Home Blog Page 60

ನಿಧನ : ಕಾಂತಾವರ ಕೆ. ಧರ್ಮಣ ಕೋಟ್ಯಾನ್ ನಿಧನ

0

ನಿಧನ : ಕಾಂತಾವರ ಕೆ. ಧರ್ಮಣ ಕೋಟ್ಯಾನ್ ನಿಧನ

ಪ್ರಗತಿ ಪರ ಕೃಷಿಕ, ಕಾಂತಾವರ ಯುವಕ ಮಂಡಲದ ಸಕ್ರಿಯ ಸದಸ್ಯ, ಕಂಬಳ ಪ್ರೇಮಿ, ಖ್ಯಾತ ಓಟಗಾರ, ಪರೋಪಕಾರಿ ಸಮಾಜ ಸೇವಕ ಎಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದ ಕೆ. ಧರ್ಮಣ ಕೋಟ್ಯಾನ್ ಕಾಂತಾವರ ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ.6 ರಂದು ನಿಧನರಾದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾರ್ಕಳ : ಆಂಬುಲೆನ್ಸ್ ಹಾಗೂ ದ್ವಿಚಕ್ರ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

0

ಕಾರ್ಕಳ : ಆಂಬುಲೆನ್ಸ್ ಹಾಗೂ ದ್ವಿಚಕ್ರ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಾಯ

ಆಂಬುಲೆನ್ಸ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕಿಗೆ ಡಿಕ್ಕಿಯಾದ ಘಟನೆ ಕಾರ್ಕಳದ ದೂಪದಕಟ್ಟೆ ಬಳಿ ನಡೆದಿದೆ. ಘಟನೆ ಪರಿಣಾಮ ದ್ವಿಚಕ್ರ ಸವಾರರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸುತ್ತಿದ್ದ ದ್ವಿಚಕ್ರಕ್ಕೆ, ಅತ್ತೂರು ಚರ್ಚ್ ಕಡೆಯಿಂದ ಪಡುಬಿದ್ರಿ ಕಡೆಗೆ ವೇಗವಾಗಿ ಹಾಗೂ ಅಜಾಗರಿಕತೆಯಿಂದ ಆಂಬುಲೆನ್ಸ್ ಚಲಾಯಿಸಿಕೊಂಡು ಬಂದ ಆಂಬುಲೆನ್ಸ್ ಚಾಲಕ ಗಜೇಂದ್ರ ದೂಪದಕಟ್ಟೆ ಜಂಕ್ಷನ್‌ನಲ್ಲಿರುವ ವೃತ್ತವನ್ನು ಬಳಸದೆ ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸುತ್ತಾ ಬಂದಿದ್ದಾನೆ. ಈ ವೇಳೆ ಮುಂದಿನಿಂದ ಬರುತ್ತಿದ್ದ ದ್ವಿಚಕ್ರಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳೆರಡೂ ಜಖಂ ಗೊಂಡಿದ್ದು, ದ್ವಿಚಕ್ರ ಸವಾರರಿಬ್ಬರಿಗೆ ತೀವ್ರತರ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಳ: ಶ್ರೀ ಗುರುಕುಲ ಶಾಲೆಯಲ್ಲಿ ವಿಶ್ವ ಪರಿಸರ  ದಿನ

0

ಮಾಳ: ಶ್ರೀ ಗುರುಕುಲ ಶಾಲೆಯಲ್ಲಿ ವಿಶ್ವ ಪರಿಸರ  ದಿನ

ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವಲಯ ಹಾಗೂ ಮಾಳ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಗ್ರಾಮ ಪಂಚಾಯತ್ ಮಾಳ ಇಲ್ಲಿನ ಪಿಡಿಒ ಶ್ರೀನಿವಾಸ್, ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪ ವಲಯ ಅರಣ್ಯಾಧಿಕಾರಿ ಅಜಿತ್ ಕುಮಾರ್ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಿಸುವುದರ ಬಗ್ಗೆ ಮತ್ತು ಗಿಡಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ರಾಜು ಎಲ್. ಜೆ. ಅರಣ್ಯ ವೀಕ್ಷಕರಾದ ಗುರುರಾಜ್ ಉದಯ್ ಕುಮಾರ್, ದಾಮೋದರ್ ,ಶ್ರೀ ವಿದ್ಯಾವರ್ಧಕ ಸಂಘ ಮಾಳ ಇದರ ಕಾರ್ಯದರ್ಶಿ ಗೀತಾ ಸೇರಿಗಾರ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಸ್ವಾಗತಿಸಿದರೆ, ಶಿಕ್ಷಕಿ ಜ್ಯೋತಿ ವಂದಿಸಿದರು.

ಕ್ರೈಸ್ಟ್‍ಕಿಂಗ್: ವಿಶ್ವ ಪರಿಸರ ದಿನಾಚರಣೆ

0

ಕ್ರೈಸ್ಟ್‍ಕಿಂಗ್: ವಿಶ್ವ ಪರಿಸರ ದಿನಾಚರಣೆ

ಕ್ರೈಸ್ಟ್‍ಕಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರಣದಲ್ಲಿ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಮೂಡಬಿದ್ರೆ ಉಪವಿಭಾಗ ಹಾಗೂ ಕಾರ್ಕಳ ವಲಯದ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ತಹಶೀಲ್ಡಾರ್ ಪ್ರದೀಪ್ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿ ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳಸಬೇಕು’ ಎಂದರು. ಮತ್ತೋರ್ವ ಅತಿಥಿ, ನಿಟ್ಟೆ ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಯಾದ ಆನಂದ್ ಎಸ್. ವಾರ್ತಿ ಮಾತನಾಡಿ, ‘ಪರಿಸರವಿದ್ದರೆ ಮಾತ್ರ ನಾವಿರಲು ಸಾಧ್ಯ. ಆದ್ದರಿಂದ, ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಬಳಿಕ ವಿದ್ಯಾರ್ಥಿಗಳು ಕ್ರಿಸ್ತ ಸೇವಕಿ ಆಶ್ರಮ ಪರ್ಪಲೆ ಇಲ್ಲಿಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ದಳ ಹಾಗೂ ವಿಜ್ಞಾನ ಸಂಘದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಇಲ್ಲಿಯ ಧರ್ಮಗುರುಗಳಾದ ರೆವರೆಂಡ್ ಫಾದರ್ ಬುಖಾರ್ಟ್ ಬರ್ಟಿ ಅಮನ್ನಾ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ರೀತಿಯ ಗಿಡಗಳನ್ನು ನೆಟ್ಟರು.

ಸ್ಕೌಟ್ಸ್ ಮತ್ತು ಗೈಡ್ ಶಿಕ್ಷಕರಾದ ಪ್ರಕಾಶ್ ನಾಯ್ಕ್, ಕೃಷ್ಣ ಪ್ರಸಾದ್, ಶ್ರೀಮತಿ ಆಶಾಜ್ಯೋತಿ, ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ಸಂಘಟಿಸಿದ್ದರು. ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿ ಹುಕ್ರಪ್ಪ ಗೌಡ ಹಾಗೂ ಸಿಬ್ಬಂದಿ, ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಉಪಸ್ಥಿತರಿದ್ದರು.

ತಮಿಳು ನಟ ಕಮಲ್ ಹಾಸನ್ ವಿರುದ್ಧ ಉಡುಪಿಯಲ್ಲಿಯೂ ದೂರು ದಾಖಲು

0

ತಮಿಳು ನಟ ಕಮಲ್ ಹಾಸನ್ ವಿರುದ್ಧ ಉಡುಪಿಯಲ್ಲಿಯೂ ದೂರು ದಾಖಲು

ಥಗ್ ಲೈಫ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಭಾಷೆಗೆ ಅವಮಾನವಾಗುವಂತೆ ಮಾತನಾಡಿದರು ಎಂದು ಕಮಲ್ ಹಾಸನ್ ಅವರ ಮೇಲೆ ರಾಜ್ಯದ ಜನತೆ ತೀವ್ರ ಆರೋಪವನ್ನು ಮಾಡುತ್ತಿದ್ದು, ಇದೀಗ ಉಡುಪಿಯಲ್ಲಿಯೂ ಕಮಲಾ ಹಾಸನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್, ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ನಟಿಸಿದ ಸತ್ಯರಾಜ್ ರವರು ಕನ್ನಡ ವಿರೋಧಿ ಹೇಳಿಕೆಯನ್ನು ನೀಡಿದ್ದರಿಂದ ಬಾಹುಬಲಿ ಚಿತ್ರವನ್ನು ಪ್ರದರ್ಶಿಸಲು ವಿರೋಧಿಸಿದ್ದನ್ನು ಹಾಗೂ ಮುತ್ತಿಗೆ ಹಾಕಿದ ವಿಚಾರವನ್ನು ನೆನಪಿಸಿದರು. ಒಂದು ವೇಳೆ ಕಮಲ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಯಾಚಿಸದಿದ್ದರೆ, ಅವರ ತಗ್ ಲೈಫ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿಉಗ್ರವಾದ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಉಪಾಧ್ಯಕ್ಷರಾದ ಅಲ್ಫಾನ್ಸೋ, ಎಮ್‌ ಎಸ್‌.ಸೈಯ್ಯದ್ ನಿಝಾಮುದ್ದೀನ್, ಕಾಪು ತಾಲೂಕು ಅಧ್ಯಕ್ಷ ಚೇತನ್ ಪಡುಬಿದ್ರಿ, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ ಶೇರಿಗಾರ್ ಪದಾಧಿಕಾರಿಗಳಾದ ನಾಗರಾಜ್ ವಿಜಯ ಪೂಜಾರಿ, ಖಾದರ್ ಮಂಚಕಲ್, ಶಾಹಿಲ್ ರಹಮತುಲ್ಲಾ , ದೇವಕಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಕಳ : ಸ್ಕೂಟರ್ – ಕಾರು ಡಿಕ್ಕಿ; ಸವಾರೆ ಸಾವು

0

ಕಾರ್ಕಳ : ಸ್ಕೂಟರ್ – ಕಾರು ಡಿಕ್ಕಿ;  ಸವಾರೆ ಸಾವು

ಸ್ಕೂಟಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರೆ ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ನಿಟ್ಟೆಯಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ.

ಮೃತರನ್ನು ನಿಟ್ಟೆ ಗುಂಡಾಜೆ ನಿವಾಸಿ ಯಶವಂತಿ ಶೆಟ್ಟಿ ಎಂದು ಗುರುತಿಸಲಾಗಿದ್ದು, ಇವರು ಕಾರ್ಕಳದಿಂದ ಮನೆಗೆ ಹಿಂತಿರುಗುವಾಗ ನಿಟ್ಟೆ ಬಳಿ ಒಳ ರಸ್ತೆಗೆ ಸೇರಲು ಏಕಾಏಕಿ ಬಲಕ್ಕೆ ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸವಾರೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಕಾರ್ಕಳ : ಕುಡಿಯುವ ನೀರಿನ ಅಭಾವ; ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಬ್ಬರಿಂದ ಧರಣಿ

0

ಕಾರ್ಕಳ : ಕುಡಿಯುವ ನೀರಿನ ಅಭಾವ; ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಬ್ಬರಿಂದ ಧರಣಿ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸರಿಯಾಗಿ ನೀರು ವಿತರಣೆಯಾಗದೇ ಇರುವ ಹಿನ್ನಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಬ್ಬರು ಪ್ರತಿಭಟನೆ ನಡೆಸಿದ್ದಾರೆ.

ಕಾರ್ಕಳ ಪುರಸಭೆ ವ್ಯಾಪ್ತಿಯ 2 ಮತ್ತು 5ನೇ ವಾರ್ಡಿನ ಸಮಸ್ಯೆಯ ಬಗ್ಗೆ ಪ್ರತಿಮಾ ರಾಣೆ ಮತ್ತು ನೀತಾ ಆಚಾರ್ಯ ಅವರು ಮುಖ್ಯಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಗೆ ಕುಳಿತ ದೃಶ್ಯ ಕಂಡು ಬಂತು. ಭಾರಿ ಮಳೆ ಸುರಿದರೂ ಕುಡಿಯುವ ನೀರಿನ ಕೊರತೆ ಪುರಸಭೆಗೆ ಕಾಡಿದೆ. ಕಳೆದ 15 ದಿನಗಳಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಎಂಜಿನಿಯರ್ ರೇಣುಕಾ, ಮಳೆ ಸುರಿಯಲು ಆರಂಭಗೊಂಡಂದಿನಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯದ ಪರಿಣಾಮ ನೀರು ವಿತರಣೆಗೆ ಭಾರಿ ತೊಂದರೆಯಾಗಿದೆ ಎಂದು ಪುರಸಭೆ ಎಂಜಿನಿಯರ್ ರೇಣುಕಾ ತಿಳಿಸಿ ದರು.

ನೀರಿನ ಸಮಸ್ಯೆ ಸರಿಪಡಿಸಿ ನ್ಯಾಯ ಒದಗಿಸದಿದ್ದಲ್ಲಿ ಸಾರ್ವಜನಿಕರ ಜತೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಮಾ ರಾಣೆ ಎಚ್ಚರಿಸಿದರು. ನೀರು ಸರಬರಾಜು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರೆ ನೀರು ವಿತರಕರಿಂದ ಸಮರ್ಪಕ ಉತ್ತರವಿಲ್ಲ. ಟ್ಯಾಂಕಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ಉತ್ತರಿಸಿ ಸುಮ್ಮನಾಗುತ್ತಾರೆ. ವಾರ್ಡಿನ ಜನತೆಯ ಸಮಸ್ಯೆಯನ್ನು ಪರಿಹರಿಸುವವರು ಯಾರು ಎಂದು ನೀತಾ ಆಚಾರ್ಯ ಪ್ರಶ್ನಿಸಿದರು.

ಅರುಣ್ ಕುಮಾರ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಮಂದಿಯ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ

0

ಅರುಣ್ ಕುಮಾರ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಮಂದಿಯ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ

ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸಾಲು ಸಾಲು ಅಹಿತಕರ ಘಟನೆಗಳು ನಡೆಯುತ್ತಿದ್ದು, ಮತ್ತೆ ಜಿಲ್ಲೆಯನ್ನು ಶಾಂತಿ ಸುವ್ಯವಸ್ಥೆಗೆ ತರಲು ಇದೀಗ ಪೊಲೀಸರು ಗಡಿಪಾರು ಎಂಬ ಅಸ್ತ್ರ ಉಪಯೋಗಿಸಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಒಟ್ಟು 36 ಜನರಿಗೆ ಗಡಿಪಾರು ನೋಟೀಸ್ ನೀಡಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಹಸೈನಾರ್, ಮಹಮ್ಮದ್ ಸಫ್ವಾನ್, ಭುವಿತ್ ಶೆಟ್ಟಿ, ರಾಜೇಶ್, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪವನ್ ಕುಮಾರ್, ಚರಣ್ ರಾಜ್, ಅಬ್ದುಲ್ ಲತೀಫ್, ಮಹಮ್ಮದ್ ಅಶ್ರಫ್, ಮೊಯ್ದಿನ್ ಅದ್ನಾನ್, ಭರತ್ ಕುಮ್ಡೇಲ್ ಹೆಸರು ಉಲ್ಲೇಖವಾದರೆ ಇನ್ನು ವಿಟ್ಲ ಠಾಣೆಯಲ್ಲಿ ಗಣೇಶ್ ಪೂಜಾರಿ, ಅಬ್ದುಲ್ ಖಾದರ್, ಚಂದ್ರಹಾಸ ಎಂಬವರ ಹೆಸರು ಉಲ್ಲೇಖವಾಗಿದೆ.

ಬೆಳ್ತಂಗಡಿ ಭಾಗದ ಪುಂಜಾಲಕಟ್ಟೆ ಠಾಣೆಯಲ್ಲಿ ಅಶ್ರಫ್ ಬಿ. ಹೆಸರು ಕಂಡು ಬಂದರೆ, ಬೆಳ್ತಂಗಡಿ ಠಾಣೆಯಲ್ಲಿ ಮನೋಜ್ ಕುಮಾರ್, ಮಹೇಶ್ ಶೆಟ್ಟಿ ತಿಮರೋಡಿ ಹೆಸರು ಉಲ್ಲೇಖವಾಗಿದೆ.

ಪುತ್ತೂರು-ಸುಳ್ಯ ಭಾಗದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಮನೀಶ್ ಎಸ್., ಅಬ್ದುಲ್ ರಹಿಮಾನ್, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಿಶೋರ್, ರಾಕೇಶ್ ಕೆ., ನಿಶಾಂತ್ ಕುಮಾರ್ ಹೆಸರಿದ್ದರೆ, ಕಡಬ ಠಾಣೆಯಲ್ಲಿ ಮಹಮ್ಮದ್ ನವಾಝ್, ಉಪ್ಪಿನಂಗಡಿ ಠಾಣೆಯಲ್ಲಿ ಸಂತೋಷ್ ಕುಮಾರ್ ರೈ, ಜಯರಾಮ, ಸಂಶುದ್ದೀನ್, ಸಂದೀಪ್, ಮಹಮ್ಮದ್ ಶಾಕಿರ್, ಅಬ್ದುಲ್ ಅಝೀಝ್, ಸುಳ್ಯ ಠಾಣೆಯಲ್ಲಿ ಲತೇಶ್ ಗುಂಡ್ಯ, ಮನೋಹರ ಗುರುತಿಸಿಕೊಂಡಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಸಾದ್, ಶಮೀರ್ ಕೆ. ಮುಂತಾದವರ ಗಡಿಪಾರಿಗೆ ನಿರ್ಧರಿಸಲಾಗಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

0

ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

ಪ್ರಚೋದನಕಾರಿ ಹೇಳಿಕೆ ವಿಚಾರ; ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

ಪ್ರಚೋದನಕಾರಿ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಸದ್ಯಕ್ಕೆ ಎಲ್ಲಾ ಮಾದ್ಯಮಗಳಲ್ಲಿರುವ ಸುದ್ದಿ. ಆದರೆ ಇದರ ನಡುವೆ ಆರ್. ಎಸ್. ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ವಾಗ್ಮಿ ಶ್ರೀಕಾಂತ್ ಶೆಟ್ಟಿ ವಿರುದ್ಧವಾಗಿ ಎಫ್.ಐ. ಆರ್. ಹಾಕಿರುವುದನ್ನು ಖಂಡಿಸಿ ಆರ್. ಎಸ್. ಎಸ್. ಸಂಘಟನೆ ಹೈಕೋರ್ಟ್ ಗೆ ಅಪಿಲು ಹಾಕಿದ ಹಿನ್ನೆಲೆ ಇದೀಗ ಬಿಗ್ ರಿಲೀಫ್ ದೊರೆತಿದೆ.

ಕೆ. ಪ್ರಭಾಕರ್ ಭಟ್ ಹಾಗೂ ಶ್ರೀಕಾಂತ್ ಶೆಟ್ಟಿ ಪರವಾಗಿ ವಾದ ಮಂಡಿಸಿದ ಅರುಣ್ ಶಾಮ್ ಇಬ್ಬರ ಮೇಲೆ ಹಾಕಿರುವ ಕೇಸುಗಳ ಕುರಿತು ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯವಾದಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಇಬ್ಬರ ಪ್ರಕರಣಕ್ಕೂ ಸಂಬಂಧಪಟ್ಟು ಮುಂದಿನ ವಿಚಾರಣೆ ನಡೆಯುವವರೆಗೆ ಪೊಲೀಸ್ ಇಲಾಖೆ ಇವರಿಬ್ಬರ ವಿರುದ್ಧ ಬಂಧನ ಸೇರಿದಂತೆ ಇತರ ಯಾವುದೇ ಒತ್ತಡ ಹಾಗೂ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ ೧೦ ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಈದು ಬಂಟರ ಸಂಘ: ವಿದ್ಯಾರ್ಥಿ ವೇತನ ವಿತರಣೆ

0

ಈದು ಬಂಟರ ಸಂಘ:ವಿದ್ಯಾರ್ಥಿ ವೇತನ ವಿತರಣೆ

ಬಂಟರ ಸಂಘ ಈದು ಇದರ ಬಂಟರ ಸಂಘದ ಜೂನ್ ತಿಂಗಳ ಸಭೆ ನಡೆಯಿತು, ಈ ಸಂದರ್ಭದಲ್ಲಿ 1 ನೇ ತರಗತಿಯಿಂದ ಪದವಿ ಯವರೆಗೆ 39 ಬಂಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಈದು ಬಂಟರ ಸಂಘ ಗೌರವ ಅಧ್ಯಕ್ಷರಾದ ಜಗನಾಥ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷರಾದ ಹೊಸ್ಮಾರು ಸೂರ್ಯಶ್ರೀ ಸುರೇಶ್ ಶೆಟ್ಟಿ, ಉಪಾಧ್ಯಕ್ಷರು ಸುನೀತಾ ಶೆಟ್ಟಿ, ಪ್ರದಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ, ಕೋಶಾಧಿಕಾರಿ ಶುಭಕರ್ ಶೆಟ್ಟಿ, ಹಾಗೂ ಎಲ್ಲಾ ಬಂಟ ಬಾಂಧವರು ಉಪಸ್ಥಿತರಿದ್ದರು.