Home Blog Page 22

ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಾಳೆ (ಜು.13) ಬೆಳ್ಮಣ್ ಶಾಖೆ ಉದ್ಘಾಟನೆ

0

ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ

ನಾಳೆ (ಜು.13) ಬೆಳ್ಮಣ್ ಶಾಖೆ ಉದ್ಘಾಟನೆ

ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಇದರ ನೂತನ ಶಾಖೆ ಬೆಳ್ಮಣ್ ನ ಬಸ್ ನಿಲ್ದಾಣದ ಬಳಿ ಇರುವ ವನದುರ್ಗಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನಾಳೆ (ಜುಲೈ 13) ಉದ್ಘಾಟನೆಗೊಳ್ಳಲಿದೆ.

ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಹೋಟೆಲ್ ಸೂರಜ್ ಇನ್ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುನಿಯಾಲು ಉದಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೃಷ್ಣ ವೈ. ಶೆಟ್ಟಿ ಕಾಪಿಕೆರೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕೇಸ್ತರರಾದ ವೇದಮೂರ್ತಿ ವಿಜ್ಞೇಶ್ ಭಟ್ ಬ್ಯಾಂಕ್ ಉದ್ಘಾಟನೆ ನಡೆಸಲಿದ್ದಾರೆ. ಕೇಮಾರು ಮಠದ ಶ್ರೀಗಳಾದ ಈಶವಿಠಲದಾಸ ಸ್ವಾಮೀಜಿ ಹಾಗು ಬೆಲ್ಮನ್ ಚರ್ಚ್ ನ ಧರ್ಮಗುರು ರೆ. ಫಾ. ಫೆಡೆರಿಕ್ ಮಸ್ಕರೇನ್ಹಸ್ ಆಶೀರ್ವಚನಗಳನ್ನು ನೀಡಲಿದ್ದಾರೆ.

ಕಾರ್ಕಳ: ಅಕ್ರಮ ಕಲ್ಲುಕೋರೆ ಮೇಲೆ ಪೊಲೀಸ್ ದಾಳಿ

0

ಕಾರ್ಕಳ: ಅಕ್ರಮ ಕಲ್ಲುಕೋರೆ ಮೇಲೆ ಪೊಲೀಸ್ ದಾಳಿ

ಖಚಿತ ಮಾಹಿತಿ ಮೇರೆಗೆ ಕಾರ್ಕಳ ಪೊಲೀಸ್‌ ಉಪ ನಿರೀಕ್ಷಕ ಶಿವಕುಮಾರ್‌ ಎಸ್‌.ಆರ್‌ ಹಾಗೂ ಸಿಬ್ಬಂದಿಗಳು ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ಪರವಾನಿಗೆ ಇಲ್ಲದೆ ನಡೆಯುತ್ತಿದ್ದಗಣಿಕಾರಿಕೆ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಕಲ್ಲು ಗಣಿಕಾರಿಕೆ ನಡೆಸುತ್ತಿದ್ದ ಜಾಗದ ಮಾಲೀಕ ಸುಧಾಕರ,ಲಾರಿ ಮಾಲೀಕ ಹಾಗೂ ಚಾಲಕನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣಾ ಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೆ: ರೋಟರಿ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ಕಾರ್ಯಕ್ರಮ

0

ರೋಟರಿ ಜಿಲ್ಲಾಮಟ್ಟದ ಪ್ರಾಜೆಕ್ಟ್ ಆಗಿರುವ ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ರೋಟರಿ ಕ್ಲಬ್ ನಿಟ್ಟೆ ವತಿಯಿಂದ ಜುಲೈ ೧೦ ರಂದು NMAMIT ವಿದ್ಯಾ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ MCA ವಿಭಾಗದ ಪ್ರಾಧ್ಯಾಪಕ ಡಾ. ಸುರೇಂದ್ರ ಶೆಟ್ಟಿ “ವನಮಹೋತ್ಸವದ ಮಹತ್ವ ಮತ್ತು ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. ಡಾ. ರಘುನಂದನ್ ಅವರು ವಹಿಸಿ, ಸಭೆಗೆ ಆಗಮಿಸಿದ್ದ ಅತಿಥಿಗಳನ್ನು ಹಾಗೂ ಸಭಿಕರನ್ನು ಪರಿಚಯಿಸಿದರು.ಸಭೆಯು ಶಿಕ್ಷಕರು ಮತ್ತು ರೋಟರಿ ಕ್ಲಬ್ ನ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.ಸಭೆಯ ಅಂತ್ಯದಲ್ಲಿ ಕಾರ್ಯದರ್ಶಿ ರೊ. ಶೈಲಜ ವಿ ಶೆಟ್ಟಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ನಿಟ್ಟೆ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಡ ಕುಟುಂಬಕ್ಕೆ ಧನಸಹಾಯ ವಿತರಣೆ

0

ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭದ ಸಂದರ್ಭದಲ್ಲಿ ರೋಟರಿ ಸೇವಾ ಕಾರ್ಯಕ್ರಮದ ಅಂಗವಾಗಿ ನಿಟ್ಟೆ ಪರಿಸರದ 780 ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ನಂದಳಿಕೆ ಗ್ರಾಮದ ಬಡ ಕುಟುಂಬಕ್ಕೆ ಪೀಠೋಪಕರಣಕ್ಕಾಗಿ ಧನ ಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಈ ಸಮಾರಂಭದಲ್ಲಿ ರೋಟರಿ ಕ್ಲಬ್ ನಿಟ್ಟೆ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾದ ರೋ. ಡಾ. ರಘುನಂದನ್ ಕೆ. ಆರ್ ಹಾಗೂ ಕಾರ್ಯದರ್ಶಿ ರೋ. ಶೈಲಜ ವಿ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ರೋ. ಪ್ರೊಫೆಸರ್ ಎಂ. ಬಾಲಕೃಷ್ಣ ಶೆಟ್ಟಿ, 2025-26ನೇ ಸಾಲಿನ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ , ವಲಯ ಸೇನಾನಿ ಪ್ರಶಾಂತ್ ಬೆಳಿರಾಯ, 2024-25ನೇ ಸಾಲಿನ ಸಹಾಯಕ ಗವರ್ನರ್ ಅನಿಲ್ ಡೇಸಾ, 2024-25ನೇ ಸಾಲಿನ ವಲಯ ಸೇನಾನಿ ಸುರೇಶ್ ನಾಯಕ್, ನಿರ್ಗಮನ ಅಧ್ಯಕ್ಷ ಸತೀಶ್ ಕುಮಾರ್ ಕೆ ಉಪಸ್ಥಿತರಿದ್ದರು.

ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ

0

ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ ಜುಲೈ 3 ರಂದು ನಿಟ್ಟೆ ವಿದ್ಯಾ ಸಂಸ್ಥೆಯ ಶಾಂಭವಿ ಸಭಾಂಗಣದಲ್ಲಿ ನಡೆಯಿತು. ರೋಟರಿ ಕ್ಲಬ್ ನಿಟ್ಟೆ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ. ಡಾ. ರಘುನಂದನ್ ಕೆ. ಆರ್. ಹಾಗೂ ಕಾರ್ಯದರ್ಶಿಯಾಗಿ ರೋ. ಶೈಲಜ ವಿ. ಶೆಟ್ಟಿ ಅವರಿಗೆ ಪದಪ್ರಧಾನ ಅಧಿಕಾರಿ ನಿವೃತ್ತ ಪ್ರಾಂಶುಪಾಲ ರೋ.ಪ್ರೊಫೆಸರ್ ಎಂ. ಬಾಲಕೃಷ್ಣ ಶೆಟ್ಟಿ ಪದಪ್ರಧಾನ ನೆರವೇರಿಸಿದರು.

ನಿಟ್ಟೆ ರೋಟರಿಗೆ ನೂತನ ಸದಸ್ಯರಾಗಿ ಶಶಿಕಲಾ ಬಿ, ಪ್ರೊಫೆಸರ್ ರಾಕೇಶ್ ಶೆಟ್ಟಿ, ಲಿಥಿನ್ ದಾಮೋದರ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ “ನಿರೂಪ” ಬುಲೆಟಿನ್ ಅನ್ನು ಸಂಪಾದಕ ತುಕಾರಾಮ್ ಶೆಟ್ಟಿ ಅವರ ಸಹಕಾರದೊಂದಿಗೆ ಬಿಡುಗಡೆಗೊಳಿಸಲಾಯಿತು.

ಈ ಸಮಾರಂಭ ದಲ್ಲಿ 2025-26 ನೇ ಸಾಲಿನ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ , ವಲಯ ಸೇನಾನಿ ಪ್ರಶಾಂತ್ ಬೆಳಿರಾಯ, 2024-25 ನೇ ಸಾಲಿನ ಸಹಾಯಕ ಗವರ್ನರ್ ಅನಿಲ್ ಡೇಸಾ, 2024-25 ನೇ ಸಾಲಿನ ವಲಯ ಸೇನಾನಿ ಸುರೇಶ್ ನಾಯಕ್, ನಿರ್ಗಮನ ಅಧ್ಯಕ್ಷ ಸತೀಶ್ ಕುಮಾರ್ ಕೆ ಉಪಸ್ಥಿತರಿದ್ದರು. ರೋ.Phf. ಯೋಗೀಶ್ ಹೆಗ್ಡೆ, ರೋ.ಡಾ.ವೀಣಾದೇವಿ ಶಾಸ್ತ್ರಿಮಟ್, ರೋ. ಡಾ.ಶಶಿಕಾಂತ್ ಕರಿಂಕ, ರೋ.ಡಾ.ಕೃಷ್ಣ ಪ್ರಸಾದ್, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.

ಡಾ.ಕಬ್ಬಿನಾಲೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ

0

ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ರಚಿಸಿದ ತುಳು “ತುಳು ಕಾವ್ಯಮೀಮಂಸೆ” ಕೃತಿಗೆ ಅಮೆರಿಕಾದ ತುಳುಸಂಸ್ಥೆ (AATA) ನೀಡುವ ‘ಆಟ ಸಿರಿಮುಡಿ ಪ್ರಶಸ್ತಿ-2025’ ಈ ಅಂತಾರಾಷ್ಟ್ರೀಯ ಪುರಸ್ಕಾರವು ಪ್ರಶಸ್ತಿ ಫಲಕದ ಜೊತೆಗೆ 75 ಸಾವಿರ ನಗದನ್ನು ಒಳಗೊಂಡಿರುತ್ತದೆ.

ಕಾರ್ಕಳ : ನೂತನ ಕೆ.ಡಿ.ಪಿ. ಸದಸ್ಯರ ನೇಮಕ

0

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕಾರ್ಕಳ ತಾಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಮಿತಿಗೆ ಸುಜಿತ್ ಕುಮಾರ್ ಜಾರ್ಕಳ, ರುಕ್ಮಯ್ಯ ಶೆಟ್ಟಿಗಾರ್ ಕುಕ್ಕುಂದೂರು, ಗೋಪಾಲ್ ಪಂಡಿಬೆಟ್ಟು ರೆಂಜಾಳ, ಸಂತೋಷ್ ಪೂಜಾರಿ ಮಾಳ, ಎಂ.ಪಿ. ಮೊಯಿನಬ್ಬ ಇನ್ನಾ ಮತ್ತು ಅಮಿತಾ ಶೆಟ್ಟಿ ಸಾಣೂರು ಇವರನ್ನು ಸದಸ್ಯರಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಿದೆ.

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ:ಹೈಕೋರ್ಟ್ ನಲ್ಲಿ ಅರ್ಜಿ ವಜಾ

0

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ:ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯಲ್ಲಿ ಇಬ್ಬರು ಸದಸ್ಯರ ನೇಮಕದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು ಇದೀಗ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ತಾರಾನಾಥ್ ಕೋಟ್ಯಾನ್ ಸೂರಾಲು ಹಾಗೂ ಸದಸ್ಯರಾಗಿದ್ದ ರಮಾಕಾಂತ್ ಶೆಟ್ಟಿ ಕರ್ಮರ್ ಕಟ್ಟೆರವರು ಪಕ್ಷದ ಹುದ್ದೆಯೊಂದರಲ್ಲಿ ಇದ್ದಾರೆ,ರಾಜಕೀಯ ಪಕ್ಷದ ಹುದ್ದೆಯಲ್ಲಿದ್ದವರು ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗುವಂತಿಲ್ಲ.ಈ ಇಬ್ಬರು ಸದಸ್ಯರ ವಿರುದ್ಧ ರೋಹಿತ್ ಶೆಟ್ಟಿ ಮಿಯ್ಯಾರು ಹಾಗೂ ಸತ್ಯೇ೦ದ್ರ ನಾಯಕ್ ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.ತಾರಾನಾಥ್ ಎಸ್ ಕೋಟ್ಯಾನ್ ಹಾಗೂ ರಮಾಕಾಂತ್ ಶೆಟ್ಟಿ ಕರ್ಮರ್ ಕಟ್ಟೆರವರು ಪಕ್ಷದ ಹುದ್ದೆಗಳಿಗೆ ಈಗಾಗಲೇ ರಾಜೀನಾಮೆ ನೀಡಿದ್ದರಿಂದ ವ್ಯವಸ್ಥಾಪನಾ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ.

ಕಾರ್ಕಳ : ಜಲಜೀವನ್‌ ಮಿಷನ್‌ ಹಾಗೂ ವಾರಾಹಿ ಯೋಜನೆಯ ಕುರಿತು ಶಾಸಕರಿಂದ ಪ್ರಗತಿ ಪರಿಶೀಲನಾ ಸಭೆ

0

ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಜಲಜೀವನ್‌ ಮಿಷನ್‌ ಯೋಜನೆ ಮತ್ತು ವಾರಾಹಿ ಯೋಜನೆ ಅನುಷ್ಠಾನದ ಕುರಿತು ಸಂಬಂದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಶಾಸಕರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಜಲಜೀವನ್‌ ಮಿಷನ್‌ ಯೋಜನೆಯಡಿ ಎಲ್ಲಾ ಕುಟುಂಬಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಿದ್ದಪಡಿಸಲಾಗಿದ್ದು, ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಪ್ರಸ್ತುತ ಲಭ್ಯವಿರುವ ಜಲಮೂಲಗಳನ್ನು ಬಳಸಿಕೊಂಡು ಹಾಗೂ ಜಲಜೀವನ್‌ ಮಿಷನ್‌ ಯೋಜನೆಯಡಿ ಪೈಪ್‌ ಲೈನ್‌ ಸಂಪರ್ಕಗಳನ್ನು ವಿಸ್ತರಣೆ ಮಾಡಿರುವ ಕುರಿತು ಜೊತೆಗೆ ವಾರಾಹಿ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಲಾಯಿತು.

ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ 62 ಓವರ್‌ ಹೆಡ್‌ ಟ್ಯಾಂಕ್‌ಗಳು, 1524.35 ಕಿ.ಮೀಟರ್‌ ಪೈಪ್‌ ಲೈನ್‌ ಅಳವಡಿಕೆ ಹಾಗೂ ಹೆಬ್ರಿ ತಾಲೂಕು ವ್ಯಾಫ್ತಿಯಲ್ಲಿ 23 ಓವರ್‌ ಹೆಡ್‌ ಟ್ಯಾಂಕ್‌ಗಳು, 416.25 ಕಿ.ಮೀಟರ್‌ ವ್ಯಾಪ್ತಿಯ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ವಾರಾಹಿ ಯೋಜನೆಯಡಿ ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ 72 ಓವರ್‌ ಹೆಡ್‌ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಪ್ಟೆಂಬರ್‌ ಅಂತ್ಯದ ಒಳಗಾಗಿ ಎಲ್ಲಾ ಓವರ್‌ ಹೆಡ್‌ ಟ್ಯಾಂಕ್‌ ಕಾಮಗಾರಿ ಹಾಗೂ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿಗಳನ್ನು ಯಾವುದೇ ಸಾರ್ವಜನಿಕ ದೂರಿಗೆ ಆಸ್ಪದ ನೀಡದಂತೆ ಸರ್ಕಾರ ನಿಗದಿಪಡಿಸಿರುವ ಮೇಲ್ವಿಚಾರಣಾ ಏಜೆನ್ಸಿಯವರು ನಿರಂತರವಾಗಿ ಪರಿವೀಕ್ಷಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ವರಾಹಿ ಯೋಜನೆ ಕುರಿತಂತೆ ಚಾರ ಗ್ರಾಮದಲ್ಲಿ ಸುಮಾರು 08.00 ಲಕ್ಷ ಲೀಟರ್‌ ಸಾಮರ್ಥ್ಯದ ನೀರು ಪಂಪ್‌ ಸ್ಟೇಷನ್‌ ಕಾಮಗಾರಿ ಹಾಗೂ ಮಿಯ್ಯಾರು ಗ್ರಾಮದಲ್ಲಿ ಸುಮಾರು 05.50 ಲಕ್ಷ ಲೀಟರ್‌ ಸಾಮರ್ಥಯದ ಪಂಪ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿದ್ದು, ಸಂಪೂರ್ಣ ಗುರುತ್ವಾಕರ್ಷಣೆ ಮೂಲಕ ಓವರ್‌ ಹೆಡ್‌ ಟ್ಯಾಂಕ್‌ ಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಸಮರ್ಪಕ ರೀತಿಯಲ್ಲಿ ಈ ಮಹತ್ವಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಆಗಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸುವುದಾಗಿ ಶಾಸಕರಿಂದ ತಿಳಿಸಲಾಯಿತು.

ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್‌ ಶೆಟ್ಟಿ ಗ್ರಾಮೀಣ ಕುಡಿಯುವ ನೀರು & ನ್ಯೆರ್ಮಲ್ಯ ಇಲಾಖೆ ಉಡುಪಿ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್, ಉದಯ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಸುರೇಂದ್ರನಾಥ್‌, ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಕಾರ್ಯನಿರ್ವಣಾಧಿಕಾರಿ ಪ್ರಶಾಂತ್‌ ರಾವ್‌, ಮತ್ತು ವಿಜಯ, ಉಭಯ ತಾಲೂಕಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಇಂಜಿನಿಯರ್ಸ್ ಉಪಸ್ಥಿತರಿದ್ದರು.

ಕಾರ್ಕಳ:ಎಂ.ಪಿ.ಎಂ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ ಕಾರ್ಯಕ್ರಮ

0

ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025–26ನೇ ಶೈಕ್ಷಣಿಕ ವರ್ಷದ ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಕೋಶದ ಉದ್ಘಾಟನೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 90 ಗಂಟೆಗಳ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ ಪ್ರಮಾಣಪತ್ರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ಅವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನೀಡುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಯೋಗಗಳನ್ನು ಪಡೆಯಬೇಕು. 90 ಗಂಟೆಗಳ ತರಬೇತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ನಾಯಕತ್ವ, ತಂಡದಲ್ಲಿ ಕೆಲಸ ಮಾಡುವ ತಂತ್ರಗಳು, ಸಮಯ ನಿರ್ವಹಣೆ, ಸಂದರ್ಶನ ತಂತ್ರಗಳು ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆದು, ಮುಂದಿನ ಜೀವನದಲ್ಲಿ ಅಡವಳಿಸಿಕೊಳ್ಳಬೇಕೆಂದು ಹೇಳಿದರು. ನೇಮಕಾತಿ ಕೋಶದ ಸಂಯೋಜಕರು ಹಾಗೂ ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಕೆ.ಸಿ. ಅವರು ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿನಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ . ವರ್ಶಾ ಶೆನಾಯ್ ತಮ್ಮ ಉದ್ಯೋಗ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ವೃತ್ತಿಪರ ಜೀವನದ ಅಗತ್ಯ ಕೌಶಲ್ಯಗಳ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಉನ್ನತಿ ಫೌಂಡೇಶನ್ ನ ಗುರುಪ್ರಸಾದ್ ಮತ್ತು ರೇಷ್ಮಾ ಅವರು “ಚೇಂಜ್ ಮೇಕರ್” ತರಬೇತುದಾರರಾಗಿ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿಯನ್ನು ನೀಡಲಿದ್ದಾರೆ.

90 ಗಂಟೆಗಳ ತರಬೇತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ನಾಯಿಕತ್ವ, ತಂಡದಲ್ಲಿ ಕೆಲಸ ಮಾಡುವ ತಂತ್ರಗಳು, ಸಮಯ ನಿರ್ವಹಣೆ, ಭಾವನಾತ್ಮಕ ಬುದ್ಧಿಮತ್ತೆ, ಸಂದರ್ಶನ ತಂತ್ರಗಳು ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲಿದ್ದಾರೆ. ತರಬೇತಿ ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಿ, ನವೀನ ವೃತ್ತಿಪರ ಶಕ್ತಿಯಾಗಿ ಅವರನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.

ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಶಾರಣ್ಯ ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಮಾನ್ಯ ಶ್ರೀ ನಿರೂಪಿಸಿದರು. ಕಾವ್ಯ ಶೆಟ್ಟಿ, ದ್ವಿತೀಯ ಬಿಬಿಎ ಅವರು ಧನ್ಯವಾದ ಪ್ರಸ್ತಾಪಿಸಿದರು.