ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಂಟಿ ಅನುದಾನದಿಂದ ಗ್ರಾಮ ಪಂಚಾಯತ್ ಸಾಣೂರು ನಿರ್ಮಿಸಿ ಕೊಟ್ಟಿರುವ ಬಾಲಕಿಯರ ಶೌಚಾಲಯದ ಉದ್ಘಾಟನೆಯನ್ನು ಸಾಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೂರ್ವ ವಿದ್ಯಾರ್ಥಿಯಾಗಿದ್ದ ಭಾರತ ಪೆಟ್ರೋಲಿಯಂನ ವಿಶ್ರಾಂತ ಉದ್ಯೋಗಿ ರವಿದಾಸ್ ಭಟ್ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತಗಳನ್ನಾಡಿದರು.
ಸಾಣೂರು ಗ್ರಾಮ ಪಂಚಾಯತಿಯ ಸದಸ್ಯರಾದ ಪ್ರಸಾದ್ ಪೂಜಾರಿ ಅವರು ಮಾತನಾಡುತ್ತಾ, ವಿದ್ಯಾ ಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಸಹಕರಿಸುವುದಾಗಿ ಹೇಳಿದರು.
ವಿವಿಧ ಸಂಘ ಸಂಸ್ಥೆಗಳು ನಡೆಸಿದ ಬೇರೆ ಬೇರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕಲಿಯುವಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಾಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಲವೀನ ಮೇಲ್ವಿಟ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಮಾಧವ ಭಂಡಾರ್ಕರ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಿಯ್ಯಾರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನ ವಿದ್ಯಾರ್ಥಿನಿ ವಿನುತಾ ಇವರು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಟಾಪ್ 15 ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಂದ ನೀಡಲಾಗುವ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ಹಾಗೂ ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ವಿನುತಾ ಒಬ್ಬರಾಗಿದ್ದಾರೆ. ವಿನುತಾ ವೈದ್ಯಕೀಯ ಕೋರ್ಸನ್ನು ಆಯ್ಕೆ ಮಾಡಿಕೊಂಡಿದ್ದು, ರಾಜ್ಯದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗೆ ದಾಖಲಾಗಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಉಡುಪಿ ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿರುವ ರಶ್ಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಕಾಲೇಜಿನ ಪ್ರಾಂಶುಪಾಲರಾಗಿರುವ ಮಲ್ಲಿಕಾರ್ಜುನ ಕುರಿ, ಗಣಕ ವಿಜ್ಞಾನ ಉಪನ್ಯಾಸಕರು ಹಾಗೂ ನಿಲಯಪಾಲಕರಾದ ತುಳಸಿ ಗಾಯತ್ರಿದೇವಿ, ಭೌತಶಾಸ್ತ್ರ ಉಪನ್ಯಾಸಕರಾದ ಗಣೇಶ ಬರ್ಲಾಯ, ಅಂಗ್ಲ ಭಾಷಾ ಉಪನ್ಯಾಸಕರಾದ ಸುಪ್ರೀತ, ಕನ್ನಡ ಭಾಷಾ ಉಪನ್ಯಾಸಕರಾದ ಭರತ್‌ರಾಜ್ ಕೆ.ಎನ್., ಜೀವಶಾಸ್ತ್ರ ಉಪನ್ಯಾಸಕರಾದ ಸುಷ್ಮಾ ಹೆಗಡೆ, ರಸಾಯನಶಾಸ್ತ್ರ ಉಪನ್ಯಾಸಕರಾದ ಸಂಧ್ಯಾ ಆಚಾರ್ಯ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.
ಕಾರ್ಕಳ ತಾಲೂಕಿನ ನೀರೆ ಬೈಲೂರು ಮೂಲದ ಮುಂಬೈಯಲ್ಲಿ ಉದ್ಯಮಿಯಾಗಿರುವ
ಶಿಶುಪಾಲ ಶೆಟ್ಟಿ ಮತ್ತು ಶ್ವೇತಾಶೆಟ್ಟಿಯವರ ಮಗನಾದ ಸನ್ವಿತ್ ಶೆಟ್ಟಿಯವರು
ಹೈದಬಾದಿನಲ್ಲಿ ನಡೆದ ಫಸ್ಟ್ ಏಷಿಯನ್ ಓಪನ್ ಅಂತರಾಷ್ಟ್ರೀಯ ಟೆಕ್ವ್ಯಾಂಡೋ
ಚಾಂಪಿಯನ್ ನಲ್ಲಿ ರನ್ನರ್ ಅಫ್ ವೈಯಕ್ತಿಕ ಚಾಂಪಿಯನ್ ಶಿಪ್ ಬೆಳ್ಳಿಯ
ಪದಕವನ್ನು ಪಡೆದು ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ತಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆ ಕುಕ್ಕುಂದೂರು ಕಾರ್ಕಳದಲ್ಲಿ
ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸನ್ವಿತ್ ಶೆಟ್ಟಿ ಈ ಸಾಧನೆಯನ್ನು
ಮಾಡಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಮತ್ತು
ಕಂಚಿನ ಪದಕವನ್ನು, ಶೃಂಗೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ
ಪದಕವನ್ನು, ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನದ
ಪದಕಗಳನ್ನು ಪಡೆದಿದ್ದಾರೆ.
ಟೆಕ್ವ್ಯಾಂಡೋ ಚಾಂಪಿಯನ್ ಸನ್ವಿತ್ ಶೆಟ್ಟಿಯವರಿಗೆ ಸಂಸ್ಥೆಯ ಅಧ್ಯಕ್ಷರಾದ
ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್,
ದೈಹಿಕ ಶಿಕ್ಷಕರಾದ ಸತೀಶ್ಚಂದ್ರ ಹೆಗ್ಡೆ, ಉಪನ್ಯಾಸಕರು, ಅಧ್ಯಾಪಕ ವೃಂದದವರು
ಶುಭಾಷಯಗಳನ್ನು ಕೋರಿದ್ದಾರೆ. ಕೋಚ್ ಸುರೇಶ್ ದೇವಾಡಿಗ ಅಭಿನಂದಿಸಿದ್ದಾರೆ.
ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯಮಟ್ಟದ ಹಿಂದಿ ಭಾಷಾತಜ್ಞರು ಆದ ಅನಂತ್ ರಾಮ್ ನಾಯಕ್ ಅವರು ‘ವಿಶ್ವಭಾಷೆಗಳಲ್ಲಿ ಹಿಂದಿ ಮೂರನೇ ಸ್ಥಾನದಲ್ಲಿದ್ದು ಸುಮಾರು 170ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದಿ ಭಾಷೆಯನ್ನಾಡುವ ಜನರಿದ್ದಾರೆ. ಹಿಂದಿ ಉದಾರ ಹೃದಯದ ಭಾಷೆಯಾಗಿದ್ದು, ತನ್ನ ವಿಶೇಷತೆಯ ಕಾರಣದಿಂದ ಅನ್ಯ ಭಾಷೆಯನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿ ಯಾವುದೇ ಒಂದು ಪ್ರದೇಶದ ಭಾಷೆಯಲ್ಲ. ದೇಶದಲ್ಲಿ ಯಾವುದೇ ಭೇದವಿಲ್ಲದೆ ಮಾತನಾಡುವ ಭಾಷೆಯಾಗಿದೆ. ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತದೆ’ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಶೆಟ್ಟಿಯವರು ಮಾತನಾಡುತ್ತ ‘ಹಿಂದಿಯನ್ನು ಸಹ ಪ್ರಧಾನ ಭಾಷೆಯಾಗಿ ಬಳಸಲಾಗುತ್ತಿದೆ. ಭಾಷೆಗಳ ಆಯ್ಕೆ ನಮ್ಮದೆ ಆಗಿರುವುದರಿಂದ ಆಯ್ದುಕೊಂಡ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.
ಹಿಂದಿ ದಿವಸದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ವನಿತಾ ತೋಳಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ರಚನಾ ನಿರೂಪಿಸಿ, ಖಾಝಿ ಇಲ್ಹಾಮ್ ವಂದಿಸಿದರು.
ಗೆಲುವಿಗಾಗಿ ಆಡಿದವ ಸೋಲುತ್ತಾನೆ. ಉತ್ತಮ ಪ್ರದರ್ಶನ ನೀಡುವೆನೆಂದವ ಗೆಲ್ಲುತ್ತಾನೆ. ಕ್ರೀಡೆಯು ವ್ಯಕ್ತಿಯ ವಿಕಾಸದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್.ಐ. ಪ್ರಸನ್ನ ಎಂ. ಎಸ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರದಲ್ಲಿ ಜಂಟಿಯಾಗಿ ಆಯೋಜಿಸಿದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಂದ್ಯಾಟವನ್ನು ಉದ್ಘಾಟಿಸಿದ, ಕೌನ್ಸಿಲರ್-ಸೈಕೋಲಜಿಸ್ಟ್ ಡಾ.ಪ್ರಸನ್ನ ಹೆಗ್ಡೆ ಮಾತನಾಡಿ, ಸೋಲು ಗೆಲುವಿನ ಸಮನ್ವಯತೆಯ ಭಾವನೆ ಕ್ರೀಡೆಯಲ್ಲಿ ಮಾತ್ರ ಇರಲು ಸಾಧ್ಯ. ಕ್ರೀಡಾಸ್ಫೂರ್ತಿ ಹೊಂದಿದವರು ಒತ್ತಡ ರಹಿತ ಬದುಕನ್ನು ಹೊಂದಿರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರು ಶ್ರೀ ಶರತ್ ರಾವ್, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸಂತೋಷ್ ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ ವಂದಿಸಿದರು.
ಸಮಾರೋಪ ಸಮಾರಂಭ :
ಸಾಮಾಜಿಕ ಸ್ವಾಸ್ಥ್ಯ, ಸಾಮಾಜಿಕ ಸಾಮರಸ್ಯಕ್ಕೆ ಹಾಗೂ ಎಲ್ಲರ ಬೆಸೆಯುತ ವಿಶ್ವಭಾವೈಕ್ಯತೆಗೆ ಕ್ರೀಡೆ ಕಾರಣಾವಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೀತರಾಮ್ ಭಟ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತನಗರದಲ್ಲಿ ಜಂಟಿಯಾಗಿ ಆಯೋಜಿಸಿದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ದೈಹಿಕ ಶಿಕ್ಷಣ ನಿದೇರ್ಶಕರಾದ ಅರುಣ್, ಸೌಜನ್ಯ ಹೆಗ್ಡೆ, ಕಿರಣ್ ಮತ್ತು ರೇಷ್ಮಾ ಸಾಲಿಸ್ ಉಪಸ್ಥಿತರಿದ್ದರು.
ಫಲಿತಾಂಶ :
ಬಾಲಕಿಯರ ವಿಭಾಗ –
ಪ್ರಥಮ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ಗಣಿತನಗರ (ಅಲ್ ರೌಂಡರ್ : ಅಪೇಕ್ಷಾ ಎ ಭಗವತಿ, ಬೆಸ್ಟ್ಸರ್ವಿಸ್ : ಹರ್ಷಿತಾ ಎಚ್.ಎಸ್),
ದ್ವಿತೀಯ ಸ್ಥಾನ : ಎಸ್.ವಿ.ಟಿ. ಮಹಿಳಾ ಪದವಿ ಪೂರ್ವ ಕಾಲೇಜು, ಕಾರ್ಕಳ. (ಡಿಫೆಂಡರ್ – ಚೈತ್ರಾ),
ಬಾಲಕರ ವಿಭಾಗ –
ಪ್ರಥಮ : ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು, ಕಾರ್ಕಳ, (ಅಲ್‌ರೌಂಡರ್ – ಅಬ್ರಹಾರ್, ಬೆಸ್ಟ್ ಸರ್ವಿಸ್ – ಅನೀಶ್)
ದ್ವಿತೀಯ : ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜು, ಕುಕ್ಕುಂದೂರು, (ಡಿಫೆಂಡರ್ – ರೋಹನ್)
ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೈಂಟ್‌ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವದಲ್ಲಿ ಜರುಗಿದ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಅನ್ಸಿತ್ ಎ ಭಂಡಾರಿ, ಮನ್ವಿಶ್ ರಾವ್ ಮತ್ತು ಅಖಿಲ್ ಸಾಯಿ ಕೋಕ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಕ್ರಿಸ್ತ ಸೇವಕಿ ಆಶ್ರಮ ಪರ್ಪಲೆ ಕಾರ್ಕಳ ಇಲ್ಲಿನ ಆಶ್ರಮದ ವಾಸಿಗಳಾದ ಹಿರಿಯ ನಾಗರಿಕರಿಗೆ ಆಮ್ಲಜನಕ ಸಾಂದ್ರೀಕರಣ ಘಟಕ ಹಸ್ತಾಂತರ ಕಾರ್ಯಕ್ರಮವು ಆಶ್ರಮದ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಭರತೇಶ್ ಆದಿರಾಜ್ ಮಾತನಾಡುತ್ತಾ ಈ ಆಶ್ರಮಕ್ಕೆ ಪ್ರತಿ ವರ್ಷ ನಮ್ಮ ಸಂಸ್ಥೆ ಭೇಟಿ ನೀಡಿ ಹಿರಿಯರಿಗೆ ಸಹಕಾರ ನೀಡುತ್ತಾ ಬಂದಿದೆ. ಅದರಂತೆ ಈ ಬಾರಿ ಅವರ ಉಪಯೋಗಕ್ಕಾಗಿ ರೂ.40,000 ವೆಚ್ಚದ ಆಮ್ಲಜನಕ ಸಾಂದ್ರೀಕರಣ ಘಟಕ ನೀಡುತ್ತಿದ್ದೇವೆ. ಇದರ ಸದುಪಯೋಗ ಅವರಿಗಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಸಮುದಾಯ ಸೇವೆಗಾಗಿ ಇರುವ ಕ್ಲಬ್ಬಿನ ಆದ್ಯ ಕರ್ತವ್ಯವೂ ಆಗಿದೆ ಎಂದರು.
ಕ್ಲಬ್ಬಿನ ಮಾಜಿ ಕಾರ್ಯದರ್ಶಿ ಗಣೇಶ್ ಸಾಲಿಯನ್ ಅವರು ಅವರ ತಾಯಿ ಜಯಂತಿ ಸಾಲಿಯಾನ್ ಅವರ ಹೆಸರಿನಲ್ಲಿ ಹಣ್ಣು ಹಂಪಲನ್ನು ಕೊಡುಗೆಯಾಗಿ ನೀಡಿದರು.
ಆಶ್ರಮದ ರೇವರೆಂಡ್ ಫಾದರ್ ಪ್ರಭುರಾಜ್ ಕ್ಲಬ್ಬಿನ ವತಿಯಿಂದ ಮಾಡುತ್ತಿರುವ ಈ ಸೇವಾ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿಯ ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಮಾಜಿ ವಲಯ ಸೇನಾನಿ ಸುರೇಶ್ ನಾಯಕ್, ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ವಿಜೇಂದ್ರ ಕುಮಾರ್, ಮೇಜರ್ ಡೋನರ್ ಸುವರ್ಣ ನಾಯಕ್, ಸದಸ್ಯರಾದ ಡಯಾಸ್ ಚೆರಿಯನ್ , ಬಾಲಕೃಷ್ಣ ದೇವಾಡಿಗ, ಹರ್ಷಿಣಿ ವಿಜಯರಾಜ್ ,ಮಮತಾ ಶೆಟ್ಟಿ, ಅಲೆನ್ ಡಿ ಸೋಜಾ ಉಪಸ್ಥಿತರಿದ್ದರು .ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಹಾಗೂ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯಾರಾದ ಮಾನಸ ವಿ ನಾಯಕ್, ಹರ್ಷಿತ ವಿ ನಾಯಕ್, ಆದ್ಯ ಎಸ್. ಪಡ್ರೆ, ಆರುಷಿ, ಪೂರ್ವಿ ಎಸ್. ಕಡಕೋಲ್ಮಠ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯರ ಸಾಧನೆಗೆ ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಕ್ರೀಡಾ ಪೋತ್ಸಾಹಕ ಸಹಾಯ ಧನ ವಿತರಣೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ ಲೆಕ್ಕಪತ್ರ ಮಂಡನೆ ಸಭೆಯು ಸ್ಥಾಪಕಾದ್ಯಕ್ಷ ಶುಭದರಾವ್ ಅಧ್ಯಕ್ಷತೆಯಲ್ಲಿ ಅದಿತ್ಯವಾರ ರಾಧಾಕೃಷ್ಣ ಸಭಾ ಭವನದಲ್ಲಿ ನಡೆಯಿತು.
ಕಳೆದ 18 ವರ್ಷಗಳಿಂದ ಗಣೇಶೋತ್ಸವ ಆಚರಣೆಯಿಂದ ಉಳಿಕೆ ಮೊತ್ತದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ, ಶೈಕ್ಷಣಿಕ, ಹಾಗೂ ಕ್ರೀಡಾ ಪ್ರೋತ್ಸಾಹಕ ಸಹಾಯ ಧನವನ್ನು ವಿತರಿಸುತ್ತಾ ಬರುತ್ತಿದ್ದು ಈ ವರ್ಷವೂ ರೂ 50,000 ಸಾವಿರ ಹಣವನ್ನು ಕ್ರೀಡಾ ಪ್ರೋತ್ಸಾಹಕ ಸಹಾಯ ಧನವಾಗಿ ವಿತರಣೆ ಮಾಡಲಾಗುತಿದೆ ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಈ ಸಹಾಯ ಧನವು ಉಪಯುಕ್ತವಾಗಲಿದೆ ಎಂದು ಶುಭದರಾವ್ ತಿಳಿಸಿದರು.
ಸಮಿತಿ ಸದಸ್ಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವೇದ ಮೂರ್ತಿ ಅತ್ತೂರು ವಾದಿರಾಜ ಆಚಾರ್ಯ ವಿತರಿಸಿದರು ವಿಶೇಷ ಸೇವಾ ಕಾರ್ಯ ಕೈಕೊಂಡ ನವೀನ್ ರಾವ್, ನಾಗೇಶ್ ಹೆಗ್ಡೆ, ಜ್ಯೋತಿ ಸತೀಶ್, ಆನಂದ್ ನಾಯಕ್, ಮಂಜುನಾಥ್ ಜೋಗಿ ಹಾಗೂ ದ್ರುವ ಕಾಮತ್ ಮೊದಲಾದವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ದೇವಾಡಿಗ, ಉಪಾದ್ಯಕ್ಷರಾದ ರಾಜರಾಮ್ ಕಾಮತ್, ಶಿವಾಜಿ ರಾವ್ ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 37ನೇ ವರ್ಷದ ಮೊಸರು ಕುಡಿಕೆ ಸಾರ್ವಜನಿಕ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು, ನಿಟ್ಟೆ ಇಲ್ಲಿ ನಡೆಯಿತು.
ವಿವಿಧ ವಯೋಮಾನದವರಿಗೆ ನಾನಾ ರೀತಿಯ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಎರಡು ಸ್ತರಗಳಲ್ಲಿ ಮುದ್ದು ಕೃಷ್ಣ ಸ್ಪರ್ಧೆ ನಡೆದಿದ್ದು, ಸರ್ವರ ಮನಸೂರೆಗೊಂಡಿತು. ಮುಖ್ಯ ಅಭ್ಯಾಗತರಾಗಿ ಮಾತೃ ಸಂಸ್ಥೆ ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ಕೆ. ರಘುನಂದನ್ ರಾವ್, ರೋಟರಿ ಜಿಲ್ಲೆ – 3182ನ ಪಬ್ಲಿಕ್ ಇಮೇಜ್ ಜಿಲ್ಲಾ ಉಪಾಧ್ಯಕ್ಷರಾದ ರೊI ರೇಖಾ ಉಪಾಧ್ಯಾಯ, ಝೋನಲ್ ಲೆಫ್ಟಿನೆಂಟ್ ರೊI ಪ್ರಶಾಂತ್ ಬೆಳಿರಾಯ, RCCಯ ಪೂರ್ವ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿ ಹಾಗೂ RCC ಕ್ರೀಡಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು, ಸಂದರ್ಭೋಚಿತ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರೋಟರಿ ಸಮುದಾಯ ದಳದ ಸಭಾಪತಿ ರೊI ಡಾ. ದಿಲೀಪ್ ಕುಮಾರ್, ರೋಟರಿ ಸಮುದಾಯ ದಳದ ಕಾರ್ಯದರ್ಶಿ ಶ್ರೀಧರ ವಿ. ಆಚಾರ್ಯ ಮತ್ತು ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.) ಕೆಮ್ಮಣ್ಣು, ನಿಟ್ಟೆ ಇದರ ಕಾರ್ಯದರ್ಶಿ ಕೃಷ್ಣಾನಂದ ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ SSLC ಹಾಗೂ PUCಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯರಾದ ಕುಮಾರಿ ಪೃತ್ವಿ, ಕುಮಾರಿ ನಿರೀಕ್ಷಾ ದೇವಾಡಿಗ ಮತ್ತು ಸುಮಿತ್ ರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕೆಮ್ಮಣ್ಣು ಇಲ್ಲಿನ ಪರಿಚಾರಕರು ಹಿರಿಯರಾದ ನಾರಾಯಣ ದೇವಾಡಿಗ, ಕೃಷಿ ಕ್ಷೇತ್ರದ ಸಾಧಕ ಸುದಾಮ ಶೆಟ್ಟಿ, ದುಡ್ಡು ಮನೆ, ಬೋಳ ಹಾಗೂ ಹಿರಿಯ ನಾಗರಿಕರು ಹಾಗೂ ಕೃಷಿಕರಾದ ಶ್ರೀ ವಾಸು ಬಿ. ಕೋಟ್ಯಾನ್ ಇವರನ್ನು ಗೌರವಿಸಲಾಯಿತು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇದರ ಅಧ್ಯಕ್ಷರಾದ ರೊI ಡಾ. ಪ್ರಶಾಂತ್ ಕುಮಾರ್ ಸ್ವಾಗತಿಸಿದರು. ಹಿರಿಯರು ಮಾರ್ಗದರ್ಶಕರಾದ ರೊI ಕೆ. ಅನಿಲ್ ಕುಮಾರ್, ಶಂಕರ್ ಪೂಜಾರಿ ಹಾಗೂ ಉಮೇಶ್ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ವಿಠಲ್ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಗಣೇಶ್ ಭಟ್ ವಂದಿಸಿದರು. ಪೂರ್ವಾಧ್ಯಕ್ಷ ಸತೀಶ್ ಶೆಟ್ಟಿ, ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು.