಾಂಕರ್ ಕಾರ್ಕಳ, ಕಾರ್ಕಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಪಿ. ಶೆಣೈ, ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಹಾಗೂ ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ) ಮುನಿಯಾಲು ಇದರ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಎಸ್. ಜೆ. ಟ್ರಾವೆಲ್ಸ್ ಮಾಲಕ ವಾಲ್ಟರ್ ಡಿ’ಸೋಜಾ, ಕಾರ್ಕಳ ಘಟಕ ಜಮಿಯತುಲ್ ಫಲಾಹ್ ಅಧ್ಯಕ್ಷ ಮಹಮ್ಮದ್ ಗೌಸ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.

ಕ್ರೈಸ್ಟ್ ಕಿಂಗ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ವಂದನೀಯ ಅವಿನಾಶ್ ಪಾಯ್ಸ್ ಅವರಿಂದ ಆಶೀರ್ವಚನ ನಡೆಯಲಿದೆ.

ಸಾರ್ವಜನಿಕರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೊಸೈಟಿಯ ಸೌಲಭ್ಯ ಪಡೆದುಕೊಳ್ಳಬೇಕಾಗಿ ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

KUPMA ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

0

 

ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟ (KUPMA) ಇದರ ಉಡುಪಿ ಜಿಲ್ಲಾ ಕಾರ್ಯಕರಿಣಿ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಡಾ. ಪ್ರಶಾಂತ್‌ ಶೆಟ್ಟಿ ದಂಡತೀರ್ಥ ಸಂಸ್ಥೆ ಕಾಪು ಹಾಗೂ ಅಧ್ಯಕ್ಷರನ್ನಾಗಿ ತ್ರಿಷಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಭಟ್‌ ಅವರನ್ನು ಉಡುಪಿ ಓಸಿಯನ್‌ ಪರ್ಲ್ ನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಲಾಯಿತು.

ಖಜಾಂಚಿಯಾಗಿ ಜ್ಞಾನಸುಧಾ ಸಂಸ್ಥೆಯ ಡಾ. ಸುಧಾಕರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಕ್ರಿಯೇಟಿವ್‌ ಸಂಸ್ಥೆಯ ಅಶ್ವತ್‌ ಎಸ್‌. ಎಲ್‌, ಸಹಕಾರ್ಯದರ್ಶಿಗಳಾಗಿ ಕ್ರಿಯೇಟಿವ್‌ ಸಂಸ್ಥೆಯ ಡಾ. ಗಣನಾಥ್‌ ಶೆಟ್ಟಿ, ಸುಜ್ಞಾನ ಸಂಸ್ಥೆಯ ಪ್ರತಾಪ್‌ ಚಂದ್ರ ಶೆಟ್ಟಿ,
ಉಪಾಧ್ಯಕ್ಷರುಗಳನ್ನಾಗಿ ಸುಜ್ಞಾನ ಸಂಸ್ಥೆಯ ರಮೇಶ್‌ ಶೆಟ್ಟಿ, ಎಕ್ಸಲೆಂಟ್‌ ಕುಂದಾಪುರದ ದೀಪಾ ಎಂ. ಹೆಗಡೆ, ಅಮೃತ ಭಾರತಿ ಹೆಬ್ರಿಯ ಸತೀಶ್‌ ಪೈ ಹಾಗೂ ರಾಜೇಶ್ವರಿ ಸಂಸ್ಥೆ ಕಾರ್ಕಳದ ದೇವಿಪ್ರಸಾದ್‌ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸಮಿತಿಯ ಗೌರವ ಉಪಾಧ್ಯಕ್ಷರಾದ ರಾಧಕೃಷ್ಣ ಶೆಣೈ, ಫಾದರ್‌ ವಿನ್ಸೆಂಟ್‌ ಕ್ರಾಸ್ತ, ಪ್ರೋ. ಆಲ್ಬಂಟ್‌ ರೋಡ್ರಿಗಸ್‌ (ದಂಡತೀರ್ಥ ಸಂಸ್ಥೆ) ನಾಗರಾಜ್‌ ಶೆಟ್ಟಿ ( SR ಸಂಸ್ಥೆ ಹೆಬ್ರಿ), KMES ಸಂಸ್ಥೆಯ ಇಮ್ತಿಯಾಜ್‌ ಭಾಗಿಯಾಗಿದ್ದರು.

ಸಮಿತಿಯ ನೂತನ ಪದಾಧಿಕಾರಿಗಳನ್ನು KUPMA ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವರು ಹಾಗೂ ಕಾರ್ಯದರ್ಶಿಗಳಾದ ನರೇಂದ್ರ ನಾಯಕ್‌ ರವರು ಅಭಿನಂದಿಸಿದ್ದಾರೆ.

ಮಣಿಪಾಲ ಜ್ಞಾನಸುಧಾ : ಎನ್.ಸಿ.ಸಿ. ನೌಕಾದಳ ಉದ್ಘಾಟನೆ

0

ಜೀವನದ ಆಕಾಂಕ್ಷೆಗಳ ಜೊತೆಗೆ ದೇಶ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು- ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ: ಕಮಾಂಡರ್ ಅಶ್ವಿನ್ ಎಂ. ರಾವ್

ನಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳಿಂದ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಮನಸ್ಸಿನ ನಿಗ್ರಹ ನಮ್ಮ ಹತೋಟಿಗೆ ಬರುವುದು ಶಿಕ್ಷಣದಿಂದ ಮಾತ್ರ. ಅದರೊಂದಿಗೆ ಎನ್.ಸಿ.ಸಿ ಯಂತಹ ಅತ್ಯುತ್ತಮ ಸಂಘಟನೆಯನ್ನು ಸೇರುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯ ಭಾವವನ್ನು ಉನ್ನತೀಕರಿಸುತ್ತದೆ ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆದ ಎನ್.ಸಿ.ಸಿ. ನೇವಿ(ನೌಕಾದಳ) ಉದ್ಘಾಟನೆಗೆ(ರೈಸಿಂಗ್ ಡೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಉದ್ಘಾಟನೆಗೆ ಆಗಮಿಸಿದ ಇನ್ನೋರ್ವ ಅತಿಥಿ ಕಮಾಂಡಿಂಗ್ ಆಫೀಸರ್ 6 KAR NU NCC ಉಡುಪಿಯ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಮಾತನಾಡಿ, ಶ್ವೇತ ವರ್ಣದ ಸಮವಸ್ತ್ರ ಧರಿಸಿ ಬಂದಿರುವ ಎಲ್ಲಾ ಕೆಡಿಟ್ಗಳು ತಮ್ಮ ವ್ಯಕ್ತಿತ್ವವನ್ನು ಸಹ ಅದರಷ್ಟೇ ಉತ್ತಮವಾಗಿ ರೂಪಿಸಿಕೊಂಡು, ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ದೇಶಕ್ಕಾಗಿ ಕೊಡುಗೆ ನೀಡುತ್ತಾ ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಶುಭಕೋರಿದರು.

ಅತಿಥಿ ಗಣ್ಯರಲ್ಲಿ ಒಬ್ಬರಾದ ಸುಬೇದಾರ್ ಮೇಜರ್ ಗಣಪಯ್ಯ ಶೇರಿಗಾರ್ (ನಿವೃತ್ತ), ಅಧ್ಯಕ್ಷರು, ಮಾಜಿ ಸೈನಿಕರ ವೇದಿಕೆ, ಉಡುಪಿ ಜಿಲ್ಲೆ ಇವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಈ ನಾಡಿಗಾಗಿ, ಗಡಿಯ ರಕ್ಷಣೆಗಾಗಿ ಹಗಲಿರುಳು ದುಡಿಯುವ ದೇಶದ ಎಲ್ಲಾ ಸೈನಿಕರ ಪರವಾಗಿ ಸನ್ಮಾನಿಸಲಾಯಿತು.

Àgï6 KAR NU NCC, ಉಡುಪಿಯ ಎಕ್ಸಿಕ್ಯೂಟಿವ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಎಂ. ಎ. ಮುಲ್ತಾನಿ, ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರುಗಳಾದ ಹೇಮಂತ್ ಹಾಗೂ ರವಿ ಜಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ: ನ. 15 ರಂದು ಕಾರ್ಕಳದಲ್ಲಿ ಪಟ್ಲ ಸಂಭ್ರಮ; ಶ್ರೀದೇವಿ ಮಹಾತ್ಮೆ ಬಯಲಾಟ

0

 

ಯಕ್ಷಗಾನ, ನಾಟಕ, ದೈವಾರಾಧನೆ, ಮುಂತಾದ ಕ್ಷೇತ್ರದ ಕಲಾವಿದರ ಶ್ರೇಯೋಭಿವೃದ್ದಿಗಾಗಿರುವ ಸಂಘಟನೆ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಕಳ ಘಟಕದ ಹತ್ತನೇ ವಾರ್ಷಿಕ ಸಮಾರಂಭವು ನ. 15 ರಂದು ಕಾರ್ಕಳ ಬಸ್ಸು ನಿಲ್ದಾಣ ಬಳಿಯ ಮಾರಿಗುಡಿ ವಠಾರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕ ಅದ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಸಭಾದ್ಯಕ್ಷತೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ.

ಕಾರ್ಕಳದ ಎಸ್. ಕೆ .ಎಸ್ ಇನ್ಫ್ರಾಪ್ರಾಕ್ಕ್ಚರ್ಸ್ ನ ಸುಜಯ್ ಶೆಟ್ಟಿ, ಅಜೆಕಾರ್ ನಂದ ಕುಮಾರ್ ಹೆಗ್ಡೆ, ಸಾಣೂರು ಯುವರಾಜ ಜೈನ್, ಹಾಗೂ ಕೇಂದ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾದಿಕಾರಿ ಸುದೇಶ್ ಕುಮಾರ್ ರೈ ಇವರಗಳು ಗೌರವ ಉಪಸ್ಥಿತಿ ಇರಲಿದೆ.

ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ವ್ಯವಸಾಯ ಮಾಡಿ ನಿವೃತ್ತರಾದ ದಿ.ವಸಂತ ಆಚಾರ್ ಇವರಿಗೆ ಮರಣೋತ್ತರವಾಗಿ, ಮತ್ತು ನಂದಳಿಕೆ ಜನಾರ್ದನ ಶಾಸ್ತ್ರೀ ಇವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಿಕ್ಕಿದೆ.

ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ಮೇಳದವರಿಂದ ಕಾಲಮಿತಿಯಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಕಲಾಭಿಮಾನಿಗಳಿಗೆ ಆದರದ ಸ್ವಾಗತ ಎಂದು ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಂದೇ ಮಾತರಂಗೆ 150 ವರ್ಷದ ಸಂಭ್ರಮ : ಕಾರ್ಕಳ ಬಿಜೆಪಿ ವತಿಯಿಂದ ವಂದೇ ಮಾತರಂ ಗಾಯನ

0

ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅ. 7ರಂದು ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮವು ವಿಕಾಸ ಕಚೇರಿಯಲ್ಲಿ ಶಾಸಕ, ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ರವರ ಉಪಸ್ಥಿತಿಯಲ್ಲಿ ಕಾರ್ಕಳದ ಮಂಡಲಾಧ್ಯಕ್ಷ ನವೀನ್ ನಾಯಕ್ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್‌ ಹೆಗ್ಡೆ, ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಸಾದ್‌ ಐಸಿರ ಸೇರಿದಂತೆ ಪಕ್ಷದ ಪ್ರಮುಖರು, ಬಿಜೆಪಿ ಮಂಡಲ, ಮೋರ್ಚಾ, ಪ್ರಕೋಷ್ಠಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

ಕಾರ್ಕಳ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ ಶ್ರೀಧರ ಭಟ್ರ ಮೂಲಕ ಬಲಿ ಮೂರ್ತಿ ಸೇವೆಯಲ್ಲಿ ದೇವರ ಪ್ರತಿಬಿಂಬ ಕಾಣುತಿದ್ದೇವೆ-ಗಿರೀಶ್ ರಾವ್

0

ಕಾರ್ಕಳ:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ

ಶ್ರೀಧರ ಭಟ್ರ ಮೂಲಕ ಬಲಿ ಮೂರ್ತಿ ಸೇವೆಯಲ್ಲಿ ದೇವರ ಪ್ರತಿಬಿಂಬ ಕಾಣುತಿದ್ದೇವೆ-ಗಿರೀಶ್ ರಾವ್

ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 55 ವರ್ಷಗಳಿಂದ ಬಲಿ ಸೇವೆಯನ್ನು ನೀಡುತ್ತಿರುವ ಶ್ರೀಧರ್ ಭಟ್ ರವರಿಗೆ ಈ ವರ್ಷ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷಾವಧಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭ ಇವರನ್ನು ದೇವಳದ ಆಡಳಿತ ಮಂಡಳಿಯ ಪರವಾಗಿ ಭಕ್ತಿ ಪೂರ್ವಕವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಯವರಾದ ಶ್ರೀ ಸುಬ್ರಹ್ಮಣ್ಯ ತಂತ್ರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ಮೊಕ್ತೆಸರರಾದ ಗಣೇಶ್ ರಾವ್, ಸುಧೀಂದ್ರರಾವ್, ರಾಮಚಂದ್ರರಾವ, ದಯಾನಂದರಾವ್, ಸೇವಾ ಸಮಿತಿಯ ಸಂಚಾಲಕರಾದ ವೀರೇಂದ್ರ ರಾವ್ ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು