
ಅರುಣ್ ಕುಮಾರ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಮಂದಿಯ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ
ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸಾಲು ಸಾಲು ಅಹಿತಕರ ಘಟನೆಗಳು ನಡೆಯುತ್ತಿದ್ದು, ಮತ್ತೆ ಜಿಲ್ಲೆಯನ್ನು ಶಾಂತಿ ಸುವ್ಯವಸ್ಥೆಗೆ ತರಲು ಇದೀಗ ಪೊಲೀಸರು ಗಡಿಪಾರು ಎಂಬ ಅಸ್ತ್ರ ಉಪಯೋಗಿಸಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಒಟ್ಟು 36 ಜನರಿಗೆ ಗಡಿಪಾರು ನೋಟೀಸ್ ನೀಡಿದೆ.
ಬಂಟ್ವಾಳ ನಗರ ಠಾಣೆಯಲ್ಲಿ ಹಸೈನಾರ್, ಮಹಮ್ಮದ್ ಸಫ್ವಾನ್, ಭುವಿತ್ ಶೆಟ್ಟಿ, ರಾಜೇಶ್, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪವನ್ ಕುಮಾರ್, ಚರಣ್ ರಾಜ್, ಅಬ್ದುಲ್ ಲತೀಫ್, ಮಹಮ್ಮದ್ ಅಶ್ರಫ್, ಮೊಯ್ದಿನ್ ಅದ್ನಾನ್, ಭರತ್ ಕುಮ್ಡೇಲ್ ಹೆಸರು ಉಲ್ಲೇಖವಾದರೆ ಇನ್ನು ವಿಟ್ಲ ಠಾಣೆಯಲ್ಲಿ ಗಣೇಶ್ ಪೂಜಾರಿ, ಅಬ್ದುಲ್ ಖಾದರ್, ಚಂದ್ರಹಾಸ ಎಂಬವರ ಹೆಸರು ಉಲ್ಲೇಖವಾಗಿದೆ.
ಬೆಳ್ತಂಗಡಿ ಭಾಗದ ಪುಂಜಾಲಕಟ್ಟೆ ಠಾಣೆಯಲ್ಲಿ ಅಶ್ರಫ್ ಬಿ. ಹೆಸರು ಕಂಡು ಬಂದರೆ, ಬೆಳ್ತಂಗಡಿ ಠಾಣೆಯಲ್ಲಿ ಮನೋಜ್ ಕುಮಾರ್, ಮಹೇಶ್ ಶೆಟ್ಟಿ ತಿಮರೋಡಿ ಹೆಸರು ಉಲ್ಲೇಖವಾಗಿದೆ.
ಪುತ್ತೂರು-ಸುಳ್ಯ ಭಾಗದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಮನೀಶ್ ಎಸ್., ಅಬ್ದುಲ್ ರಹಿಮಾನ್, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಿಶೋರ್, ರಾಕೇಶ್ ಕೆ., ನಿಶಾಂತ್ ಕುಮಾರ್ ಹೆಸರಿದ್ದರೆ, ಕಡಬ ಠಾಣೆಯಲ್ಲಿ ಮಹಮ್ಮದ್ ನವಾಝ್, ಉಪ್ಪಿನಂಗಡಿ ಠಾಣೆಯಲ್ಲಿ ಸಂತೋಷ್ ಕುಮಾರ್ ರೈ, ಜಯರಾಮ, ಸಂಶುದ್ದೀನ್, ಸಂದೀಪ್, ಮಹಮ್ಮದ್ ಶಾಕಿರ್, ಅಬ್ದುಲ್ ಅಝೀಝ್, ಸುಳ್ಯ ಠಾಣೆಯಲ್ಲಿ ಲತೇಶ್ ಗುಂಡ್ಯ, ಮನೋಹರ ಗುರುತಿಸಿಕೊಂಡಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಸಾದ್, ಶಮೀರ್ ಕೆ. ಮುಂತಾದವರ ಗಡಿಪಾರಿಗೆ ನಿರ್ಧರಿಸಲಾಗಿದೆ.












