Home Blog Page 21

ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಅಧ್ಯಕ್ಷರಾಗಿ ಲಯನ್ ಅರುಣ್ ಶೆಟ್ಟಿಗಾರ್ ಆಯ್ಕೆ.

0

ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಅಧ್ಯಕ್ಷರಾಗಿ ಲಯನ್ ಅರುಣ್ ಶೆಟ್ಟಿಗಾರ್ ಆಯ್ಕೆ.

ಕಾರ್ಕಳದಲ್ಲಿ ನೂತನವಾಗಿ ಪ್ರಾರಂಭವಾದ ಅಂತರಾಷ್ಟ್ರೀಯ ಸಂಸ್ಥೆ ಲಯನ್ಸ್ ಕ್ಲಬ್ ಇದರ 2025- 26 ನೇ ಸಾಲಿನ ಕಾರ್ಕಳ ಸೆಂಟ್ರಲ್ ಅಧ್ಯಕ್ಷರಾಗಿ ಲಯನ್ ಅರುಣ್ ಶೆಟ್ಟಿಗಾರ್ ಅವರು ಆಯ್ಕೆಯಾಗಿದ್ದಾರೆ.

25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡ ಯಶಸ್ವಿ ಉದ್ಯಮಿ ನಂದಾದೀಪ ಆಟೋಮೊಬೈಲ್ ನ ಮಾಲಕ ರಾದ ಇವರು ಸಮಾಜಮುಖಿ ಸೇವೆಗಳೊಂದಿಗೆ ಅನೇಕ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಿ ಅನೇಕ ಜನಮಾನಸದ ಕಾರ್ಯಕ್ರಮಗಳ ಆಯೋಜಕರಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ರೀತಿಯ ಸಹಕಾರ ನೀಡಿರುತ್ತಾರೆ.

ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತಂದೆ ಎಂ. ಕೆ. ವಾಸುದೇವ ನಿಧನ

0

ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತಂದೆ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ, ನಿವೃತ್ತ ಪ್ರಾಂಶುಪಾಲ ಎಂ. ಕೆ. ವಾಸುದೇವ ಕೊನೆಯುಸಿರೆಳೆದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಣಿಪಾಲ ಕೆಎಂಸಿ ಮತ್ತು ಟಿಎಂಎ ಪೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಪ್ರಮೋದಾ, ಪುತ್ರ ಸುನಿಲ್‌ ಕುಮಾರ್‌, ಸೊಸೆ ಪ್ರಿಯಾಂಕಾ, ಪುತ್ರಿ ಸುಕನ್ಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘ ಚಾಲಕರಾಗಿದ್ದರು. ವಾಸುದೇವ ಅವರಿಗೆ 87 ವರ್ಷ ವಯಸ್ಸಾಗಿತ್ತು.

ಪ್ರಖರ ವಾಗ್ಮಿಯಾಗಿದ್ದ ವಾಸುದೇವ್, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರ ಅಂತಿಮ ವಿಧಿ ವಿಧಾನ ಶಾಸಕರ ಮನೆ ಕಲಂಬಾಡಿ ಪದವಿನಲ್ಲಿ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಕಾರ್ಕಳ:ಹೆಂಡತಿಗೆ ಕತ್ತಿಯಿಂದ ಹಲ್ಲೆ-ರಕ್ತ ಬರುವುದನ್ನು ನೋಡಿ ಹೆದರಿ ಗಂಡ ಆತ್ಮಹತ್ಯೆ!

0

ಕಾರ್ಕಳ:ಹೆಂಡತಿಗೆ ಕತ್ತಿಯಿಂದ ಹಲ್ಲೆ-ರಕ್ತ ಬರುವುದನ್ನು ನೋಡಿ ಹೆದರಿ ಗಂಡ ಆತ್ಮಹತ್ಯೆ!

ಹೆಂಡತಿಗೆ ಕತ್ತಿಯಿಂದ ಹಲ್ಲೆನಡೆಸಿದ ಗಂಡ ಮೈಯಿಂದ ರಕ್ತಬರುವುದನ್ನು ನೋಡಿ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ನಡಿಮತ್ತಾವು ಎಂಬಲ್ಲಿ ನಡೆದಿದೆ.

ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸುರೇಖಾ (44) ಎಂಬುವವರ ಮೇಲೆ ಅವರ ಗಂಡ ಗೋಪಾಲಕೃಷ್ಣ (60) ಕತ್ತಿಯಿಂದ ಹಲ್ಲೆ ಮಾಡಿದ್ದು ರಕ್ತಬರುವುದನ್ನು ನೋಡಿ ಹೆದರಿ ತನ್ನ ಮನೆಯ ತೋಟದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪರಶುರಾಮ ಮೂರ್ತಿಗೆ ಕಂಚಿನ ಬದಲು ಹಿತ್ತಾಳೆ ಬಳಕೆ-ತನಿಖೆಯಲ್ಲಿ ಬಹಿರಂಗ ನ್ಯಾಯಾಲಯಕ್ಕೆ 1,231 ಪುಟಗಳ ದೋಷಾರೋಪ ಸಲ್ಲಿಕೆ

0

ಪರಶುರಾಮ ಮೂರ್ತಿಗೆ ಕಂಚಿನ ಬದಲು ಹಿತ್ತಾಳೆ ಬಳಕೆ-ತನಿಖೆಯಲ್ಲಿ ಬಹಿರಂಗ

ನ್ಯಾಯಾಲಯಕ್ಕೆ 1,231 ಪುಟಗಳ ದೋಷಾರೋಪ ಸಲ್ಲಿಕೆ

ಪರಶುರಾಮ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಲಾದ ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಶಿಲ್ಪಿ ಕೃಷ್ಣ ನಾಯ್ಕ್ ,ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ ಕುಮಾರ್ ವಿರುದ್ಧ ನಗರ ಠಾಣೆ ಪೊಲೀಸರು 1,231 ಪುಟಗಳ ದೋಷಾರೋಪ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

2023ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರಶುರಾಮ ಥೀಂ ಪಾರ್ಕನ್ನು ಉದ್ಘಾಟನೆ ಮಾಡಿದ್ದರು.ಇದೀಗ ತಜ್ಞರ ಪರಿಶೀಲನೆ ಮತ್ತು ಪೊಲೀಸ್ ತನಿಖೆಯಿಂದ ಈಗ ಮೂರ್ತಿ ಕಂಚಿನದ್ದಲ್ಲ ಹಿತ್ತಾಳೆ ಎಂದು ಸಾಬೀತಾಗಿದೆ. ಶಿಲ್ಪಿ ಕೃಷ್ಣ ನಾಯ್ಕ್ ಅವರ ಬೆಂಗಳೂರಿನ ಕ್ರಿಶ್ ಆರ್ಟ್ ವರ್ಲ್ಡ್‌ನಲ್ಲಿ ನಿರ್ಮಿಸಿದ್ದ ಮೂರ್ತಿಯಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರ ಥೀಂ ಪಾರ್ಕ್ ಯೋಜನೆ ಮತ್ತು ಕಾಮಗಾರಿ ನಡೆಸಿತ್ತು.

2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ಪೊಲೀಸರಿಂದ 1,231 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ವಿವಾದ ಚರ್ಚೆಯ ನಡುವೆ ಅರ್ಧ ಮೂರ್ತಿ ತೆರವು ಮಾಡಿ, ಅದನ್ನು ಶೆಡ್ ನಲ್ಲಿಟ್ಟು ಬೆಂಗಳೂರಿಗೆ ರವಾನೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಶಿಲ್ಪಿ ಕೃಷ್ಣನಾಯ್ಕ್, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ಒಳಸಂಚು, ನಂಬಿಕೆ ದ್ರೋಹ, ವಂಚನೆ- ಸಾಕ್ಷ್ಯ ನಾಶ ಮಾಡಿದ್ದು ದೃಢಪಟ್ಟಿದೆ.

ಬೈಲೂರು:ನೂತನ‌ ಶೌಚಾಲಯ ಉದ್ಘಾಟನೆ

0

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮೇರೆ ಗ್ರಾಮ ಪಂಚಾಯಿತಿ ಇವರಿಂದ ನಿರ್ಮಿಸಲಾಗಿರುವ ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು ಇವರು ಉದ್ಘಾಟಿಸಿದರು

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಂಕಿತ ನಾಯಕ್,ಕಾಂಟ್ರಾಕ್ಟರ್ ಶ್ರೀ ಅಮೀರ್ ಹುಸೇನ್,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ಸಂತೋಷ ವಾಗ್ಲೆಪಂಚಾಯತ ಸದಸ್ಯರುಗಳಾದ ಶ್ರೀ ಹೈದರಾಲಿ ಶ್ರೀಮತಿ ಯಶೋದ ಹಾಗೂ ಶ್ರೀಮತಿ ಸುಮಲತಾ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಶೆಟ್ಟಿ ಪ್ರಾಂಶುಪಾಲರು ಉಪ ಪ್ರಾಂಶುಪಾಲರು ವಿದ್ಯಾರ್ಥಿ ಪೋಷಕ ಸದಸ್ಯರು ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಮನೆ ನಿರ್ಮಾಣ: ಮೇಲ್ಚಾವಣಿಯ ಸಂಪೂರ್ಣ ವೆಚ್ಚ ಭರಿಸಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ

0

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ರಜತ ಸಂಭ್ರಮದ ಸವಿನೆನಪಿಗಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಈಗಾಗಲೇ ಮುಂದಾಗಿದ್ದು, ಮನೆಯ ಮೇಲ್ಚಾವಣಿ ಸಂಪೂರ್ಣ ವೆಚ್ಚವನ್ನು ಕಾರ್ಕಳ ಕಾಂಗ್ರೆಸ್ ಮುಖಂಡ, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ ಶೆಟ್ಟಿ ಭರಿಸಿ ಸಮಾಜದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇತ್ತೀಚಿಗೆ ಬೋಳ ಮೈಂದ್ಕಲ್ ಬಳಿಯ ಆರ್ಥಿಕವಾಗಿ ಅಸಹಾಯಕರಾಗಿರುವ ಕುಟುಂಬದ ಮನೆಗೆ ಉದಯ ಶೆಟ್ಟಿಯವರು ಭೇಟಿ ನೀಡಿದ್ದು, ನಿರ್ಮಾಣ ಹಂತದ ಮನೆ ಪರಿಶೀಲಿಸಿ, ಮನೆ ನಿರ್ಮಾಣಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು. ಅದರಂತೆಯೇ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದಲ್ಲಿ ಮೇಲ್ಛಾವಣಿಗೆ ಬೇಕಾದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

 

ಕೆ. ಎಮ್. ಇ. ಎಸ್. ಪದವಿ ಪೂ. ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

0

ಕೆ. ಎಮ್. ಇ. ಎಸ್. ಪ. ಪೂ. ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳದ ಸಹಾಯಕ ಸಬ್ ಇನ್ಸ್ಪೆಕ್ಟರ್ “ಇಂದಿನ ಕಾಲೇಜು ವಿದ್ಯಾರ್ಥಿಗಳು ಸಂಚಾರ ನಿಯಮ ಪಾಲಿಸದೆ ವೇಗವಾಗಿ ವಾಹನ ಚಲಾಯಿಸಿ ರಸ್ತೆ ಅಪಘಾತಕ್ಕೆ ಕಾರಣರಾಗುತ್ತಾರೆ. ಹೆಲ್ಮೆಟ್ ಹಾಕದೆ ಮೂರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ದ್ವಿಚಕ್ರದಲ್ಲಿ ಸವಾರಿಸಿ ಆಫಘಾತವನ್ನು ತಂದುಕೊಳ್ಳುತಾರೆ. 18 ವರ್ಷದೊಳಗೆ ವಾಹನಗಳನ್ನು ಚಲಾಯಿಸಲು ಯಾರಿಗೂ ಪರವಾನಿಗೆ ಸಿಗುವುದಿಲ್ಲ. ಒಂದು ವೇಳೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದರೆ ದಂಡವನ್ನು ಹೆತ್ತವರು ತೆರಬೇಕಾಗುತ್ತದೆ.” ಎಂದು ರಸ್ತೆ ಸುರಕ್ಷತೆ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಫೋಕ್ಸೋ ಕಾಯಿದೆ, ಮಕ್ಕಳ ಹೆಲ್ತ್ ಲೈನ್, ಮಕ್ಕಳ ಗ್ರಾಮಸಭೆ, ಬಾಲ ಕಾರ್ಮಿಕರ ಬಗ್ಗೆ, ಬಾಲಾಪರಾಧಿ ಕಾಯಿದೆ, ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳು, ಮೊಬೈಲ್ನಿಂದ ಆಗುವ ಆವಾಂತರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಏಕಮುಖ ಸಂಚಾರವಿರುವ ರಸ್ತೆಗೆ ವಿರುದ್ದವಾಗಿ ವಾಹನಗಳನ್ನು ಓಡಿಸುವವರಿಗೆ ಕಿವಿಮಾತನ್ನು ಹೇಳಿದರು. ಎ. ಎಸ್. ಐ. ಜಯಂತ್ ವಿದ್ಯಾರ್ಥಿಗಳು ವೇಗವಾಗಿ ವಾಹನ ಚಲಾಯಿಸುವಾಗ ಆಗುವ ಅನಾಹುತಗಳ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಮಾತನಾಡಿ ಆಧುನಿಕಗೊಳ್ಳುತಿರುವ ಈ ಪ್ರಪಂಚದಲ್ಲಿ ಮಾದಕವಸ್ತುಗಳನ್ನು ಸೇವಿಸುವುದರಿಂದ ವಿದ್ಯಾರ್ಥಿಗಳ ಅಭಿವೃದ್ಧಿ ಹೇಗೆ ಕುಂಟಿತವಾಗುವುದು ಮತ್ತು ಕುಡಿತ, ಸಿಗರೇಟು ಸೇದುವುದು, ಅಮಲು ಪದಾರ್ಥಗಳ ಸೇವನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಕೆಡುವುದು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಾತನಾಡಿ ” 18 ವರ್ಷವಾಗದೆ, ಪರವಾನಿಗೆ ಇಲ್ಲದೆ ಮಕ್ಕಳು ದ್ವಿಚಕ್ರ ಓಡಿಸುವಂತಿಲ್ಲ, ಅಂತಹ ಕೆಲಸ ಮಾಡುವವರು ದಂಡ ತೆರ ಬೇಕಾಗುತ್ತದೆ. ” ಎಂದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಲೋಳಿಟ ಡಿ’ ಸಿಲ್ವ, ಬೀಟ್ ಪೊಲೀಸ್ ಎ. ಎಸ್. ಐ. ಶಿವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಶಿಕ್ಷಕಿ ಸಂಗೀತಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.

ಕ್ರಿಯೇಟಿವ್ ಪಿ.ಯು.ಕಾಲೇಜು : ಎನ್.ಸಿ.ಸಿ ನೌಕಾ ಘಟಕ ಉದ್ಘಾಟನೆ

0

ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 11 ಜುಲೈ 2025 ರಂದು 6/8 ಕರ್ನಾಟಕ ಎನ್‌.ಸಿ.ಸಿ ಉಪನೌಕಾ ಘಟಕವನ್ನು ಉದ್ಘಾಟಿಸಲಾಯಿತು.

ಉದ್ಘಾಟಕರಾಗಿ ಆಗಮಿಸಿದ 6 ಕರ್ನಾಟಕ ಎನ್‌.ಸಿ.ಸಿ ನೌಕಾ ಘಟಕ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ರವರು ಮಾತನಾಡಿ ಎನ್.ಸಿ.ಸಿ ಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಎನ್‌.ಸಿ.ಸಿ ಯ ಶಿಸ್ತು, ಸಮಯ ಪಾಲನೆ, ನಾಯಕತ್ವ ಹಾಗೂ ದೇಶಪ್ರೇಮದ ಕುರಿತು ಉಲ್ಲೇಖಿಸಿ, “ಯುವಜನತೆ ರಾಷ್ಟ್ರದ ಭವಿಷ್ಯ, ಅವರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ದೇಶ ಪ್ರಗತಿಯ ಮಾರ್ಗದಲ್ಲಿ ಸಾಗುತ್ತದೆ” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಎಂ.ಎ ಮುಲ್ತಾನಿ, ಪಿ.ಐ ಸ್ಟಾಫ್ ವರ್ಗದವರು, ಕಾಲೇಜು ಎನ್.ಸಿ.ಸಿ ನೌಕಾ ಘಟಕದ ಸಿ.ಟಿ.ಒ ಆಗಿರುವ ಆಂಗ್ಲ ಭಾಷಾ ಉಪನ್ಯಾಸಕ ಮಹೇಶ್ ಆರ್. ಶೆಣೈ ಕೆ. ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಸುದೀಕ್ಷಾ ಎಸ್. ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕ್ರೈಸ್ಟ್ ಕಿಂಗ್ : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ

0

ಕ್ರೈಸ್ಟ್ ಕಿಂಗ್: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆ. ಫಾ. ಪೌಲ್ ಕುಟಿನ್ಹರವರು ದೀಪ ಬೆಳಗಿ ನೂತನ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಾಯಕತ್ವ ನೀಡಿದಾಗ ಮುಂದೆ ಸಮಾಜದಲ್ಲಿ ಉತ್ತಮ ನಾಯಕನಾಗಲು ಸಾಧ್ಯ. ಇಂತಹ ನಾಯಕತ್ವದ ಗುಣವನ್ನು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಈ ಸಂಸ್ಥೆ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ” ಎಂದು ನುಡಿದರು. ಇನ್ನೋರ್ವ ಅತಿಥಿ ಸಾಹಿತಿ ಹಾಗು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಡಾ ಗಣನಾಥ ಶೆಟ್ಟಿ ಎಕ್ಕಾರು ಅವರು ಮಾತನಾಡಿ “ ಜ್ಞಾನ, ಕೌಶಲ್ಯ, ಆರೋಗ್ಯ ಹಾಗೂ ಮೌಲ್ಯಗಳೆಂಬ ನಾಲ್ಕು ಅಂಶಗಳನ್ನು ಒಬ್ಬ ವಿದ್ಯಾರ್ಥಿ ತನ್ನಲ್ಲಿ ಅಳವಡಿಸಿಕೊಂಡಾಗ ಆತ ತನ್ನ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ” ಎಂದು ಹೇಳಿದರು.

ಮತ್ತೋರ್ವ ಅತಿಥಿ ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯ ಅವರು ಮಾತನಾಡಿ “ಬಾಲ್ಯದಲ್ಲಿಯೇ ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಯಾರನ್ನು ದ್ವೇಷಿಸಿದೆ ಪ್ರಾಮಾಣಿಕರಾಗಿದ್ದು ಸತ್ಪ್ರಜೆಗಳಾಗಿ ಬಾಳಿ” ಎಂದು ಹೇಳಿದರು. ಅತಿಥಿಗಳಾಗಿದ್ದ ಕಾರ್ಕಳ ಜೆಸಿಐ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ “ನಾಯಕರಾದವರಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆಯ ಗುಣವಿರಬೇಕು. ಈ ಗುಣವನ್ನು ನೀವೆಲ್ಲರೂ ನಿಮ್ಮಲ್ಲಿ ಅಳವಡಿಸಿಕೊಂಡು ಭವಿಷ್ಯದ ಉತ್ತಮ ನಾಯಕರಾಗಿ” ಎಂದು ಹೇಳಿದರು. ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕರಾಗಿರುವ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಅವರು ಮಾತನಾಡಿ “ ವಿದ್ಯಾರ್ಥಿಗಳು ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡಾಗ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್‍ನ ಸದಸ್ಯ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ ದೇವರು ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರತಿಭೆಯನ್ನು ನೀಡಿರುವುದಿಲ್ಲ ಆದರೆ ಒಂದೇ ರೀತಿಯ ಅವಕಾಶವನ್ನು ನೀಡಿರುತ್ತಾನೆ. ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಬದುಕಿನಲ್ಲಿ ಯಶಸ್ಸನ್ನು ಸಾಧಿಸಿ” ಎಂದು ಹೇಳಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೊರವರು ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಜೋಸ್ನಾ ಸ್ನೇಹಲತಾರವರು ಪ್ರಸ್ತಾವನೆಗೈದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಡಿಸೋಜ, ಪ್ರಾಥಮಿಕ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಲಿನೆಟ್ ಮರೀನಾ ಡಿಸೋಜ ಹಾಗೂ ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ಪಾರ್ಥಿವ್‍ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಾಲಾ ನಾಯಕಿ ಸಿಯೋನಾ ಲೋಬೋ ವಂದಿಸಿದರು. ವಿದ್ಯಾರ್ಥಿನಿಯರಾದ ಆಯೆಷಾ ರುಬಾ ಮತ್ತು ಲೆನಿಶಾ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು.

ಉಡುಪಿ : ಜೋಗಿ ಸಮಾಜ – ಜನಪದ ವೈಭವ

0

ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಹಾಗೂ ಉಡುಪಿ ಕಾರ್ಕಳ ಘಟಕದ ಜೋಗಿ ಸಮಾಜ ಸೇವಾ ಸಮಿತಿ ಮತ್ತು ಉಡುಪಿಯ ಜೋಗಿ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ಸಹಯೋಗದೊಂದಿಗೆ ಜನಪದ ವೈಭವ ಎಂಬ ರಾಜ್ಯ ಮಟ್ಟದ ಸಾಮೂಹಿಕ ಜನಪದ ನೃತ್ಯ ಸ್ಪರ್ಧೆಯು ಜುಲೈ 13 ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಸಭಾ ಉದ್ಘಾಟನೆಯನ್ನು ನೆರವೇರಿಸಿಕೊಡಲಿದ್ದಾರೆ.