Home Blog Page 66

ಚೆಸ್ ಪಂದ್ಯಾಟ:ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ ಕು.ಯಶಸ್ವಿಯವರಿಗೆ ಪ್ರಥಮ ಸ್ಥಾನ

0

ಚದುರಂಗ ಸ್ಪರ್ಧೆ : ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯಮಟ್ಟಕ್ಕೆ ಆಯ್ಕೆ
ಕು.ಯಶಸ್ವಿಯವರಿಗೆ ಪ್ರಥಮ ಸ್ಥಾನ

ಕಾರ್ಕಳ : ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ.ಪೂ.ಕಾಲೇಜು ಕೋಟೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯುಸಿ ವಿಜ್ಞಾನ ವಿಭಾಗದ ಯಶಸ್ವಿ ಪ್ರಥಮ ಸ್ಥಾನವನ್ನು, ನಿಹಾರ್ ಜೆ.ಎಸ್ ಚತುರ್ಥ ಸ್ಥಾನವನ್ನು, ಸಾತ್ವಿಕ್‌ಬಿ. ಆಚಾರ್ಯ೫ನೇ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ಮಾರ್ಗದರ್ಶನ ನೀಡಿದ್ದರು.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕಾರ್ಕಳ:ಚೆಸ್ ಸ್ಪರ್ಧೆಯಲ್ಲಿ ಕ್ರೈಸ್ಟ್ ಕಿಂಗ್ ನ ಶಾನ್ವಿ ಬಲ್ಲಾಳ್ ರಾಜ್ಯಮಟ್ಟಕ್ಕೆ ಆಯ್ಕೆ ಸತತ 6ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಮೆರೆದ ವಿದ್ಯಾರ್ಥಿನಿ

0

ಕ್ರೈಸ್ಟ್ ಕಿಂಗ್: ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಶಾನ್ವಿ ಬಲ್ಲಾಳ್ ರಾಜ್ಯಮಟ್ಟಕ್ಕೆ ಆಯ್ಕೆ

ಸತತ 6ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಮೆರೆದ ವಿದ್ಯಾರ್ಥಿನಿ

ಕಾರ್ಕಳ:ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿಭಾಗದ ಉಡುಪಿ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಙಾನ ವಿಭಾಗದ ಶಾನ್ವಿ ಬಲ್ಲಾಳ್ ದ್ವಿತೀಯ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈ ಮೂಲಕ ಶಿಕ್ಷಣ ಇಲಾಖೆಯ ಪಂದ್ಯಾಟದಲ್ಲಿ ನಿರಂತರವಾಗಿ 6ನೇ ಬಾರಿಗೆ ಆಯ್ಕೆಯಾಗುವುದರ ಮೂಲಕ ಶಾನ್ವಿ ಬಲ್ಲಾಳ್ ದಾಖಲೆಯೊಂದನ್ನು ಬರೆದಂತಾಗಿದೆ.

ಶಿವಾಜಿ ಪ್ರತಿಮೆ ವಿಚಾರ ಪ್ರಧಾನಿ ಮೋದಿಯವರು ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ

0

ಶಿವಾಜಿ ಪ್ರತಿಮೆ ವಿಚಾರ ಪ್ರಧಾನಿ ಮೋದಿಯವರು ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ

ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದಾನ ಮಂತ್ರಿಯವರು ಮರಾಠಿಗರ ಕ್ಷಮೆ ಕೋರಿದಂತೆ ಪರಶುರಾಮನ ಪ್ರತಿಮೆ ವಿಚಾರವಾಗಿ ಶಾಸಕ ಸುನೀಲ್ ಕುಮಾರ್ ನಾಡಿನ ಜನತೆಯ ಕ್ಷಮೆಯಾಚಿಸಲಿ ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ

ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಕುಸಿದ ಪ್ರಕರಣ ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣವನ್ನೇ ಹೋಲುತ್ತದೆ ಇಲ್ಲಿಯೂ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಕಾಮಗಾರಿ ಪೂರ್ಣವಾಗುವ ಮೊದಲೇ ತುರಾತುರಿಯಲ್ಲಿ ಉದ್ಘಾನೆಗೊಂಡಿದೆ ಅಲ್ಲಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿ ಒಬ್ಬನ ಬಂಧನವಾಗಿದ್ದರೆ ಇಲ್ಲಿಯೂ ಸಿಐಡಿ ತನಿಕೆಗೆ ಆದೇಶ ನೀಡಲಾಗಿದ್ದು ಒಬ್ಬ ಅಧಿಕಾರಿಯ ಅಮಾನತು ಆಗಿದೆ, ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರದಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ ಆದರೆ ವಿಪರ್ಯಾಸವೆಂದರೆ ಇಲ್ಲಿ ಶಾಸಕ ಸುನೀಲ್ ಕುಮಾರ್ ನಾನು ಮಾಡಿದ್ದೇ ಸರಿ ಎಂದು ಸಮರ್ಥನೆ ನೀಡುತ್ತಾ ಪ್ರಶ್ನಿಸಿದವರನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ, ಶಾಸಕರಿಗೆ ಪ್ರದಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ

ಶಾಸಕರ ಒಂದು ತಪ್ಪಿನಿಂದ ಕ್ಷೇತ್ರದ ಬಹಳಷ್ಟು ಜನ ಅನುಭನಿಸುವಂತಾಯಿತು, ಪಕ್ಷದ ಪಧಾದಿಕಾರಿಗಳಿಗೆ ಇಷ್ಟವಿಲ್ಲದಿದ್ದರೂ ಸಮರ್ಥಿಸುವುದು ಅನಿವಾರ್ಯವಾಯಿತು ಪ್ರತಿಭಟನೆ ಸತ್ಯಾಗ್ರಹಗಳು ನಡೆದು ಅಮಾಯಕರ ಮೇಲೆ ಅನಾವಶ್ಯಕ ಪೋಲೀಸ್ ಕೇಸುಗಳು ದಾಖಲಾದವು ತನಿಖೆಯ ಕಾರಣಗಳಿಂದ ಅಧಿಕಾರಿಗಳಿಗೂ ಒತ್ತಡಗಳಾದವು, ಸಾಮಾಜಿಕ ಜಾಲತಾಣದಲ್ಲಿ‌ ಪರಸ್ಪರ ಅರೋಪ ಪ್ರತ್ಯಾರೋಪಗಳು ನಡೆದು ದೈಹಿಕ ಹಲ್ಲೆಗೂ ಕಾರಣವಾಯಿತು, ಅಂದೇ ಈ ಬಗ್ಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದರೆ ಎಲ್ಲಾ ರಾದ್ದಾಂತಗಳನ್ನು ತಡೆಯಬಹುದಿತ್ತು ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ,

ಇನ್ನೂ ಕಾಲ ಮಿಂಚಿಲ್ಲ ಪ್ರದಾನಿ ಮೋದಿಯವರನ್ನು ಮಾದರಿಯಾಗಿಸಿ ಇವರೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸು ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆರ್ವಾಶೆ:ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಪಾಲ್ದಾಕ್ಯಾರು ಇದರ 24ನೇ ವರ್ಷದ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮ

0

ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಪಾಲ್ದಾಕ್ಯಾರು ಕೆರ್ವಾಶೆ ಇದರ 24ನೇ ವರ್ಷದ ಮೊಸರು ಕುಡಿಕೆ ಮತ್ತು ಭಜನಾ ಕಾರ್ಯಕ್ರಮವು ನಡೆಯಿತು.ಬೆಳಿಗ್ಗೆಯಿಂದ ಸಂಜೆಯವರೆಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಧ.ಗ್ರಾ.ಯೋ.(ರಿ.) ಮಿಯ್ಯಾರು ಇದರ ವಲಯಾಧ್ಯಕ್ಷರಾದ ಅಶ್ವಥ್ ನಾರಾಯಣ್ ನಾಯ್ಕ್ ರವರು ಉದ್ಘಾಟಿಸಿ ಉಗ್ಗಪ್ಪ ಪರವರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಂಜೆ ಧಾರ್ಮಿಕ ಸಭೆ,ಬಹುಮಾನ ವಿತರಣೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರು ಮುಂದಿನ ವರ್ಷಕ್ಕೆ ಭಜನಾ ಮಂಡಳಿಯ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಅಗಲಿದ್ದು ತಮ್ಮೆಲ್ಲರ ಸಹಕಾರ ಕೋರಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಭಜನಾ ಮಂಡಳಿಯ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಪ್ರಭುರವರು ಮಾಹಿತಿ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.ಸಮಾರಂಭದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಜಯರಾಮ್ ಬಂಗೇರ,ಗ್ರಾಮಪಂಚಾಯತ್ ಅಧ್ಯಕ್ಷೆ ಸುನೀತಾ,ಗ್ರಾಮಪಂಚಾಯತ್ ಉಪಾಧ್ಯಕ್ಷ ಸುನೀಲ್ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ಸುಚೇತಾ,ಭಜನಾ ತರಭೇತುದಾರರಾದ ನಿತಿನ್ ಪೂಜಾರಿ ಮಾಳ,ಶ್ರೀಕಾಂತ್ ಕುಮಾರ್,ಹಿರಿಯ ಕೃಷಿಕರಾದ ನೇಮಿರಾಜ್ ಜೈನ ಉಪಸ್ಥಿತರಿದ್ದರು.

ಕ್ರೀಡಾಕೂಟದ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದ್ದ ಪ್ರಶಾಂತ್ ಶೆಣೈ ಬಾಲಾಜಿ ಮೊಬೈಲ್ಸ್ ಕಾರ್ಕಳ ಇವರನ್ನು ಅಭಿನಂದಿಸಲಾಯಿತು.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಲ್ದಾಕ್ಯಾರು ಇಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕಿ ಶ್ರೀಲತಾರವರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.ಶಶಿಧರ್ ಕುಲಾಲ್ ಸ್ವಾಗತಿಸಿ ಕೌಸಲ್ಯರವರು ಧನ್ಯವಾದಗೈದರು.

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತಪರೀಕ್ಷೆಯ ಉಪಕರಣ ಹಸ್ತಾಂತರ

0

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತಪರೀಕ್ಷೆಯ ಉಪಕರಣ ಹಸ್ತಾಂತರ

ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಗೆ ಸುಮಾರು 2.25 ಲಕ್ಷ ರೋ ಗಳ CBC ANALISER ಎಂಬ ಎಲ್ಲ ಮಾದರಿಯ ರಕ್ತಪರೀಕ್ಷೆ ಯ ಉಪಕರಣವನ್ನು ಮಾಳ ಗ್ರಾಮಸ್ಥರ ಉಪಯೋಗಕ್ಕಾಗಿ ಪಂಚಾಯತ್ ವಿಷೇಶ ಅನುದಾನದಿಂದ ಮತ್ತು ವಿಶೇಷ ಕಾಳಜಿ ಯಿಂದ ,ಮಾಳ ಪಂಚಾಯತ್ ಅಧ್ಯಕ್ಷರು ಉಮೇಶ್ ಪೂಜಾರಿ ಇವರು ಹಸ್ತಾಂತರಿಸಿದರು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ದಿಶಾ ಕಿಶನ್,ತಾಲೂಕ್ ಆರೋಗ್ಯ ಅಧಿಕಾರಿ ಸಂದೀಪ್ ಕುಡ್ವ, ಪಂಚಾಯತ್ ಉಪಾಧ್ಯಕ್ಷೆ ವಿಮಲಾ, ಅಶೋಕ್ ಬರ್ವೇ,ಅಜಿತ್ ಹೆಗ್ಡೆ, ನೀಲು, ಅನಿಲ್ ಎಸ್ ಪೂಜಾರಿ, ರಘುರಾಮ್ ಶೆಟ್ಟಿ,ದಿನೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಹಾಗು ಶಿರ್ಲಾಲು ಪಂಚಾಯತ್ ಅಧ್ಯಕ್ಷರು ಶ್ರೀಮತಿ ಭಾರತಿ ದೇವಾಡಿಗ, ರಮಾನಂದ ಪೂಜಾರಿ, ಸದಾನಂದ ಸಾಲಿಯಾನ್ ಹಾಗೂ ಎಲ್ಲಾ ಗ್ರಾಮದ ಪಂಚಾಯತ್ ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.ಮಾಳ, ಶಿರ್ಲಾಲು ಕೆರ್ವಾಷೆ ಮತ್ತು ಮುಂಡ್ಲಿ ಗ್ರಾಮದ ಗ್ರಾಮಸ್ಥರು ಇದರ ಪ್ರಯೋಜನ ಪಡೆಯಬೇಕಾಗಿ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

0

ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಚಿಂತೆ ಬಿಟ್ಟು, ಬಿಜೆಪಿ ನಾಯಕರಿಂದ ದೌರ್ಜನ್ಯಕ್ಕೊಳಗಾಗಿರುವ ಬಿಜೆಪಿಯ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ: ಪ್ರದೀಪ್ ಬೇಲಾಡಿ

ಕಾರ್ಕಳದ ಅತ್ಯಾಚಾರ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಮೂರನೆ ಆರೋಪಿಯಾದ ಅಭಯ್ ಎನ್ನುವಾತ ಶಾಸಕ ಸುನೀಲ್ ಕುಮಾರ್ ಬೆಂಬಲಿಗ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಕಾರ್ಕಳ ಬಿಜೆಪಿ ಮುಖ ಉಳಿಸಿಕೊಳ್ಳಲು ಪರದಾಡುತ್ತಿದ್ದು ಅತ್ಯಾಚಾರದ ಖಂಡನೆ, ಹೋರಾಟ ಎಲ್ಲವನ್ನೂ ಕೈಬಿಟ್ಟು ಕ್ಷುಲ್ಲಕ ವಿಚಾರಗಳಿಗೆ ಹೇಳಿಕೆಯನ್ನು ನೀಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಸುತ್ತಿದೆ. ಅತ್ಯಾಚಾರ ಆರೋಪಿ ಬಿಜೆಪಿ ಬೆಂಬಲಿಗನಾಗಿರುವುದರಿಂದ ಅವಮಾನಕ್ಕೊಳಗಾಗಿರುವ ಕಾರ್ಕಳ ಬಿಜೆಪಿ ನಾಯಕರು ಹೊಸ ವರಸೆಯನ್ನು ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎನ್ನುವ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಹತಾಶೆಗೆ ಸಾಕ್ಷಿಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದು ಕಾರ್ಯಕರ್ತರಿಗೆ ಯಾರ ರಕ್ಷಣೆಯ ಅವಶ್ಯಕತೆಯೂ ಇಲ್ಲ. ಬಂಡವಾಳಶಾಹಿ, ಸರ್ವಾಧಿಕಾರಿ ಮನೋಭಾವನೆಯ ಬಿಜೆಪಿ ನಾಯಕರಿಂದ ಕೊಲೆ, ಹಲ್ಲೆ ಮುಂತಾದ ಕೃತ್ಯಗಳಿಂದ ದೌರ್ಜನ್ಯಕ್ಕೊಳಗಾಗಿರುವ ಬಡ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯ ಅಗತ್ಯವಿದೆ. ಬಿಜೆಪಿಯಲ್ಲಿ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲವಾಗಿದ್ದು, ಬಿಜೆಪಿ ನಾಯಕರ ಅನಾಚಾರ, ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುವ ಬಡ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ, ಮನೆಗೆ ನುಗ್ಗಿ ಹಲ್ಲೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಯಡಮೊಗೆಯ ಉದಯ ಗಾಣಿಗ ಎನ್ನುವ ಬಿಜೆಪಿ ಕಾರ್ಯಕರ್ತನ ಕೊಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರೋಪಿಯಾಗಿರುವುದು ಇದಕ್ಕೆ ಸಾಕ್ಷಿ.

ಹೆಬ್ರಿ ಸಮೀಪದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರನ್ನು ಪರಿವಾರ ಸಂಘಟನೆಗಳ ಕಾರ್ಯಕರ್ತರು ನಡು ರಸ್ತೆಯಲ್ಲಿ ಹೊಡೆದು ಸಾಯಿಸಿರುವುದನ್ನು ಜಿಲ್ಲೆಯ ಜನತೆ ಮರೆತಿಲ್ಲ. ಬಿಜೆಪಿ ನಾಯಕರ ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ಬೆಂಬಲಿಗರೂ ಆಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿನಾಯಕ ಬಾಳಿಗ ಎನ್ನುವವರನ್ನು ಹತ್ಯೆ ನಡೆಸಿದ ಕೇಸಿನಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿ ಬ್ರಿಗೇಡ್ (ನಮೋ ಬ್ರಿಗೇಡ್) ಇದರ ರಾಜ್ಯಾಧ್ಯಕ್ಷ ನರೇಶ್ ಶೆಣೈ ಕೊಲೆ ಆರೋಪಿಯಾಗಿರುವುದು ಬಿಜೆಪಿಯಲ್ಲಿ ಬಡ ಕಾರ್ಯಕರ್ತರನ್ನು ಹೇಗೆ ಕೊಲೆ ಮಾಡಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಾರ್ಕಳದ ನಗರ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ದಿಸಿದ್ದ ಬಡ ಬಿಜೆಪಿ ಕಾರ್ಯಕರ್ತರೋರ್ವರ ಮನೆಗೆ ಅಪರಾತ್ರಿಯಲ್ಲಿ ನುಗ್ಗಿದ ಬಿಜೆಪಿ ಬೆಂಬಲಿಗ ಗೂಂಡಾಗಳು ಮಹಿಳೆಯರನ್ನೂ ಬಿಡದೆ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿರುವುದನ್ನು ಕಾರ್ಕಳದ ಜನತೆ ಮರೆತಿಲ್ಲ.

ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿಕೆ ನೀಡುವ ಬಿಜೆಪಿ ನಾಯಕರು ಮೊದಲು ತಮ್ಮದೇ ಪಕ್ಷದ ಬಡ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಲಿ ಎಂದು ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿಯ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ-ವಿಖ್ಯಾತ್‌ ಶೆಟ್ಟಿ

0

ಉಡುಪಿಯ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ- ವಿಖ್ಯಾತ್‌ ಶೆಟ್ಟಿ

ಕಾರ್ಕಳ:ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ಗೂಂಡಾಗಳಿಂದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಹಿಂದೂ ಕಾಂಗ್ರೆಸ್‌ ಕಾರ್ಯಕರ್ತರ ದಯನೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ಇಲ್ಲದಂತೆ ಆಗಿದೆ. ಇವರ ಓಲೈಕೆ ಹಾಗೂ ತುಷ್ಠೀಕರಣ ರಾಜಕೀಯದಿಂದಾಗಿ ರಾಜ್ಯದ ಹಲವೆಡೆ ಗಲಭೆ, ಅತ್ಯಾಚಾರದಂತಹ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇದ್ದು, ಇದೀಗ ತಮ್ಮದೆ ಪಕ್ಷದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುವಷ್ಟರ ಮಟ್ಟಿಗೆ ಅದು ಮುಂದುವರಿದಿದೆ.

ನಮಗೆ ಒಬ್ಬ ಹಿಂದೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ನಮ್ಮ ಹಿಂದೂನೇ, ಬಿಜೆಪಿ ಪಕ್ಷದಲ್ಲಿದ್ದರೂ ನಮ್ಮ ಹಿಂದೂವೇ. ಹಾಗಾಗಿ ಅಗತ್ಯ ಬಿದ್ದರೆ ಹಲ್ಲೆಗೊಳಗಾದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಬೆಂಬಲವಾಗಿ ನಮ್ಮ ಹಿಂದೂಪರ ಸಂಘ ಪರಿವಾರದ ಕಾರ್ಯಕರ್ತರು ರಕ್ಷಣೆ ನೀಡಲು ತಯಾರಿದ್ದೇವೆ. ನೀವು ಯಾವಾಗ ಬೇಕಾದರೂ ನಮ್ಮ ನೆರವು ಕೇಳಬಹುದು. ಮುಸ್ಲಿಂ ಗೂಂಡಾಗಳಿಂದ ಹಿಂದೂಗಳ ಮೇಲೆ ಎಲ್ಲಯೇ ದಬ್ಬಾಳಿಕೆ ನಡೆದರು ನಾವು ಸಹಿಸುವುದಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು.-ಅನಿತಾ ಡಿಸೋಜ

0

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯುವತಿಗೆ ಬಿಯರ್ ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನಾಲ್ಕೈದು ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಕೇಸ್ ದಾಖಲಿಸಿದ್ದಾರೆ.

ಅವಳ ಹೇಳಿಕೆಯಂತೆ ಆಕೆಗೆ ಮದ್ಯಪಾನ ಮಾಡುವ ಚಟವಿದೆಯಾ ಅನ್ನುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಬಿಯರ್ ಒಂದು ಮದ್ಯಪಾನದ ಪೇಯ ಇದಕ್ಕೆ ಅಮಲು ಪದಾರ್ಥ ಸೇರಿಸುವ ಅಗತ್ಯ ಏನು ಬಂತು? ಕುಡಿಯುವ ಚಟ ಯಾರಿಗಿತ್ತು ಮತ್ತು ಯಾವ ಮಟ್ಟಕ್ಕೆ ಇದೆ ಎಂದೂ ಕೂಲಾಂಕುಶವಾಗಿ ಪರಿಶೀಲನೆ ಮಾಡಬೇಕು.

ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಆರೋಪಿಗಳು ಹಿಂದೂ,ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ ಹೀಗಿರುವಾಗ ಇದು ಲವ್ ಜಿಹಾದ್ ಹೇಗಾಗುತ್ತದೆ…?.

ಕಾರ್ಕಳದ ಶಾಸಕ ಸುನೀಲ್ ಕುಮಾರ್ ವಿರುದ್ಧ ಸರಕಾರಿ ಸಿಮೆಂಟ್ ಕಳ್ಳತನ ಮತ್ತು ದುರುಪಯೋಗ ಹಾಗೂ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಿದ ಪರಶುರಾಮನ ಮೂರ್ತಿಯ ಅವ್ಯವಹಾರದ ಬಗ್ಗೆ ಗಂಭೀರವಾದ ಆರೋಪವಿದ್ದು ಈ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಮುಂದಾದ ಕೂಡಲೇ ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವೊಂದು ಸಂಚಲನ ಉಂಟುಮಾಡಲು ಕಾರಣವೇನು…?.

ರಾಜಸ್ಥಾನದಲ್ಲಿ ಈ ಹಿಂದೆ ಇಸ್ಲಾಂ ಧರ್ಮದ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಜಿಯೊಬ್ಬರನ್ನು ಹತ್ಯೆಗೈದ ಕುರಿತಾದ ಘಟನೆ ನಡೆದಿದ್ದು ಪತಾಕಿಗಳನ್ನು ಬಂಧಿಸಿದ ಬಳಿಕ ಪಾತಕಿಗಳು R.S.S ನ ಮುಸ್ಲಿಂ ಮಂಚ್ ಎಂಬ ಸಂಘಟನೆಯ ಸದಸ್ಯರು ಹಾಗೂ ಭಾಜಪದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೆಂಬ ಸತ್ಯ ಹೊರಬಂದವು ಅದೇ ರೀತಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಸಂಘಪರಿವಾರದ ಮುಸ್ಲಿಂ ಮಂಚ್ ನ ಸಂಪರ್ಕ ಇದೆಯೇ..?

ಅವರು ಭಾಜಪದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೇ ಪ್ರಧಾನ ಆರೋಪಿ ಅಲ್ತಾಫ್ ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪಿ ಅಭಯ್ ಗೆ ಡ್ರಗ್ಸ್ ಎಲ್ಲಿಂದ ಬಂತು ಆತ ಯಾವುದಾದರೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೇ ಅಭಯ್ ಗೆ ಡ್ರಗ್ಸ್ ಸರಬರಾಜಿನ ಮೂಲ ಯಾವುದು ಎಂಬುದು ಜನತೆಗೆ ತಿಳಿಯಬೇಕಾದರೆ ತನಿಖೆಯನ್ನು ಬೇರು ಮಟ್ಟದಿಂದ ಮಾಡಬೇಕಾಗುತ್ತದೆ.

-ಅನಿತಾ ಡಿಸೋಜ, ಅಧ್ಯಕ್ಷರು ಬ್ಲಾಕ್ ಮಹಿಳಾ ಕಾಂಗ್ರೆಸ್, ಕಾರ್ಕಳ.

ಕಾರ್ಕಳ:ಕಾರು-ಬೈಕ್ ನಡುವೆ ಡಿಕ್ಕಿ

0

ಕಾರ್ಕಳ:ಕಾರು-ಬೈಕ್ ನಡುವೆ ಡಿಕ್ಕಿ

ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಗೋವಿಂದೂರಿನ ಅನಂತಮತಿ ಶಾಲೆಯ ಬಳಿ ನಡೆದಿದೆ.

ಗೋವಿಂದೂರು ನಿವಾಸಿ ಸಂತೋಷ ಗಾಯಗೊಂಡವರು.ಸಂತೋಷ್ ರವರು ಆ.27ರಂದು ಯರ್ಲಪಾಡಿ ಕಡೆಯಿಂದ ಬೈಲೂರು ಕಡೆಗೆ ಬೈಕ್ ನಲ್ಲಿ ಹೊರಟಿದ್ದ ಸಂದರ್ಭ ಅನಂತಮತಿ ಶಾಲೆಯ ಬಳಿ ಕಾರು ಚಾಲಕನು ಯಾವುದೆ ಸೂಚನೆ ಕೊಡದೆ ಕಾರನ್ನು ಬಲಕ್ಕೆ ತಿರುಗಿಸಿದ್ದು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡಿದ್ದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಮಣ್ಣು ಡಾ. ಸೌರಭ್ ತಂತ್ರಿ ಅವರಿಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ

0

ಬೆಳ್ಮಣ್ಣು ಡಾ. ಸೌರಭ್ ತಂತ್ರಿ ಅವರಿಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ

ಮಾಹೆಯಲ್ಲಿ ಮೆಟೀರಿಯಲ್ ಸೈನ್ಸ್ ವಾಹಿನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪಿ.ಎಚ್.ಡಿ ಅಧ್ಯಯನ ನಡೆಸಿದ ಬೆಳ್ಮಣ್ಣಿನ  ಡಾ. ಸೌರಭ್ ತಂತ್ರಿ ಅವರು ಡಾಕ್ಟರೇಟ್ ಪದವಿಗೆ ಭಾಜರಾಗಿದ್ದಾರೆ. ಇವರು ಬೆಳ್ಮಣ್ಣಿನ ಪ್ರಖ್ಯಾತ ನಡಿಗುತ್ತು ತಂತ್ರಿ ಕುಟುಂಬದ ಸತೀಶ್ ತಂತ್ರಿ ಹಾಗೂ ಲಕ್ಷ್ಮಿತಂತ್ರಿಯವರ ಸುಪುತ್ರರಾಗಿರುವ ಇವರು ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದು ಮಾಹೆಯಲ್ಲಿ ಎಂ.ಟೆಕ್ ಪಡೆದ ನಂತರ ಪಿ.ಎಚ್.ಡಿ. ಅಧ್ಯಯನವನ್ನು ನಡೆಸುತ್ತಿದ್ದರು.

ಸಿಂಥೆಸಿಸ್ ಅಂಡ್ ಕ್ಯಾರಕ್ಟರೈಸೇಫನ್ ಆಫ್ ಮೋಡಿಫೈಡ್ ಟಿ6-ಎಎ70075 ಮ್ಯಾಟಿಕ್ಸ್ ಬೇಸಡ್ ಗ್ರಾನೈಟ್ ಪೌಡರ್ ಅಂಡ್ ಸಿಲಿಕಾನ್ ನೈಟ್ರೆಡ್ ಪರ್ಟಿಕ್ಯುಲೇಟ್ಸ್ ರೀ ಇನ್‌ಪ್ಲೋರ್ಸ್ಡ್ ಕಾಂಪೋಸಿಟ್ಸ್ ಎಂಬ ವಿಷಯದ ಕುರಿತು ಡಾ. ಶಿವಪ್ರಕಾಶ್ ವೈ.ಎಂ. ಅವರ ಮಾರ್ಗದರ್ಶನದಲ್ಲಿ ಡಾ. ಗುರುಮೂರ್ತಿ ಬಿ.ಎಂ. ಅವರು ರಿಸರ್ಚ್ ಕೋ – ಗೈಡ್ ಆಗಿದ್ದು ಡಾ. ಸೌರಭ್ ತಂತ್ರಿಯವರು ಅಧ್ಯಯನ ನಡೆಸಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮಾಹೆಗೆ ಸಲ್ಲಿಸಿದರು.