




ಹೆಬ್ರಿ:ಪತ್ರಿಕೆ ವಿತರಕ ನಿತಿನ್ ಎಸೆಸೆಲ್ಸಿಯಲ್ಲಿ ಸಾಧನೆ
ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರು ಇಲ್ಲಿಯ ವಿದ್ಯಾರ್ಥಿ ನಿತಿನ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 538 ಅಂಕ ಪಡೆಯುವುದರೊಂದಿಗೆ 86 ಶೇಕಡದೊಂದಿಗೆ ಪಡೆಯುವುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ನಿತಿನ್ ಕುಚ್ಚೂರು ಪರಿಸರದಲ್ಲಿ ದಿನನಿತ್ಯ ಸೈಕಲ್ ನಲ್ಲಿ ಸಂಚರಿಸಿ ಪತ್ರಿಕೆಯನ್ನು ವಿತರಿಸುತ್ತಾನೆ. ಕುಡಿಬೈಲ್ ಶೇಖರ ಹಾಗೂ ವಿನೋದ ದಂಪತಿಗಳ ಕೂಲಿ ಕಾರ್ಮಿಕರ ಮಗ. ದುರ್ಗಮ ರಸ್ತೆಯಲ್ಲಿ ಮಳೆಗಾಲದಲ್ಲಿ ಹಳ್ಳಿ ಹಳ್ಳಿಗೂ ಕ್ಲಪ್ತ ಸಮಯದಲ್ಲಿ ತಲುಪಿಸುತ್ತಾನೆ. ಶಾಂತಿನಿಕೇತನ ಯುವವೃಂದದ ವಿದ್ಯಾರ್ಥಿ ಘಟಕದ ನಾಯಕನಾಗಿ ಗುರುತಿಸಿಕೊಂಡಿರುವ ನಿತಿನ್ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾನೆ.

