Home Blog Page 72

ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ

0

ಬೆಳ್ಮಣ್‌ ಅನಿತಾ ಡಿಸೋಜಾ ರವರಿಗೆ ನವದೆಹಲಿಯಲ್ಲಿ ನಡೆದ ಶಕ್ತಿ ಸಮ್ಮಾನ್ ಕಾರ್ಯಕ್ರಮದಲ್ಲಿ ಅಭಿನಂದನೆ

ಕಾರ್ಕಳ:ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾವಣೆ ಮಾಡಿರುವ, ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ವಿವಿಧ ರಾಜ್ಯದ ಮಹಿಳೆಯರನ್ನು ಅಭಿನಂದಿಸಲಾಯಿತು.

ಉಡುಪಿ ಮಹಿಳಾ ಕಾಂಗ್ರೆಸ್ ಸದಸ್ಯೆ,ಕಾರ್ಕಳ ಮಹಿಳಾ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಅನಿತಾ ಡಿಸೋಜಾ ಬೆಳ್ಮಣ್‌ ರವರಿಗೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಅಲ್ಕಾ ಲಂಬಾರವರು ಅಭಿನಂದನೆ ಮತ್ತು ಪ್ರಮಾಣಪತ್ರವನ್ನು ನವದೆಹಲಿಯ ಇಂದಿರಾ ಭವನದಲ್ಲಿ ಮಾರ್ಚ್‌ 8ರಂದು ನೀಡಿ ಗೌರವಿಸಿದರು.

ಅನಿತಾ ಡಿಸೋಜಾ ಬೆಳ್ಮಣ್‌ ಅವರು ವಿವಿಧ ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರೀಯರಾಗಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ

ಕಾರ್ಕಳ:ಕಾರು ಚಾಲಕಿಯ ನಿರ್ಲಕ್ಷ್ಯ,ಜೀವನ್ಮರಣ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

0

ಕಾರ್ಕಳ:ಕಾರು ಚಾಲಕಿಯ ನಿರ್ಲಕ್ಷ್ಯ,ಜೀವನ್ಮರಣ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಕೆದಿಂಜೆ:ಕಾರು ಚಾಲಾಕಿ ಏಕಾಏಕಿ ಯೂಟರ್ನ್ ಹೊಡೆದುದರ ಪರಿಣಾಮ ಬೈಕ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ನಡೆದಿದೆ.

ಮಾ.4ರಂದು ಸಂಜೆ ಈ ಘಟನೆ ನಡೆದಿದೆ.ವಿದ್ಯಾರ್ಥಿಗಳು ಕಾಪು ದೇವಸ್ಥಾನದಿಂದ ಪಡುಬಿದ್ರಿ ಮಾರ್ಗವಾಗಿ ನಿಟ್ಟೆಗೆ ಬರುತ್ತಿದ್ದ ಸಂದರ್ಭ,ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು (KA-19-ML-5389) ಅದರ ಚಾಲಕಿಯು ಯಾವುದೇ ಸೂಚನೇ ನೀಡದೇ ನಿರ್ಲಕ್ಷ್ಯತನದಿಂದ ತನ್ನ ಬಲಕ್ಕೆ ತಿರುಗಿಸಿದ್ದಾರೆ.

ಇದರಿಂದಾಗಿ ನಿಯಂತ್ರಣ ತಪ್ಪಿದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದ್ದು,ಬೈಕ್ ಸಮೇತ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಬೈಕ್ ಸವಾರ ವೈಶಾಕ್ ತಲೆ,ಸೊಂಟ ಮತ್ತು ಎಡಕಾಲಿಗೆ ಗಂಭೀರ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಬದಿ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸ್ ಪಡೆಯುತ್ತಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್:ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

0

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್:ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

ಮಣಿಪಾಲ:ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಯಾಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ 33 ವರ್ಷದ ಅನುಭವ ಹೊಂದಿರುವ ಇವರು ಕಳೆದ 12ವರ್ಷಗಳಿಂದ ಪ್ರಾಂಶುಪಾಲರಾಗಿ, ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿ. ಖ್ಯಾತ ವಾಗ್ಮಿಯಾಗಿರುವ ಶ್ರೀಯುತರು 2ಸಾವಿರಕ್ಕೂ ಅಧಿಕ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣಕಾರರಾಗಿ, ರಾಜ್ಯಮಟ್ಟದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಮೂರು ಬಾರಿ ಸಂಪನ್ಮೂಲ ವ್ಯಕಿಯಾಗಿ ಹಾಗೂ ೩೦೦ಕ್ಕೂ ಅಧಿಕ ಎನ್.ಎಸ್.ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿಯೂ ಜನಪ್ರಿಯರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಮೂಡಬಿದ್ರಿಯ ದವಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ, ತದನಂತರ ವೃತ್ತಿ ಬದುಕಿನಲ್ಲಿ ಕಾರ್ಕಳ-ನಾರಾವಿ ದೇವಾಡಿಗ ಸಂಘದ ಕಾರ್ಯದರ್ಶಿಯಾಗಿ, ಕಾರ್ಕಳದ ಜೆ.ಸಿ.ಐನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ ಹೆಗ್ಗಳಿಕೆ ಇವರದ್ದು.

ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದರೂ, ಪ್ರವೃತ್ತಿಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ 300ಕ್ಕೂ ಅಧಿಕ ನಾಟಕಗಳಲ್ಲಿ ಕಲಾವಿದರಾಗಿಯೂ ಜೊತೆಗೆ 8ತುಳು ನಾಟಕಗಳನ್ನು ಬರೆದು ಕಲಾರಸಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ವಿದ್ಯಾನಗರದ ಮಣಿಪಾಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಿಕ್ಷಣಾರ್ಥಿಗಳ ಭೇಟಿಗೆ ಲಭ್ಯವಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕಾಪು:ನೂತನ ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಕಂಗನಾ ರಣಾವತ್ ಭಾಗಿ

0

ಉಡುಪಿ:ಜಿಲ್ಲೆಯ ಕಾಪು ನೂತನ ಮಾರಿಗುಡಿಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾಗಿಯಾಗಿದ್ದಾರೆ.

ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಕಾಪು ಹೊಸ ಮಾರಿಗುಡಿಗೆ ಬಂದು ದೇವರ ದರ್ಶನಗೈದು ಪ್ರಸಾದ ಸ್ವೀಕರಿಸಿದರು.

ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಕ್ಷೇತ್ರಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದರು.

A1ಸೂಪರ್ ಮಾರ್ಟ್ ನಲ್ಲಿ ಸಮ್ಮರ್ ಸ್ಪೆಷಲ್ ಆಫರ್

0

A1ಸೂಪರ್ ಮಾರ್ಟ್ ನಲ್ಲಿ ಸಮ್ಮರ್ ಸ್ಪೆಷಲ್ ಆಫರ್

ಕಾರ್ಕಳದಲ್ಲಿ ಹರ್ಷ ಕೆಫೆ:99 ವೆರೈಟಿ ದೋಸೆ

0

ಕಾರ್ಕಳದಲ್ಲಿ ಹರ್ಷ ಕೆಫೆ:99 ವೆರೈಟಿ ದೋಸೆ

ಅತ್ಯುತ್ತಮ ವಿನ್ಯಾಸದಿಂದ ಕೂಡಿದ ಗ್ರಾಹಕರನ್ನು ಆಕರ್ಷಿಸುವ ದೋಸಾ 99 ಒಳಗೊಂಡಂತೆ ಇತರ ಎಲ್ಲಾ ಖಾದ್ಯಗಳೊಂದಿಗೆ ಶುದ್ದ ಸಸ್ಯಹಾರಿ ಹರ್ಷ ಕೆಫೆ. ಕಾರ್ಕಳ ಪುಲ್ಕೇರಿ ಬೈಪಾಸ ಕಾರ್ಕಳ ಇನ್ ನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ.

ಬೆಳೆಯುತ್ತಿರುವ ಕಾರ್ಕಳ ನಗರಕ್ಕೆ ಒಂದು ಕೆಫೆ ಮಾದರಿಯ ಉಪಹಾರ ಮಂದಿರದ ಅಗತ್ಯತೆ ನೆಲೆಯಲ್ಲಿ ಕೆಫೆ ಪ್ರಾರಂಭಿಸಲಾಗಿದೆ

ಕಾರ್ಕಳಕ್ಕೆ ಡಿ.ಕೆ.‌ಶಿವಕುಮಾರ್ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆ

0

ಕಾರ್ಕಳಕ್ಕೆ ಡಿ.ಕೆ.‌ಶಿವಕುಮಾರ್ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆ

ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೂತನ ಬ್ಲಾಕ್ ಅದ್ಯಕ್ಷರು ಮತ್ತು ವಿವಿಧ ಘಟಕದ ನೂತನ ಪಧಾದಿಕಾರಿಗಳ ಪದಗ್ರಹಣ, ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ ವೀರಪ್ಪ ಮೊಯಿಲಿಯವರಿಗೆ ಅಭಿನಂದನೆ, ಸಹಾಯ ಧನ ವಿತರಣೆ,ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ಕಾಂಗ್ರೇಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯ ಉಪ ಮುಖ್ಯಮಂತ್ರಿ, ಕೆ.ಪಿ.ಸಿ.ಸಿ. ರಾಜ್ಯಾದ್ಯಕ್ಷರಾದ ಡಿ.ಕೆ. ಶಿವಕುಮಾರವರು ಭಾಗವಹಿಸಲಿರುವುದರಿಂದ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆಯು ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆಯಿತು.

ಡಿ‌.ಕೆ.ಶಿವಕುಮಾರವರು ನಮ್ಮೂರಿಗೆ ಆಗಮಿಸುತ್ತಿರುವುದು ಸಂತಸದ ಸುದ್ದಿ, ಅವರ ಬೇಟಿಯಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲಿದೆ, ಪ್ರತೀ ಬೂತಿನಿಂದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಮನವಿ ಮಾಡಿದರು.

ಕಾರ್ಕಳ ಬ್ಲಾಕ್ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅದ್ಯಕ್ಷರೇ ಭಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಇದು ಕಾರ್ಯಕರ್ತರ ಉತ್ಸವದ ಕಾರ್ಯಕ್ರಮವಾಗಿದೆ ಹಾಗಾಗಿ ಕಾರ್ಯಕ್ರಮದ ಯಶಸ್ವಿಯಲ್ಲಿ ಕಾರ್ಕಳ ಕಾಂಗ್ರೆಸ್ ಪ್ರತಿಯೊಬ್ಬ ಸದಸ್ಯನ ಪಾತ್ರವು ಅವಶ್ಯವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿರುವ ಕಾರ್ಕಳ ಕಾಂಗ್ರೆಸ್ ಕುಟುಂಬಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಂಪೂರ್ಣ ಬೆಂಬಲ ಹಾಗೂ ಸಹಕಾರವಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಪಿನಾಥ ಭಟ್, ಹಿರಿಯ ಕಾಂಗ್ರೆಸ್ ನಾಯಕರಾದ ಮಂಜುನಾಥ ಪೂಜಾರಿ ಮುದ್ರಾಡಿ ಸಂದರ್ಬೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಿರಿಯಣ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಂದ್ರ‌ ದೇವಾಡಿಗ, ಹೆಬ್ರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಂಕರ್, ಜಿಲ್ಲಾ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್, ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲಿಕ್ ಅತ್ತೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರೀನಾ ಡಿಸೋಜ, ಕಾರ್ಕಳ ಬ್ಲಾಕ್ ಉಪಾದ್ಯಕ್ಷರಾದ ಜಾರ್ಜ್ ಕ್ಯಾಸ್ಟಲಿನೋ, ಇಂಟಕ್ ಜಿಲ್ಲಾಧ್ಯಕ್ಷರಾದ ಕಿರಣ್ ಹೆಗ್ಡೆ ಹಾಗೂ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರುಗಳು, ಚುನಾಯಿತ ಜನಪ್ರತಿನಿಧಿಗಳು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರರಾದ ಪ್ರದೀಪ್ ಬೇಲಾಡಿ ನಿರೂಪಿಸಿದರು, ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಶಬ್ಬೀರ್ ಮಿಯಾರು ಸ್ವಾಗತಿಸಿದರು, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಧನ್ಯವಾದವಿತ್ತರು.

ಕಾರ್ಕಳ:ಪರಶುರಾಮ ಥೀಮ್‌ ಪಾರ್ಕ್‌ ತಿರುವು ಬಳಿ ಅಪಘಾತ

0

ಕಾರ್ಕಳ:ಪರಶುರಾಮ ಥೀಮ್‌ ಪಾರ್ಕ್‌ ತಿರುವು ಬಳಿ ಅಪಘಾತ

ಬೈಲೂರು ಪರಶುರಾಮ್‌ ಥೀಮ್‌ ಪಾರ್ಕ್‌ ತಿರುವು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.ಫೆ.25ರಂದು ಬೆಳಿಗ್ಗೆ 05:00ಗಂಟೆಗೆ ಘಟನೆ ನಡೆದಿದೆ.ಸುಬ್ರಹ್ಮಣ್ಯ ದೇವಸ್ಥಾನದಿಂದ ಹಿರಿಯಡ್ಕಕ್ಕೆ ವಾಪಸ್ಸಾಗುತ್ತಿದ್ದ ಕಾರು ರಸ್ತೆಯ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಸರಕಾರದ ಹೆಸರು ದುರುಪಯೋಗ ಪಡಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ

0

ಉಡುಪಿ ಜಿಲ್ಲೆಯಾದ್ಯಂತ ಸರಕಾರದ ಹೆಸರು ದುರುಪಯೋಗ ಪಡಿಸಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸಲು ಆಸ್ಪದ ನೀಡುವುದಿಲ್ಲ- ಕೃಷ್ಣ ಶೆಟ್ಟಿ ಬಜಗೋಳಿ

ಶಾಸಕರ ಹೆಸರನ್ನು ಬಳಿಸಿಕೊಂಡು ಅಥವಾ ಕಾಂಗ್ರೆಸ್ ಸರಕಾರದ ಹೆಸರು ದುರುಪಯೋಗ ಪಡಿಸಿಕೊಂಡು ಉಡುಪಿ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳು ,ಅಕ್ರಮ ಗಣಿಗಾರಿಕೆ , ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಸಂಬಂದಪಟ್ಟ ಇಲಾಖೆಯವರು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಸೂಕ್ತ ಪರವಾನಗಿ ಇಲ್ಲದೇ ಸರ್ಕಾರದ ರಾಯಧನಕ್ಕೆ ಧಕ್ಕೆ ಉಂಟು ಮಾಡುವಂತಹ ಅಕ್ರಮ ದಂಧೆಗಳಲ್ಲಿ ಭಾಗಿಯಾಗುತ್ತಿದ್ದಲ್ಲಿ ಅಂತವರ ವಿರುದ್ದ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಯುವ ಸಮುದಾಯವನ್ನು ಸಂಘಟಿಸಿ ಒಗ್ಗಟ್ಟಿನಿಂದ ಸಾಮಾಜಿಕ ಕಳಕಳಿಯುಳ್ಳ ಸಮಾಜಮುಖಿ ಕಾರ್ಯಗಳು, ಧಾರ್ಮಿಕ ಕಾರ್ಯಕ್ರಮಗಳು, ಯುವ ಸಮುದಾಯಕ್ಕೆ ಉದ್ಯೊಗ ಸೃಷ್ಟಿಯ ಕುರಿತು ಚಿಂತನೆ, ಸಮಾಜದ ಕಟ್ಟಕಡೆಯ ಹಾಗೂ ಶೋಷಿತರ ದ್ವನಿಯಾಗುತ್ತದೆಯೇ ವಿನಹ ಅಕ್ರಮ ದಂಧೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ.

ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯುವ ಕಾಂಗ್ರೆಸ್ ಸಮಿತಿಯು ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿಗೆ ತರಲು ಶ್ರಮಿಸುತ್ತದೆ. ಯಾವುದೇ ಕಾರಣಕ್ಕೂ ಯಾರಿಂದನೂ ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೃಷ್ಣ ಶೆಟ್ಟಿ ಬಜಗೋಳಿಯವರು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷರಾದ ಬಳಿಕದ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪರಶುರಾಮ ಥೀಮ್ ಪಾರ್ಕ್ ಹಗರಣದ ಕಾರಣಕರ್ತರೇ ನೀವು ಎನ್ನುವುದನ್ನು ಸುನೀಲ್ ಕುಮಾರ್ ಮರೆಯಬಾರದು: ಶಶಿದರ್ ಶಾಮ‌ ಹವಾಲ್ದಾರ್ ಬೆಟ್ಟು

0

ಪರಶುರಾಮ ಥೀಮ್ ಪಾರ್ಕ್ ಹಗರಣದ ಕಾರಣಕರ್ತರೇ ನೀವು ಎನ್ನುವುದನ್ನು ಸುನೀಲ್ ಕುಮಾರ್ ಮರೆಯಬಾರದು: ಶಶಿದರ್ ಶಾಮ‌ ಹವಾಲ್ದಾರ್ ಬೆಟ್ಟು

ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ನಡೆದ ಭ್ರಷ್ಟಾಚಾರ ಅನಾಚಾರಗಳ ಕುರಿತು ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಮಾತನಾಡುವುದೇ ತಪ್ಪು ಎನ್ನುವಂತೆ ಸುನೀಲ್ ‌ಕುಮಾರ್ ವರ್ತಿಸುತ್ತಿರುವುದು ಖಂಡನೀಯವಾಗಿದೆ.

ಸುನೀಲ್ ಅವರು ತಾನು ಏನೇ ಅನಾಚಾರ ಮಾಡಿದರೂ ನನ್ನನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಸರ್ವಾಧಿಕಾರಿ ನಿಲ್ಲುವನ್ನು ಹೊಂದಿರುವಂತಿದೆ, ಮಾನ್ಯ ಸುನಿಲ್ ಕುಮಾರ್ ಅವರೇ ಕಾರ್ಕಳ ಇರುವುದು ಭಾರತದಲ್ಲಿ, ಭಾರತ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಇಲ್ಲಿ ತಪ್ಪುಗಳು ಸಂಭವಿಸಿದಾಗ ಯಾರು ಯಾರನ್ನು ಬೇಕಾದರೂ ಪ್ರಶ್ನಿಸಬಹುದು. ಸುನೀಲ್ ಕುಮಾರ್ ಅವರೇ ನೀವು ಕಾರ್ಕಳದ ಶಾಸಕರು ಎಂದ ಮಾತ್ರಕ್ಕೆ ನೀವು ಪ್ರಶ್ನಾತೀತರಲ್ಲ.

ತಾನು ಏನೇ ಮಾಡಿದರೂ ಸರಿ! ಬೇರೆಯವರು ಮಾತನಾಡುವುದೇ ತಪ್ಪು ಎನ್ನುವ ನಿಲುವನ್ನು ಬಿಟ್ಟುಬಿಡಿ.

ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾದವರು ಅಷ್ಟ ಮಂಗಳ ಪ್ರಶ್ನಾ ಚಿಂತನೆ ನಡೆಯಲಿ ಎಂದು ಸಲಹೆ ನೀಡಿದ್ದು ಪರಶುರಾಮರ ನಕಲಿ ಪ್ರತಿಮೆ ನಿರ್ಮಾಣ ಸಮಯದಲ್ಲಿ ಆ ಜಾಗದಲ್ಲಿ ಹಿಂದೆ ಆರಾಧಿಸಿ ಕೊಂಡು ಬಂದಿರುವ ಸಾನಿಧ್ಯ ಶಕ್ತಿಗಳ ಕುರುಹು ಇತ್ತೆ,..? ಅಥವಾ ಅವುಗಳಿಗೆ ಅಪಚಾರವಾಗಿದಿಯೇ ಎನ್ನುವುದನ್ನು ತಿಳಿಯುವುದು ಪ್ರತಿಯೊಬ್ಬ ಆಸ್ತಿಕನ ಹಕ್ಕಾಗಿದೆ.

ಉಮಿಕಲ್ ಬೆಟ್ಟದ ಮೇಲೆ ತುಳುನಾಡ ಅವಳಿ ವೀರರಾದ ಕೋಟಿ ಚೆನ್ನಯರ ಪಾದದ ಕುರುಹುಗಳಿವೆ, ಅಲ್ಲಿ ಮುಂಚೆ‌ ದೈವ ಸಾನಿದ್ಯವಿತ್ತು, ಅಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು ಎಂದು ಅಲ್ಲಿನ ಹಿರಿಯ ಗ್ರಾಮಸ್ಥರು ಹೇಳುವುದನ್ನು ಕೇಳಿದ್ದೇವೆ. ಅಲ್ಲಿನ ಸಾನಿದ್ಯ ಶಕ್ತಿಗಳನ್ನು ಮುಚ್ಚಿಹಾಕಿ ಚುನಾವಣೆ ಗೆಲ್ಲುವ ಉದ್ದೇಶದಿಂದ ತರಾತುರಿಯಲ್ಲಿ ನೀವು ನಕಲಿ ಪರಶುರಾಮ ನಿರ್ಮಾಣ ಮಾಡಿರುವುದರಿಂದ ಅಲ್ಲಿನ ಸ್ಥಳ ಸಾನಿಧ್ಯ ಶಕ್ತಿಗಳಿಗೆ ಹಾನಿ ಉಂಟಾಗಿದೆ ಎನ್ನುವ ಮಾತುಗಳಿವೆ.

ಈ ಎಲ್ಲಾ ಗೊಂದಲಗಳು ನಿವಾರಣೆಗಾಗಿ ಅದೇ ಜಾಗದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂದಲ ನಿವಾರಣೆ ಮಾಡಬಹುದು ಎಂದು ಒಬ್ಬ ಕಾರ್ಕಳ ಕ್ಷೇತ್ರದ ಹಿತ ಚಿಂತಕನಾಗಿ ಉದಯ ಶೆಟ್ಟಿ ಮುನಿಯಾಲು, ರವರು ಸಲಹೆ ನೀಡಿದರೆ ತಪ್ಪೆ…?

ಪರಶುರಾಮ ಪ್ರತಿಮೆಯ ವಿಚಾರವಾಗಿ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣಕರ್ತರೇ ಸುನೀಲ್ ಕುಮಾರ್. ತಾವು ಸರ್ಕಾರದ ಸಚಿವರಾಗಿದ್ದಾಗ ಚುನಾವಣೆ ಗೆಲ್ಲುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಸರಕಾರದ ಹಣವನ್ನು ಪೋಲು ಮಾಡಿ ನಕಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿ ಇಷ್ಟೆಲ್ಲಾ ಗೊಂದಲಕ್ಕೆ ಕಾರಣರಾಗಿದ್ದೀರಿ, ಈಗ ಹೇಳಿ ನಿಮ್ಮದೇನು ತಪ್ಪಿಲ್ಲವೇ..?

ಉಮಿಕಲ್ ಬೆಟ್ಟದ ಮೇಲಿನ ಸ್ಥಳ ಸಾನಿಧ್ಯದ ಶಕ್ತಿಗಳಿಂದ ಮುಂದೆ ಏನಾದರೂ ತೊಂದರೆ ಇದೆಯೇ?ಎಂಬುದನ್ನು ತಿಳಿಯಲು ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಬೇಕೆಂದು ಮಾನ್ಯ ಉದಯ ಕುಮಾರ್ ಶೆಟ್ಟಿಯವರು ಸ್ಥಳೀಯ ಜನರ ಅಭಿಪ್ರಾಯದಂತೆ ನೀಡಿದ ಸಲಹೆ ಆಗಿತ್ತೇ ವಿನಃ ಪರಶು ರಾಮ ಮೂರ್ತಿ ಪ್ರತಿಷ್ಟಾಪನೆಗೆ ಅಷ್ಟಮಂಗಲ ಪ್ರಶ್ನೆ ಇಡಬೇಕಾಗಿತ್ತು ಎಂಬುದಾಗಿ ಅಲ್ಲ!!! ಹೇಗೂ ಮುಂದೆ ಆ ಸ್ಥಳ ಜನರ ಭಾವನೆಗೆ ತಕ್ಕಂತೆ ಧಾರ್ಮಿಕ ಶ್ರದ್ದಾ ಕೇಂದ್ರವಾಗಿಯೋ, ಪ್ರವಾಸದ್ಯೋಮ ವಾಗಿಯೋ, ಆರ್ಥಿಕ ಚಟುವಟಿಕೆಯ ಕೇಂದ್ರವಾಗಿಯೋ,ಬೆಳೆಯ ಬೇಕೆನ್ನುವ ದೃಷ್ಠಿ ಕೋನದಿಂದ ಹಾಗೂ ಮಹಾ ವಿಷ್ಣುವಿನ ದಶವತಾರದಲ್ಲಿನ 6ನೇ ಅವತಾರವಾದ ಭಾರ್ಗವರ ಮೂರ್ತಿ ಆದುದರಿಂದ ಪೂರ್ಣವಾಗಿ ಅಲ್ಲದಿದ್ದರೂ ಅಂಶಿಕ ವಾಗಿಯಾದರು ದೇವತಾಂಶ ಇರುತ್ತದೆ ಎನ್ನುವ ನಂಬಿಕೆ ಯಿಂದ ಅವರು ಹೇಳಿದ್ದರಲ್ಲಿ ತಪ್ಪೇನು?

ಸತತವಾಗಿ ಕಾರ್ಕಳದ ಜನತೆ ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದ ತಪ್ಪಿಗೆ ನೀವು ಕಾರ್ಕಳದ ಜನತೆಗೆ ಕೊಟ್ಟ ಬಹುದೊಡ್ಡ ಕಾಣಿಕೆ ಎಂದರೆ ಪರಶುರಾಮರ ನಕಲಿ ಪ್ರತಿಮೆ, ನಿಮ್ಮ ಸ್ವಯಂಕೃತ ಅಪರಾಧದ ಕಾರಣ ನಿಮ್ಮ ಸ್ವಾರ್ಥ ರಾಜಕಾರಣದ ಪರಿಣಾಮ ಇಂದು ಪರಶುರಾಮ ಥೀಮ್ ಪಾರ್ಕ್ ಎನ್ನುವ ವಿವಾದವು ಬಹುದೊಡ್ಡ ಸ್ವರೂಪವನ್ನು ತಡೆದುಕೊಂಡು ಕಾರ್ಕಳದ ಗೌರವವನ್ನು ಕಳೆಯುತ್ತಿರುವುದನ್ನು ಮರೆಯದಿರಿ, ಇನ್ನಾದರೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿಗಾಗಿ, ಕಾರ್ಕಳದ ಗೌರವವನ್ನು ಎತ್ತಿ ಹಿಡಿಯಲು ಕಾರ್ಕಳದ ಜನತೆ ನೀಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಲು ಕಲಿಯಿರಿ, ಸರ್ವಾಧಿಕಾರಿ ಧೋರಣೆ ಕೈಬಿಟ್ಟು ಕ್ಷೇತ್ರದ ಜನರ ಭಾವನೆಗಳನ್ನು ವಿನೀತವಾಗಿ ಸ್ವೀಕರಿಸಲು ಕಲಿಯಿರಿ ಎಂದು ಕಾರ್ಕಳ ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಶಿಧರ್ ಶಾಮ‌ ಹವಾಲ್ದಾರ್ ಬೆಟ್ಟು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.